ಹೊಳೆಗೆ ಬಿದ್ದ ಕಾರು : ಓರ್ವ ಸಾವು, ಮತ್ತೋರ್ವ ಗಂಭೀರ

ಮಂಗಳೂರು : ಚಾಲಕನ ನಿಯಂತ್ರಣ ತಪ್ಪಿದ ಕಾರು ಸೇತುವೆಗೆ ಡಿಕ್ಕಿ ಹೊಡೆದು ಕೆಳಗೆ ನೀರಿಗೆ ಬಿದ್ದು ಓರ್ವ ಮೃತಪಟ್ಟು ಇನ್ನೋರ್ವ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕು ಶಿರಾಡಿ ಗ್ರಾಮದ ಅಡ್ಡಹೊಳೆ ಎಂಬಲ್ಲಿ ಸಂಭವಿಸಿದೆ. ಕಾರಿನಲ್ಲಿದ್ದ ತಮಿಳುನಾಡಿನ ಹೊಸೂರು ಕೃಷ್ಣಗಿರಿ ಮೂಲದ ಹರಿಪ್ರಸಾದ (44) ಎಂಬವರ ಮೃತಪಟ್ಟಿದ್ದು, ಗಾಯಗೊಂಡ … Continued

ನಟ-ನಿರ್ದೇಶಕ ಮಂಗಲ್ ಧಿಲ್ಲೋನ್ ನಿಧನ

ಮುಂಬೈ: ಹಿರಿಯ ಪಂಜಾಬಿ ಮತ್ತು ಹಿಂದಿ ಚಲನಚಿತ್ರ ನಟ-ಕಮ್-ನಿರ್ದೇಶಕ ಮಂಗಲ್ ಧಿಲ್ಲೋನ್ ದುರದೃಷ್ಟವಶಾತ್ ಇನ್ನಿಲ್ಲ. ಅವರು ಕ್ಯಾನ್ಸರ್‌ ಜೊತೆ ಸುದೀರ್ಘ ಹೋರಾಟದ ನಂತರ ನಿಧನರಾದರು. ಸಾವಿಗೂ ಮುನ್ನ ಮಂಗಲ್ ಅವರನ್ನು ಲುಧಿಯಾನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಅಂತಿಮ ಸಂಸ್ಕಾರದ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. ಮಂಗಲ್ ಧಿಲ್ಲೋನ್ ಪಂಜಾಬ್‌ನ ಫರೀದ್‌ಕೋಟ್ ಜಿಲ್ಲೆಯ ಸಿಖ್ ಕುಟುಂಬದಲ್ಲಿ ಜನಿಸಿದರು. … Continued

ಧಾರವಾಡ : ರಸ್ತೆ ಅಪಘಾತ ಮೂವರ ಸಾವು

ಧಾರವಾಡ: ಇಂದು, ಭಾನುವಾರ ಬೆಳಿಗಿನ ಜಾವ ಲಾರಿ ಹಾಗೂ ಕಾರ್ ಮಧ್ಯೆ ಸಂಭವಿಸಿದ ಡಿಕ್ಕಿಯಲ್ಲಿ ಮೂವರು ಸಾವಿಗೀಡಾಗಿರುವ ಘಟನೆ ಧಾರವಾಡದ ರಾಷ್ಟ್ರೀಯ ಹೆದ್ದಾರಿ 4ರ ಹಳಿಯಾಳ ಸೇತುವೆ ಬಳಿ ನಡೆದ ವರದಿಯಾಗಿದೆ. ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟಿದ್ದು, ಇನ್ನೋರ್ವ ವ್ಯಕ್ತಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರನ್ನು ಕೆ.ಆರ್.ನಗರದ ಪುಟ್ಟೇಗೌಡ(33), ಹೊಳೆನರಸಿಪುರದ ದೀಪಕ( 24) ಹಾಗೂ ಹೊಳೆನರಸಿಪುರದ ಚಂದನಗೌಡ (22) … Continued

ಜಮ್ಮು-ಕಾಶ್ಮೀರದ ಆರ್ಟಿಕಲ್ 370 ರದ್ದು ಮಾಡುವಾಗ ಕೇಜ್ರಿವಾಲ್‌ ಎಲ್ಲಿದ್ದರು..? ; ಒಮರ್‌ ಅಬ್ದುಲ್ಲಾ ವಾಗ್ದಾಳಿ

ನವದೆಹಲಿ: 2024 ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಮತ್ತು ಬಿಜೆಪಿ ವಿರುದ್ಧ ಹೋರಾಡಲು ತಂತ್ರವನ್ನು ರೂಪಿಸಲು ವಿರೋಧ ಪಕ್ಷಗಳು ಜೂನ್ 23 ರಂದು ಪಾಟ್ನಾದಲ್ಲಿ ಒಗ್ಗೂಡಲಿವೆ. ಅದಕ್ಕೂ ಕೆಲವು ದಿನಗಳ ಮೊದಲು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಓಮರ್ ಅಬ್ದುಲ್ಲಾ ಅವರು ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳ ಮೈತ್ರಿಕೂಟದ ಭಾಗವಾಗದಿರುವ … Continued

ಫ್ರೆಂಚ್ ಓಪನ್ 2023 : ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದ ಇಗಾ ಸ್ವಿಯಾಟೆಕ್

ಪ್ಯಾರಿಸ್‌: ಶನಿವಾರ ನಡೆದ 2023 ರ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಶ್ರೇಯಾಂಕ ರಹಿತ ಕರೋಲಿನಾ ಮುಚೋವಾ ಅವರನ್ನು ಸೋಲಿಸುವ ಮೂಲಕ ವಿಶ್ವದ ನಂಬರ್ ಒನ್ ಆಟಗಾರ್ತಿ ಹಾಗೂ ಹಾಲಿ ಚಾಂಪಿಯನ್‌ ಇಗಾ ಸ್ವಿಯಾಟೆಕ್ ತನ್ನ ಫ್ರೆಂಚ್‌ ಓಪನ್‌ ಟೆನಿಸ್‌ನ ರೋಲ್ಯಾಂಡ್ ಗ್ಯಾರೋಸ್ ಕಿರೀಟವನ್ನು ಮತ್ತೆ ಗೆದ್ದಿದ್ದಾರೆ. 22 ವರ್ಷದ ಸ್ವಿಯಾಟೆಕ್ ಅವರು ಜೆಕ್ ಗಣರಾಜ್ಯದ ಮುಚೋವಾ … Continued

ಮದುವೆಯ ನಂತರ ಮಾವ ವಿಧಿಸಿದ ಷರತ್ತಿಗೆ ದಂಗಾಗಿ ಮದುಮಗಳನ್ನೇ ಬಿಟ್ಟು ಹೋದ ವರ…!

ಝಾನ್ಸಿ: ಮದುವೆಯ ನಂತರ ವಧುವಿನ ತಂದೆ ವಿಧಿಸಿದ ಮೂರು ಷರತ್ತಿನಿಂದಾಗಿ ವಿಧಿವತ್ತಾಗಿ ನಡೆದ ಮದುವೆಯೇ ಮುರಿದುಬಿದ್ದಿದೆ…! ವಧುವನ್ನು ಗಂಡನ ಮನೆಗೆ ಕಳುಹಿಸುವ ಸಂದರ್ಭದಲ್ಲಿ ವಧುವಿನ ತಂದೆ ಮೂರು ಷರತ್ತುಗಳನ್ನು ವಿಧಿಸಿದ್ದು ಇಷ್ಟೆಲ್ಲ ರಾದ್ದಾಂತಕ್ಕೆ ಕಾರಣವಾಯ್ತು.. ಈ ಘಟನೆ ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯಲ್ಲಿ ನಡೆದಿದೆ. ಈ ಷರತ್ತುಗಳನ್ನು ಕೇಳಿ ಮದುಮಗನಷ್ಟೇ ಅಲ್ಲ, ಆತನ ಕುಟುಂಬದವರು ಹಾಗೂ … Continued

ಉಚಿತ ಪ್ರಯಾಣದ ಬಸ್‌ ಗಳಿಗೆ ಸ್ಟಿಕ್ಕರ್ ಅಂಟಿಸುವ ನಿರ್ಧಾರ: ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ

ಬೆಂಗಳೂರು : ಉಚಿತ ಪ್ರಯಾಣದ ಬಸ್ ಗಳಿಗೆ ಸ್ಟಿಕ್ಕರ್ ಅಂಟಿಸುವುದಾಗಿ ಹೇಳಿರುವ ರಾಜ್ಯ ಸರ್ಕಾರದ ಮತ್ತೊಂದು ಷರತ್ತಿನ ಬಗ್ಗೆ ರಾಜ್ಯ ಬಿಜೆಪಿ ಘಟಕ ಕಿಡಿಕಾರಿದೆ. ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, ಉಚಿತ ಪ್ರಯಾಣದ ಬಸ್‌ಗಳಿಗೆ ಸ್ಟಿಕ್ಕರ್ ಅಂಟಿಸುವ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ. ಸಿದ‍್ಧರಾಮಯ್ಯನವರೇ, ಬಸ್ ಹತ್ತುವ ಮಹಿಳೆಯರು ಬಸ್ ನಂಬರ್ … Continued

ಹುಬ್ಬಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್ ವಿಸ್ತರಣೆಗೆ 273 ಕೋಟಿ ರೂ.ನೀಡಲು ಕೇಂದ್ರ ಅನುಮೋದನೆ: ಸಚಿವ ಪ್ರಹ್ಲಾದ ಜೋಶಿ

ಹುಬ್ಬಳ್ಳಿ: ಹುಬ್ಬಳ್ಳಿ ಏರ್​​ಪೋರ್ಟ್ (Hubballi Airport)​ ಮೇಲ್ದರ್ಜೆಗೆ ಏರಿಸಲು ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, 273 ಕೋಟಿ ರೂ. ಬಿಡುಗಡೆಗೆ ಒಪ್ಪಿಗೆ ಸೂಚಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ. ಒಮ್ಮೆಲೇ 1,400 ಪ್ರಯಾಣಿಕರನ್ನು ನಿಭಾಯಿಸುವ ಯೋಜನೆ ಜನವರಿಯಲ್ಲಿ ಆರಂಭವಾಗುವ ಸಾಧ್ಯತೆ ಇದ್ದು, ಎರಡು ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ … Continued

ತಮ್ಮ ಸಮಸ್ಯೆಗಳು ಪರಿಹಾರವಾದಾಗ ಮಾತ್ರ ಕುಸ್ತಿಪಟುಗಳು ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸ್ತಾರೆ: ಸಾಕ್ಷಿ ಮಲಿಕ್

ನವದೆಹಲಿ: ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ತಮ್ಮ ಪ್ರತಿಭಟನೆ ಉಲ್ಲೇಖಿಸಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿದ ನಂತರವೇ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುವುದಾಗಿ ಕುಸ್ತಿಪಟು ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಮತ್ತು ವಿನೇಶ್ ಫೋಗಟ್ ಸೇರಿದಂತೆ ಕುಸ್ತಿಪಟುಗಳು ಶನಿವಾರ ಹೇಳಿದ್ದಾರೆ. ಈ ಎಲ್ಲಾ ಸಮಸ್ಯೆಗಳು ಪರಿಹಾರವಾದಾಗ ಮಾತ್ರ ನಾವು ಏಷ್ಯನ್ ಗೇಮ್ಸ್‌ನಲ್ಲಿ … Continued

ಮೇಕೆಗೆ ಸೊಪ್ಪು ತರಲು ಹೋಗಿದ್ದ ಅಣ್ಣ-ತಮ್ಮ ನೀರುಪಾಲು

ತುಮಕೂರು: ಮೇಕೆಗೆ ಸೊಪ್ಪು ತರಲು ಹೋಗಿದ್ದ ಅಣ್ಣ ಮತ್ತು ತಮ್ಮ ಇಬ್ಬರು ಬಾವಿಗೆ ಬಿದ್ದು ಸಾವಿಗೀಡಾದ ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ದ್ವಾರನಕುಂಟೆಯಲ್ಲಿ ಘಟನೆ ನಡೆದ ವರದಿಯಾಗಿದೆ. ದ್ವಾರನಕುಂಟೆ ಗ್ರಾಮದ ಪ್ರಸನ್ನ (29) ಹಾಗೂ ಸತೀಶ(25) ಮೃತಪಟ್ಟ ಸಹೋದರರು ಎಂದು ಗುರುತಿಸಲಾಗಿದೆ. ಬಾವಿ ದಡದಲ್ಲಿ ಬೆಳೆದಿದ್ದ ಸೊಪ್ಪು ಕೊಯ್ಯುವಾಗ ಪ್ರಸನ್ನ ಎಂಬವರು ಕಾಲು ಜಾರಿ … Continued