ದೈಹಿಕ ಚಟುವಟಿಕೆಯಿಂದ ದೂರವಿರುವ ಸೋಮಾರಿಗಳಿಗೇ ಕೊರೊನಾ ಸೋಂಕು ಸಾಧ್ಯತೆ ಹೆಚ್ಚು: ಅಮೆರಿಕ ಅಧ್ಯಯನ ವರದಿ

ದೈಹಿಕವಾಗಿ ಹೆಚ್ಚು ಚಟುವಟಿಕೆಯಿಂದ ಮಾಡದಿದ್ದರೆ ಕೊರೊನೊ ಸೋಂಕು ತಗಲುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನಗಳು ಬಹಿರಂಗಪಡಿಸಿವೆ.
ಮುಖ್ಯವಾಗಿ ದಿನನಿತ್ಯದ ಜೀವನ ಚಟುವಟಿಕೆಗಳಿಂದ ಕೂಡಿರದೇ, ಆಲಸ್ಯ ಮತ್ತು ಸೋಮಾರಿನದಿಂದಲೇ ಇದ್ದರೆ ಅಂತಹವರಿಗೆ ಕೊರೊನಾ ಸೋಂಕು ತಗುಲುವ ಸಾಧ್ಯತೆ ಇತರರಿಗಿಂತ ಹೆಚ್ಚು ಎಂದು ಅಮೆರಿಕಾ ಕ್ಯಾಲಿಫೋರ್ನಿಯಾ ಸ್ಯಾನ್ ಡಿಯಾಗೋ ವಿಶ್ವವಿದ್ಯಾಲಯದ ತಜ್ಞರನ್ನು ಒಳಗೊಂಡ ಸಂಶೋಧಕರ ತಂಡದ ಅಧ್ಯಯನದಲ್ಲಿ ಗೊತ್ತಾಗಿದೆ.
ಅಮೆರಿಕಾದಲ್ಲಿ ಕೊರೊನಾ ಸೋಂಕಿಗೆ ಒಳಗಾದವರರ ಜೀವನಶೈಲಿಯನ್ನು ಈ ತಂಡ ಅಧ್ಯಯನಕ್ಕೆ ಒಳಪಡಿಸಿದೆ. ಅಮೆರಿಕದಲ್ಲಿ ಕೊರೊನಾ ಸೊಂಕಿಗೆ ತುತ್ತಾದ ಬಹುತೇಕರು ಶ್ರಮಜೀವನ ನಡೆಸುತ್ತಿದ್ದವರಲ್ಲ ಎಂಬುದು ಈ ಅಧ್ಯಯನದಲ್ಲಿ ಗೊತ್ತಾಗಿದೆ. ಈ ಸಂಶೋಧನೆಯ ವರದಿಯು ಬ್ರಿಟಿಷ್ ಜರ್ನಲ್ ಆಫ್ ಸ್ಪೋರ್ಟ್ಸ್​ ಎಂಬ ಪ್ರಖ್ಯಾತ ಮ್ಯಾಗಜೀನ್​ನಲ್ಲಿ ಪ್ರಕಟವಾಗಿದೆ.
ಜೀವನ ಶೈಲಿ ಎಂಬುದು ಯಾವುದೇ ಒಂದು ರೋಗ ಅಥವಾ ಸೋಂಕು ನಮ್ಮನ್ನು ತಗುಲದಂತೆ ಕಾಪಾಡುವ ಬಹುಮುಖ್ಯ ಅಂಶ. ಧೂಮಪಾನ. ಮದ್ಯಪಾನ, ಮಧುಮೇಹ, ಅತಿ ಒತ್ತಡ ಮುಂತಾದ ಅಂಶಗಳು ಕೊರೊನಾ ಸೋಂಕನ್ನು ನಮಗೆ ತಗುಲಿಸುವ ಅಂಶಗಳಾಗಿ ಕೆಲಸ ಮಾಡಬಲ್ಲವು. ಈ ಎಲ್ಲ ಅಂಶಗಳ ಜತೆ ಸೋಮಾರಿತನದ ಜೀವನ ಶೈಲಿಯು ಕೊವಿಡ್ ಸೋಂಕಿಗೆ ಅತಿ ಹತ್ತಿರ ಕರೆದೊಯ್ಯಬಹುದು ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.
ಸೋಮಾರಿ ಜೀವಶೈಲಿಯು ಇತರ ಕೆಲವು ಖಾಯಿಲೆಗಳಿಗೂ ದಾರಿ ಮಾಡಿಕೊಡಬಲ್ಲದು. ಅಮೆರಿಕದಲ್ಲಿ ಕೊರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾದವರು ಬಹುತೇಕರು ಹೆಚ್ಚು ವ್ಯಾಯಾಮದಂತಹ ಚಟುವಟಿ ಹಾಗೂ ದೈಹಿಕ ಚಟುವಟಿಕೆಯಿಂದ ದೂರ ಇದ್ದವರು. ಹೆಚ್ಚಿನವರು ಒಂದು ವಾರಕ್ಕೆ ಕೇವಲ ಎರಡೂವರೆ ಗಂಟೆಗಳಷ್ಟೇ ವ್ಯಾಯಾಮದಂತಹ ಚಟುವಟಿಕೆಗಳನ್ನು ನಡೆಸುತ್ತಿದ್ದರು ಎಂದು ಈ ವರದಿ ಹೇಳಿದೆ. ಅಲ್ಲದೇ, ಅಂತಹ ಸೋಂಕಿತರನ್ನು ಇತರರಿಗಿಂತ ಶೇ 73ರಷ್ಟು ಹೆಚ್ಚು ಪಾಲು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುವ ಅವಶ್ಯಕತೆ ಎದುರಾಗಿತ್ತು. ಅಂತಹವರ ಮರಣದ ಪ್ರಮಾಣವೂ ಇತರರಗಿಂತ ಶೇ 2.5ರಷ್ಟು ಹೆಚ್ಚಿದೆ ಎಂದು ಅಧ್ಯಯನ ತಿಳಿಸುತ್ತದೆ.
ಕೊರೊನಾ ಸೋಂಕು ತಡೆಯಲು ಮಾಸ್ಕ್ ಧರಿಸಬೇಕು. ಜೊತೆಗೆ ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳಬೇಕು. ಇದರ ಜೊತೆಗೆ ದೈಹಿಕ ಚಟುವಟಿಕೆ ಹೆಚ್ಚಿಸಬೇಕು. ಆ ನಿರಂತರವಾಗಿ ದೈಹಿಕ ಚಟುವಟಿಕೆ, ವ್ಯಾಯಾಮ ಯೋಗಾಭ್ಯಾಸಗಳಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳಲಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement