ಒಂದು ಅಪರೂಪದ ಸನ್ನಿವೇಶದಲ್ಲಿ, ಶಾಂತವಾಗಿ ವಿರಾಮದ ಸಮಯವನ್ನು ಕಳೆಯುತ್ತಿದ್ದ ವ್ಯಕ್ತಿಯೊಬ್ಬರು, ಅನಿರೀಕ್ಷಿತವಾಗಿ ಮುದ್ದಾದ ಸಂಗಾತಿಯೊಂದಿಗೆ ತಮ್ಮ ಊಟವನ್ನು ಹಂಚಿಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಇದರ ವೀಡಿಯೊ ಎಲ್ಲರ ಮನಸ್ಸನ್ನು ಗೆದ್ದಿದೆ. ಇದಕ್ಕೆ ಕಾರಣ, ಹಸಿವು ಮತ್ತು ಅದಕ್ಕಿಂತ ದೊಡ್ಡ ಧೈರ್ಯವನ್ನು ಹೊಂದಿದ್ದ ಒಂದು ಪುಟ್ಟ ಅಳಿಲು ವ್ಯಕ್ತಿಯ ಊಟವನ್ನು ಹಂಚಿಕೊಂಡಿ ತಿನ್ನುವುದನ್ನು ಇದು ತೋರಿಸುತ್ತದೆ.
ಈ ಕ್ಲಿಪ್‌ನಲ್ಲಿ ವ್ಯಕ್ತಿಯೊಬ್ಬರು ತಮ್ಮ ಊಟ ಮಾಡಲು ಡಬ್ಬಿ ತೆರೆಯಲು ಶುರುವಿಟ್ಟುಕೊಳ್ಳುತ್ತಾರೆ. ಅವರು ಡಬ್ಬಿಯ ಮುಚ್ಚಳ ತೆಗೆಯುವ ಮೊದಲೇ, ಒಂದು ಪುಟ್ಟ ಅಳಿಲು ಆ ವ್ಯಕ್ತಿ ಅಲ್ಲೇ ಇರುವುದರ ಬಗ್ಗೆ ಸ್ವಲ್ಪವೂ ತಲೆಕೆಡಿಸಿಕೊಳ್ಳದೆ ಅವರ ಬಳಿ ಓಡೋಡಿ ಬರುತ್ತದೆ. ವ್ಯಕ್ತಿ ನಿಧಾನವಾಗಿ ಊಟದ ಡಬ್ಬಿಯನ್ನು ತೆರೆಯುತ್ತಾರೆ, ಅಳಿಲು ಪ್ರತಿಯೊಂದು ಚಲನವಲನವನ್ನೂ ಕುತೂಹಲದಿಂದ ಗಮನಿಸುತ್ತದೆ.
ಯಾವುದೇ ಹಿಂಜರಿಕೆಯಿಲ್ಲದೆ, ಅದು ತನ್ನ ಪಂಜಗಳನ್ನು ಊಟದ ಡಬ್ಬಿಯ ಮೇಲೆ ಇಟ್ಟು, “ಪಕ್ಕಕ್ಕೆ ಸರಿ, ಸರ್, ನಾನು ತೆಗೀತೀನಿ” ಎಂದು ಹೇಳುವ ರೀತಿಯಲ್ಲಿ ಊಟದ ಡಬ್ಬಿಯನ್ನು ತೆರೆಯಲು ಪ್ರಯತ್ನಿಸುತ್ತದೆ. ನಂತರ ವ್ಯಕ್ತಿ ಡಬ್ಬದಿಂದ ತನ್ನ ಆಹಾರವನ್ನು ಹೊರತೆಗೆಯುತ್ತಿದ್ದಂತೆ, ಆ ಪುಟ್ಟ ಜೀವಿ ಒಳಗೆ ಏನಿದೆ ಎಂದು ನೋಡಲು ಮುಂದೆ ವಾಲುತ್ತದೆ.
ಆ ವ್ಯಕ್ತಿ ಓಡಿಸುವ ಬದಲು ಅದಕ್ಕೆ ಊಟ ನೀಡಲು ಮುಂದಾಗುತ್ತಾರೆ. ಅಳಿಲು ತಮ್ಮ ಕಾಲ ಮೇಲೆ ಕುಳಿತು ಕುತೂಹಲದಿಂದ ಎಲ್ಲವನ್ನೂ ಗಮನಿಸುತ್ತಿರುವಾಗ ವ್ಯಕ್ತಿ ತಾಳ್ಮೆಯಿಂದ ತಮ್ಮ ಊಟದ ಡಬ್ಬಿಯನ್ನು ತೆರೆಯುತ್ತಾರೆ. ಅವರು ಆಹಾರವನ್ನು ಹೊರತೆಗೆದ ತಕ್ಷಣ, ಅಳಿಲು ಇನ್ನಷ್ಟು ಹತ್ತಿರಕ್ಕೆ ಬಂದು, ಊಟವನ್ನು ಹೊರತೆಗೆಯಲು ಸಹಾಯ ಮಾಡುತ್ತಿರುವಂತೆ ವರ್ತಿಸುತ್ತದೆ. ಅಂತಿಮವಾಗಿ, ಅವರು ಸಣ್ಣ ತುಂಡು ರೊಟ್ಟಿಯನ್ನು ಮುರಿದು ತಮ್ಮ ಹೊಸ ಸ್ನೇಹಿತನಿಗೆ ನೀಡುತ್ತಾರೆ. ಸ್ವಲ್ಪವೂ ಭಯಪಡದೆ, ಅಳಿಲು ಅವರ
ಈ ವೀಡಿಯೊವನ್ನು ನೋಡಿದ ಹಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ:ಒಬ್ಬ ಬಳಕೆದಾರರು, “ಅಭಿನಂದನೆಗಳು. ನೀವು ಈಗ ಡಿಸ್ನಿ ರಾಜಕುಮಾರಿಯಾಗಿದ್ದೀರಿ,” ಎಂದು ಬರೆದಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ, “ನೀವು ಲಕ್ಷಾಂತರ ಹೃದಯಗಳನ್ನು ಗೆದ್ದಿದ್ದೀರಿ. ನಾನು ಇಂದು ನೋಡಿದ ಅತ್ಯಂತ ಪವಿತ್ರವಾದ ವಿಷಯ ಇದು,” ಎಂದು ಹೇಳಿದ್ದಾರೆ. “ನಿಮ್ಮ ಸುತ್ತಲೂ ಮುಗ್ಧ ಜೀವಿಗಳು ಭಯಪಡದೆ ಇರುವುದು ಜೀವನದ ದೊಡ್ಡ ಗೆಲುವುಗಳಲ್ಲಿ ಒಂದಾಗಿದೆ. ಪ್ರಾಣಿಗಳು ಉತ್ತಮವಾಗಿ ಗ್ರಹಿಸುತ್ತವೆ ಎಂದು ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ