ಮಹಿಳೆಯರ ಉಚಿತ ಪ್ರಯಾಣಕ್ಕೆ ಇನ್ಮುಂದೆ ಒರಿಜಿನಲ್ ಗುರುತಿನ ಕಾರ್ಡ್‌ ಗಳೇ ಬೇಕಿಲ್ಲ, ಝರಾಕ್ಸ್ ಇದ್ರೂ ಸಾಕು : ಕೆ ಎಸ್‌ ಆರ್‌ ಟಿ ಸಿ ತಿದ್ದುಪಡಿ ಆದೇಶ

ಬೆಂಗಳೂರು: ಸರ್ಕಾರಿ ಬಸ್​ಗಳಲ್ಲಿ ಉಚಿತ ಪ್ರಯಾಣಕ್ಕೆ ಸಂಬಂಧಿಸಿದಂತೆ ಗುರುತಿನ ಚೀಟಿ ವಿಚಾರಕ್ಕೆ ಮಹಿಳೆಯರಲ್ಲಿದ್ದ ಗೊಂದಲಗಳಿಗೆ ಸಾರಿಗೆ ಇಲಾಖೆ ತೆರೆ ಎಳೆದಿದೆ. ಶಕ್ತಿ ಯೋಜನೆಯ ಅಡಿಯಲ್ಲಿ ಮಹಿಳೆಯರು ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಸಲು ಆಧಾರ್ ಕಾರ್ಡ್ ಹಾಗೂ ವೋಟರ್​ ಐಡಿಯ ಝರಾಕ್ಸ್​ ಇದ್ದರೂ ಪ್ರಯಾಣಕ್ಕೆ ಅನುಮತಿ ನೀಡಲಾಗಿದೆ. ಒರಿಜಿನಲ್ ಐಡಿ ಕಾರ್ಡ್ (Original ID )ಬದಲು ಪುರಾವೆಗಳಿಗಾಗಿ ಅವುಗಳ … Continued

ಮಣಿಪುರ ಜನಾಂಗೀಯ ಹಿಂಸಾಚಾರ; ಶಿಬಿರಗಳಲ್ಲಿ ಆಶ್ರಯ ಪಡೆದ ಮನೆ ತೊರೆದ 50 ಸಾವಿರಕ್ಕೂ ಹೆಚ್ಚು ಸಂತ್ರಸ್ತರು

ಇಂಫಾಲ: ಮಣಿಪುರ ಸರ್ಕಾರ ಶನಿವಾರ ರಾಜ್ಯದಲ್ಲಿ ಅಂತರ್ಜಾಲ ಸೇವೆಗಳ ಮೇಲಿನ ನಿಷೇಧವನ್ನು ಜೂನ್ 15 ರವರೆಗೆ ವಿಸ್ತರಿಸಿದೆ. ಆಯುಕ್ತ (ಗೃಹ) ಟಿ.ರಂಜಿತ್ ಸಿಂಗ್ ಹೊರಡಿಸಿದ ಆದೇಶದಲ್ಲಿ ಬ್ರಾಡ್‌ಬ್ಯಾಂಡ್ ಸೇರಿದಂತೆ ಮೊಬೈಲ್ ಡೇಟಾ ಸೇವೆಗಳ ಅಮಾನತನ್ನು ಜೂನ್ 15 ರ ಮಧ್ಯಾಹ್ನ 3 ರ ವರೆಗೆ ವಿಸ್ತರಿಸಲಾಗಿದೆ ಎಂದು ಹೇಳಿದ್ದಾರೆ. ಇತ್ತೀಚಿನ ವಿಸ್ತರಣೆಯೊಂದಿಗೆ, ಮಣಿಪುರದ ನಾಗರಿಕರು ಈಗ … Continued

ಜೂನ್‌ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ. 6-6.3% : ಮೂಡೀಸ್‌

ನವದೆಹಲಿ: ಭಾರತದ ಆರ್ಥಿಕತೆಯು ಜೂನ್‌ ತ್ರೈಮಾಸಿಕದಲ್ಲಿ ಶೇಕಡ 6 6.3ರ ಮಟ್ಟದಲ್ಲಿ ಬೆಳವಣಿಗೆ ಕಾಣುವ ನಿರೀಕ್ಷೆ ಇದೆ ಎಂದು ಮೂಡೀಸ್‌ ಇನ್‌ವೆಸ್ಟರ್ಸ್‌ ಸರ್ವಿಸಸ್‌ ಭಾನುವಾರ ಹೇಳಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಸರ್ಕಾರದ ವರಮಾನವು ನಿರೀಕ್ಷೆಗಿಂತಲೂ ಕಡಿಮೆಯಾಗುವ ಸಾಧ್ಯತೆಯಿದ್ದು, ಅದರಿಂದಾಗಿ ವಿತ್ತೀಯ ಕೊರತೆಯು ಹೆಚ್ಚಾಗುವ ಆತಂಕವನ್ನು ಅದು ವ್ಯಕ್ತಪಡಿಸಿದೆ. ಆರ್ಥಿಕ ಬೆಳವಣಿಗೆಯ ಕುರಿತು ಮೂಡೀಸ್‌ ಮಾಡಿರುವ ಅಂದಾಜು … Continued

ಜಪಾನಿಯರಿಗೆ ಹಾಲಿವುಡ್‌ ಸ್ಟೈಲ್ ನಗು ಬೇಕಂತೆ: ಅದಕ್ಕಾಗಿ ಒಂದು ತಾಸಿನ ಕ್ಲಾಸ್‌ ಗೆ 4500 ರೂಪಾಯಿ ಕೊಡ್ತಾರೆ…!

ಜಪಾನ್‌ನ ವಿದ್ಯಾರ್ಥಿಗಳು ಮಾಸ್ಕ್‌ ಗಳನ್ನು ಧರಿಸಲು ಒಗ್ಗಿಕೊಂಡ ನಂತರ ಈಗ ಹೇಗೆ ನಗುವುದು ಎಂದು ತಿಳಿಯಲು ವೃತ್ತಿಪರ ತರಬೇತುದಾರರ ತರಗತಿಗಳಿಗೆ ಹೋಗುತ್ತಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಸಾಂಕ್ರಾಮಿಕ ರೋಗವು ಪ್ರಾರಂಭವಾದ ಮೂರು ವರ್ಷಗಳ ನಂತರ ಮಾರ್ಚ್‌ನಲ್ಲಿ ಸರ್ಕಾರವು ಮಾಸ್ಕ್‌ ಧರಿಸಬೇಕೆಂಬ ನಿಯಮ ಸಡಿಲಿಸಿದ ನಂತರ ಹೆಚ್ಚಿನ ಜನರು ಸಾರ್ವಜನಿಕವಾಗಿ ತಮ್ಮ ನಗು ಮುಖಗಳನ್ನು ತೋರಿಸುವುದಕ್ಕೆ … Continued

ಬಿಸಿಗಾಳಿಯಿಂದಾಗಿ ಜಾರ್ಖಂಡದಲ್ಲಿ ಇಂದಿನಿಂದ 3 ದಿನಗಳ ಕಾಲ ಶಾಲೆಗಳು ಬಂದ್‌

ರಾಂಚಿ: ಜಾರ್ಖಂಡ್ ರಾಜ್ಯದಲ್ಲಿನ ಚಾಲ್ತಿಯಲ್ಲಿರುವ ಬಿಸಿಗಾಳಿ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಜೂನ್ 12 ರಿಂದ ಮೂರು ದಿನಗಳ ಕಾಲ ಎಲ್ಲಾ ಶಾಲೆಗಳನ್ನು ಮುಚ್ಚುವುದಾಗಿ ಜಾರ್ಖಂಡ್ ಸರ್ಕಾರ ಘೋಷಿಸಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಾರ್ಯದರ್ಶಿ ಕೆ.ರವಿಕುಮಾರ ಅವರು ಹೊರಡಿಸಿರುವ ಆದೇಶದಲ್ಲಿ ರಾಜ್ಯದಲ್ಲಿನ ತೀವ್ರ ಬಿಸಿ ಮತ್ತು ಬಿಸಿಗಾಳಿಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು … Continued

ಪ್ರಿನ್ಸ್ ವಿಲಿಯಂ ಮಿಲಿಟರಿ ಮೆರವಣಿಗೆ ಪರಿಶೀಲಿಸುತ್ತಿದ್ದಾಗ ಮೂರ್ಛೆ ಹೋದ ಬ್ರಿಟಿಷ್ ಸೈನಿಕರು | ವೀಕ್ಷಿಸಿ

ಲಂಡನ್‌ನಲ್ಲಿ ಕಿಂಗ್ ಚಾರ್ಲ್ಸ್ ಅವರ ಜನ್ಮದಿನದಂದು ಪರೇಡ್‌ಗೆ ತಯಾರಿ ನಡೆಸುತ್ತಿದ್ದ ರಾಯಲ್ ಗಾರ್ಡ್‌ನ ಮೂವರು ಸೈನಿಕರು ಪ್ರಜ್ಞಾಹೀನರಾದರು. ಸುಮಾರು 30 ಡಿಗ್ರಿ ಸೆಲ್ಸಿಯಸ್‌ನ ಲಂಡನ್ ಶಾಖದಲ್ಲಿ ಸೈನಿಕರು ಉಣ್ಣೆಯ ಸಮವಸ್ತ್ರ ಮತ್ತು ಕರಡಿ ಚರ್ಮದ ಟೋಪಿಗಳನ್ನು ಧರಿಸಿದ್ದರು. ಈ ವೇಷಭೂಷಣದಿಂದಾಗಿ ಈ ಎಲ್ಲಾ ಸಿಬ್ಬಂದಿ ಶಾಖ ತಡೆಯಲಾರದೆ ಕೆಳಗೆ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ಕೈ ನ್ಯೂಸ್ … Continued

ಸ್ಟಾರ್ ವಾರ್ಸ್‌ನ ದೈತ್ಯಾಕಾರದ ಸರ್ಲಾಕ್ ನಂತೆ ಕಾಣುವ ವಿಲಕ್ಷಣ ಬಾಯಿಯ ಸಮುದ್ರ ಜೀವಿ ಕಂಡುಹಿಡಿದ ಅಮೆರಿಕದ ಮೀನುಗಾರ

ಅಮೆರಿಕದಲ್ಲಿ ಮೀನುಗಾರರೊಬ್ಬರು ಇತ್ತೀಚೆಗೆ “ವಿಲಕ್ಷಣ” ಬಾಯಿಯ ಸಮುದ್ರ ಜೀವಿಯನ್ನು ಹಿಡಿದಿದ್ದಾರೆ. ನ್ಯೂಯಾರ್ಕ್‌ನ ಹಡ್ಸನ್ ಕಣಿವೆಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಎರಿಕ್ ಒಸಿಂಕಿ ಎಂಬ ಮೀನುಗಾರನಿಗೆ ವಿಚಿತ್ರವಾಗಿ ಕಾಣುವ ಸಮುದ್ರ ಪ್ರಾಣಿ ಕಂಡುಬಂತು. ಈಲ್ ತರಹದ ಪ್ರಾಣಿಯ ಫೋಟೋಗಳನ್ನು ಅವರು ಕ್ಯಾಟ್‌ಸ್ಕಿಲ್ ಔಟ್‌ಡೋರ್ಸ್ ಫೇಸ್‌ಬುಕ್ ಗುಂಪಿನಲ್ಲಿ ಅವರು ಹಂಚಿಕೊಂಡಿದ್ದಾರೆ. ನ್ಯೂಸ್‌ವೀಕ್‌ನೊಂದಿಗೆ ಮಾತನಾಡುತ್ತಾ, ಒಸಿಂಕಿ ಅವರು, “ಇದು ನಾನು ಹಿಡಿದ … Continued

ಮಾರ್ಕ್ ಜುಕರ್‌ಬರ್ಗ್ ನಾಯಕತ್ವದಲ್ಲಿ ನಂಬಿಕೆ ಇದೆಯೇ? ಇಲ್ಲ ಎಂದು ಹೇಳಿದ 70% ಮೆಟಾ ಉದ್ಯೋಗಿಗಳು

ಮೆಟಾ ನಡೆಸಿದ ಉದ್ಯೋಗಿಗಳ ಸಮೀಕ್ಷೆಯು ಕೇವಲ 26 ಪ್ರತಿಶತದಷ್ಟು ಸಿಬ್ಬಂದಿ ಮಾತ್ರ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರ ನಾಯಕತ್ವದಲ್ಲಿ ನಂಬಿಕೆ ಹೊಂದಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್‌ನಲ್ಲಿ ವರದಿ ಮಾಡಿದೆ. ಆಂತರಿಕ ಸಮೀಕ್ಷೆಯು ಕಳೆದ ವರ್ಷ ಅಕ್ಟೋಬರ್‌ನಿಂದ ಶೇಕಡಾ ಐದು ಕುಸಿತವನ್ನು ಗುರುತಿಸಿದೆ. ಔಟ್ಲೆಟ್ ಪ್ರಕಾರ, ಕೇವಲ 43 ಪ್ರತಿಶತದಷ್ಟು ಉದ್ಯೋಗಿಗಳು ಮೆಚ್ಚುಗೆಯನ್ನು ಅನುಭವಿಸಿದ್ದಾರೆ, ಅಕ್ಟೋಬರಿನಲ್ಲಿ 58 … Continued

ಮಹಾರಾಷ್ಟ್ರದಲ್ಲಿ ವಾರ್ಕರಿ ಯಾತ್ರಿಕರ ಮೇಲೆ ಪೊಲೀಸರಿಂದ ಲಾಠಿಚಾರ್ಜ್ : ವಿಪಕ್ಷಗಳ ಆರೋಪ ; ಆರೋಪ ತಳ್ಳಿಹಾಕಿದ ಫಡ್ನವಿಸ್

ಮುಂಬೈ: ಪಂಢರಪುರದ ದೇವಸ್ಥಾನಕ್ಕೆ ತೆರಳುತ್ತಿದ್ದ ವಾರಕರಿ ಭಕ್ತರ ಮೇಲೆ ಮಹಾರಾಷ್ಟ್ರ ಪೊಲೀಸರು ಭಾನುವಾರ ಪುಣೆ ಜಿಲ್ಲೆಯಲ್ಲಿ ಲಾಠಿ ಚಾರ್ಜ್ ಮಾಡಿದ್ದಾರೆ. ಮೆರವಣಿಗೆ ವೇಳೆ ಭಕ್ತರು ಪೊಲೀಸರೊಂದಿಗೆ ವಾಗ್ವಾದ ನಡೆಯಿತು ಎಂದು ಮೂಲಗಳು ತಿಳಿಸಿವೆ. ಅಳಂಡಿಯ ಶ್ರೀ ಕ್ಷೇತ್ರ ದೇವಸ್ಥಾನಕ್ಕೆ ಸಮಾರಂಭವೊಂದಕ್ಕೆ ಪ್ರವೇಶ ಮಾಡುವ ವೇಳೆ ವಾಗ್ವಾದ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪೊಲೀಸರ ಪ್ರಕಾರ, … Continued

ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದ ನೊವಾಕ್ ಜೊಕೊವಿಕ್ : ಪುರುಷರ ಸಿಂಗಲ್ಸ್ ನಲ್ಲಿ 23 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ಏಕೈಕ ಆಟಗಾರ

ಪ್ಯಾರಿಸ್‌ : ನೊವಾಕ್ ಜೊಕೊವಿಕ್ ಅವರು ಭಾನುವಾರ (ಜೂನ್ 11) ಪುರುಷರ ಸಿಂಗಲ್ಸ್‌ನಲ್ಲಿ ಫ್ರೆಂಚ್ ಓಪನ್ ಟಿನಿಸ್‌ ಪ್ರಶಸ್ತಿ ಗೆದ್ದಿದ್ದಾರೆ ಹಾಗೂ ಆ ಮೂಲಕ 23 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ಮೊದಲ ವ್ಯಕ್ತಿ ಎಂಬ ದಾಖಲೆಯನ್ನೂ ಬರೆದಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವದ ನಂ. 3 ಆಟಗಾರ ನೊವಾಕ್ ಜೊಕೊವಿಕ್ ಕೋರ್ಟ್ ಫಿಲಿಪ್-ಚಾಟ್ರಿಯರ್‌ನಲ್ಲಿ ನಡೆದ ಪುರುಷರ … Continued