ಅಂಕೋಲಾ: ಇಥೆನಾಲ್ ರಾಸಾಯನಿಕ ತುಂಬಿದ ಟ್ಯಾಂಕರ್ ಲಾರಿ ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡು ಸುಟ್ಟು ಕರುಕಲಾದ ಘಟನೆ ತಾಲೂಕಿನ ಕಂಚಿನಬಾಗಿಲ ಬಳಿ ರಾಷ್ಟ್ರೀಯ ಹೆದ್ದಾರಿಯ 52 ರಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದೆ ಎಂದು ವರದಿಯಾಗಿದೆ.
ಅದೃಷ್ಟವಶಾತ್ ಪಾರಾದ ಲಾರಿ ಚಾಲಕನಿಗೆ ಸುಟ್ಟ ಗಾಯಗಳಾಗಿದ್ದು ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆ ಬರುತ್ತಿದ್ದ ಟ್ಯಾಂಕರ್ ಲಾರಿ ಪಲ್ಟಿಯಾಗುತ್ತಿದ್ದಂತೆ ಬೆಂಕಿ ಹೊತ್ತಿಕೊಂಡು ಒಂದೇ ಸಮನೆ ಉರಿಯತೊಡಗಿದ್ದು ಬೆಂಕಿಯ ಜ್ವಾಲೆಯಿಂದಾಗಿ ಮುಗಿಲೆತ್ತರಕ್ಕೆ ಹೊಗೆ ವ್ಯಾಪಿಸಿಕೊಂಡಿದೆ.
ಬೆಂಕಿಗೆ ಸಿಲುಕಿದ ಲಾರಿಯ ಟೈರ್ ಗಳು ಭಾರೀ ಸದ್ದಿನೊಂದಿಗೆ ಸ್ಪೋಟದಂತೆ ಸಿಡಿಯಿತು. ಬೆಂಕಿಯು ಸುತ್ತ ಮುತ್ತಲಿನ ಕೆಲವು ಗಿಡಮರಗಳು ತಗುಲಿ ಸುಟ್ಟ ಹೋಗಿವೆ.
ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ, ರಾಷ್ಟ್ರೀಯ ಹೆದ್ದಾರಿ ಗಸ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ ಗಂಟೆಗಟ್ಟಲೆ ಪ್ರಯತ್ನ ನಡೆಸಿದರೂ ಬೆಂಕಿಯ ತೀವ್ರತೆಯನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗಿಲ್ಲ.
ಅಂಕೋಲಾ ತಹಶೀಲ್ದಾರ ನಿಶ್ಚಲ ನರೋನ್ನಾ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ರಾಮು ಗುನಗಿ, ಡಿ.ವೈ.ಎಸ್.ಪಿ ಗಿರೀಶ, ಪಿ.ಎಸ್.ಐ ಗುರುನಾಥ, ಪೊಲೀಸ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ, ಬೆಂಕಿ ನಂದಿಸುವ ಕಾರ್ಯಾಚರಣೆ
ಮುಂದುವರಿದಿದೆ.


ನಿಮ್ಮ ಕಾಮೆಂಟ್ ಬರೆಯಿರಿ