ಮೈಸೂರು: ಈ ಬಾರಿಯ ಸಾಂಸ್ಕೃತಿಕ ನಗರಿಯ ಯುವ ದಸರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಉದ್ಘಾಟಕರಾಗಿ ಭಾರತದ ಖ್ಯಾತ ನಟ, ನಿರ್ದೇಶಕ ಹಾಗೂ ಕೊರಿಯೋಗ್ರಾಫರ್ ಪ್ರಭುದೇವ ಅವರನ್ನು ಆಹ್ವಾನಿಸಲಾಗಿದೆ.
ಮೈಸೂರು ಜಿಲ್ಲಾಡಳಿತ ಹಾಗೂ ಯುವ ದಸರಾ ಉಪಸಮಿತಿ ವತಿಯಿಂದ ಪ್ರಭುದೇವ ಅವರಿಗೆ ಅಧಿಕೃತವಾಗಿ ಆಹ್ವಾನ ನೀಡಲಾಗಿದೆ. ಯುವ ದಸರಾ ಉಪಸಮಿತಿಯ ಕಾರ್ಯಾಧ್ಯಕ್ಷ ಸೋಮಶೇಖರ ಹಾಗೂ ಕಾರ್ಯದರ್ಶಿಗಳಾದ ಅರುಣ ಮತ್ತು ಸತ್ಯಮೂರ್ತಿ ಅವರು ಇತ್ತೀಚೆಗೆ ಚೆನ್ನೈನಲ್ಲಿರುವ ಪ್ರಭುದೇವ ಅವರ ನಿವಾಸಕ್ಕೆ ತೆರಳಿ ಆಹ್ವಾನ ಪತ್ರಿಕೆ ನೀಡಿದರು.
ಜಿಲ್ಲಾಡಳಿತದ ಪ್ರೀತಿಯ ಆಹ್ವಾನವನ್ನು ಸಂತಸದಿಂದ ಸ್ವೀಕರಿಸಿರುವ ಪ್ರಭುದೇವ, ಯುವ ದಸರಾ ಮಹೋತ್ಸವವನ್ನು ಉದ್ಘಾಟಿಸಲು ತಮ್ಮ ಸಮ್ಮತಿಯನ್ನು ಸೂಚಿಸಿದ್ದಾರೆ. ‘ಇಂಡಿಯನ್ ಮೈಕಲ್ ಜ್ಯಾಕ್ಸನ್’ ಎಂದೇ ಹೆಸರುವಾಸಿಯಾಗಿರುವ ಪ್ರಭುದೇವ ಅವರ ಆಗಮನವು ಈ ಬಾರಿಯ ಯುವ ದಸರಾಗೆ ವಿಶೇಷ ಮೆರುಗು ನೀಡಲಿದೆ.


ನಿಮ್ಮ ಕಾಮೆಂಟ್ ಬರೆಯಿರಿ