ಹೃದಯಾಘಾತ, ಪಾರ್ಶ್ವವಾಯು ತಡೆಗೆ ಹೊಸ ಲಸಿಕೆ ಕಂಡುಹಿಡಿದ ಚೀನಾ….! ಏನಿದು ಭರವಸೆದಾಯಕ ಈ ನ್ಯಾನೊವಾಕ್ಸಿನ್..?

ಸ್ಟ್ರೋಕ್, ರಕ್ತ ಹೆಪ್ಪುಗಟ್ಟುವಿಕೆ ಮತ್ತು ಹೃದಯಾಘಾತಕ್ಕೆ ಕಾರಣವಾಗುವ ಅಪಧಮನಿಗಳಲ್ಲಿ ಪ್ಲೇಕ್ ಅಥವಾ ಕೊಬ್ಬು ಸಂಗ್ರಹವಾಗುವುದನ್ನು ಅಥವಾ ರಚನೆಯಾಗುವುದನ್ನು ತಡೆಯಲು ಚೀನಾದ ವಿಜ್ಞಾನಿಗಳು ಹೊಸ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದಾರೆ.
ಈ ನ್ಯಾನೊವಾಕ್ಸಿನ್ ಅನ್ನು ನಾನ್ಜಿಂಗ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಸಂಶೋಧಕರ ತಂಡವು ಅಭಿವೃದ್ಧಿಪಡಿಸಿದೆ. ನೇಚರ್ ಕಮ್ಯುನಿಕೇಷನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನವು ಹೃದ್ರೋಗಗಳನ್ನು ತಡೆಗಟ್ಟುವಲ್ಲಿ ಇದು ಒಂದು ಪ್ರಗತಿ ಎಂದು ಹೇಳಲಾಗಿದೆ. ಈ “ಕಾಕ್ಟೈಲ್” ನ್ಯಾನೊವಾಕ್ಸಿನ್ ಪರೀಕ್ಷೆಯನ್ನು ಇಲಿಗಳ ಮೇಲೆ ನಡೆಸಲಾಯಿತು.
ಲಸಿಕೆ ಅಭಿವೃದ್ಧಿಪಡಿಸಿದ್ದು ಹೇಗೆ…?
ಚೀನಾದ ವಿಜ್ಞಾನಿಗಳು ಅಪಧಮನಿಕಾಠಿಣ್ಯ(atherosclerosis)ವನ್ನು ಗುರಿಯಾಗಿಸಲು ನ್ಯಾನೊವಾಕ್ಸಿನ್ ಅಭಿವೃದ್ಧಿಪಡಿಸಿದ್ದಾರೆ, ಇದು ಪ್ಲೇಕ್ – ಕೊಬ್ಬುಗಳು, ಕೊಲೆಸ್ಟ್ರಾಲ್ ಮತ್ತು ಇತರ ಪದಾರ್ಥಗಳು ಅಪಧಮನಿಗಳಲ್ಲಿ ಸಂಗ್ರಹವಾದಾಗ ಬೆಳವಣಿಗೆಯಾಗುವ ಸಾಮಾನ್ಯ ಕಾಯಿಲೆಯಾಗಿದೆ. ಇದರ ಅಪಾಯಕಾರಿ ಅಂಶಗಳಲ್ಲಿ ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ಧೂಮಪಾನ, ಬೊಜ್ಜು, ಟೈಪ್ 1 ಡಯಾಬಿಟಿಸ್, ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುವ ಆಹಾರ ಮತ್ತು ಅನಾರೋಗ್ಯಕರ ಆಹಾರ ಸೇವನೆ ಸೇರಿವೆ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (SCMP) ವರದಿಯ ಪ್ರಕಾರ, ಸಂಶೋಧಕರ ತಂಡವು ಪ್ರತಿಜನಕ(antigen)ವನ್ನು ಅಪಧಮನಿಕಾಠಿಣ್ಯದ ವಿರುದ್ಧ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಹೊಂದಿಸುತ್ತದೆ ಅಥವಾ ಸಣ್ಣ ಐರನ್ ಆಕ್ಸೈಡ್ ನ್ಯಾನೊಪರ್ಟಿಕಲ್‌ಗಳ ಮೇಲೆ ಪ್ರತಿರಕ್ಷಣಾ ಪ್ರತಿಕ್ರಿಯೆ ಬೂಸ್ಟರ್ ಅನ್ನು ಸಂಪರ್ಕಿಸುತ್ತದೆ.
ಹಿಂದಿನ ಅಧ್ಯಯನಗಳು ಉರಿಯೂತದಿಂದ ರಕ್ಷಿಸುವ ಮತ್ತು ಅಪಧಮನಿಕಾಠಿಣ್ಯಕ್ಕೆ ದೇಹದ ಪ್ರತಿರಕ್ಷಣಾ ರೆಸ್ಪಾನ್ಸ್‌ ಅನ್ನು ಹೆಚ್ಚಿಸುವ ವಿವಿಧ ಪ್ರೋಟೀನ್‌ಗಳನ್ನು ರೂಪಿಸಲು ಸಹಾಯ ಮಾಡಿದೆ. ಅಪಧಮನಿಕಾಠಿಣ್ಯದ ಪ್ರಗತಿಯನ್ನು ತಡೆಯುವ ಅಂತಹ ಒಂದು ಪ್ರೋಟೀನ್ p210 ಪ್ರತಿಜನಕವಾಗಿದೆ. ಹೊಸ ಲಸಿಕೆಯು ಈ ಪ್ರೊಟೀನ್ ಅನ್ನು ಬಳಸುತ್ತದೆ, ಸಣ್ಣ ಐರನ್‌ ಆಕ್ಸೈಡ್ ನ್ಯಾನೊಪರ್ಟಿಕಲ್‌ಗಳ ಮೇಲೆ p210 ಪ್ರತಿಜನಕವನ್ನು ಜೋಡಿಸುತ್ತದೆ ಮತ್ತು ವಿವಿಧ ನ್ಯಾನೊಪರ್ಟಿಕಲ್‌ಗಳಿಗೆ ಪ್ರತಿರಕ್ಷಣಾ ಸಹಾಯಕ(adjuvant)ವನ್ನು ಲಿಂಕ್ ಮಾಡುತ್ತದೆ. ಇದು ಲಸಿಕೆಯ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಹೆಚ್ಚಿಸಲು ಬಳಸಲಾಗುವ ವಸ್ತುವಾಗಿದೆ.

ಅಧ್ಯಯನ ಏನನ್ನು ಕಂಡುಹಿಡಿದಿದೆ?
ಅಧಿಕ ಕೊಲೆಸ್ಟರಾಲ್ ಆಹಾರವನ್ನು ನೀಡಿದ ಇಲಿಗಳಿಗೆ ನ್ಯಾನೊವಾಕ್ಸಿನ್ ವ್ಯಾಕ್ಸಿನ್‌ ಅನ್ನು ಚುಚ್ಚಲಾಯಿತು. “ಕಾಕ್ಟೈಲ್” ನ್ಯಾನೊವಾಕ್ಸಿನ್ ವ್ಯಾಕ್ಸಿನ್‌ ಇಲಿಗಳಲ್ಲಿ ಪ್ಲೇಕ್ ಅಥವಾ ಕೊಬ್ಬು ರಚನೆಯಾಗುವುದನ್ನು ಮತ್ತು ಅಪಧಮನಿಕಾಠಿಣ್ಯದ ಬೆಳವಣಿಗೆಯನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನವು ಕಂಡುಹಿಡಿದಿದೆ.
ಅದೇ ನ್ಯಾನೊಪಾರ್ಟಿಕಲ್‌ಗಳಿಗೆ ಪ್ರತಿಜನಕ ಮತ್ತು ಸಹಾಯಕವನ್ನು ಜೋಡಿಸುವುದಕ್ಕಿಂತ ಲಸಿಕೆಯ ಕಾಕ್‌ಟೈಲ್ ವಿನ್ಯಾಸವು ಇಲಿಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ.
ಪ್ರತಿಜನಕ ಮತ್ತು ಸಹಾಯಕವನ್ನು ತೆಗೆದುಕೊಳ್ಳಲು ದೇಹದ ಪ್ರತಿರಕ್ಷಣಾ ಕೋಶಗಳಿಗೆ ಸಹಾಯ ಮಾಡುವ ಮೂಲಕ ಲಸಿಕೆ ಕೆಲಸ ಮಾಡಿದೆ. ಇದು ನಂತರ ಸ್ಟಾರ್-ಆಕಾರದ ಡೆಂಡ್ರಿಟಿಕ್ ಕೋಶಗಳನ್ನು ಸಕ್ರಿಯಗೊಳಿಸುತ್ತದೆ. ಇದು ಪ್ರಚೋದಿತ T ಕೋಶಗಳಿಗೆ ಕಾರಣವಾಯಿತು, p210 ವಿರುದ್ಧ ಪ್ರತಿಕಾಯಗಳ ಉತ್ಪಾದನೆಗೆ ಕಾರಣವಾಯಿತು. ಟಿ ಜೀವಕೋಶಗಳು ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ರೋಗವನ್ನು ತಡೆಗಟ್ಟಲು ಪ್ರತಿರಕ್ಷಣಾ ಕಾರ್ಯಗಳಿಗೆ ಬೇಕಾದ ಬಿಳಿ ರಕ್ತ ಕಣಗಳಾಗಿವೆ.
ಇಂಡಿಪೆಂಡೆಂಟ್ ವರದಿ ಪ್ರಕಾರ, “ಎರಡು-ಮುಖದ ನ್ಯಾನೊವಾಕ್ಸಿನ್ ವಿತರಣಾ ತಂತ್ರವು ಅಪಧಮನಿಕಾಠಿಣ್ಯದ ವಿರುದ್ಧ ಪರಿಣಾಮಕಾರಿಯಾಗಿದೆ ಎಂದು ನಮ್ಮ ಸಂಶೋಧನೆಗಳು ತೋರಿಸುತ್ತವೆ” ಎಂದು ಸಂಶೋಧಕರು ಬರೆದಿದ್ದಾರೆ.

ಪ್ರಮುಖ ಸುದ್ದಿ :-   ಅಮೆರಿಕ ವಾಯು ನೆಲೆ ಮೇಲೆ ಇರಾನ್‌ ಕ್ಷಿಪಣಿ ದಾಳಿ ; ವಾಯ ಪ್ರದೇಶ ಮುಚ್ಚಿದ ಕತಾರ್, ಯುಎಇ, ಬಹ್ರೇನ್

ಅದು ಏಕೆ ಮುಖ್ಯ…?
ಉರಿಯೂತದಿಂದ ಅಪಧಮನಿಗಳು ಅಂತಿಮವಾಗಿ ಗಟ್ಟಿಯಾಗಿ ರಕ್ತದ ಹರಿವನ್ನು ನಿರ್ಬಂಧಿಸಬಹುದು ಮತ್ತು ಪಾರ್ಶ್ವವಾಯು, ಅನ್ಯಾರಿಮ್ ಅಥವಾ ಹೃದಯಾಘಾತಕ್ಕೆ ಕಾರಣವಾಗಬಹುದು. ಉರಿಯೂತವು ಅಪಧಮನಿಗಳಲ್ಲಿ ಪ್ಲೇಕ್ ಅಥವಾ ದಪ್ಪ ರಚನೆ ನಿರ್ಮಾಣಕ್ಕೆ ಕಾರಣವಾಗುತ್ತದೆ. ನಂತರ ಇದು ದೇಹದ ಪ್ರಮುಖ ಅಂಗಗಳಿಗೆ ರಕ್ತ ಹರಿಯುವುದನ್ನು ಮತ್ತು ಆಮ್ಲಜನಕದ ಪೂರೈಕೆಯನ್ನು ಕಡಿಮೆ ಮಾಡುತ್ತದೆ. ಇದು ರಕ್ತ ಹೆಪ್ಪುಗಟ್ಟುವಿಕೆ, ಪಾರ್ಶ್ವವಾಯು ಮತ್ತು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ.
ಹೃದ್ರೋಗವು ವಿಶ್ವದ ಅತಿ ಹೆಚ್ಚಿ ಸಾವಿಗೆ ಕಾರಣವಾಗಿರುವುದರಿಂದ ಇದನ್ನು ತಡೆಗಟ್ಟುವ ಸಂಭಾವ್ಯ ಲಸಿಕೆಯುದೊಡ್ಡ ಬದಲಾವಣೆಗೆ ಕಾರಣವಾಗಬಹುದು. ಆದಾಗ್ಯೂ, ಲಸಿಕೆಯನ್ನು ಮಾನವರ ಮೇಲೆ ಪ್ರಯೋಗಿಸಲು ಬಳಸುವ ಮೊದಲು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ. “ನ್ಯಾನೊವಾಕ್ಸಿನ್‌ಗಳು ಅಪಧಮನಿಕಾಠಿಣ್ಯದ ವಿರುದ್ಧ ಎಷ್ಟು ಸಮಯದವರೆಗೆ ರಕ್ಷಿಸುತ್ತವೆ ಎಂಬುದರ ಹೆಚ್ಚಿನ ಸಂಧೋಧನೆಯ ಅಗತ್ಯವಿದೆ” ಎಂದು ತಂಡವು ಬರೆದಿದೆ. ಇದನ್ನು ಕಂಡುಹಿಡಿಯಲು ಚೀನಾದ ವಿಜ್ಞಾನಿಗಳು ಹೆಚ್ಚಿನ ಅಧ್ಯಯನಗಳನ್ನು ಕೈಗೊಳ್ಳಲು ಆಶಿಸಿದ್ದಾರೆ.

ಯುವ -ವಯಸ್ಕರಲ್ಲಿ ಹೃದಯಾಘಾತ ಹೆಚ್ಚಳ …?!
ಭಾರತವು ಯುವ ವಯಸ್ಕರು ಹಾಗೂ 30 ಮತ್ತು 40 ರ ಹರೆಯದ ಜನರಲ್ಲಿ ಹೃದಯಾಘಾತದ ಹೆಚ್ಚಳಕ್ಕೆ ಸಾಕ್ಷಿಯಾಗಿದೆ. ಅಕ್ಟೋಬರ್ 2023 ರಲ್ಲಿ ಪ್ರಕಟವಾದ ಒಂದು ಸಮಗ್ರ ವೈದ್ಯಕೀಯ ಅಧ್ಯಯನದ ಪ್ರಕಾರ, 40-69 ವರ್ಷ ವಯಸ್ಸಿನವರಲ್ಲಿ 45% ರಷ್ಟು ಸಾವುಗಳಿಗೆ ಹೃದಯಾಘಾತಗಳು ಪ್ರಮುಖ ಕಾರಣ. ಹೆಚ್ಚಿನ ಸಂದರ್ಭಗಳಲ್ಲಿ, ಜಡ ಜೀವನಶೈಲಿ ಮತ್ತು ಅಧಿಕ ರಕ್ತದೊತ್ತಡ, ಬೊಜ್ಜು ಮತ್ತು ಮಧುಮೇಹದಂತಹ ಸಂಬಂಧಿತ ಆರೋಗ್ಯ ಪರಿಸ್ಥಿತಿಗಳು ಹೃದಯಾಘಾತದ ಪ್ರಮುಖ ಅಂಶಗಳಾಗಿವೆ. ಆದರೆ ಹೆಚ್ಚುವರಿ ಕಾರಣಗಳೂ ಇವೆ ಎಂದು ಕಂಡುಬಂದಿದೆ.
ಹೃದಯಾಘಾತಕ್ಕೆ ಕಾರಣವಾಗುವ ಕೆಲವು ಸಾಮಾನ್ಯ ಅಂಶಗಳೆಂದರೆ ಕೊಲೆಸ್ಟ್ರಾಲ್ ಮತ್ತು ಟ್ರಾನ್ಸ್-ಕೊಬ್ಬಿನ ಆಹಾರವನ್ನು ಸೇವಿಸುವುದು, ಸಾಕಷ್ಟು ದೈಹಿಕ ಚಟುವಟಿಕೆಯನ್ನು ಪಡೆಯದಿರುವುದು, ಹೆಚ್ಚು ಮದ್ಯಪಾನ ಮತ್ತು ಧೂಮಪಾನ.
ಹೃದಯಾಘಾತದ ಅನುವಂಶಿಕ ಮತ್ತು ಕುಟುಂಬದ ಇತಿಹಾಸ ಮತ್ತು ಅಧಿಕ ರಕ್ತದೊತ್ತಡ ಮತ್ತು ವಾಯು ಮಾಲಿನ್ಯ, ಆರ್ಸೆನಿಕ್ ಮತ್ತು ಅತಿಯಾದ ಶಾಖದಂತಹ ಪರಿಸರ ಅಂಶಗಳೂ ಸಹ ಹೃದಯಾಘಾತಕ್ಕೆ ಕಾರಣವಾಗಬಹುದು. ಯುವ ವಯಸ್ಕರಲ್ಲಿ ಹೆಚ್ಚಿನ ಪ್ರಮಾಣದ ಸ್ಥೂಲಕಾಯತೆ, ಅಧಿಕ ರಕ್ತದೊತ್ತಡ ಮತ್ತು ಅನಾರೋಗ್ಯಕರ ಲಿಪಿಡ್ ಪ್ರೊಫೈಲ್‌ಗಳಿಗೆ ಕಾರಣವಾಗಿದೆ. ಅಲ್ಲದೆ, ಯುವ ವಯಸ್ಕರಲ್ಲಿ ತಂಬಾಕು, ಡ್ರಗ್ಸ್ ಮತ್ತು ಆಲ್ಕೋಹಾಲ್ ಸೇವನೆ ದೀರ್ಘಕಾಲದ ಒತ್ತಡಕ್ಕೆ ಕಾರಣವಾಗಬಹುದು, ಇದು ಹೃದಯದ ಆರೋಗ್ಯದ ಮೇಲೆ ಹಲವಾರು ರೀತಿಯಲ್ಲಿ ಋಣಾತ್ಮಕವಾಗಿ ಪರಿಣಾಮ ಬೀರುತ್ತದೆ.
ಮತ್ತೊಂದು ಡೇಟಾವು ಮಧುಮೇಹ ಹೊಂದಿರುವ ವಯಸ್ಕರು ಹೃದ್ರೋಗದಿಂದ ಸಾಯುವ ಸಾಧ್ಯತೆ 2-4 ಪಟ್ಟು ಹೆಚ್ಚು. ಅಧಿಕ ರಕ್ತದ ಸಕ್ಕರೆಯು ರಕ್ತನಾಳಗಳನ್ನು ಹಾನಿಗೊಳಿಸುತ್ತದೆ, ಅಪಧಮನಿಗಳಲ್ಲಿ ಕೊಬ್ಬುಗಳು ಸಂಗ್ರಹವಾಗುವ ಅವಕಾಶವನ್ನು ಹೆಚ್ಚಿಸುತ್ತದೆ ಮತ್ತು ಅಪಧಮನಿಕಾಠಿಣ್ಯವನ್ನು ಉಂಟುಮಾಡುತ್ತದೆ.

ಪ್ರಮುಖ ಸುದ್ದಿ :-   ವೀಡಿಯೊಗಳು..| ಅಮೆರಿಕ ದಾಳಿಗೆ ಪ್ರತಿ ದಾಳಿ : ಕತಾರ್, ಇರಾಕಿನಲ್ಲಿನ ಅಮೆರಿಕದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ಇರಾನ್‌

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement