ವೀಡಿಯೊ..| ರೈಲಿನ ಕಿಟಕಿಗೆ ಗುದ್ದಿ ಕ್ಯಾಬಿನ್‌ ಒಳಗೆ ನುಗ್ಗಿದ ಹದ್ದು: ಲೋಕೋ ಪೈಲಟ್‌ಗೆ ಗಾಯ

ಅನಂತನಾಗ್: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಶನಿವಾರ ಹದ್ದು ರೈಲಿನ ಮುಂಭಾಗದ ಕಿಟಕಿಯನ್ನು ಒಡೆದು ಕ್ಯಾಬಿನ್‌ನೊಳಗೆ ಇಳಿದ ಪರಿಣಾಮ ಒಬ್ಬ ಲೋಕೋ ಪೈಲಟ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ರೈಲ್ವೆಗೆ ಸೇರಿದ ಈ ರೈಲು ಬಾರಾಮುಲ್ಲಾದಿಂದ ಬನಿಹಾಲ್‌ ಎಂಬಲ್ಲಿಗೆ ಪ್ರಯಾಣಿಸುತ್ತಿತ್ತು. ಈ ಸಂದರ್ಭದಲ್ಲಿ ಬಿಜ್‌ಬೆಹರಾ ಮತ್ತು ಅನಂತನಾಗ್ ರೈಲು ನಿಲ್ದಾಣಗಳ ನಡುವೆ ಈ ಅನಿರೀಕ್ಷಿತ ಘಟನೆ ಸಂಭವಿಸಿದೆ. ಗಾಯಗೊಂಡಿರುವ ಲೋಕೋ ಪೈಲಟ್‌ನನ್ನು ವಿಶಾಲ ಎಂದು ಗುರುತಿಸಲಾಗಿದೆ. ಅವರಿಗೆ ಅನಂತನಾಗ್ ರೈಲು ನಿಲ್ದಾಣದಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಲಾಯಿತು. ಸದ್ಯ ಅವರ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಕುತೂಹಲಕಾರಿ ಸಂಗತಿಯೆಂದರೆ, ಹದ್ದು ಡಿಕ್ಕಿ ಹೊಡೆದ ನಂತರ ಸುರಕ್ಷಿತವಾಗಿ ರೈಲಿನ ಕ್ಯಾಬಿನ್‌ನೊಳಗೆ ಇಳಿದಿದೆ. ಈ ಘಟನೆಯ ನಂತರ, ರೈಲನ್ನು ತಾತ್ಕಾಲಿಕವಾಗಿ ಅನಂತನಾಗ್ ನಿಲ್ದಾಣದಲ್ಲಿ ನಿಲ್ಲಿಸಲಾಯಿತು. ಆದರೆ, ಅಧಿಕಾರಿಗಳು ಅಗತ್ಯ ಪರಿಶೀಲನೆಗಳನ್ನು ನಡೆಸಿದ ನಂತರ ರೈಲು ತನ್ನ ಪ್ರಯಾಣವನ್ನು ಪುನರಾರಂಭಿಸಿತು. ಈ ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗಾಗಲೀ ಅಥವಾ ಇತರೆ ರೈಲ್ವೆ ಸಿಬ್ಬಂದಿಗಾಗಲೀ ಗಾಯವಾಗಿಲ್ಲ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಪ್ರಮುಖ ಸುದ್ದಿ :-   ಸೋನಂ ವಾಂಗ್ಚುಕ್ ಉಪವಾಸ ಅಂತ್ಯಗೊಳಿಸಲು ಸಿದ್ಧ ಎಂದ ಪತ್ನಿ ; ಆದರೆ ಅದಕ್ಕೆ ಎರಡು ಷರತ್ತುಗಳು...

ವಿಮಾನಕ್ಕೂ ತಟ್ಟಿದ ಹದ್ದು ಪೆಟ್ಟು
ಇದೇ ರೀತಿಯ ಘಟನೆ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಆಂಧ್ರಪ್ರದೇಶದ ವಿಜಯವಾಡ ವಿಮಾನ ನಿಲ್ದಾಣದಲ್ಲೂ ವರದಿಯಾಗಿತ್ತು. ಆಗ, ಟೇಕ್‌ಆಫ್ ಆಗುವ ಮುನ್ನವೇ ಒಂದು ಹದ್ದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಮುಂಭಾಗಕ್ಕೆ ಡಿಕ್ಕಿ ಹೊಡೆದಿತ್ತು. ಈ ವಿಮಾನವು ಬೆಂಗಳೂರಿಗೆ ಹಾರಲು ಸಿದ್ಧವಾಗಿತ್ತು ಎಂದು ಅಧಿಕಾರಿಗಳು ಆಗ ತಿಳಿಸಿದ್ದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement