ವಿಮಾನದಲ್ಲಿ ವಿದೇಶಕ್ಕೆ ಹಾರಲು ಪಾಸ್‌ಪೋರ್ಟ್ ಪಡೆದ ಭಾರತದ ಈ ಬೀದಿನಾಯಿ…!

ನವದೆಹಲಿ : ಬಹುತೇಕ ಭಾರತೀಯರಿಗೆ ವಿದೇಶ ಪ್ರವಾಸ ಮಾಡುವುದು ಇನ್ನೂ ಕನಸಾಗಿರುವಾಗಲೇ ವಾರಾಣಸಿಯ ಬೀದಿ ನಾಯಿಯೊಂದು ಈಗ ವಿದೇಶಕ್ಕೆ ಹೋಗಲು ಪಾಸ್‌ಪೋರ್ಟ್ ಪಡೆದುಕೊಂಡಿದೆ….! ಉತ್ತರ ಪ್ರದೇಶ ಮೂಲದ ಮೋತಿ ಎಂಬ ನಾಯಿ ವಿದೇಶಕ್ಕೆ ಹಾರಲು ಇತ್ತೀಚೆಗೆ ಪಾಸ್‌ಪೋರ್ಟ್ ಪಡೆದುಕೊಂಡಿದ್ದು, ಈ ತಿಂಗಳು ಇಟಲಿಗೆ ಹಾರಲು ಸಿದ್ಧವಾಗಿದೆ. ಇಟಾಲಿಯನ್ ಲೇಖಕಿ ವೆರಾ ಲಝಾರೆಟ್ಟಿ ಅವರು ನಾಯಿ ಮೋತಿಯನ್ನು … Continued

ಟೊಮೆಟೊ ಬೆಲೆ ಗಗನಕ್ಕೆ: ಟೊಮೆಟೊ ತುಂಬಿದ್ದ ವಾಹನವನ್ನೇ ಕದ್ದೊಯ್ದ ಕಳ್ಳರು…!

ಬೆಂಗಳೂರು : ಟೊಮೆಟೊ ಬೆಲೆ ಗಗನಕ್ಕೇರಿದ್ದು, ಹೀಗಾಗಿ ಟೊಮೆಟೊ ತುಂಬಿದ್ದ ವಾಹನವನ್ನೇ ಕಳ್ಳತನ ಮಾಡಿದ ಘಟನೆ ವರದಿಯಾಗಿದೆ. ಟೊಮೆಟೊ ಪ್ರತಿ ಕೇಜಿಗೆ 110 ರೂ. ದಾಟಿದೆ. ಈ ಹಿನ್ನೆಲೆ ಜನರು ಟೊಮೆಟೊ ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಟೊಮೆಟೊ ಬೆಲೆ ಶತಕ ದಾಟಿದ ನಂತರ ಟೊಮೆಟೊಗಳನ್ನು ಹೊಲದೀಂದ ಕಳ್ಳತನ ಮಾಡಿದ ಘಟನೆಗಳು ಹೀಗಾಗಿ ಟೊಮೆಟೊ ಬೆಳೆಗಾರರು ಜಮೀನುಗಳಿಗೆ … Continued

ವಿಧಾನಸೌಧದಲ್ಲಿ ಭದ್ರತೆ ಪರಿಶೀಲನೆ ವೇಳೆ ಮಹಿಳೆಯ ಬ್ಯಾಗ್​​ನಲ್ಲಿ ಚಾಕು ಪತ್ತೆ..

ಬೆಂಗಳೂರು: ವಿಧಾನಸೌಧದಲ್ಲಿ ಇತ್ತೀಚೆಗೆ ನಡೆದಿದ್ದ ಭದ್ರತಾ ಲೋಪದ ಹಿನ್ನೆಲೆಯಲ್ಲಿ ವಿಧಾನಸೌಧಕ್ಕೆ ಒದಗಿಸಲಾಗಿದ್ದ ಬಿಗಿಭದ್ರತೆಯನ್ನು ಇನ್ನೂ ಹೆಚ್ಚಿಸಲಾಗಿದೆ. ವಿಧಾನಸೌಧಕ್ಕೆ ಬರುವವರನ್ನು ತೀವ್ರ ತಪಾಸಣೆಗೊಳಪಡಿಸಿ ಒಳಗೆ ಬಿಡಲಾಗುತ್ತಿದೆ. ಹೀಗೆ ಪರೀಕ್ಷೆ ನಡೆಸುವಾಗ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್ ನಲ್ಲಿ ಚಾಕುವೊಂದು ಪತ್ತೆಯಾಗಿದ್ದು, ನಂತರ ಅವರನ್ನು ಹಿಂದಕ್ಕೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ. ವಿಧಾನಸೌಧದ ಪೂರ್ವ ಬಾಗಿಲಿನ ಮೂಲಕ ಈ ಮಹಿಳೆ ಒಳಪ್ರವೇಶಿಸಿದ್ದರು. … Continued

ರಾಜ್ಯದ ಈ ಜಿಲ್ಲೆಗಳಲ್ಲಿ ಜುಲೈ 16ರವರೆಗೂ ಭಾರೀ ಮಳೆ ಮುನ್ಸೂಚನೆ

ಬೆಂಗಳೂರು : ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಜುಲೈ 16ರವರೆಗೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಲಿದ್ದು ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಕರಾವಳಿ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು … Continued

ಉತ್ತರ ಭಾರತದಲ್ಲಿ ಮಳೆ ಆರ್ಭಟ : ಹಿಮಾಚಲಕ್ಕೆ ಅತಿ ಹೆಚ್ಚು ಹಾನಿ, ದೆಹಲಿಯಲ್ಲಿ ಶಾಲೆಗಳಿಗೆ ರಜೆ

ನವದೆಹಲಿ: ಉತ್ತರ ಭಾರತದ ಹಲವಾರು ಭಾಗಗಳಲ್ಲಿ ಭಾರೀ ಮಳೆ ಜನಜೀವನವನ್ನು ಅಸ್ತವ್ತಸ್ತಗೊಳಿಸಿದ್ದು, ಕಳೆದ ಮೂರು ದಿನಗಳಲ್ಲಿ ಕನಿಷ್ಠ 19 ಜನರು ಮಳೆಯಿಂದ ಸಾವಿಗೀಡಾಗಿದ್ದಾರೆ. ನಗರಗಳು ಮತ್ತು ಪಟ್ಟಣಗಳಲ್ಲಿ, ಅನೇಕ ರಸ್ತೆಗಳು ಮತ್ತು ಕಟ್ಟಡಗಳು ಮೊಣಕಾಲು ಆಳದ ನೀರಿನಲ್ಲಿ ಮುಳುಗಿವೆ. ಮುಂದಿನ ಒಂದೆರಡು ದಿನಗಳಲ್ಲಿ ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನ, … Continued

ಅನ್ನಭಾಗ್ಯ ಯೋಜನೆಯ ಹಣ ವರ್ಗಾವಣೆಗೆ ಇಂದು ಚಾಲನೆ

ಬೆಂಗಳೂರು: ಇಂದು ಸರ್ಕಾರದ ಮೂರನೇ ಗ್ಯಾರಂಟಿ ಯೋಜನೆ ಆರಂಭಗೊಳ್ಳಲಿದ್ದು ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರದಾರರಿಗೆ ಅನ್ನಭಾಗ್ಯ ಯೋಜನೆಯ ಹಣ ವರ್ಗಾವಣೆ ಆಗಲಿದೆ. ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್‌ ಬಿಪಿಎಲ್ ಪಡಿತರದಾರರಿಗೆ ‍‍10ಕೆಜಿ ಅಕ್ಕಿ ಗ್ಯಾರಂಟಿ ಕಾಂಗ್ರೆಸ್​ ಘೋಷಿಸಿತ್ತು. ಅದರಂತೆ ಕಾಂಗ್ರೆಸ್‌ ಸರ್ಕಾರ ಅದನ್ನು ಜಾರಿ ಮಾಡಿದೆ. ಸದ್ಯಕ್ಕೆ ಐದು ಕೆಜಿ ಅಕ್ಕಿ ನೀಡಲಿದ್ದು, ಉಳಿದ 5 ಕೆ.ಜಿ … Continued

ನೂತನ ವಂದೇ ಭಾರತ ರೈಲಿಗೆ ಕೇಸರಿ ಬಣ್ಣ: ಇದಕ್ಕೆ ಕಾರಣ ತಿಳಿಸಿದ ರೈಲ್ವೇ ಸಚಿವರು

ನವದೆಹಲಿ: ‘ಮೇಕ್ ಇನ್ ಇಂಡಿಯಾ’ದ ಭಾಗವಾಗಿ ಭಾರತದಲ್ಲಿಯೇ ನಿರ್ಮಾಣವಾಗುತ್ತಿರುವ ‘ವಂದೇ ಭಾರತ್ ಎಕ್ಸ್‌ಪ್ರೆಸ್’ ಹೈ ಸ್ಪೀಡ್ ರೈಲು ಇನ್ನು ಮುಂದೆ ಕೇಸರಿ ಬಣ್ಣದಲ್ಲಿ ಕಾಣಿಸಿಕೊಳ್ಳಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ 2019ರ ಫೆ.15ರಂದು ಮೊದಲಿಗೆ ದೆಹಲಿ-ವಾರಾಣಸಿ ನಡುವಿನ ಮೊದಲ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದಾಗಿನಿಂದ ಈವರೆಗೂ ರೈಲುಗಳು … Continued

ವೀಡಿಯೊ…: ಕೆನಡಾದ ಭಾರತದ ಕಾನ್ಸುಲೇಟ್‌ ಹೊರಗೆ ತ್ರಿವರ್ಣ ಧ್ವಜ ಹಿಡಿದು ಖಲಿಸ್ತಾನಿ ಪ್ರತಿಭಟನಾಕಾರರನ್ನು ಎದುರಿಸಿದ ಭಾರತೀಯ ಸಮುದಾಯ | ವೀಕ್ಷಿಸಿ

ಟೊರೊಂಟೊ: ತ್ರಿವರ್ಣ ಧ್ವಜ ಹಿಡಿದಿರುವ ಭಾರತೀಯ ಸಮುದಾಯದ ಸದಸ್ಯರು ಶನಿವಾರ (ಸ್ಥಳೀಯ ಕಾಲಮಾನ) ಭಾರತೀಯ ಕಾನ್ಸುಲೇಟ್ ಹೊರಗೆ ಜಮಾಯಿಸಿದರು ಮತ್ತು ಟೊರೊಂಟೊದಲ್ಲಿ ಖಲಿಸ್ತಾನ್ ಪರ ಪ್ರತಿಭಟನೆ ನಡೆಸುತ್ತಿದ್ದವರನ್ನು ಒಗ್ಗಟ್ಟಿನಿಂದ ಎದುರಿಸಿದರು. ಭಾರತೀಯ ವಲಸಿಗರು “ಭಾರತ್ ಮಾತಾ ಕಿ ಜೈ”, “ವಂದೇ ಮಾತರಂ”, “ಲಾಂಗ್ ಲಿವ್ ಇಂಡಿಯಾ” ಮತ್ತು “ಖಲಿಸ್ತಾನ್ ಮುರ್ದಾಬಾದ್” ಎಂಬ ಘೋಷಣೆಗಳನ್ನು ಕೂಗಿದರು. ಮತ್ತು … Continued

ಚೆಕ್ ಬೌನ್ಸ್ ಪ್ರಕರಣ ; ನಟ ನೀನಾಸಂ ಅಶ್ವತ್ಥ ಬಂಧನ-ಬಿಡುಗಡೆ

ಚೆಕ್​ ಬೌನ್ಸ್​ ಪ್ರಕರಣದಲ್ಲಿ ಸ್ಯಾಂಡಲ್‌ವುಡ್ ನಟ ನೀನಾಸಂ ಅಶ್ವತ್ಥ ಅವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಹಾಸನದ ಬಡಾವಣೆ ಠಾಣೆ ಪೊಲೀಸರು ನೀನಾಸಂ ಅಶ್ವತ್ಥ ಅವರನ್ನು ಬಂಧಿಸಿ ಕೋರ್ಟ್‌ ಮುಂದೆ ಹಾಜರುಪಡಿಸಿದರು. ಅವರು ನ್ಯಾಯಾಧೀಸರ ಎದುರು ತಪ್ಪೊಪ್ಪಿಕೊಂಡರು ಹಾಗೂ ಚೆಕ್‌ನ ಶೇ. 25ರಷ್ಟು ಹಣವನ್ನು ಪಾವತಿ ಮಾಡಿದರು. ನಂತರ ನ್ಯಾಯಾಲಯ ನೀನಾಸಂ ಅಶ್ವತ್ಥ​ ಅವರಿಗೆ ಜಾಮೀನು … Continued

ಆರೆಸ್ಸೆಸ್ ಮಾಜಿ ಮುಖ್ಯಸ್ಥ ಗೋಲ್ವಾಲ್ಕರ್ ಬಗ್ಗೆ ವಿವಾದಾತ್ಮಕ ಪೋಸ್ಟ್ : ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ವಿರುದ್ಧ ಪ್ರಕರಣ ದಾಖಲು

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮಾಜಿ ಸರಸಂಘಚಾಲಕ ಎಂ.ಎಸ್. ಗೋಲ್ವಾಲ್ಕರ್ ಅವರ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ವಿವಾದಾತ್ಮಕ ಪೋಸ್ಟ್ ಹಂಚಿಕೊಂಡ ಆರೋಪದ ಮೇಲೆ ಇಂದೋರ್ ಪೊಲೀಸರು ದಿಗ್ವಿಜಯ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿದ ನಂತರ ಕಾಂಗ್ರೆಸ್ ನಾಯಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ಸ್ಥಳೀಯ ವಕೀಲ ಹಾಗೂ ಆರೆಸ್ಸೆಸ್ ಕಾರ್ಯಕರ್ತ ರಾಜೇಶ್ ಜೋಶಿ … Continued