ಕಚ್ಚಾ ತೈಲದಿಂದ ಮುಂಬೈ ಷೇರು ಮಾರುಕಟ್ಟೆಯಲ್ಲಿ ಭಾರೀ ಕಂಪನ; ಒಂದೇ ದಿನದಲ್ಲಿ ₹12 ಲಕ್ಷ ಕೋಟಿ ಕಳೆದುಕೊಂಡ ಹೂಡಿಕೆದಾರರು !

ಮುಂಬೈ: ಕಳೆದ ಕೆಲವು ದಿನಗಳ ಕಾಲ ಏರಿಕೆ ಕಂಡಿದ್ದ ಭಾರತೀಯ ಷೇರು ಮಾರುಕಟ್ಟೆಯ ಸೂಚ್ಯಂಕಗಳಾದ ಸೆನ್ಸೆಕ್ಸ್ (Sensex) ಮತ್ತು ನಿಫ್ಟಿ (Nifty) ಗುರುವಾರ ಭಾರಿ ಕುಸಿತಕ್ಕೆ ಸಾಕ್ಷಿಯಾದವು. ಇಸ್ರೇಲ್-ಅಮೆರಿಕ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಈ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ತೈಲ ಮತ್ತು ಎಲ್‌ಎನ್‌ಜಿ (LNG) ಘಟಕಗಳ ಮೇಲೆ ನಡೆದ ದಾಳಿಗಳು ಜಾಗತಿಕ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಭೀತಿಗೆ ಕಾರಣವಾಗಿದೆ.ಇರಾನ್ ಕತಾರಿನ ನೈಸರ್ಗಿಕ ಅನಿಲ ಘಟಕ ಹಾಗೂ ಕುವೈತ್‌ನ ಎರಡು ತೈಲ ಸಂಸ್ಕರಣಾಗಾರಗಳ ಮೇಲೆ ದಾಳಿ ನಡೆಸಿದ ನಂತರ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕ್ರೂಡ್ ತೈಲ ಬೆಲೆ ಶೇ. 6.75 ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 114.8 ಡಾಲರ್ ತಲುಪಿದೆ. ಇಸ್ರೇಲ್ ನಡೆಸಿದ ದಾಳಿಗೆ ಪ್ರತೀಕಾರವಾಗಿ ಇರಾನ್ ಸೌದಿ ಅರೇಬಿಯಾದ ತೈಲ ಸಂಸ್ಕರಣಾಗಾರಗಳ ಮೇಲೂ ದಾಳಿ ನಡೆಸಿದ್ದು, ಗಲ್ಫ್ ರಾಷ್ಟ್ರಗಳಲ್ಲಿ ಉದ್ವಿಗ್ನತೆ ತಾರಕಕ್ಕೇರಿದೆ.
ದಿನದ ಅಂತ್ಯಕ್ಕೆ ಬಿಎಸ್ಇ (BSE) ಸೆನ್ಸೆಕ್ಸ್ 2,496.89 ಪಾಯಿಂಟ್‌ಗಳಷ್ಟು ಕುಸಿದು 74,207.24 ಮಟ್ಟದಲ್ಲಿ ಸ್ಥಿರವಾಯಿತು. ಅದೇ ರೀತಿ, ಎನ್ಎಸ್ಇ (NSE) ನಿಫ್ಟಿ 775.65 ಪಾಯಿಂಟ್ ಇಳಿಕೆಯಾಗಿ 23,002.15 ಕ್ಕೆ ತಲುಪಿತು. ಇನ್ನು ಬ್ಯಾಂಕ್ ನಿಫ್ಟಿ 1,875.05 ಪಾಯಿಂಟ್ ಕುಸಿತ ಕಂಡು 53,451.00 ಮಟ್ಟಕ್ಕೆ ತಲುಪಿತು.

ಹೂಡಿಕೆದಾರರ ಸಂಪತ್ತು ಭಸ್ಮ
ವಹಿವಾಟಿನ ಮಧ್ಯೆ ಸೆನ್ಸೆಕ್ಸ್ ಒಂದು ಹಂತದಲ್ಲಿ 2,753.18 ಪಾಯಿಂಟ್ ಅಥವಾ ಶೇ. 3.58 ರಷ್ಟು ಕುಸಿದು 73,950.95 ಮಟ್ಟಕ್ಕೆ ಇಳಿದಿತ್ತು. ಈ ಕುಸಿತದಿಂದಾಗಿ ಹೂಡಿಕೆದಾರರ ಸುಮಾರು ₹12,49,997.25 ಕೋಟಿ (12.49 ಲಕ್ಷ ಕೋಟಿ) ಸಂಪತ್ತು ಕರಗಿ ಹೋಗಿದೆ.
ಬಿಎಸ್ಇ ಲಿಸ್ಟೆಡ್ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳವು ಕಳೆದ ವಹಿವಾಟಿನಲ್ಲಿದ್ದ ₹4,38,63,555.25 ಕೋಟಿಯಿಂದ ₹4,26,13,558 ಕೋಟಿಗೆ ಇಳಿಕೆಯಾಗಿದೆ.
ಪ್ರಮುಖ ಏರಿಕೆ ಮತ್ತು ಇಳಿಕೆ ಕಂಡ ಷೇರುಗಳು
ಸೆನ್ಸೆಕ್ಸ್‌ನ 30 ಪ್ರಮುಖ ಕಂಪನಿಗಳಲ್ಲಿ ಇಟರ್ನಲ್ (Eternal), ಬಜಾಜ್ ಫೈನಾನ್ಸ್, ಮಹೀಂದ್ರಾ ಆಂಡ್ ಮಹೀಂದ್ರಾ, ಎಚ್‌ಡಿಎಫ್‌ಸಿ ಬ್ಯಾಂಕ್, ಲಾರ್ಸೆನ್ ಆಂಡ್ ಟೂಬ್ರೊ ಮತ್ತು ಬಜಾಜ್ ಫಿನ್‌ಸರ್ವ್ ಷೇರುಗಳು ಭಾರಿ ನಷ್ಟ ಅನುಭವಿಸಿದವು. ವಿಶೇಷವಾಗಿ, ಎಚ್‌ಡಿಎಫ್‌ಸಿ ಬ್ಯಾಂಕ್‌ನ ಅಧ್ಯಕ್ಷ ಅತಾನು ಚಕ್ರವರ್ತಿ ಅವರು ನೈತಿಕ ಕಾರಣಗಳನ್ನು ನೀಡಿ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಆ ಬ್ಯಾಂಕ್‌ನ ಷೇರು ಮೌಲ್ಯ ಶೇ. 5.13 ರಷ್ಟು ಕುಸಿತ ಕಂಡಿದೆ. ಮಾರುಕಟ್ಟೆಯ ಅಸ್ಥಿರತೆಯನ್ನು ಅಳೆಯುವ India VIX ಶೇ. 3 ಕ್ಕಿಂತ ಹೆಚ್ಚು ಏರಿಕೆಯಾಗಿದ್ದು, ಹೂಡಿಕೆದಾರರಲ್ಲಿ ಆತಂಕ ಮನೆಮಾಡಿದೆ.

ಪ್ರಮುಖ ಸುದ್ದಿ :-   ಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

ಜಾಗತಿಕ ಮಾರುಕಟ್ಟೆಗಳ ಪರಿಸ್ಥಿತಿ
ಏಷ್ಯನ್ ಮಾರುಕಟ್ಟೆಗಳಲ್ಲಿ, ದಕ್ಷಿಣ ಕೊರಿಯಾದ ಮಾನದಂಡ ಕೋಸ್ಪಿ, ಜಪಾನ್‌ನ ನಿಕ್ಕಿ 225 ಸೂಚ್ಯಂಕ, ಶಾಂಘೈನ SSE ಕಾಂಪೋಸಿಟ್ ಸೂಚ್ಯಂಕ ಮತ್ತು ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಸೂಚ್ಯಂಕ ಗಮನಾರ್ಹವಾಗಿ ಕುಸಿತ ಕಂಡಿವೆ.
ಯುರೋಪ್‌ನಲ್ಲಿ ಮಾರುಕಟ್ಟೆಗಳು ಭಾರಿ ನಷ್ಟದೊಂದಿಗೆ ವಹಿವಾಟು ನಡೆಸುತ್ತಿದ್ದವು. ಬುಧವಾರ ಅಮೆರಿಕ ಮಾರುಕಟ್ಟೆ ತೀವ್ರವಾಗಿ ಕುಸಿತ ಕಂಡಿತು.
ಹೂಡಿಕೆದಾರರ ನಡೆ: ಬುಧವಾರದ ಅಂಕಿಅಂಶಗಳ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FIIs) ₹2,714.35 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಆದರೆ ದೇಶೀಯ ಸಾಂಸ್ಥಿಕ ಹೂಡಿಕೆದಾರರು (DIIs) ₹3,253.03 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.
ಬ್ರೆಂಟ್ ಕ್ರೂಡ್ ತೈಲ ಬೆಲೆ ಏರಿಕೆ
ಇರಾನ್ ಕತಾರಿನ ನೈಸರ್ಗಿಕ ಅನಿಲ ಘಟಕ ಹಾಗೂ ಕುವೈತ್‌ನ ಎರಡು ತೈಲ ಸಂಸ್ಕರಣಾಗಾರಗಳ ಮೇಲೆ ದಾಳಿ ನಡೆಸಿದ ನಂತರ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕ್ರೂಡ್ ತೈಲ ಬೆಲೆ ಶೇ. 6.75 ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 114.8 ಡಾಲರ್ ತಲುಪಿದೆ. ಇಸ್ರೇಲ್ ನಡೆಸಿದ ದಾಳಿಗೆ ಪ್ರತೀಕಾರವಾಗಿ ಇರಾನ್ ಸೌದಿ ಅರೇಬಿಯಾದ ತೈಲ ಸಂಸ್ಕರಣಾಗಾರಗಳ ಮೇಲೂ ದಾಳಿ ನಡೆಸಿದ್ದು, ಗಲ್ಫ್ ರಾಷ್ಟ್ರಗಳಲ್ಲಿ ಉದ್ವಿಗ್ನತೆ ತಾರಕಕ್ಕೇರಿದೆ.
ಬುಧವಾರ, ಸೆನ್ಸೆಕ್ಸ್ 633.29 ಪಾಯಿಂಟ್‌ಗಳು ಅಥವಾ 0.83 ಶೇಕಡಾ ಜಿಗಿದು 76,704.13 ಕ್ಕೆ ಸ್ಥಿರವಾಯಿತು. ನಿಫ್ಟಿ 196.65 ಪಾಯಿಂಟ್‌ಗಳು ಅಥವಾ 0.83 ಶೇಕಡಾ ಜಿಗಿದು 23,777.80 ಕ್ಕೆ ಕೊನೆಗೊಂಡಿತ್ತು.

ಪ್ರಮುಖ ಸುದ್ದಿ :-   ಮೊದಲು ಹಾಲಿನಲ್ಲಿ ನಿದ್ದೆ ಮಾತ್ರೆ...ನಂತರ ಹಾಸಿಗೆ ಮೇಲೆ ವಿಷದ ಹಾವು ! ಗಂಡನ ಕೊಲೆಗೆ ಪತ್ನಿಯ ಭಯಾನಕ ಸಂಚು...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement