ಮುರುಡೇಶ್ವರ :ಸಮುದ್ರದ ಅಲೆಗೆ ಸಿಲುಕಿ ಬೆಂಗಳೂರು ವಿದ್ಯಾರ್ಥಿ ಸಾವು, ಮತ್ತಿಬ್ಬರ ರಕ್ಷಣೆ

ಕಾರವಾರ: ಮುರುಡೇಶ್ವರ ಸಮುದ್ರ ತೀರದಲ್ಲಿ ಇಂದು, ಮಂಗಳವಾರ ಕೂಡ ಓರ್ವ ಪ್ರವಾಸಿಗ ಲೈಫ್ ಗಾರ್ಡ್‌ಗಳ ಸೂಚನೆಗೆ ಕ್ಯಾರೆ ಎನ್ನದೆ ಸಮುದ್ರಕ್ಕಿಳಿದ ನಂತರ ಅಲೆಗೆ ಸಿಲುಕಿ ನೀರು ಪಾಲಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರದಲ್ಲಿ ನಡೆದ ವರದಿಯಾಗಿದೆ. ಕಣ್ಮರೆಯಾದ ಯುವಕನ್ನು ಬೆಂಗಳೂರಿನ ಇಲೆಕ್ಟ್ರಾನಿಕ್ ಸಿಟಿ ನಿವಾಸಿ, ಇಂಜಿನಿಯರಿಂಗ್ ವಿದ್ಯಾರ್ಥಿ ಪವನ್ ನಾಯ್ಕ(20) ಎಂದು … Continued

ಒಡಿಶಾದ ಟಾಟಾ ಸ್ಟೀಲ್ ಘಟಕದಲ್ಲಿ ಉಗಿ ಸೋರಿಕೆಯಿಂದ 19 ಮಂದಿ ಗಾಯ

ಭುವನೇಶ್ವರ: ಒಡಿಶಾದ ಧೆಂಕನಲ್ ಜಿಲ್ಲೆಯ ಟಾಟಾ ಸ್ಟೀಲ್‌ನ ಮೆರಮಂಡಲಿ ಸ್ಥಾವರದಲ್ಲಿ ಮಂಗಳವಾರ ಉಗಿ ಸೋರಿಕೆಯಿಂದ ಕನಿಷ್ಠ 19 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತೀವ್ರ ಸುಟ್ಟಗಾಯಗಳಾಗಿರುವ ಗಾಯಾಳುಗಳನ್ನು ಕೂಡಲೇ ಕಟಕ್‌ನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಕುಲುಮೆಯನ್ನು ಪರಿಶೀಲಿಸುತ್ತಿದ್ದ ಕಾರ್ಮಿಕರು ಮತ್ತು ಎಂಜಿನಿಯರ್‌ಗಳು ಅಪಘಾತದಲ್ಲಿ ಗಾಯಗೊಂಡಿದ್ದಾರೆ. ತಪಾಸಣೆ ಕಾರ್ಯದ ವೇಳೆ ಮಧ್ಯಾಹ್ನ 1 ಗಂಟೆ ಸುಮಾರಿಗೆ … Continued

ಫ್ರೀ ಬಸ್‌ ಪ್ರಯಾಣಕ್ಕೆ ಹೊರ ರಾಜ್ಯದ ಮಹಿಳೆಯರ ಐನಾತಿ ಐಡಿಯಾ: ಆಧಾರ್‌ ಕಾರ್ಡ್‌ ನೋಡಿ ದಂಗಾದ ಬಸ್‌ ಕಂಡಕ್ಟರ್‌

ಬೆಂಗಳೂರು : ಶಕ್ತಿ ಯೋಜನೆಯಡಿ ಸರ್ಕಾರ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣ ಭಾಗ್ಯ ಕಲ್ಪಿಸಿದ್ದು, ಬೇರೆ ರಾಜ್ಯಗಳ ಮಹಿಳೆಯರ ಖತರ್ನಾಕ್‌ ಐಡಿಯಾಕ್ಕೆ ಬಸ್‌ ಕಂಡಕ್ಷರ್‌ಗಳೇ ಬೆಚ್ಚಿಬಿದ್ದಿದ್ದಾರೆ. ಋಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ಕಳೆದ ಮೂರು ದಿನಗಳಿಂದ ಬಿಎಂಟಿಸಿ ಸೇರಿದಂತೆ ಸಾಮಾನ್ಯ ಕೆಎಸ್‍ಆರ್‌ಟಿಸಿ ಬಸ್‍ಗಳಲ್ಲಿ ರಾಜ್ಯದ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಸ್ಮಾರ್ಟ್ ಕಾರ್ಡ್ ವಿತರಿಸದ ಹಿನ್ನೆಲೆಯಲ್ಲಿ ಆಧಾರ್ … Continued

ಟಿಸಿಎಸ್‌ ಕಂಪನಿಯಲ್ಲಿ ಹೆಚ್ಚಿದ ಮಹಿಳಾ ಉದ್ಯೋಗಿಗಳ ಕೆಲಸ ತೊರೆಯುವ ಪ್ರಮಾಣ : ಯಾಕೆಂದರೆ….

ಮನೆಯಿಂದ ಕೆಲಸ ಮಾಡುವ ಅವಕಾಶದ ಅಂತ್ಯವು ಐಟಿ ಸಂಸ್ಥೆ ಟಿಸಿಎಸ್‌ ಮಹಿಳಾ ಉದ್ಯೋಗಿಗಳ ಹೆಚ್ಚಿನ ಪ್ರಮಾಣದ ರಾಜೀನಾಮೆಗೆ ಕಾರಣವಾಗಿದೆ ಎಂದು ವರದಿಯಾಗಿದೆ. ಲಿಂಗ ವೈವಿಧ್ಯತೆಯನ್ನು ಉತ್ತೇಜಿಸುವ ನಮ್ಮ ಪ್ರಯತ್ನಗಳಿಗೆ ಇದು ಹಿನ್ನಡೆಯಾಗಿದೆ, ಆದರೆ ನಾವು ಅದನ್ನು ದ್ವಿಗುಣಗೊಳಿಸುತ್ತಿದ್ದೇವೆ ಎಂದು ಕಂಪನಿ ಹೇಳಿದೆ. ಭಾರತದ ಅತಿದೊಡ್ಡ ಸಾಫ್ಟ್‌ವೇರ್ ಸಂಸ್ಥೆಯಲ್ಲಿ ದೂರಸ್ಥ ಅಥವಾ ಮನೆಯಿಂದ ಕೆಲಸ ಮಾಡುವ ಅವಕಾಶದ … Continued

ಶಾಸಕ ಜನಾರ್ದನ ರೆಡ್ಡಿ, ಪತ್ನಿ ಲಕ್ಷ್ಮೀ ಅರುಣಾ ರೆಡ್ಡಿಗೆ ಸೇರಿದ ಹಲವಾರು ಸ್ಥಿರಾಸ್ತಿಗಳ ಜಪ್ತಿಗೆ ಸಿಬಿಐ ವಿಶೇಷ ಕೋರ್ಟ್​ ಆದೇಶ

ಬೆಂಗಳೂರು: ಕ್ರಿಮಿನಲ್ ಕೇಸ್ ಮುಗಿಯುವವರೆಗೆ ಶಾಸಕ ಜನಾರ್ದನ ರೆಡ್ಡಿ, ಪತ್ನಿ ಲಕ್ಷ್ಮೀ ಅರುಣಾ ರೆಡ್ಡಿಗೆ ಸೇರಿದ 82 ಸ್ಥಿರಾಸ್ತಿ ಜಪ್ತಿಗೆ ಸಿಬಿಐ ವಿಶೇಷ ಕೋರ್ಟ್​ ಆದೇಶ ಹೊರಡಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಜನಾರ್ದನ ರೆಡ್ಡಿ ಹಾಗೂ ಅವರ ಪತ್ನಿ ಲಕ್ಷ್ಮೀ ಅರುಣಾಗೆ ಸೇರಿದ ಸುಮಾರು 124 ಆಸ್ತಿಗಳನ್ನು ಸಿಬಿಐ ಪಟ್ಟಿ ಮಾಡಿ, ಅವುಗಳನ್ನು ಜಪ್ತಿ ಮಾಡಲು … Continued

ಕಂಟೇನರ್​ಗೆ ಹಿಂಬದಿಯಿಂದ ಗುದ್ದಿದ ಕಾರು: ಮೂವರ ಸಾವು

ಕೊಪ್ಪಳ: ಜಿಲ್ಲೆಯ ಕುಷ್ಟಗಿ ಪಟ್ಟಣದ ಹೊರವಲಯದಲ್ಲಿ ಇಂದು, ಮಂಗಳವಾರ ಬೆಳಗಿನ ಜಾವ ಕಂಟೇನರ್​ಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿ ಮೂವರು ಸಾವಿಗೀಡಾಗಿದ್ದಾರೆ. ಮೃತರನ್ನು ಪ್ರವೀಣಕುಮಾರ ಭೋಜಪ್ಪ (27), ಸುರೇಶ ಈರಸಂಗಪ್ಪ ಹಂಡರಗಲ್ (43) ಹಾಗೂ ಗೌರಮ್ಮ ಹನುಮಗೌಡ ಕನ್ನೂರು (60) ಎಂದು ಗುರುತಿಸಲಾಗಿದೆ. ಮೃತರು ಮುದ್ದೇಬಿಹಾಳ ಮೂಲದವರು ಎನ್ನಲಾಗಿದೆ. ಇವರು ಮದುವೆ ಮುಗಿಸಿಕೊಂಡು ವಾಪಸ್ ಊರಿಗೆ ಹೋಗುತ್ತಿದ್ದಾಗ … Continued

ಮಹಾತ್ವಾಕಾಂಕ್ಷೆಯ ಬಾಹ್ಯಾಕಾಶ ಯೋಜನೆ ಚಂದ್ರಯಾನ-3 ಜುಲೈ 12 -19ರ ನಡುವೆ ಉಡಾವಣೆ : ಇಸ್ರೋ ಅಧ್ಯಕ್ಷ

ಕೊಟ್ಟಾಯಂ: ಇಸ್ರೋದ ಚಂದ್ರಯಾನದ ಮೂರನೇ ಆವೃತ್ತಿ ಚಂದ್ರಯಾನ-3 ಈ ವರ್ಷದ ಜುಲೈ 12 ಮತ್ತು 19 ರ ನಡುವೆ ಉಡಾವಣೆಯಾಗಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಎಸ್. ಸೋಮನಾಥ್ ಹೇಳಿದ್ದಾರೆ. ವೈಕಂನ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಒಂದು ದಿನದ ಕಾರ್ಯಾಗಾರದ ನೇಪಥ್ಯದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವೇಳಾಪಟ್ಟಿಯ … Continued

ಬಿಪರ್‌ಜೋಯ್ ಚಂಡಮಾರುತ : ಗುಜರಾತ್ ಕರಾವಳಿಯಿಂದ 8,000 ಜನರ ಸ್ಥಳಾಂತರ

ನವದೆಹಲಿ: ಗುಜರಾತ್ ಕರಾವಳಿಯ 10 ಕಿಲೋಮೀಟರ್ ವ್ಯಾಪ್ತಿಯಿಂದ ಎಂಟು ಸಾವಿರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಮಂಗಳವಾರ ಕಚ್‌ನಲ್ಲಿ ತಿಳಿಸಿದ್ದಾರೆ. ಸಮೀಪಿಸುತ್ತಿರುವ “ಬೈಪರ್‌ಜಾಯ್” ಚಂಡಮಾರುತದ ಮುಖಾಂತರ ತೆಗೆದುಕೊಂಡ ಮುನ್ನೆಚ್ಚರಿಕೆಗಳ ಬಗ್ಗೆ ಮಾಧ್ಯಮಗಳಿಗೆ ತಿಳಿಸಿದರು. ಸುಮಾರು 1.5 ರಿಂದ 2 ಲಕ್ಷ ಸಣ್ಣ ಮತ್ತು ದೊಡ್ಡ ಪ್ರಾಣಿಗಳನ್ನು ಸ್ಥಳಾಂತರಿಸಲಾಗಿದೆ ಎಂದು … Continued

ಬಿಬಿಎಂಪಿ ವಿಭಜನೆಗೆ ಮುಂದಾದ ಸರ್ಕಾರ: ತಜ್ಞರ ಸಮಿತಿ ರಚನೆ ಮಾಡಿ ಆದೇಶ

ಬೆಂಗಳೂರು: ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯನ್ನು ವಿಭಜಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರ ಮಹತ್ವದ ಆದೇಶದ ಹೊರಡಿಸಿದ್ದು, ಬಿಬಿಎಂಪಿ ಪುನರ್​ ರಚಿಸಲು ತಜ್ಞರ ಸಮಿತಿ ರಚನೆ ಮಾಡಿದೆ. ಪಾಲಿಕೆಯ ಆಡಳಿತ ಹಾಗೂ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಒದಗಿಸುವ ಹಿತದೃಷ್ಟಿಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಭಜನೆ ಸೂಕ್ತವೆಂದು ಸರ್ಕಾರ ಪರಿಗಣಿಸಿದೆ. ವಿಭಜಿಸುವ ಮುನ್ನ ಸಾಧಕ-ಬಾಧಕಗಳ … Continued

ಕನ್ನಡ ಚಿತ್ರಗಳಲ್ಲಿ ಖಳನಟನಾಗಿ ಅಭಿನಯಿಸಿದ್ದ ಕಜಾನ್​ ಖಾನ್​ ನಿಧನ

ಕನ್ನಡ ಸಿನೆಮಾಗಳಲ್ಲಿ ಹೆಚ್ಚಾಗಿ ಖಳನಟನಾಗಿ ಅಭಿನಯಿಸಿದ್ದ ಬಹುಭಾಷಾ ನಟ ಕಜಾನ್​ ಖಾನ್​ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ನಿನ್ನೆ ಅವರಿಗೆ ಹೃದಯಾಘಾತವಾಗಿದ್ದು , ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರೂ, ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ ಎಂದು ವರದಿಯಾಗಿದೆ. ಕಜಾನ್​ ಖಾನ್​, ನಿಧನದ ಸುದ್ದಿಯನ್ನು ಮಲಯಾಳಂ ಚಿತ್ರರಂಗದ ಖ್ಯಾತ ಪ್ರೊಡಕ್ಷನ್ ಕಂಟ್ರೋಲರ್ ಮತ್ತು ನಿರ್ಮಾಪಕ ಎನ್.ಎಂ. ಬಾದುಷಾ ಅವರು ಅಧಿಕೃತವಾಗಿ … Continued