ಶ್ರೀಮಂತರಾಗಲು ಬಯಸಿದ್ದ ದಂಪತಿಯಿಂದ “ನರಬಲಿ”…! ಇಬ್ಬರು ಮಹಿಳೆಯರನ್ನು ಕೊಂದು ಶವಗಳನ್ನು ತುಂಡುತುಂಡು ಮಾಡಿ ಹೂತಿಟ್ಟರು..!

ತಿರುವನಂತಪುರಂ: ಕೇರಳದಲ್ಲಿ ನಾಪತ್ತೆಯಾಗಿದ್ದ ಇಬ್ಬರು ಮಹಿಳೆಯರನ್ನು ದಂಪತಿ ಕೊಂದು ತುಂಡುತುಂಡು ಮಾಡಿ ಹೂತಿಟ್ಟಿರುವ ಭೀಕರ ನರಬಲಿ ಪ್ರಕರಣವನ್ನು ಪೊಲೀಸರು ಇಂದು, ಮಂಗಳವಾರ ಭೇದಿಸಿದ್ದಾರೆ.
ತಮ್ಮ ಆರ್ಥಿಕ ತೊಂದರೆಗಳನ್ನು ಕೊನೆಗೊಳಿಸಿ ಶ್ರೀಮಂತರಾಗಲು ಬಯಸಿದ್ದ ದಂಪತಿ ಎರ್ನಾಕುಲಂ ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಇಬ್ಬರು ಮಹಿಳೆಯರಾದ ರೋಸ್ಲಿನ್ ಮತ್ತು ಪದ್ಮಾ ಅವರನ್ನು ನರಬಲಿ ಕೊಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದಂಪತಿ ಮತ್ತು ಅವರ ಏಜೆಂಟ್‌ನನ್ನು ಇಂದು, ಮಂಗಳವಾರ ಬಂಧಿಸಲಾಗಿದೆ.
50ರ ಆಸುಪಾಸು ವಯಸ್ಸಿನ ರೋಸೆಲಿನ್ ಮತ್ತು ಪದ್ಮಾ ಎರ್ನಾಕುಲಂನಲ್ಲಿ ಲಾಟರಿ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದರು. ಜೂನ್‌ನಲ್ಲಿ ರೋಸ್ಲಿನ್ ಹಾಗೂ ಪದ್ಮಾ ಸೆಪ್ಟೆಂಬರ್‌ನಲ್ಲಿ ನಾಪತ್ತೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅವರ ಕುತ್ತಿಗೆಯನ್ನು ಸೀಳಿ, ಅವರ ದೇಹಗಳನ್ನು ತುಂಡುಗಳಾಗಿ ಕತ್ತರಿಸಿ ಪಥನಂತಿಟ್ಟ ಜಿಲ್ಲೆಯ ತಿರುವಲ್ಲಾ ಎಂಬ ಪಟ್ಟಣದ ವಿವಿಧ ಸ್ಥಳಗಳಲ್ಲಿ ಹೂಳಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಮಸಾಜ್ ಥೆರಪಿಸ್ಟ್ ಭಗವಂತ್ ಸಿಂಗ್, ಆತನ ಪತ್ನಿ ಲೈಲಾ ಕೊಲೆಗಾರರು ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಗಳು ತಮಗೆ ಸಮೃದ್ಧ ಜೀವನವನ್ನು ತಂದುಕೊಡುತ್ತದೆ ಎಂದು ಅವರು ನಂಬಿದ್ದರು.
ಬಂಧನಕ್ಕೊಳಗಾದ ಮೂರನೇ ವ್ಯಕ್ತಿ, ರಶೀದ್ ಅಥವಾ ಮುಹಮ್ಮದ್ ಶಫಿ, ಅಪರಾಧದಲ್ಲಿ ಅವರಿಗೆ ಸಹಾಯ ಮಾಡಿದ್ದಾನೆ ಮತ್ತು ನರಬಲಿ ಕೊಡಲು ಮನವೊಲಿಸಿದ್ದಾನೆ. ಈತ ಎರ್ನಾಕುಲಂನಿಂದ ಇಬ್ಬರು ಮಹಿಳೆಯರನ್ನು ಅಪಹರಿಸಿ ದಂಪತಿಯ ಮನೆಗೆ ಕರೆತಂದಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪದ್ಮಾ ನಾಪತ್ತೆಯಾಗಿರುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾಗ ಹತ್ಯೆ ನಡೆದಿರುವುದು ಬೆಳಕಿಗೆ ಬಂದಿದೆ. ಮಹಿಳೆಯರ ಫೋನ್ ಗಳನ್ನು ಮುಹಮ್ಮದ್ ಶಫಿ ಎಂಬಾತನ ಬಳಿ ಪತ್ತೆ ಮಾಡಲಾಗಿದ್ದು, ಆತ ಅದನ್ನು ಒಡೆದು ಹಾಕಿದ್ದು, ಅಪಹರಣ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಕಡವಂತರಾದಿಂದ (ಎರ್ನಾಕುಲಂ) ಕಾಣೆಯಾದ ಮಹಿಳೆಗೆ ಸಂಬಂಧಿಸಿದಂತೆ ನಾವು ತನಿಖೆ ನಡೆಸಿದಾಗ, ಆಕೆಯನ್ನು ತಿರುವಲ್ಲಾದ ಆ ದಂಪತಿ ಮನೆಯಲ್ಲಿ ಕೊಂದು ಅವಳ ದೇಹವನ್ನು ತುಂಡುಗಳಾಗಿ ಕತ್ತರಿಸಿ ನಂತರ ಹೂಳಲಾಗಿದೆ ಎಂದು ನಮಗೆ ತಿಳಿದುಬಂದಿತು. ಇದು ಆರ್ಥಿಕ ಲಾಭಕ್ಕಾಗಿ ಆ ದಂಪತಿ ಮಾಡಿದ ನರಬಲಿಯಾಗಿದೆ.” ಎಂದು ಕೊಚ್ಚಿ ನಗರ ಪೊಲೀಸ್ ಆಯುಕ್ತ ನಾಗರಾಜು ಚಕಿಲಂ ಹೇಳಿದ್ದಾರೆ.

ಪ್ರಮುಖ ಸುದ್ದಿ :-   'ತಾರಕ್ ಮೆಹ್ತಾ' ನಟ ಗುರುಚರಣ್ ಸಿಂಗ್ ಐದು ದಿನಗಳಿಂದ ನಾಪತ್ತೆ ; ಸಿಸಿಟಿವಿಯಲ್ಲಿ ರಸ್ತೆ ದಾಟುತ್ತಿರುವುದು ಸೆರೆ

ದಂಪತಿಯನ್ನು ವಿಚಾರಣೆಗೆ ಒಳಪಡಿಸಿದಾಗ, ಜೂನ್‌ನಲ್ಲಿ ಅದೇ ಮನೆಯಲ್ಲಿ ಮತ್ತೊಬ್ಬ ಮಹಿಳೆಯ ನರಬಲಿಯನ್ನು ಅವರು ಒಪ್ಪಿಕೊಂಡರು. ಆ ಮಹಿಳೆ ರೋಸೆಲಿನ್ ಎಂದು ಪೊಲೀಸರು ತಿಳಿಸಿದ್ದಾರೆ.
ಇದು ಒಂದೇ ಮನೆಯಲ್ಲಿ, ಅದೇ ದಂಪತಿ ಮತ್ತು ಮಹಿಳೆಯನ್ನು ಅದೇ ವ್ಯಕ್ತಿ ಕರೆತಂದಿದ್ದಾನೆ. ಮೂರನೇ ವ್ಯಕ್ತಿ ಏಜೆಂಟ್ ಪಾತ್ರವನ್ನು ವಹಿಸಿದ್ದಲ್ಲದೆ (ಈ ಎರಡೂ ಸಂದರ್ಭಗಳಲ್ಲಿ) ಇದನ್ನು ಮಾಡಲು ಪ್ರಮುಖ ಪಾತ್ರ ವಹಿಸಿದ್ದ. ಹೀಗೆ ಮಾಡಬೇಕು ಎಂದು ದಂಪತಿಗೆ ಮನವರಿಕೆ ಮಾಡಿದ್ದಾನೆ ಎಂದು ಅವರು ಹೇಳಿದರು.
ಈ ಪ್ರಕರಣದಲ್ಲಿ ಹಲವು ಸ್ತರಗಳಿವೆ. ದಂಪತಿ ಆರ್ಥಿಕ ಲಾಭಕ್ಕಾಗಿ ನರಬಲಿ ಮಾಡಲಾಗಿದೆ ಎಂದು ನಾವು ಈಗ ಅರ್ಥಮಾಡಿಕೊಂಡಿದ್ದೇವೆ. ಅಲ್ಲದೆ, ಮಧ್ಯವರ್ತಿ ಹಣ ಪಡೆದಿರುವುದು ನಮಗೆ ತಿಳಿದಿದೆ. ಇಡೀ ಪ್ರಕರಣವನ್ನು ಬಹಿರಂಗಪಡಿಸಲು ನಮಗೆ ಹೆಚ್ಚಿನ ಸಮಯ ಬೇಕು. ಕೊಲೆಯಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.
“ದೇಹಗಳು ಒಂದೇ ಆಕಾರದಲ್ಲಿಲ್ಲ… ತುಂಡುಗಳಾಗಿ ಕತ್ತರಿಸಿ ಹೂಳಲಾಗಿದೆ. ಮೇಲ್ನೋಟಕ್ಕೆ ಇದು ಮಾಟಮಂತ್ರ ಮತ್ತು ನರಬಲಿ ಪ್ರಕರಣವಾಗಿದೆ. ಪೊಲೀಸರು ಎಲ್ಲಾ ಅಂಶಗಳನ್ನು ಮತ್ತು ವಿವರಗಳನ್ನು ಪರಿಶೀಲಿಸುತ್ತಾರೆ” ಎಂದು ಇನ್ಸ್‌ಪೆಕ್ಟರ್ ಜನರಲ್ ಪಿ ಪ್ರಕಾಶ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ ವೇಳೆಯೇ ಕಾಂಗ್ರೆಸ್ಸಿಗೆ ಶಾಕ್‌ : ದೆಹಲಿ ಕಾಂಗ್ರೆಸ್ ಮುಖ್ಯಸ್ಥ ಅರವಿಂದರ್ ಸಿಂಗ್ ಲವ್ಲಿ ರಾಜೀನಾಮೆ

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement