ಆಧುನಿಕ ಗಾಂಧಾರಿ…: 55ನೇ ವರ್ಷದಲ್ಲಿ 17ನೇ ಮಗುವಿಗೆ ಜನ್ಮ ನೀಡಿದ ರಾಜಸ್ಥಾನದ ಮಹಿಳೆ…!

ಜೈಪುರ: ಅಪರೂಪದ ಹಾಗೂ ಅಸಮಾಮಾನ್ಯ ಘಟನೆಯೊಂದರಲ್ಲಿ, ಕವರರಾಮ ಕಲ್ಬೇಲಿಯಾ ಅವರ ಪತ್ನಿ 55 ವರ್ಷದ ರೇಖಾ ಕಲ್ಬೇಲಿಯಾ ಅವರು ಸಮುದಾಯ ಆರೋಗ್ಯ ಕೇಂದ್ರವೊಂದರಲ್ಲಿ ತಮ್ಮ 17 ನೇ ಮಗುವಿಗೆ ಜನ್ಮ ನೀಡಿದ್ದಾರೆ…! ರಾಜಸ್ಥಾನದ ಉದಯಪುರ ಜಿಲ್ಲೆಯ ಜಾಡೋಲ್ ಬ್ಲಾಕ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಮ್ಮ 17 ನೇ ಮಗುವಿಗೆ ಜನ್ಮ ನೀಡಿರುವ ಅವರು, ಈಗ ದೇಶಾದ್ಯಂತ ಸುದ್ದಿಯಲ್ಲಿದ್ದಾರೆ.
ಲೀಲಾವಾಸ ಗ್ರಾಮದ ನಿವಾಸಿಗಳಾದ ರೇಖಾ ಮತ್ತು ಕವರ ದಂಪತಿಯ ಒಟ್ಟು 17 ಮಕ್ಕಳಲ್ಲಿ ನಾಲ್ಕು ಗಂಡು ಮಕ್ಕಳು ಮತ್ತು ಒಂದು ಹೆಣ್ಣು ಮಗು ಜನಿಸಿದ ಸ್ವಲ್ಪ ಸಮಯದ ನಂತರ ಮೃತಪಟ್ಟಿದ್ದಾರೆ. ದಂಪತಿಯ ಏಳು ಗಂಡು ಮಕ್ಕಳು ಮತ್ತು ಐದು ಹೆಣ್ಣು ಮಕ್ಕಳು ಒಟ್ಟು 12 ಮಕ್ಕಳು ಬದುಕುಳಿದಿದ್ದಾರೆ. .

ಕವರ ಪ್ರಕಾರ, ಇಬ್ಬರು ಗಂಡು ಮಕ್ಕಳು ಮತ್ತು ಮೂವರು ಹೆಣ್ಣು ಮಕ್ಕಳು ವಿವಾಹಿತರಾಗಿದ್ದಾರೆ. ಈ ವಿವಾಹಿತ ಮಕ್ಕಳಿಗೆ ತಲಾ ಎರಡರಿಂದ ಮೂರು ಮಕ್ಕಳಿದ್ದಾರೆ, ಇದು ರೇಖಾ ಅವರನ್ನು ತನ್ನ ಕಿರಿಯ ಮಗುವಿನ ಜನನದ ಮೊದಲೇ ಅನೇಕ ಸಲ ಅಜ್ಜಿಯನ್ನಾಗಿ ಮಾಡಿದೆ.
ಕುಟುಂಬದ ಆರ್ಥಿಕ ಸ್ಥಿತಿ ಇನ್ನೂ ಭೀಕರವಾಗಿದೆ. ಸ್ಕ್ರ್ಯಾಪ್ ಡೀಲರ್ ಆಗಿ ಕೆಲಸ ಮಾಡುವ ಕವರ, ತಮ್ಮ ಮಕ್ಕಳ ಮದುವೆಗಳನ್ನು ಏರ್ಪಡಿಸಲು ಬಡ್ಡಿಗೆ ಹಣವನ್ನು ಎರವಲು ಪಡೆಯಬೇಕಾಯಿತು ಎಂದು ಹೇಳಿದ್ದಾರೆ. “ಕುಟುಂಬದ ಯಾವುದೇ ಸದಸ್ಯರು ಶಾಲೆಗೆ ಹೋಗಿಲ್ಲ” ಎಂದು ಅವರು ಒಪ್ಪಿಕೊಂಡರು.

ಪ್ರಮುಖ ಸುದ್ದಿ :-   ನೌಕಾಪಡೆಗೆ ಐಎನ್ಎಸ್ ನಿಪುಣ್ ಸೇರ್ಪಡೆ : ಭಾರತಕ್ಕೆ ಈ ಆಳ ಸಮುದ್ರ ಡೈವಿಂಗ್ ಹಡಗುಗಳು ಏಕೆ ಬೇಕು? ಇದರ ವಿಶೇಷತೆ ಏನು?

ಹೆರಿಗೆಯ ಮೇಲ್ವಿಚಾರಣೆ ನಡೆಸಿದ ಡಾ. ರೋಷನ್ ದರಂಗಿ ಅವರು, ರೇಖಾ ಆರಂಭದಲ್ಲಿ ಇದು ತನ್ನ ನಾಲ್ಕನೇ ಹೆರಿಗೆ ಎಂದು ಹೇಳಿಕೊಂಡಿದ್ದರು ಎಂದು ಹೇಳಿದರು. “ನಂತರ, ಅವರು ಈಗಾಗಲೇ 16 ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ನಮಗೆ ತಿಳಿದುಬಂದಿತು, ಅವರಲ್ಲಿ ಐದು ಮಕ್ಕಳು ಮೃತಪಟ್ಟಿದ್ದಾರೆ. ಹಿಂದಿನ ಹಲವು ಹೆರಿಗೆಗಳಿಂದ, ಗರ್ಭಾಶಯವು ದುರ್ಬಲಗೊಳ್ಳುತ್ತದೆ ಮತ್ತು ಅತಿಯಾದ ರಕ್ತಸ್ರಾವದ ಅಪಾಯವು ಹೆಚ್ಚಾಗುತ್ತದೆ. ತಾಯಿಯ ಜೀವಕ್ಕೆ ಅಪಾಯದ ಸಾಧ್ಯತೆ ಇರುತ್ತದೆ. ಅದೃಷ್ಟವಶಾತ್, ಎಲ್ಲವೂ ಚೆನ್ನಾಗಿ ನಡೆಯಿತು,” ಎಂದು ಅವರು ಹೇಳಿದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement