ಟ್ರಂಪ್ ಜೊತೆಗೆ ಭೂಮಿ ಮೇಲಿನ ಅಪರೂಪದ ಖನಿಜ ಇದ್ದ ಬಾಕ್ಸ್‌ನ ಚಿತ್ರ ವೈರಲ್ ಆದ ನಂತ್ರ ಪಾಕ್ ಸೇನಾ ಮುಖ್ಯಸ್ಥನಿಗೆ ‘ಸೇಲ್ಸ್‌ ಮ್ಯಾನ್’ ಹಣೆಪಟ್ಟಿ

ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರು ಆರು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಮೂರನೇ ಬಾರಿಗೆ ವಾಷಿಂಗ್ಟನ್‌ಗೆ ಭೇಟಿ ನೀಡಿದ ನಂತರ ತಮ್ಮ ದೇಶದಲ್ಲಿಯೇ ಟೀಕೆಗಳನ್ನು ಎದುರಿಸುತ್ತಿದ್ದಾರೆ.
ಪಾಕಿಸ್ತಾನ ಸೇನಾ ಮುಖ್ಯಸ್ಥ ಮುನೀರ್ ಮತ್ತು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ಅಮೆರಿಕದ ಓವಲ್ ಕಚೇರಿಯಲ್ಲಿ ಪಾಕಿಸ್ತಾನದ ಅಪರೂಪದ ಭೂಮಿಯ ಖನಿಜಗಳ ಪೆಟ್ಟಿಗೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರಿಗೆ ನೀಡುತ್ತಿರುವ ಛಾಯಾಚಿತ್ರವು ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಸ್ವದೇಶದಲ್ಲಿ ಅಹಿತಕರ ಪ್ರಶ್ನೆಗಳು ಏಳುವಂತೆ ಮಾಡಿದೆ.
ಪಾಕಿಸ್ತಾನದ ಖನಿಜ ಸಂಪತ್ತನ್ನು ಎತ್ತಿ ತೋರಿಸುವ ಉದ್ದೇಶದ ಈ ನಡೆಯು ಪಾಕಿಸ್ತಾನದಲ್ಲಿ ರಾಜಕೀಯ ಮುಜುಗರಕ್ಕೆ ಕಾರಣವಾಯಿತು. ದೇಶದ ಸಂಸತ್ತಿನಲ್ಲಿ, ಸೆನೆಟರ್ ಐಮಲ್ ವಾಲಿ ಖಾನ್ ಅವರು ಮುನೀರ್ ಅವರು “ಮಾರಾಟಗಾರ(salesman)ನಂತೆ” ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು, ಪ್ರಧಾನಿ ಶೆಹಬಾಜ್‌ ಶರೀಫ್‌ ಅವರು “ಈ ನಾಟಕವನ್ನು ವ್ಯವಸ್ಥಾಪಕರಂತೆ” ನೋಡುತ್ತಿದ್ದರು ಎಂದು ಟೀಕಿಸಿದ್ದಾರೆ.

ಸೇನಾ ಮುಖ್ಯಸ್ಥರು ಯಾವ ಆಧಾರದ ಮೇಲೆ ವಿದೇಶಿ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ, ಇದು “ಸಂವಿಧಾನದ ಜೊತೆಗೆ ಅಪಹಾಸ್ಯ” ಮತ್ತು “ಸಂಸತ್ತಿನ ನಿಂದನೆʼ ಅಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.
“ಇದು ಪ್ರಜಾಪ್ರಭುತ್ವವಲ್ಲ, ಸರ್ವಾಧಿಕಾರ” ಎಂದ ಖಾನ್ , ಟ್ರಂಪ್ ಅವರ ಶಾಂತಿ ಯೋಜನೆಗೆ ಪಾಕಿಸ್ತಾನದ ಬೆಂಬಲ, ಸೌದಿ ಅರೇಬಿಯಾದೊಂದಿಗೆ ವರದಿಯಾದ ರಕ್ಷಣಾ ಒಪ್ಪಂದದ ವಿವರಗಳು ಮತ್ತು ಮುನೀರ್ ಸಾಮಾನ್ಯವಾಗಿ ನಾಗರಿಕ ನಾಯಕರಿಗೆ ಮೀಸಲಾಗಿರುವ ರಾಜತಾಂತ್ರಿಕ ಸಂಪರ್ಕವನ್ನು ಏಕೆ ನಡೆಸುತ್ತಿದ್ದಾರೆ ಎಂಬುದರ ಕುರಿತು ಸ್ಪಷ್ಟೀಕರಣವನ್ನು ಪಡೆಯಲು ಸಂಸತ್ತಿನ ಜಂಟಿ ಅಧಿವೇಶನ ಕರೆಯುವಂತೆ ಒತ್ತಾಯಿಸಿದರು.

ಪ್ರಮುಖ ಸುದ್ದಿ :-   ವಿಡಿಯೊ | ವಿಶ್ವಕಪ್ ವಿಜಯೋತ್ಸವ ಪೋಡಿಯಂನಲ್ಲಿ ಟ್ರಂಪ್ ವರ್ತನೆ ಚರ್ಚೆಗೆ ಗ್ರಾಸ ; ಪರಿಸ್ಥಿತಿ ನಿಭಾಯಿಸಿದ ಫಿಫಾ ಮುಖ್ಯಸ್ಥ

ಸರ್ಕಾರವು ಒಪ್ಪಂದಗಳನ್ನು ಆರ್ಥಿಕ ಪುನರುಜ್ಜೀವನದ ಮಾರ್ಗವೆಂದು ಹೊಗಳಿಕೊಂಡರೂ, ಅಂತಹ ಉಪಕ್ರಮಗಳನ್ನು ಮುನ್ನಡೆಸುವ ಸೇನಾ ಮುಖ್ಯಸ್ಥರ ದೃಷ್ಟಿಕೋನವು ನಾಗರಿಕ ಅಧಿಕಾರವನ್ನು ದುರ್ಬಲಗೊಳಿಸುತ್ತದೆ ಮತ್ತು ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ದುರ್ಬಲವೆಂದು ಬಿಂಬಿಸುತ್ತದೆ ಎಂದು ವಿಮರ್ಶಕರು ವಾದಿಸುತ್ತಾರೆ.
ಮುನೀರ್ ಅವರ ಸಾಗರೋತ್ತರ ರಾಜತಾಂತ್ರಿಕತೆಯು ಹುಬ್ಬೇರಿಸುವಂತೆ ಮಾಡುತ್ತಿರುವುದು ಇದೇ ಮೊದಲಲ್ಲ. ವಾಷಿಂಗ್ಟನ್‌ಗೆ ಅವರ ಸತತ ಭೇಟಿಗಳು ವಿದೇಶಾಂಗ ನೀತಿಯಲ್ಲಿ ಮಿಲಿಟರಿಯ ವಿಸ್ತೃತ ಪಾತ್ರದ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿವೆ, ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟು ಮತ್ತು ರಾಜಕೀಯ ಅಶಾಂತಿಯನ್ನು ಎದುರಿಸುತ್ತಿರುವ ಸಮಯದಲ್ಲಿ ಇದು ಪ್ರಜಾಪ್ರತಿನಿಧಿಗಳ ನಾಯಕತ್ವವನ್ನು ಮರೆಮಾಡುತ್ತವೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement