ಚೀನಾ-ತೈವಾನ್‌ ಯುದ್ಧ ಭೀತಿ..?: ಅಮೆರಿಕ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಭೇಟಿ ಮರುದಿನ ತೈವಾನ್‌ನ ಸುತ್ತ ‘ಅತಿದೊಡ್ಡ’ ಮಿಲಿಟರಿ ಸಮಾರಾಭ್ಯಾಸ ಆರಂಭಿಸಿದ ಚೀನಾ

ನವದೆಹಲಿ: ಚೀನಾದ ಬೆದರಿಕೆಗಳ ಮಧ್ಯೆ ಅಮೆರಿಕ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್‌ಗೆ ಭೇಟಿ ನೀಡಿದ ಒಂದು ದಿನದ ನಂತರ, ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಸಮುದ್ರದಲ್ಲಿ ಮತ್ತು ತೈವಾನ್ ದ್ವೀಪದ ಸುತ್ತಲಿನ ವಾಯುಪ್ರದೇಶದಲ್ಲಿ ನೇರ ಗುಂಡಿನ ದಾಳಿ ಸೇರಿದಂತೆ ದೇಶದ “ಅತಿದೊಡ್ಡ” ಮಿಲಿಟರಿ ಸಮರಾಭ್ಯಾಸ ಪ್ರಾರಂಭಿಸಿತು ಎಂದು ಗುರುವಾರ ಚೀನಾದ ಸರ್ಕಾರಿ ದೂರದರ್ಶನ ವರದಿ ಮಾಡಿದೆ.
ಸರ್ಕಾರಿ ಸುದ್ದಿ ಟಿವಿ ಪ್ರಕಾರ ತೈವಾನ್ ಸುತ್ತಮುತ್ತಲಿನ ಲೈವ್-ಫೈರ್ ಡ್ರಿಲ್‌ಗಳು ಮತ್ತು ಇತರ ಸಮರಾಭ್ಯಾಸಗಳು ಭಾನುವಾರ (0400 GMT) ಮಧ್ಯಾಹ್ನ 12 ಗಂಟೆಗೆ ಕೊನೆಗೊಳ್ಳಲಿವೆ.
ಈ ನೈಜ ಸಮರಾಭ್ಯಾಸಕ್ಕಾಗಿ ದ್ವೀಪದ ಸುತ್ತಲಿನ ಆರು ಪ್ರಮುಖ ಪ್ರದೇಶಗಳನ್ನು ಆಯ್ಕೆ ಮಾಡಲಾಗಿದೆ ಮತ್ತು ಈ ಅವಧಿಯಲ್ಲಿ, ಸಂಬಂಧಿತ ಹಡಗುಗಳು ಮತ್ತು ವಿಮಾನಗಳು ಸಂಬಂಧಿತ ಸಮುದ್ರ ಪ್ರದೇಶ ಮತ್ತು ವಾಯುಪ್ರದೇಶಗಳನ್ನು ಪ್ರವೇಶಿಸಬಾರದು” ಎಂದು ಸರ್ಕಾರಿ ಪ್ರಸಾರಕ ಟಿವಿ ವರದಿ ಮಾಡಿದೆ.

ಇದಕ್ಕಾಗಿ ದ್ವೀಪದ ಸುತ್ತಲಿನ ಆರು ಪ್ರಮುಖ ಪ್ರದೇಶಗಳನ್ನು ಆಯ್ಕೆ ಮಾಡಲಾಗಿದೆ ಎಂದು ಎಎಫ್‌ಪಿ ವರದಿ ಮಾಡಿದೆ. ಮತ್ತೊಂದೆಡೆ, ತೈವಾನ್‌ನ ರಕ್ಷಣಾ ಸಚಿವಾಲಯವು ಡ್ರಿಲ್‌ಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ದ್ವೀಪವು ಸಂಘರ್ಷಕ್ಕೆ ಸಿದ್ಧವಾಗಿದೆ, ಆದರೆ ಅದನ್ನು ಹುಡುಕು ಹೋಗುವುದಿಲ್ಲ ಎಂದು ಹೇಳಿದೆ. “ರಾಷ್ಟ್ರೀಯ ರಕ್ಷಣಾ ಸಚಿವಾಲಯವು ಯುದ್ಧಕ್ಕೆ ತಯಾರಿ ಮಾಡುವ ತತ್ವವನ್ನು ಎತ್ತಿಹಿಡಿಯುತ್ತದೆ ಮತ್ತು ಸಂಘರ್ಷವನ್ನು ಹೆಚ್ಚಿಸುವುದಿಲ್ಲ ಮತ್ತು ವಿವಾದಗಳನ್ನು ಉಂಟುಮಾಡುವುದಿಲ್ಲ” ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.
ಬುಧವಾರ, ಪೆಲೋಸಿ ತೈವಾನ್‌ನಿಂದ ನಿರ್ಗಮಿಸಿದಾಗ, ಚೀನಾ ತನ್ನ ಭೇಟಿಯ ಬಗ್ಗೆ ತನ್ನ ಆಕ್ರೋಶವನ್ನು ಸುತ್ತಮುತ್ತಲಿನ ಸಮುದ್ರದಲ್ಲಿ ಮಿಲಿಟರಿ ಚಟುವಟಿಕೆಯ ಸ್ಫೋಟದೊಂದಿಗೆ ಪ್ರದರ್ಶಿಸಿತು, ಬೀಜಿಂಗ್‌ನಲ್ಲಿರುವ ಅಮೆರಿಕ ರಾಯಭಾರಿಯನ್ನು ಕರೆಸಿತು ಮತ್ತು ತೈವಾನ್‌ನಿಂದ ಹಲವಾರು ಕೃಷಿ ಆಮದುಗಳಿಗೆ ನಿಷೇಧ ಹೇರಿತು.
ಚೀನಾದ ಕಸ್ಟಮ್ಸ್ ಇಲಾಖೆಯು ತೈವಾನ್‌ನಿಂದ ಸಿಟ್ರಸ್ ಹಣ್ಣುಗಳು ಮತ್ತು ಕೆಲವು ಮೀನುಗಳ ಮೊದಲಾದವುಗಳ ಆಮದನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿತು. ಅಲ್ಲದೆ, ಅದರ ವಾಣಿಜ್ಯ ಸಚಿವಾಲಯವು ತೈವಾನ್‌ಗೆ ನೈಸರ್ಗಿಕ ಮರಳನ್ನು ರಫ್ತು ಮಾಡುವುದನ್ನು ನಿಷೇಧಿಸಿದೆ.

ಈ ಸಮರಾಭ್ಯಾಸವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ತೈವಾನ್ ರಕ್ಷಣಾ ಸಚಿವಾಲಯ ತಿಳಿಸಿದೆ. ಏತನ್ಮಧ್ಯೆ, ತೈವಾನ್ ತನ್ನ ವಾಯು ರಕ್ಷಣಾ ವಲಯದಲ್ಲಿ 27 ಚೀನೀ ವಿಮಾನಗಳನ್ನು ಎಚ್ಚರಿಸಲು ಬುಧವಾರ ಜೆಟ್‌ಗಳನ್ನು ಸ್ಕ್ರಾಂಬಲ್ ಮಾಡಿತು ಎಂದು ದ್ವೀಪದ ರಕ್ಷಣಾ ಸಚಿವಾಲಯ ತಿಳಿಸಿದೆ, ಅವುಗಳಲ್ಲಿ 22 ಚೀನೀ ವಿಮಾನಗಳು ತೈವಾನ್‌ ದ್ವೀಪ ದೇಶವನ್ನು ಚೀನಾದಿಂದ ಬೇರ್ಪಡಿಸುವ ಮಧ್ಯದ ರೇಖೆಯನ್ನು ದಾಟಿದೆ ಎಂದು ಹೇಳಿದೆ.
ಸೂಕ್ಷ್ಮ ತೈವಾನ್ ಜಲಸಂಧಿಯಾದ್ಯಂತ ಉದ್ವಿಗ್ನತೆಯ ಇತ್ತೀಚಿನ ಏರಿಕೆಯಲ್ಲಿ, ತೈವಾನ್ ತನ್ನ ವಾಯು ರಕ್ಷಣಾ ಗುರುತಿನ ವಲಯ ಅಥವಾ ADIZ ಗೆ ಚೀನಾದ ಚಟುವಟಿಕೆಗಳನ್ನು “ಮೇಲ್ವಿಚಾರಣೆ” ಮಾಡಲು ವಿಮಾನವನ್ನು ರವಾನಿಸಿದೆ ಮತ್ತು ಕ್ಷಿಪಣಿ ವ್ಯವಸ್ಥೆಗಳನ್ನು ನಿಯೋಜಿಸಿದೆ ಎಂದು ಹೇಳಿದೆ. ಕಿನ್‌ಮೆನ್ ಬಳಿ ಶಂಕಿತ ಡ್ರೋನ್‌ಗಳನ್ನು ಓಡಿಸಲು ಬೆಂಕಿ ಜ್ವಾಲೆಗಳನ್ನು ಹಾರಿಸಿದೆ ಎಂದು ಅದು ಹೇಳಿದೆ. ತೈವಾನ್‌ನ ಮಿಲಿಟರಿ ತನ್ನ ಜಾಗರೂಕತೆಯ ಮಟ್ಟವನ್ನು ಹೆಚ್ಚಿಸಿದೆ. ಸುತ್ತಮುತ್ತಲಿನ ಸಮುದ್ರದ ನೀರಿನಲ್ಲಿ ಡ್ರಿಲ್‌ಗಳ ಮೂಲಕ ಪ್ರಮುಖ ಬಂದರುಗಳು ಮತ್ತು ನಗರಗಳಿಗೆ ಬೆದರಿಕೆ ಹಾಕಲು ಚೀನಾ ಪ್ರಯತ್ನಿಸುತ್ತಿದೆ ಎಂದು ತೈವಾನ್‌ ರಕ್ಷಣಾ ಸಚಿವಾಲಯ ಹೇಳಿದೆ.

ಚೀನಾವು ತನ್ನದು ಎಂದು ಹೇಳಿಕೊಳ್ಳುವ ತೈವಾನ್ ದ್ವೀಪಕ್ಕೆ ಹೋಗುವ ಮೂಲಕ, ಪೆಲೋಸಿ 25 ವರ್ಷಗಳಲ್ಲಿ ಸ್ವಯಂ-ಆಡಳಿತದ ದ್ವೀಪಕ್ಕೆ ಭೇಟಿ ನೀಡಿದ ಉನ್ನತ ಶ್ರೇಣಿಯ ಚುನಾಯಿತ ಅಮೆರಿಕದ ಅಧಿಕಾರಿ. ಇದಕ್ಕೆ ಪ್ರತೀಕಾರವಾಗಿ, ಕನಿಷ್ಠ 21 ಚೀನಾದ ಮಿಲಿಟರಿ ವಿಮಾನಗಳು ತೈವಾನ್‌ನ ವಾಯು ರಕ್ಷಣಾ ವಲಯವನ್ನು ಪ್ರವೇಶಿಸಿದವು. ಬುಧವಾರ ಪೆಲೋಸಿ, ತನ್ನ ಉಪಸ್ಥಿತಿಯು ತೈವಾನ್‌ನಂತಹ ಪ್ರಜಾಸತ್ತಾತ್ಮಕ ಮಿತ್ರನನ್ನು ಅಮೆರಿಕವು “ಕೈಬಿಡುವುದಿಲ್ಲ” ಎಂದು “ನಿಸ್ಸಂದಿಗ್ಧವಾಗಿ ಸ್ಪಷ್ಟಪಡಿಸಿದೆ” ಎಂದು ಹೇಳಿದರು.
ಅಮೆರಿಕದ ಹಿರಿಯ ವ್ಯಕ್ತಿಯೊಬ್ಬರು ಇಲ್ಲಿ ಇರುವುದು ತೈವಾನ್‌ನ ಸ್ವಾತಂತ್ರ್ಯಕ್ಕೆ ಅಮೆರಿಕದ ಬೆಂಬಲವನ್ನು ಸೂಚಿಸುತ್ತದೆ ಎಂದು ಚೀನಾ ಆಕ್ರೋಶ ವ್ಯಕ್ತಪಡಿಸಿದೆ. ಚೀನಾ ಕೋಪಗೊಂಡಿರುವ ಇನ್ನೊಂದು ಕಾರಣವೆಂದರೆ ಕಳೆದ ವಾರ ಬೈಡನ್‌ ಅವರೊಂದಿಗಿನ ದೂರವಾಣಿ ಕರೆಯಲ್ಲಿ ಅಧ್ಯಕ್ಷ ಕ್ಸಿ ಅಮೆರಿಕವು “ಬೆಂಕಿಯೊಂದಿಗೆ ಆಟವಾಡುತ್ತಿದೆ” ಎಂದು ಎಚ್ಚರಿಸಿದ್ದರು. ಇದರ ಹೊರತಾಗಿಯೂ, ಪೆಲೋಸಿ ಚೀನಾದ ಬೆದರಿಕೆಗಳನ್ನು ನಿರ್ಲಕ್ಷಿಸಿ ಅಲ್ಲಿಗೆ ಬಂದರು.
“G7 – ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಬ್ರಿಟನ್ ಮತ್ತು ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ವಿದೇಶಾಂಗ ಮಂತ್ರಿಗಳು ಹೇಳಿಕೆಯಲ್ಲಿ ವಿಶೇಷವಾಗಿ ಲೈವ್-ಫೈರ್ ಸಮರಾಭ್ಯಾಸಗಳು ಮತ್ತು “ಆರ್ಥಿಕ ದಬ್ಬಾಳಿಕೆ ಎಂದು ಚೀನಾದ “ಬೆದರಿಕೆ ಕ್ರಮಗಳು ಎಂದು ಕರೆದಿವೆ ಹಾಗೂ ತೈವಾನ್ ವಿಷಯವನ್ನು ಶಾಂತಿಯುತವಾಗಿ ಪರಿಹರಿಸಲು ಚೀನಾವನ್ನು ಒತ್ತಾಯಿಸಿವೆ. ಮತ್ತು ಯಾವುದೇ ದೇಶದ ಉನ್ನತ ಜನಪ್ರತಿನಿಧಿಗಳು ಅಂತಾರಾಷ್ಟ್ರೀಯವಾಗಿ ಪ್ರಯಾಣಿಸುವುದು “ಸಾಮಾನ್ಯ ಮತ್ತು ವಾಡಿಕೆ” ಎಂದು ಅವರು ಹೇಳಿವೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement