ಹೊನ್ನಾವರ : ಪಂಪ್ ಸೆಟ್ಟಿನ ವಿದ್ಯುತ್ ತಂತಿ ತಗುಲಿ ಐದು ವರ್ಷದ ಮಗು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ (Honnavar)ಹೊಸಪಟ್ಟಣದಲ್ಲಿ ಗುರುವಾರ ನಡೆದಿದೆ ಎಂದು ವರದಿಯಾಗಿದೆ.
ಮೃತ ಬಾಲಕಿಯನ್ನು ಆಶಿಕಾ ನಾಯ್ಕ ಎಂದು ಗುರುತಿಸಲಾಗಿದೆ. ಗುರುವಾರ ಸಂಜೆ ಪಂಪ್ಸೆಟ್ ಸ್ಟಾರ್ಟ್ ಮಾಡಿ ಮನೆ ಬಳಕೆಗೆ ನೀರು ತುಂಬಿಸುತ್ತಿರುವಾಗ ವಿದ್ಯುತ್ ತಂತಿಗೆ ಕಾಲು ತಗುಲಿದೆ. ಶಾಕ್ ಹೊಡೆದಾಗ ತಕ್ಷಣವೇ ಕಾಲನ್ನು ತೆಗೆದುಕೊಳ್ಳಲು ಬಾಲಕಿ ಪ್ರಯತ್ನಿಸಿದಾಗ ಮತ್ತೊಂದು ಕಾಲು ತಂತಿಯ ರಾಶಿಗೆ ಸಿಲುಕಿಕೊಂಡಿದೆ. ವಿದ್ಯುತ್ ಆಘಾತದಿಂದ ಅಸ್ವಸ್ಥಗೊಂಡ ಬಾಲಕಿ ಅಲ್ಲೇ ಕುಸಿದು ಬಿದ್ದಿದ್ದಾಳೆ ಎನ್ನಲಾಗಿದೆ. ತಕ್ಷಣವೇ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಆಕೆ ಮೃತಪಟ್ಟಿರುವ ಬಗ್ಗೆ ದೃಢಪಡಿಸಿದರು ಎನ್ನಲಾಗಿದೆ. ಮಂಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ