ಛತ್ತೀಸ್‌ಗಢ ಸಿಎಂ ಬಘೇಲ್‌ಗೆ 508 ಕೋಟಿ ನೀಡಿದ ಮಹಾದೇವ ಆ್ಯಪ್ ಪ್ರವರ್ತಕರು : ಇ.ಡಿ. ಆರೋಪ

ನವದೆಹಲಿ : ಮಹಾದೇವ ಬೆಟ್ಟಿಂಗ್ ಆ್ಯಪ್‌ನ ಪ್ರವರ್ತಕರು ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್‌ಗೆ ₹ 508 ಕೋಟಿ ಹಣ ನೀಡಿದ್ದಾರೆ ಎಂದು ₹ 5 ಕೋಟಿಗೂ ಹೆಚ್ಚು ನಗದು ಹೊಂದಿರುವ ಕೊರಿಯರ್‌ ಒಬ್ಬರು ತಮಗೆ ತಿಳಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಹೇಳಿಕೊಂಡಿದೆ. ತನ್ನ ಬಳಿಯಿದ್ದ ಹಣವನ್ನು ಛತ್ತೀಸ್‌ಗಢದ ಚುನಾವಣಾ ವೆಚ್ಚಕ್ಕಾಗಿ ಒಬ್ಬ ರಾಜಕಾರಣಿ ‘ಬಘೇಲ್’ಗೆ ತಲುಪಿಸಲು ಉದ್ದೇಶಿಸಲಾಗಿದೆ ಎಂದು ಕೊರಿಯರ್‌ ವ್ಯಕ್ತಿ ತಿಳಿಸಿದರು ಎಂದು ಇ.ಡಿ.ಹೇಳಿದೆ.
ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಗೆ ನಾಲ್ಕು ದಿನ ಬಾಕಿ ಇರುವಾಗ ಈ ಆರೋಪಗಳು ಬಂದಿವೆ. ಛತ್ತೀಸ್‌ಗಢದಲ್ಲಿ ಚುನಾವಣೆಗೆ ಮುನ್ನ ಮಹಾದೇವ್ ಆ್ಯಪ್‌ನ ಪ್ರವರ್ತಕರು ದೊಡ್ಡ ಮೊತ್ತದ ಹಣವನ್ನು ಸಾಗಿಸುತ್ತಿದ್ದಾರೆ ಎಂಬ ಗುಪ್ತಚರ ಮಾಹಿತಿ ಸಂಸ್ಥೆಗೆ ಸಿಕ್ಕಿದೆ.
ಗುರುವಾರ, ಇ.ಡಿ.ಯು ಹೋಟೆಲ್ ಟ್ರಿಟಾನ್ ಮತ್ತು ಭಿಲಾಯಿಯ ಮತ್ತೊಂದು ಸ್ಥಳದಲ್ಲಿ ಶೋಧಗಳನ್ನು ನಡೆಸಿತು ಮತ್ತು ನಗದನ್ನು ಯಶಸ್ವಿಯಾಗಿ ತಡೆಹಿಡಿಯಿತು. ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಚುನಾವಣಾ ವೆಚ್ಚಕ್ಕಾಗಿ (ಎ) ದೊಡ್ಡ ಮೊತ್ತದ ನಗದನ್ನು ತಲುಪಿಸಲು ವಿಶೇಷವಾಗಿ ಯುಎಇಯಿಂದ ಅಸೀಮ್ ದಾಸ್ ಎಂಬವರನ್ನು ಕಳುಹಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

ಪ್ರಮುಖ ಸುದ್ದಿ :-   ಸ್ವಾತಿ ಮಲಿವಾಲ್ ಹಲ್ಲೆ ಪ್ರಕರಣ: ಕೇಜ್ರಿವಾಲ್ ನಿವಾಸದ ಸಿಸಿಟಿವಿ ಡಿವಿಆರ್ ವಶಕ್ಕೆ ಪಡೆದ ಪೊಲೀಸರು

ನಗದು ಕೊರಿಯರ್‌ ಆಗಿದ್ದ ಅಸೀಮ್ ದಾಸ್‌ನಿಂದ 5.39 ಕೋಟಿ ರೂಪಾಯಿ ವಸೂಲಿ ಮಾಡಿದ ನಂತರ ಏಜೆನ್ಸಿ ಆತನನ್ನು ಬಂಧಿಸಿದೆ. ಮಹಾದೇವ ಆ್ಯಪ್ ಮತ್ತು ಅದರ ಪ್ರವರ್ತಕರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾನೂನಿನ ಅಡಿಯಲ್ಲಿ ಇ.ಡಿ. ತನಿಖೆ ನಡೆಸುತ್ತಿದೆ.
“ಅಸಿಂ ದಾಸ ವಿಚಾರಣೆಯಿಂದ ಮತ್ತು ಆತನಿಂದ ವಶಪಡಿಸಿಕೊಂಡ ಫೋನ್‌ನ ವಿಧಿವಿಜ್ಞಾನ ಪರೀಕ್ಷೆಯಿಂದ ಮತ್ತು ಶುಭಂ ಸೋನಿ (ಮಹಾದೇವ ನೆಟ್‌ವರ್ಕ್‌ನ ಉನ್ನತ ಶ್ರೇಣಿಯ ಆರೋಪಿಗಳಲ್ಲಿ ಒಬ್ಬರು) ಕಳುಹಿಸಿದ ಇಮೇಲ್‌ನ ಪರಿಶೀಲನೆಯಿಂದ ಅನೇಕ ಆಶ್ಚರ್ಯಕರ ಆರೋಪಗಳು ಹೊರಬಿದ್ದಿವೆ, ಅವುಗಳೆಂದರೆ, ಈ ಹಿಂದೆ ನಿಯಮಿತ ಹಣವನ್ನು ಪಾವತಿ ಮಾಡಲಾಗಿದೆ ಮತ್ತು ಇದುವರೆಗೆ ಸುಮಾರು 508 ಕೋಟಿ ರೂ.ಗಳನ್ನು ಮಹಾದೇವ ಆಪ್‌ ಪ್ರವರ್ತಕರು ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ ಬಘೇಲ್ ಅವರಿಗೆ ಪಾವತಿಸಿದ್ದಾರೆ ಎಂದು ಇ.ಡಿ. ಹೇಳಿಕೆಯಲ್ಲಿ ತಿಳಿಸಿದೆ.
“ಇವು ತನಿಖೆಯ ವಿಷಯವಾಗಿದೆ” ಎಂದು ಅದು ಹೇಳಿದೆ. ಛತ್ತೀಸ್‌ಗಢದಲ್ಲಿ ನವೆಂಬರ್ 7 ಮತ್ತು ನವೆಂಬರ್ 17 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement