
ಸಿದ್ದಾಪುರ : ಸಾಹಿತಿ ಹಾಗೂ ಪತ್ರಕರ್ತ ಗಂಗಾಧರ ಕೊಳಗಿ ಅವರ ʼಕಾಡಂಚಿನ ಯಾನʼ ಹಾಗೂ ʼಮನಸು ಆಕಾಶದ ನೀಹಾರಿಕೆʼ ಎಂಬ ಎರಡು ಮರುಮುದ್ರಣ ಕೃತಿಗಳ ಅವಲೋಕನ ಕಾರ್ಯಕ್ರಮ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಲಯನ್ಸ್ ಬಾಲಭವನದಲ್ಲಿ ಮೇ 1ರಂದು ಸಂಜೆ 4 ಗಂಟೆಗೆ ನಡೆಯಲಿದೆ.
ಪೌರ್ಣಿಮಾ ಸಾಹಿತ್ಯ ವೇದಿಕೆ ಸಿದ್ದಾಪುರ ಹಾಗೂ ಪ್ರಯೋಗ ಸ್ವಸೇಸಂ ಸಿದ್ದಾಪುರ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ನಾಯ್ಕ ʼಕಾಡಂಚಿನ ಯಾನʼ ಕೃತಿಯ ಬಗ್ಗೆ ಅವಲೋಕನ ಮಾಡಲಿದ್ದಾರೆ. ಮತ್ತೊಂದು ಕೃತಿಯಾದ ʼಮನಸು ಆಕಾಶದ ನೀಹಾರಿಕೆʼ ಬಗ್ಗೆ ಉಪನ್ಯಾಸಕ ರತ್ನಾಕರ ನಾಯ್ಕ ಅವಲೋಕನ ಮಾಡಲಿದ್ದಾರೆ. ಪೌರ್ಣಿಮಾ ಸಾಹಿತ್ಯ ವೇದಿಕೆ ಅಧ್ಯಕ್ಷ ಗೋಪಾಲ ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಜಯ ಹೆಗಡೆ ದೊಡ್ಮನೆ, ತಾಲೂಕು ಕಸಾಪ ಅಧ್ಯಕ್ಷ ಚಂದ್ರಶೇಖರ ಕುಂಬ್ರಿಗದ್ದೆ, ಲಯನ್ಸ್ ಕ್ಲಬ್ ಅಧ್ಯಕ್ಷ ರಾಘವೇಂದ್ರ ಭಟ್ ಹಾಗೂ ಕೃಷಿ ಅಧಿಕಾರಿ ಪ್ರಶಾಂತ ಜಿ.ಎಸ್. ಪಾಲ್ಗೊಳ್ಳಲಿದ್ದಾರೆ.



ನಿಮ್ಮ ಕಾಮೆಂಟ್ ಬರೆಯಿರಿ