ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಕಾರವಾರ : ತೆರೆದ ಬಾವಿಗೆ ಬಿದ್ದು ಎರಡು ಕಡವೆಗಳು ಸಾವು

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಬೈತಖೋಲ ವ್ಯಾಪ್ತಿಯ ಅಲಿಗದ್ದಾದಲ್ಲಿ ಎರಡು ಕಡವೆಗಳು ತೆರೆದ ಬಾವಿಗೆ ಬಿದ್ದು ಸಾವಿಗೀಡಾದ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಆಹಾರ ಅರಸಿ ಬಂದಿದ್ದ ಎರಡು ಕಡವೆಗಳು ಬಾವಿಯ ಸುತ್ತಲಿನ ಕೆಸರು ಪ್ರದೇಶದಲ್ಲಿ ಕಾಲು ಜಾರಿ ಬಾವಿಗೆ ಬಿದ್ದಿರಬಹುದು ಅಥವಾ ನಾಯಿಗಳು ಅಟ್ಟಿಸಿಕೊಂಡು ಬಂದಾಗ ತಪ್ಪಿಸಿಕೊಳ್ಳುವಾಗ ಗೊತ್ತಾಗದೆ ತೆರೆದ ಬಾವಿಯಲ್ಲಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಬಾವಿಯೊಳಗೆ ಬಿದ್ದ ಬಳಿಕ ಮೇಲಕ್ಕೆ ಬರಲು ಸಾಧ್ಯವಾಗದೆ ಎರಡೂ ಪ್ರಾಣಿಗಳು ಮೃತಪಟ್ಟಿವೆ.

ಘಟನೆ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಲವು ವರ್ಷಗಳಿಂದ ಅಪಾಯಕಾರಿಯಾಗಿ ತೆರೆದಿರುವ ಇದೇ ಬಾವಿಗೆ ಈ ಹಿಂದೆಯೂ ಜಾನುವಾರುಗಳು, ಕಾಡುಪ್ರಾಣಿಗಳು ಮೃತಪಟ್ಟಿದ್ದರೂ ಬಾವಿಯ ಸುತ್ತ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದಿರುವುದು ಸ್ಥಳೀಯರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಇದರ ಜೊತೆಗೆ ಬಾವಿಯ ನೀರೂ ಕಲುಷಿತಗೊಂಡಿದ್ದು, ಬಳಕೆಗೆ ಯೋಗ್ಯವಲ್ಲದ ಸ್ಥಿತಿಯಲ್ಲಿದೆ. ಮನುಷ್ಯರು ಮತ್ತು ಮೂಕಪ್ರಾಣಿಗಳ ಜೀವಕ್ಕೆ ಅಪಾಯ ತಂದೊಡ್ಡುತ್ತಿರುವ ಈ ಬಾವಿಯ ಸುತ್ತ ಕನಿಷ್ಠ ತಂತಿ ಬೇಲಿಯನ್ನಾದರೂ ಅಳವಡಿಸಿದ್ದರೆ ಈಗ ಸಂಭವಿಸಿರುವ ದುರಂತ ತಪ್ಪಿಸಬಹುದಿತ್ತು ಎಂಬುದು ಸ್ಥಳೀಯರು ಹೇಳುತ್ತಿದ್ದಾರೆ.

ಪ್ರಮುಖ ಸುದ್ದಿ :-   ಕಾಡಾನೆಗಳ ಸ್ಥಳಾಂತರ ವಿಚಾರ ; ತಮ್ಮದೇ ಸರ್ಕಾರದ ವಿರುದ್ಧ ಶಾಸಕರ ಆಕ್ರೋಶ; ರಾಜೀನಾಮೆ ಪತ್ರ ಪ್ರದರ್ಶಿಸಿ ನಯನಾ ಮೋಟಮ್ಮ ಆಕ್ರೋಶ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement