ರಾವಣ, ರಾಕ್ಷಸ, ಗೂಂಡಾ ಎಂದೆಲ್ಲ  ಹೀಯಾಳಿಸಿದಿರಿ… ನನ್ನ ಮೇಲೆ ನಿಮಗೆ ಇಷ್ಟೊಂದು ಕೋಪವೇಕೆ ದೀದಿ?: ಬಿಜೆಪಿ ಸಮಾವೇಶದಲ್ಲಿ ಮೋದಿ ಪ್ರಶ್ನೆ

 

ಕೊಲ್ಕತ್ತಾ:ದೀದಿ (ಮಮತಾ ಬ್ಯಾನರ್ಜಿ) ನನ್ನ ಬಗ್ಗೆ ಬಹಳಷ್ಟು ಮಾತನಾಡಿದ್ದಾರೆ. ನನ್ನ ಮೇಲೆ ಅವರಿಗೆ ಕೋಪ ಎಷ್ಟಿತ್ತೆಂದರೆ ಅನೇಕ ಸಲ ರಾವಣ, ರಾಕ್ಷಸ, ಗೂಂಡಾ ಎಂದೆಲ್ಲ ಕರೆದು ನನ್ನನ್ನು ಹೀಯಾಳಿಸಿದ್ದೀರಿ. ದೀದಿಯವರೇ ನನ್ನ ಮೇಲೆ ನಿಮಗೆ ಯಾಕಿಷ್ಟು ಕೋಪ? ಅಂಥದ್ದನ್ನು ನಾನೇನು ಮಾಡಿದ್ದೇನೆ ಎಂದು ಮಾರ್ಮಿಕವಾಗಿ ಕೇಳಿದರು.

ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ಪಶ್ಚಿಮ ಬಂಗಾಳದ ಜನ ನಿಮ್ಮನ್ನು ‘ದೀದಿ’ (ಅಕ್ಕ) ಎಂದೇ ಪರಿಗಣಿಸಿದ್ದಾರೆ,ಅದು ಜನ ನಿಮಗೆ ಕೊಟ್ಟ ಗೌರವಾದರ. ಆದರೆ ನೀವೇಕೆ ಸೋದರಳಿಯನ ಅತ್ತೆಯಾಗಿಯೇ ಮಅತ್ರ ಇದ್ದೀರಿ? ಬಂಗಾಳದ ಜನ ಈಗ ನಿಮಗೆ ಈ ಪ್ರಶ್ನೆಯನ್ನು ಕೇಳುತ್ತಿದ್ದಾರೆ ಎಂದು ಹೇಳಿದರು.ಇಲ್ಲಿ ಆಡಳಿತದಲ್ಲಿರುವವರು ಬಹಳ ಭ್ರಷ್ಟಾಚಾರ ಮಾಡಿದ್ದಾರೆ. ಬಂಗಾಳದ ಜನರನ್ನು ಲೂಟಿ ಮಾಡಿದ್ದಾರೆ. ಅಂಫಾನ್‌ ಪರಿಹಾರದ ಹಣವನ್ನೂ ಕೊಳ್ಳೆ ಹೊಡೆದಿದ್ದಾರೆ. ‘ಭ್ರಷ್ಟಾಚಾರದ ವಿಚಾರದಲ್ಲಿ ಇಲ್ಲಿ ಒಲಿಂಪಿಕ್ಸ್‌’ ಸ್ಪರ್ಧೆಯನ್ನೇ ಆಯೋಜಿಸಬಹುದಾದ ರೀತಿಯಲ್ಲಿ ಬಗೆಬಗೆಯ ಹಗರಣಗಳನ್ನು ಹಗರಣಗಳನ್ನು ನಡೆಸಿದ್ದಾರೆ. ಜನರು ಕಷ್ಟಪಟ್ಟು ದುಡಿದ ಹಣ ಹಾಗೂ ಅವರ ಜೀವನದ ಜೊತೆ ಚೆಲ್ಲಾಟವಾಡಿದ್ದಾರೆ. ಈಗ ಟಿಎಂಸಿಯ ಆಟ ಮುಗಿಯಲಿದೆ ಹಾಗೂ ವಿಕಾಸ ಶುರುವಾಗಲಿದೆ. ಕೆಟ್ಟ ಆಡಳಿತ ಬಾರದಂತೆ ತಡೆಯಲು ಬಿಜೆಪಿಗೆ ಮತ ನೀಡಿ” ಎಂದು ಮೋದಿ ಜನತೆಗೆ ಮನವಿ ಮಾಡಿದರು.ಭವಾನಿಪುರ ತೊರೆದು ನಂದಿಗ್ರಾಮದಲ್ಲಿ ಸ್ಪರ್ಧಿಸುವುದಾಗಿ ಪ್ರಕಟಿಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಹರಿಹಾಯ್ದರು.

ಪ್ರಮುಖ ಸುದ್ದಿ :-   ರಾಯಬರೇಲಿಯಿಂದ ಅಕ್ಕನ ವಿರುದ್ಧ ಸ್ಪರ್ಧಿಸಲು ಬಿಜೆಪಿ ನೀಡಿದ್ದ ಆಫರ್‌ ತಿರಸ್ಕರಿಸಿದರೇ ವರುಣ್‌ ಗಾಂಧಿ..?

ಭವಾನಿಪುರದಲ್ಲಿ ನಿಲುಗಡೆಯಾಗಬೇಕಿದ್ದ ದೀದಿ ಅವರ ಸ್ಕೂಟಿಯು, ನಂದಿಗ್ರಾಮದ ಕಡೆಗೆ ದಿಢೀರ್‌ ತಿರುವು ಪಡೆದುಕೊಂಡಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದರು.
ಸೋಮವಾರ ಪಶ್ಚಿಮ ಬಂಗಾಳದಲ್ಲಿ ಚುನಾವಣಾರ್ಥವಾಗಿ ಬ್ರಿಗೇಡ್ ಪರೇಡ್ ಗ್ರೌಂಡ್ಸ್‌ನಲ್ಲಿ ಬಿಜೆಪಿಯ
ಹಲವು ವರ್ಷಗಳಿಂದ ನಾನು ಮಮತಾ ಬ್ಯಾನರ್ಜಿ ಅವರನ್ನು ಕಂಡಿದ್ದೇನೆ. ಎಡ ಪಕ್ಷಗಳ ವಿರುದ್ಧ ದನಿ ಎತ್ತಿದ ಅದೇ ವ್ಯಕ್ತಿಯಾಗಿ ಅವರು ಈಗ ಉಳಿದಿಲ್ಲ. ಅವರು ಯಾರದ್ದೋ ಮಾತುಗಳನ್ನೀಗ ಆಡುತ್ತಿದ್ದಾರೆ ಎಂದು ಮೋದಿ ಹೇಳಿದರು.
ಬಂಗಾಳಕ್ಕೆ ಬೇಕಿರುವುದು ಶಾಂತಿ, ನೆಮ್ಮದಿ, ಸ್ವಾತಂತ್ರ್ಯ ಹಾಗೂ ಅಭಿವೃದ್ಧಿ. ದೇಶಕ್ಕೆ ಸ್ವಾತಂತ್ರ್ಯ ಬಂದು ೧೦೦ ವರ್ಷವಾಗುವ ಹೊತ್ತಿಗೆ ಅಂದರೆ 2047ರ ವೇಳಗೆ ಪಶ್ಚಿಮ ಬಂಗಾಳ ಮತ್ತೆ ದೇಶ ಮುನ್ನಡೆಸುವ ಬಂಗಾಳವಾಗಿ ಹೊರಹೊಮ್ಮಲಿದೆ’ ಎಂದು ಆಶಿಸಿದರು.
ಇದೇ ಸಂದರ್ಭದಲ್ಲಿ ಭಾನುವಾರ ಬಿಜೆಪಿಗೆ ಸೇರ್ಪಡೆಯಾದ ಖ್ಯಾತ ಬಾಲಿವುಡ್‌ ನಟ ಮಿಥುನ್‌ ಚಕ್ರವರ್ತಿ ಮತ್ತು ಪ್ರಧಾನಿ ಮೋದಿ ಶುಭಾಶಯ ವಿನಿಮಯ ಮಾಡಿಕೊಂಡರು.
ರಾಜ್ಯದಲ್ಲಿ ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ಬಿಜೆಪಿ ಹಮ್ಮಿಕೊಂಡಿರುವ ಬೃಹತ್ ಸಮಾವೇಶವಾಗಿದ್ದು, ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.

ಪ್ರಮುಖ ಸುದ್ದಿ :-   ಇವಿಎಂ ಮತಗಳ ಜೊತೆ ವಿವಿಪ್ಯಾಟ್ ಮತಗಳ ಸಂಪೂರ್ಣ ಎಣಿಕೆ : ಎಲ್ಲ ಅರ್ಜಿಗಳನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್

 

 

2.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement