ಚೀನಾದಲ್ಲಿ ಗಂಡನೊಬ್ಬ ತನ್ನ ಪತ್ನಿಯನ್ನು ಪ್ರೀತಿಯಿಂದ ತಬ್ಬಿಕೊಂಡಿದ್ದೇ ಆಕೆಯ ಐದು ಪಕ್ಕೆಲುಬುಗಳು ಮುರಿಯಲು ಕಾರಣವಾಗಿದೆ. ಆರನೇ ಪಕ್ಕೆಲುಬಿನಲ್ಲೂ ಸಣ್ಣ ಬಿರುಕು ಕಾಣಿಸಿಕೊಂಡಿದೆ. ತೀವ್ರ ಮೂಳೆ ಸವೆತದ ಕಾಯಿಲೆ (osteoporosis) ಮೂಳೆಗಳು ದುರ್ಬಲಗೊಂಡಿದ್ದರಿಂದ ಸಾಮಾನ್ಯ ಅಪ್ಪುಗೆಯ ಒತ್ತಡವನ್ನೂ ತಡೆದುಕೊಳ್ಳಲಾಗದೆ ಈ ಘಟನೆ ಸಂಭವಿಸಿದೆ ಎಂದು ಸಿಂಗಾಪುರ ಮೂಲದ ಮಾಧ್ಯಮ ಸಂಸ್ಥೆ ಮದರ್ಶಿಪ್ ವರದಿ ಮಾಡಿದೆ.
ವರದಿಯ ಪ್ರಕಾರ, ಚೀನಾದ ಮಹಿಳೆಯೊಬ್ಬರು ತಮಗೆ ಚಳಿಯಾಗುತ್ತಿದೆ ಎಂದು ಪತಿ ವಾಂಗ್ ಅವರಿಗೆ ತಿಳಿಸಿದ್ದಾರೆ. ಪತ್ನಿಗೆ ಬೆಚ್ಚನೆಯ ಅನುಭವ ನೀಡುವ ಉದ್ದೇಶದಿಂದ ವಾಂಗ್ ಆಕೆಯನ್ನು ಸಹಜವಾಗಿ ತಬ್ಬಿಕೊಂಡಿದ್ದಾರೆ. ಈ ವೇಳೆ ಇದ್ದಕ್ಕಿದ್ದಂತೆ ಮೂಳೆ ಮುರಿದಂತಹ ಸದ್ದು ಕೇಳಿಸಿದೆ. ತಕ್ಷಣವೇ ಪತ್ನಿ ನೋವಿನಿಂದ ಕುಸಿದುಬಿದ್ದಿದ್ದು, ಮತ್ತೆ ಎದ್ದು ನಿಲ್ಲಲು ಪರದಾಡಿದ್ದಾರೆ.
ಅಕ್ಟೋಬರ್ 19ರಂದು ಹುಬೈ ಜಿಂಗ್ಶಿ ಲೈವ್ ಮಾಧ್ಯಮದ ಜೊತೆ ಮಾತನಾಡಿದ ವಾಂಗ್, ಆರಂಭದಲ್ಲಿ ಪತ್ನಿ ಇದನ್ನು ಸಾಮಾನ್ಯ ಸ್ನಾಯು ಸೆಳೆತ ಇರಬಹುದು ಎಂದು ಭಾವಿಸಿದ್ದರು ಎಂದು ತಿಳಿಸಿದ್ದಾರೆ. ತೀವ್ರ ನೋವು ಕಾಣಿಸಿಕೊಂಡಿದ್ದರೂ ಅದನ್ನು ಸಹಿಸಿಕೊಂಡ ಅವರು, ತಕ್ಷಣ ಆಸ್ಪತ್ರೆಗೆ ಹೋಗದೆ ಮರುದಿನ ಬೆಳಿಗ್ಗೆಯವರೆಗೆ ಕಾಯ್ದಿದ್ದಾರೆ.
ಮರುದಿನ ಆಸ್ಪತ್ರೆಯಲ್ಲಿ ಎದೆಯ ಸಿಟಿ ಸ್ಕ್ಯಾನ್ (CT Scan) ಮಾಡಿಸಿದಾಗ ವೈದ್ಯಕೀಯ ವರದಿ ದಂಪತಿಯನ್ನು ಬೆಚ್ಚಿಬೀಳಿಸಿದೆ. ಮಹಿಳೆಯ ಐದು ಪಕ್ಕೆಲುಬುಗಳು ಮುರಿದಿದ್ದು, ಆರನೇ ಪಕ್ಕೆಲುಬಿನಲ್ಲಿ ಕೂದಲೆಳೆಯಷ್ಟು ಸಣ್ಣ ಬಿರುಕು ಕಾಣಿಸಿಕೊಂಡಿರುವುದು ಪರೀಕ್ಷೆಯಲ್ಲಿ ಪತ್ತೆಯಾಗಿದೆ.
ವೈದ್ಯರು ಮಹಿಳೆಗೆ ಔಷಧಗಳನ್ನು ನೀಡಿ ಮನೆಗೆ ಕಳುಹಿಸಿದ್ದಾರೆ. ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲ ಎಂದು ತಿಳಿಸಿದ ಅವರು, ಮೂಳೆಗಳು ಗುಣವಾಗಲು ವಿಶೇಷ ಪ್ಯಾಚ್ಗಳನ್ನು ನೀಡಿದ್ದಾರೆ. ಜೊತೆಗೆ, ಕಟ್ಟುನಿಟ್ಟಾಗಿ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ.
ವೈದ್ಯಕೀಯ ಸಿಬ್ಬಂದಿಯ ಪ್ರಕಾರ, ಮಹಿಳೆ ತೀವ್ರವಾದ ಮೂಳೆ ಸವೆತದ ಕಾಯಿಲೆ (ಚೀನಾದಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನು ಪ್ರೀತಿಯಿಂದ ತಬ್ಬಿಕೊಂಡಿದ್ದೇ ಆಕೆಯ ಐದು ಪಕ್ಕೆಲುಬುಗಳು ಮುರಿಯಲು ಕಾರಣವಾಗಿದೆ. ಆರನೇ ಪಕ್ಕೆಲುಬಿನಲ್ಲೂ ಸಣ್ಣ ಬಿರುಕು ಕಾಣಿಸಿಕೊಂಡಿದೆ. ತೀವ್ರ ಮೂಳೆ ಸವೆತದ ಕಾಯಿಲೆ (osteoporosis) ಮೂಳೆಗಳು ದುರ್ಬಲಗೊಂಡಿದ್ದರಿಂದ ಸಾಮಾನ್ಯ ಅಪ್ಪುಗೆಯ ಒತ್ತಡವನ್ನೂ ತಡೆದುಕೊಳ್ಳಲಾಗದೆ ಈ ಘಟನೆ ಸಂಭವಿಸಿದೆ ಎಂದು ಸಿಂಗಾಪುರ ಮೂಲದ ಮಾಧ್ಯಮ ಸಂಸ್ಥೆ ಮದರ್ಶಿಪ್ ವರದಿ ಮಾಡಿದೆ.
ವರದಿಯ ಪ್ರಕಾರ, ಚೀನಾದ ಮಹಿಳೆಯೊಬ್ಬರು ತಮಗೆ ಚಳಿಯಾಗುತ್ತಿದೆ ಎಂದು ಪತಿ ವಾಂಗ್ ಅವರಿಗೆ ತಿಳಿಸಿದ್ದಾರೆ. ಪತ್ನಿಗೆ ಬೆಚ್ಚನೆಯ ಅನುಭವ ನೀಡುವ ಉದ್ದೇಶದಿಂದ ವಾಂಗ್ ಆಕೆಯನ್ನು ಸಹಜವಾಗಿ ತಬ್ಬಿಕೊಂಡಿದ್ದಾರೆ. ಈ ವೇಳೆ ಇದ್ದಕ್ಕಿದ್ದಂತೆ ಮೂಳೆ ಮುರಿದಂತಹ ಸದ್ದು ಕೇಳಿಸಿದೆ. ತಕ್ಷಣವೇ ಪತ್ನಿ ನೋವಿನಿಂದ ಕುಸಿದುಬಿದ್ದಿದ್ದು, ಮತ್ತೆ ಎದ್ದು ನಿಲ್ಲಲು ಪರದಾಡಿದ್ದಾರೆ.
ಅಕ್ಟೋಬರ್ 19ರಂದು ಹುಬೈ ಜಿಂಗ್ಶಿ ಲೈವ್ ಮಾಧ್ಯಮದ ಜೊತೆ ಮಾತನಾಡಿದ ವಾಂಗ್, ಆರಂಭದಲ್ಲಿ ಪತ್ನಿ ಇದನ್ನು ಸಾಮಾನ್ಯ ಸ್ನಾಯು ಸೆಳೆತ ಇರಬಹುದು ಎಂದು ಭಾವಿಸಿದ್ದರು ಎಂದು ತಿಳಿಸಿದ್ದಾರೆ. ತೀವ್ರ ನೋವು ಕಾಣಿಸಿಕೊಂಡಿದ್ದರೂ ಅದನ್ನು ಸಹಿಸಿಕೊಂಡ ಅವರು, ತಕ್ಷಣ ಆಸ್ಪತ್ರೆಗೆ ಹೋಗದೆ ಮರುದಿನ ಬೆಳಿಗ್ಗೆಯವರೆಗೆ ಕಾಯ್ದಿದ್ದಾರೆ.
ಮರುದಿನ ಆಸ್ಪತ್ರೆಯಲ್ಲಿ ಎದೆಯ ಸಿಟಿ ಸ್ಕ್ಯಾನ್ (CT Scan) ಮಾಡಿಸಿದಾಗ ವೈದ್ಯಕೀಯ ವರದಿ ದಂಪತಿಯನ್ನು ಬೆಚ್ಚಿಬೀಳಿಸಿದೆ. ಮಹಿಳೆಯ ಐದು ಪಕ್ಕೆಲುಬುಗಳು ಮುರಿದಿದ್ದು, ಆರನೇ ಪಕ್ಕೆಲುಬಿನಲ್ಲಿ ಕೂದಲೆಳೆಯಷ್ಟು ಸಣ್ಣ ಬಿರುಕು ಕಾಣಿಸಿಕೊಂಡಿರುವುದು ಪರೀಕ್ಷೆಯಲ್ಲಿ ಪತ್ತೆಯಾಗಿದೆ.
ವೈದ್ಯರು ಮಹಿಳೆಗೆ ಔಷಧಗಳನ್ನು ನೀಡಿ ಮನೆಗೆ ಕಳುಹಿಸಿದ್ದಾರೆ. ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲ ಎಂದು ತಿಳಿಸಿದ ಅವರು, ಮೂಳೆಗಳು ಗುಣವಾಗಲು ವಿಶೇಷ ಪ್ಯಾಚ್ಗಳನ್ನು ನೀಡಿದ್ದಾರೆ. ಜೊತೆಗೆ, ಕಟ್ಟುನಿಟ್ಟಾಗಿ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ.
ವೈದ್ಯಕೀಯ ಸಿಬ್ಬಂದಿಯ ಪ್ರಕಾರ, ಮಹಿಳೆ ತೀವ್ರವಾದ ಮೂಳೆ ಸವೆತದ ಕಾಯಿಲೆ (ಆಸ್ಟಿಯೊಪೊರೋಸಿಸ್) ಯಿಂದ ಬಳಲುತ್ತಿದ್ದರು. ಈ ಕಾಯಿಲೆಯಿಂದ ಮೂಳೆಗಳು ದುರ್ಬಲವಾಗುತ್ತವೆ. ಹೀಗಾಗಿ, ದೈನಂದಿನ ಜೀವನದಲ್ಲಿ ಸಾಮಾನ್ಯವಾಗಿ ಉಂಟಾಗುವ ಒತ್ತಡಕ್ಕೂ ಮೂಳೆಗಳು ಮುರಿಯುವ ಅಪಾಯ ಹೆಚ್ಚಾಗುತ್ತದೆ.
ಪತ್ನಿಯ ದೈನಂದಿನ ಜೀವನಶೈಲಿಯ ಬಗ್ಗೆ ಮಾತನಾಡಿದ ವಾಂಗ್, ಆಕೆಯ ತೂಕ ಸುಮಾರು 45ರಿಂದ 50 ಕೆ.ಜಿ. ಇತ್ತು ಎಂದು ತಿಳಿಸಿದ್ದಾರೆ. ತೂಕ ಕಡಿಮೆ ಮಾಡಿಕೊಳ್ಳುವ ಉದ್ದೇಶದಿಂದ ಆಕೆ ಆಗಾಗ್ಗೆ ಕಠಿಣ ಆಹಾರ ನಿಯಮಗಳನ್ನು ಪಾಲಿಸುತ್ತಿದ್ದರು. ರಾತ್ರಿ ಊಟವನ್ನೂ ನಿಯಮಿತವಾಗಿ ಬಿಡುತ್ತಿದ್ದರು ಎಂದು ಹೇಳಿದ್ದಾರೆ.
ಇದರ ಜೊತೆಗೆ, ಮಹಿಳೆ ಪ್ರತಿದಿನ ಕಾಫಿ ಕುಡಿಯುತ್ತಿದ್ದರು. ಹೊರಗೆ ಹೋಗುವುದು ಕೂಡ ಬಹಳ ಕಡಿಮೆ. ಸೂರ್ಯನ ಬೆಳಕಿಗೆ ಮೈಯೊಡ್ಡುವುದನ್ನು ತಪ್ಪಿಸಲು ಹೊರಗೆ ಹೋಗುವಾಗ ದೇಹವನ್ನು ಸಂಪೂರ್ಣವಾಗಿ ಮುಚ್ಚಿಕೊಳ್ಳುತ್ತಿದ್ದರು.
ಸ್ಥಳೀಯ ವೈದ್ಯರ ಪ್ರಕಾರ, ಸೂರ್ಯನ ಬೆಳಕು ದೇಹದಲ್ಲಿ ಸಾಕಷ್ಟು ವಿಟಮಿನ್ ಡಿ ಉತ್ಪತ್ತಿಯಾಗಲು ನೆರವಾಗುತ್ತದೆ. ವಿಟಮಿನ್ ಡಿ ದೇಹವು ಕ್ಯಾಲ್ಸಿಯಂ ಹೀರಿಕೊಳ್ಳಲು ಅಗತ್ಯವಾಗಿದೆ. ಕ್ಯಾಲ್ಸಿಯಂ ಮೂಳೆಗಳ ಬಲವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ಕಡಿಮೆಯಾದರೆ ವಿಟಮಿನ್ ಡಿ ಕೊರತೆ ಉಂಟಾಗಿ ಮೂಳೆಗಳ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ವೈದ್ಯರು ವಿವರಿಸಿದ್ದಾರೆ.
ಕ್ಲೀವ್ಲ್ಯಾಂಡ್ ಕ್ಲಿನಿಕ್ ಪ್ರಕಾರ, ಆಸ್ಟಿಯೊಪೊರೋಸಿಸ್ ಎನ್ನುವುದು ಮೂಳೆಗಳನ್ನು ದುರ್ಬಲಗೊಳಿಸುವ ಕಾಯಿಲೆಯಾಗಿದೆ. ಇದರಿಂದ ಮೂಳೆಗಳು ಸಾಮಾನ್ಯಕ್ಕಿಂತ ತೆಳುವಾಗಿ, ಸಾಂದ್ರತೆಯನ್ನು ಕಳೆದುಕೊಳ್ಳುತ್ತವೆ. ಪರಿಣಾಮವಾಗಿ, ಅವು ಸುಲಭವಾಗಿ ಮುರಿಯುವ ಸಾಧ್ಯತೆ ಹೆಚ್ಚಾಗುತ್ತದೆ.
ಸದ್ಯ ಮಹಿಳೆ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದು, ಮನೆಯಲ್ಲಿಯೇ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿ ತಿಳಿಸಿದೆ. ತಮ್ಮ ಜೀವನಶೈಲಿಯಲ್ಲೂ ಬದಲಾವಣೆ ಮಾಡಿಕೊಳ್ಳಲು ಆರಂಭಿಸಿದ್ದಾರೆ. ಹೆಚ್ಚು ಸೂರ್ಯನ ಬೆಳಕು ಸಿಗುವಂತೆ ಹೊರಗೆ ಹೋಗುತ್ತಿದ್ದು, ದೇಹಕ್ಕೆ ಅಗತ್ಯವಾದಷ್ಟು ಕ್ಯಾಲ್ಸಿಯಂ ದೊರೆಯುವಂತೆ ನೋಡಿಕೊಳ್ಳುತ್ತಿದ್ದಾರೆ.)ಯಿಂದ ಬಳಲುತ್ತಿದ್ದರು. ಈ ಕಾಯಿಲೆಯಿಂದ ಮೂಳೆಗಳು ದುರ್ಬಲವಾಗುತ್ತವೆ. ಹೀಗಾಗಿ, ದೈನಂದಿನ ಜೀವನದಲ್ಲಿ ಸಾಮಾನ್ಯವಾಗಿ ಉಂಟಾಗುವ ಒತ್ತಡಕ್ಕೂ ಮೂಳೆಗಳು ಮುರಿಯುವ ಅಪಾಯ ಹೆಚ್ಚಾಗುತ್ತದೆ.
ಪತ್ನಿಯ ದೈನಂದಿನ ಜೀವನಶೈಲಿಯ ಬಗ್ಗೆ ಮಾತನಾಡಿದ ವಾಂಗ್, ಆಕೆಯ ತೂಕ ಸುಮಾರು 45ರಿಂದ 50 ಕೆ.ಜಿ. ಇತ್ತು ಎಂದು ತಿಳಿಸಿದ್ದಾರೆ. ತೂಕ ಕಡಿಮೆ ಮಾಡಿಕೊಳ್ಳುವ ಉದ್ದೇಶದಿಂದ ಆಕೆ ಆಗಾಗ್ಗೆ ಕಠಿಣ ಆಹಾರ ನಿಯಮಗಳನ್ನು ಪಾಲಿಸುತ್ತಿದ್ದರು. ರಾತ್ರಿ ಊಟವನ್ನೂ ನಿಯಮಿತವಾಗಿ ಬಿಡುತ್ತಿದ್ದರು ಎಂದು ಹೇಳಿದ್ದಾರೆ.
ಇದರ ಜೊತೆಗೆ, ಮಹಿಳೆ ಪ್ರತಿದಿನ ಕಾಫಿ ಕುಡಿಯುತ್ತಿದ್ದರು. ಹೊರಗೆ ಹೋಗುವುದು ಕೂಡ ಬಹಳ ಕಡಿಮೆ. ಸೂರ್ಯನ ಬೆಳಕಿಗೆ ಮೈಯೊಡ್ಡುವುದನ್ನು ತಪ್ಪಿಸಲು ಹೊರಗೆ ಹೋಗುವಾಗ ದೇಹವನ್ನು ಸಂಪೂರ್ಣವಾಗಿ ಮುಚ್ಚಿಕೊಳ್ಳುತ್ತಿದ್ದರು.
ಸ್ಥಳೀಯ ವೈದ್ಯರ ಪ್ರಕಾರ, ಸೂರ್ಯನ ಬೆಳಕು ದೇಹದಲ್ಲಿ ಸಾಕಷ್ಟು ವಿಟಮಿನ್ ಡಿ ಉತ್ಪತ್ತಿಯಾಗಲು ನೆರವಾಗುತ್ತದೆ. ವಿಟಮಿನ್ ಡಿ ದೇಹವು ಕ್ಯಾಲ್ಸಿಯಂ ಹೀರಿಕೊಳ್ಳಲು ಅಗತ್ಯವಾಗಿದೆ. ಕ್ಯಾಲ್ಸಿಯಂ ಮೂಳೆಗಳ ಬಲವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ಕಡಿಮೆಯಾದರೆ ವಿಟಮಿನ್ ಡಿ ಕೊರತೆ ಉಂಟಾಗಿ ಮೂಳೆಗಳ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ವೈದ್ಯರು ವಿವರಿಸಿದ್ದಾರೆ.
ಕ್ಲೀವ್ಲ್ಯಾಂಡ್ ಕ್ಲಿನಿಕ್ ಪ್ರಕಾರ, ಆಸ್ಟಿಯೊಪೊರೋಸಿಸ್ ಎನ್ನುವುದು ಮೂಳೆಗಳನ್ನು ದುರ್ಬಲಗೊಳಿಸುವ ಕಾಯಿಲೆಯಾಗಿದೆ. ಇದರಿಂದ ಮೂಳೆಗಳು ಸಾಮಾನ್ಯಕ್ಕಿಂತ ತೆಳುವಾಗಿ, ಸಾಂದ್ರತೆಯನ್ನು ಕಳೆದುಕೊಳ್ಳುತ್ತವೆ. ಪರಿಣಾಮವಾಗಿ, ಅವು ಸುಲಭವಾಗಿ ಮುರಿಯುವ ಸಾಧ್ಯತೆ ಹೆಚ್ಚಾಗುತ್ತದೆ.
ಸದ್ಯ ಮಹಿಳೆ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದು, ಮನೆಯಲ್ಲಿಯೇ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿ ತಿಳಿಸಿದೆ. ತಮ್ಮ ಜೀವನಶೈಲಿಯಲ್ಲೂ ಬದಲಾವಣೆ ಮಾಡಿಕೊಳ್ಳಲು ಆರಂಭಿಸಿದ್ದಾರೆ. ಹೆಚ್ಚು ಸೂರ್ಯನ ಬೆಳಕು ಸಿಗುವಂತೆ ಹೊರಗೆ ಹೋಗುತ್ತಿದ್ದು, ದೇಹಕ್ಕೆ ಅಗತ್ಯವಾದಷ್ಟು ಕ್ಯಾಲ್ಸಿಯಂ ದೊರೆಯುವಂತೆ ನೋಡಿಕೊಳ್ಳುತ್ತಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ