
ಬೆಳೆಯುತ್ತಿರುವ ಡಿಜಿಟಲ್ ಯುಗದಲ್ಲಿ, ಕೃತಕ ಬುದ್ಧಿಮತ್ತೆ(AI)ಯು ಪ್ರಬಂಧಗಳನ್ನು ಬರೆಯುವುದರಿಂದ ಹಿಡಿದು ರೋಗಗಳನ್ನು ಪತ್ತೆಹಚ್ಚುವವರೆಗೆ ಹಲವಾರು ಸಾಧನೆಗಳಿಗೆ ಕಾರಣವಾಗಿದೆ. ಈಗ, ಇದು ಅಮೆರಿಕದ ಮಹಿಳೆಯೊಬ್ಬರು ಲಾಟರಿ ಗೆಲ್ಲಲು ಸಹಾಯ ಮಾಡಿದೆ.
ವರ್ಜೀನಿಯಾದ ಮಿಡ್ಲೋಥಿಯನ್ ನಿವಾಸಿ ಕ್ಯಾರಿ ಎಡ್ವರ್ಡ್ಸ್ ಅವರು, ಲಾಟರಿ ಟಿಕೆಟ್ ಖರೀದಿಸಲು ಸಂಖ್ಯೆಗಳನ್ನು ಆಯ್ಕೆ ಮಾಡಲು ಚಾಟ್ ಜಿಪಿಟಿ (ChatGPT) ಸಹಾಯ ಪಡೆದ ನಂತರ ಸೆಪ್ಟೆಂಬರ್ 8 ರ ವರ್ಜೀನಿಯಾ ಲಾಟರಿ ಪವರ್‌ಬಾಲ್ ಡ್ರಾದಲ್ಲಿ ದೊಡ್ಡ ಮೊತ್ತದ ಬಹುಮಾನವನ್ನು ಗೆದ್ದಿದ್ದಾರೆ. ಎಐ (AI) ಆಯ್ಕೆ ಮಾಡಿದ ಸಂಖ್ಯೆಗಳು ಮೊದಲ ಐದು ಸಂಖ್ಯೆಗಳಲ್ಲಿ ನಾಲ್ಕಕ್ಕೆ ಹೊಂದಿಕೆಯಾಗಿ ಪವರ್‌ಬಾಲ್‌ಗೆ ಹೊಂದಿಕೆಯಾಗಿ, ಅವರಿಗೆ $50,000 ಬಹುಮಾನ ಗೆಲ್ಲಲು ಕಾರಣವಾಯಿತು.
ಪವರ್ ಪ್ಲೇ ಆಯ್ಕೆಗಾಗಿ ಎಡ್ವರ್ಡ್ಸ್ ಹೆಚ್ಚುವರಿ ಡಾಲರ್ ಪಾವತಿಸುವ ಆಯ್ಕೆಯನ್ನು ಮಾಡಿಕೊಂಡಿದ್ದರಿಂದ, ಅವರ ಲಕ್ಕಿ ಡ್ರಾ ಬಹುಮಾನವಾದ $50,000 ಮೂರು ಪಟ್ಟು ಹೆಚ್ಚಾಗಿ $1.50,000 (ಸುಮಾರು 1.32 ಕೋಟಿರೂ.) ಕ್ಕೆ ತಲುಪಿತು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಎಡ್ವರ್ಡ್ಸ್ ಅವರು ಟಿಕೆಟ್ ಖರೀದಿಸಿದಾಗ ಸೂಕ್ತ ಸಂಖ್ಯೆಗಳನ್ನು ಆಯ್ಕೆ ಮಾಡಲು ಆಕಸ್ಮಿಕವಾಗಿ ಚಾಟ್‌ಜಿಪಿಟಿ ನೆರವು ಕೇಳಿಕೊಂಡಿರುವುದಾಗಿ ಹೇಳಿದ್ದಾರೆ.
ಎರಡು ದಿನಗಳ ನಂತರ, ಎಡ್ವರ್ಡ್ಸ್ ಸಭೆಯಲ್ಲಿ ಕುಳಿತಿದ್ದಾಗ, ಅವರ ಫೋನ್‌ನಲ್ಲಿ ಬಂದ ಅಧಿಸೂಚನೆಯು ಅವರಿಗೆ ಒಂದು ಸಲ ಅವರ ಕಣ್ಣನ್ನು ಅವರೇ ನಂಬದಂತೆ ಮಾಡಿತು. ದಯವಿಟ್ಟು ನೀವು ಲಾಟರಿಯಲ್ಲಿ ಗೆದ್ದಿರುವುದನ್ನು ಪಡೆಯಿರಿ ಎಂದು ಸಂದೇಶ ಬಂದಿತ್ತು.
ಮೊದಲಿಗೆ, ಇದು ಒಂದು ವಂಚನೆಯ ಸಂದೇಶವಾಗಿರಬಹುದು ಎಂದು ಅವರು ಭಾವಿಸಿದರು. ಆದರೆ ಸುದ್ದಿಯನ್ನು ಪರಿಶೀಲಿಸಿದ ನಂತರ, ಅವರು ಲಾಟರಿಯಲ್ಲಿ ಗೆದ್ದಿರುವುದು ಖಾತ್ರಿಯಾಯಿತು ಎಂದು ಅವರು ಹೇಳಿದ್ದಾರೆ.
ಬಹುಮಾನದ ಹಣ ದಾನ
ಆದಾಗ್ಯೂ, ಮಹಿಳೆ ಸಂಪೂರ್ಣ $1,50,000 ಅನ್ನು ಮೂರು ದತ್ತಿ ಕಾರ್ಯಗಳಿಗೆ ದೇಣಿಗೆ ನೀಡುವ ವಾಗ್ದಾನ ಮಾಡಿದ್ದಾರೆ. ತನ್ನ ಪತಿ ಸಾವಿಗೀಡಾದ ಶಾಲೋಮ್ ಫಾರ್ಮ್ಸ್ ಎಂಬ ಕಾಯಿಲೆಯ ಕುರಿತು ಸಂಶೋಧನೆ ನಡೆಸಲು ಅನುಕೂಲವಾಗಲಿ ಅಸೋಸಿಯೇಷನ್ ಫಾರ್ ಫ್ರಂಟೋಟೆಂಪೊರಲ್ ಡಿಜೆನರೇಶನ್ (AFTD) ಮತ್ತು ಮಿಲಿಟರಿ ಸೇವಾ ಸದಸ್ಯರು ಮತ್ತು ಅವರ ಕುಟುಂಬಗಳಿಗೆ ಸಹಾಯ ಮಾಡಲು ನೇವಿ-ಮೆರೈನ್ ಕಾರ್ಪ್ಸ್ ರಿಲೀಫ್ ಸೊಸೈಟಿಗೆ ಹಣವನ್ನು ದಾನ ಮಾಡುವುದಾಗಿ ಅವರು ಹೇಳಿದ್ದಾರೆ.
“



ನಿಮ್ಮ ಕಾಮೆಂಟ್ ಬರೆಯಿರಿ