ನವದೆಹಲಿ : ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 2,710ಕ್ಕೆ ಏರಿದೆ. ಕೇರಳದಲ್ಲಿ ಹೆಚ್ಚಿನ ಸೋಂಕು ಪ್ರಕರಣಗಳು ಕಂಡುಬಂದಿವೆ. ನಂತರದ ಸ್ಥಾನದಲ್ಲಿ ಮಹಾರಾಷ್ಟ್ರದವಿದೆ.
ಒಂದು ತಿಂಗಳು ನಂತರ ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿವೆ, ಮೇ 25 ಕ್ಕೆ ಕೊನೆಗೊಂಡ ವಾರದಲ್ಲಿ ಸೋಂಕುಗಳು ಐದು ಪಟ್ಟು ಏರಿಕೆಯಾಗಿವೆ. ಮೇ 26 ರಂದು 1,010 ಪ್ರಕರಣಗಳಿದ್ದದ್ದು ಮೇ 30 ರಂದು 2,710 ಪ್ರಕರಣಗಳಿವೆ ಏರಿದೆ. ಅಂದರೆ ಕೇವಲ ನಾಲ್ಕು ದಿನಗಳಲ್ಲಿ ತ್ವರಿತ ಏರಿಕೆ ಕಂಡುಬಂದಿದೆ ಎಂದು ಸರ್ಕಾರಿ ದತ್ತಾಂಶಗಳು ತೋರಿಸುತ್ತವೆ. ಈ ವರ್ಷದ ಮೊದಲ ಐದು ತಿಂಗಳಲ್ಲಿ ಸಾವಿನ ಸಂಖ್ಯೆ 22 ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ ಎರಡು ಸಾವುಗಳು, ದೆಹಲಿ, ಗುಜರಾತ್, ಕರ್ನಾಟಕ, ಪಂಜಾಬ್ ಮತ್ತು ತಮಿಳುನಾಡಿನಲ್ಲಿ ತಲಾ ಒಂದು ಸಾವು ಸೇರಿ ಏಳು ಸಾವುಗಳು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ SARI ಗುಣಲಕ್ಷಣ ಹೊಂದಿರುವವರಿಗೆ ಕೊವಿಡ್ ಟೆಸ್ಟ್ ಕಡ್ಡಾಯಗೊಳಿಸಿ ಕೇಂದ್ರ ಆರೋಗ್ಯ ಇಲಾಖೆ ಮಹತ್ವದ ಸುತ್ತೋಲೆ ಹೊರಡಿಸಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಕೇರಳದಲ್ಲಿ 1,147 ಪ್ರಕರಣಗಳು ದಾಖಲಾಗಿವೆ.ಮಹಾರಾಷ್ಟ್ರದಲ್ಲಿ (424), ದೆಹಲಿ (294), ಮತ್ತು ಗುಜರಾತ್ (223) ಪ್ರಕರಣಗಳು ದಾಖಲಾಗಿವೆ. ಕರ್ನಾಟಕ ಮತ್ತು ತಮಿಳುನಾಡು ತಲಾ 148 ಪ್ರಕರಣಗಳನ್ನು ದಾಖಲಾಗಿದ್ದು, ಪಶ್ಚಿಮ ಬಂಗಾಳದಲ್ಲಿ 116 ಪ್ರಕರಣಗಳು ದಾಖಲಾಗಿವೆ. ರಾಜಸ್ಥಾನ (51), ಉತ್ತರ ಪ್ರದೇಶ (42), ಮತ್ತು ಪುದುಚೇರಿ (35), ಹರಿಯಾಣ (20), ಆಂಧ್ರಪ್ರದೇಶ (16), ಮತ್ತು ಮಧ್ಯಪ್ರದೇಶ (10) ನಂತರದ ಸ್ಥಾನದಲ್ಲಿವೆ. ಗೋವಾ (7), ಒಡಿಶಾ (5), ಪಂಜಾಬ್ (4), ಜಮ್ಮು ಮತ್ತು ಕಾಶ್ಮೀರ (4), ತೆಲಂಗಾಣ (3), ಅರುಣಾಚಲ ಪ್ರದೇಶ (3), ಮತ್ತು ಚಂಡೀಗಢ (1) ಪ್ರಕರಣಗಳು ದಾಖಲಾಗಿವೆ.
ಮಿಜೋರಾಂ ಮತ್ತು ಅಸ್ಸಾಂನಲ್ಲಿ ತಲಾ ಎರಡು ಸಕ್ರಿಯ ಪ್ರಕರಣಗಳು ದಾಖಲಾಗಿದ್ದರೆ, ಉತ್ತರಾಖಂಡದಲ್ಲಿಯೂ ಎರಡು ಪ್ರಕರಣಗಳಿವೆ. ಸಿಕ್ಕಿಂನಲ್ಲಿ ಶೂನ್ಯ ಸಕ್ರಿಯ ಪ್ರಕರಣಗಳಿವೆ. ಅಂಡಮಾನ್ ಮತ್ತು ನಿಕೋಬಾರ್ ಅಥವಾ ಹಿಮಾಚಲ ಪ್ರದೇಶದಿಂದ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಬಿಹಾರದ ಅಂಕಿಅಂಶ ಇನ್ನೂ ಲಭ್ಯವಾಗಿಲ್ಲ.
ಮಹಾರಾಷ್ಟ್ರದಲ್ಲಿ ಶುಕ್ರವಾರ 84 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿದೆ. ಕೇರಳದಲ್ಲಿ ಒಂದು ವಾರದಲ್ಲಿ 430 ಪ್ರಕರಣಗಳು ದಾಖಲಾಗಿವೆ.
ದೆಹಲಿಯಲ್ಲಿ 100+ ಹೊಸ ಪ್ರಕರಣಗಳು ವರದಿಯಾಗಿವೆ. ಹೆಚ್ಚಿನ ಪ್ರಕರಣಗಳು ಸೌಮ್ಯವಾಗಿದ್ದು, ಸಾರ್ವಜನಿಕರು ಭಯಭೀತರಾಗುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಪುನರುಚ್ಚರಿಸಿದ್ದಾರೆ. ರಾಜ್ಯಾದ್ಯಂತ ಆಸ್ಪತ್ರೆಗಳಲ್ಲಿ ಸಾಕಷ್ಟು ಪರೀಕ್ಷೆ ಮತ್ತು ಚಿಕಿತ್ಸಾ ಮೂಲಸೌಕರ್ಯಗಳು ಜಾರಿಯಲ್ಲಿವೆ ಎಂದು ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಭರವಸೆ ನೀಡಿದೆ.


ನಿಮ್ಮ ಕಾಮೆಂಟ್ ಬರೆಯಿರಿ