ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಕಾರವಾರ : ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯ ಜೀವ ಉಳಿಸಿದ ಪೊಲೀಸ್‌ ಸಿಬ್ಬಂದಿ

ಕಾರವಾರ: ಸೇತುವೆಯಿಂದ ನೀರಿಗೆ ಹಾರಿ ಆತ್ಮಹತ್ಯೆಗೆ ಮುಂದಾಗಿದ್ದ ಮಹಿಳೆಯೊಬ್ಬರನ್ನು ಸಮಯಪ್ರಜ್ಞೆಯಿಂದ ಪೊಲೀಸ್ ಸಿಬ್ಬಂದಿ ರಕ್ಷಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕೋಡಿಬಾಗ ಬಳಿ ನಡೆದಿದೆ ಎಂದು ವರದಿಯಾಗಿದೆ.
ಮಲ್ಲಾಪುರ ಪೊಲೀಸ್ ಠಾಣೆಯ ಸಾಯಿನಂದ ವಿ. ನಾಯ್ಕ ಅವರು ಕರ್ತವ್ಯ ನಿಮಿತ್ತ ಮಲ್ಲಾಪುರದಿಂದ ಕಾರವಾರಕ್ಕೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದರು. ಈ ವೇಳೆ ಕೋಡಿಬಾಗ ಸೇತುವೆಯ ಮೇಲೆ ಮಹಿಳೆಯೊಬ್ಬರು ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಿರುವುದನ್ನು ಗಮನಿಸಿದ್ದಾರೆ.

ತಕ್ಷಣವೇ ವಾಹನ ನಿಲ್ಲಿಸಿ ಮಹಿಳೆಯ ಬಳಿಗೆ ಧಾವಿಸಿದ ಅವರು, ಆಕೆಯನ್ನು ಹಿಡಿದು ಎಳೆದಿದ್ದಾರೆ, ನಂತರ ಸಾರ್ವಜನಿಕರ ನೆರವಿನೊಂದಿಗೆ ಸುರಕ್ಷಿತವಾಗಿ ಸೇತುವೆಯಿಂದ ಕೆಳಗಿಳಿಸಿದ್ದಾರೆ. ಬಳಿಕ ಮಹಿಳೆಗೆ ಧೈರ್ಯ ತುಂಬಿ ಸಮಾಧಾನಪಡಿಸಿದ್ದಾರೆ. ನಂತರ ನೊಂದ ಮಹಿಳೆಯನ್ನು 112 ವಾಹನದಲ್ಲಿ ಕಾರವಾರದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಹಾಗೂ ಆಪ್ತಸಮಾಲೋಚನೆಗಾಗಿ ದಾಖಲಿಸಿದ್ದಾರೆ.
ಸಮಯಪ್ರಜ್ಞೆ ಹಾಗೂ ಮಾನವೀಯ ಕಾಳಜಿಯಿಂದ ಮಹಿಳೆಯ ಅಮೂಲ್ಯ ಜೀವವನ್ನು ಉಳಿಸಿದ ಪೊಲೀಸ್‌ ಸಿಬ್ಬಂದಿ ಸಾಯಿನಂದ ವಿ. ನಾಯ್ಕ ಮತ್ತು ದಿನೇಶ್ ನಾಗೇಕರ ಅವರ ಕರ್ತವ್ಯನಿಷ್ಠೆಯನ್ನು ಪೊಲೀಸ್ ಇಲಾಖೆ ಶ್ಲಾಘಿಸಿದೆ.

ಪ್ರಮುಖ ಸುದ್ದಿ :-   ವಿಡಿಯೋ | ಹಾಸನಾಂಬೆ ದೇಗುಲದಲ್ಲಿ ಸಿಎಂ ಶಿವಕುಮಾರ ಪೂಜೆ ವೇಳೆ ದರ್ಶನ ಸ್ಥಗಿತ ; ಆಕ್ರೋಶಿತ ಭಕ್ತರಿಂದ ಟಿವಿ ಪರದೆಗೆ ಚಪ್ಪಲಿ ಎಸೆತ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement