ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಡ್ರಮ್‌ನಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣ: ಮೂವರ ಬಂಧನ

ಬೆಂಗಳೂರು: ರೈಲ್ವೆ ನಿಲ್ದಾಣದ ಮುಂದೆ ಡ್ರಮ್‌ನಲ್ಲಿ ಪತ್ತೆಯಾದ ಮಹಿಳೆಯ ಕೊಲೆ ಪ್ರಕರಣವನ್ನು ಬೇಧಿಸಿರುವ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ್ದಾರೆ. ಕೊಲೆಯಾದ ಮಹಿಳೆಯನ್ನು ಬಿಹಾರ ರಾಜ್ಯದ ಅರಾರಿಯಾ ಜಿಲ್ಲೆ ನಿವಾಸಿ ತಮನ್ನಾ(27) ಎಂದು ಗುರುತಿಸಲಾಗಿದೆ. ಈ ಸಂಬಂಧ ಬಿಹಾರ ಮೂಲದ ರಾಜ್ಯದ ಕಮಾಲ್(21), ತನ್ವೀರ್(28), ಶಾಕೀಬ್(25) ಬಂಧಿತ ಆರೋಪಿಗಳು. ಈ ಪ್ರಕರಣದಲ್ಲಿ ಉಳಿದ … Continued

ಜೈಲಿನಲ್ಲಿರುವ ಮನೀಶ್ ಸಿಸೋಡಿಯಾ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲು

ನವದೆಹಲಿ: ದೆಹಲಿ ಸರ್ಕಾರದ ‘ಫೀಡ್‌ಬ್ಯಾಕ್ ಯುನಿಟ್’ ಪ್ರಕರಣದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಇತರ ಐವರ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಎಫ್‌ಐಆರ್ ದಾಖಲಿಸಿದೆ. ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸೋಡಿಯಾ ಅವರನ್ನು ಫೆಬ್ರವರಿ 26 ರಂದು ಸಿಬಿಐ ಬಂಧಿಸಿತ್ತು. ಈಗ 2015 ರಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ)ದ … Continued

ಅಮೆರಿಕದ ಜಿಮ್‌ನಲ್ಲಿ ಪಂಜಾಬ್‌ ನಟನ ಮೇಲೆ ಚಾಕುವಿನಿಂದ ಹಲ್ಲೆ : ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆ

ನವದೆಹಲಿ : ಅಮೆರಿಕದ ಜಿಮ್‌ನಲ್ಲಿ ಪಂಜಾಬಿ ನಟ ಅಮನ್ ಧಲಿವಾಲ್ ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ. ಚಾಕು ದಾಳಿಯಲ್ಲಿ ನಟ ತೀವ್ರವಾಗಿ ಗಾಯಗೊಂಡಿದ್ದು, ದುಷ್ಕರ್ಮಿ ಆತನನ್ನು ಹಿಡಿದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಟ ಜಿಮ್‌ನಲ್ಲಿ ವ್ಯಾಯಾಮ ಮಾಡುವ ವೇಳೆ ದಾಳಿ ನಡೆದಿದೆ ಎಂದು ವರದಿಯಾಗಿದೆ. ಇಡೀ ಘಟನೆ ಸಿಸಿಟಿವಿ … Continued

ಭಾರತದಲ್ಲಿ ಒಂದು ದಿನದಲ್ಲಿ 754 ಹೊಸ ಕೋವಿಡ್ ಪ್ರಕರಣಗಳು ದಾಖಲು: ಇದು 4 ತಿಂಗಳಲ್ಲಿ ಅತಿ ಹೆಚ್ಚು ವರದಿ

ನವದೆಹಲಿ: ಗುರುವಾರ ನವೀಕರಿಸಿದ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ನಾಲ್ಕು ತಿಂಗಳ ನಂತರ ಒಂದೇ ದಿನದಲ್ಲಿ 700 ಕ್ಕೂ ಹೆಚ್ಚು ಕೋವಿಡ್‌-19 ಪ್ರಕರಣಗಳು ದಾಖಲಾಗಿವೆ. ಇದು ಸಕ್ರಿಯ ಪ್ರಕರಣಗಳನ್ನು 4,623 ಕ್ಕೆ ಒಯ್ದಿದೆ. ಕಳೆದ ವರ್ಷ ನವೆಂಬರ್ 12 ರಂದು ದೇಶದಲ್ಲಿ 734 ಪ್ರಕರಣಗಳು ದಾಖಲಾಗಿದ್ದವು. ಅದರ ನಂತರದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ … Continued

ಸಾರಿಗೆ ನೌಕರರ ವೇತನ ಶೇ.15ರಷ್ಟು ಹೆಚ್ಚಳ-ಕೆಪಿಟಿಸಿಎಲ್ ನೌಕರರ ವೇತನ ಶೇ.20ರಷ್ಟು ಹೆಚ್ಚಳಕ್ಕೆ ನಿರ್ಧಾರ, ಇಂದೇ ಆದೇಶ: ಸಿಎಂ ಬೊಮ್ಮಾಯಿ ಘೋಷಣೆ

ಬೆಂಗಳೂರು: ರಾಜ್ಯ ಸಾರಿಗೆ ಇಲಾಖೆಯ ನೌಕರರು ಹಾಗೂ ಕೆಪಿಟಿಸಿಎಲ್ ಮತ್ತು ಎಸ್ಕಾಂಗಳ ನೌಕರರ ವೇತನ ಹೆಚ್ಚಳಕ್ಕೆ ನಿರ್ಧಾರ ಕೈಗೊಳ್ಳಲಾಗಿದ್ದು, ಇಂದೇ ಈ ಬಗ್ಗೆ ಆದೇಶ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ವೇತನವನ್ನು ಶೇ.15 ರಷ್ಟು ಏರಿಕೆ ಮಾಡಲು ನಿರ್ಧಾರ ಮಾಡಲಾಗಿದೆ. ಹಾಗೂ ಕೆಪಿಟಿಸಿಎಲ್ ಮತ್ತು ಎಸ್ಕಾಂಗಳ ನೌಕರರ ವೇತನವನ್ನು ಶೇ.20 ರಷ್ಟು ಹೆಚ್ಚಳ … Continued

ಗುಜರಾತ್‌ನಲ್ಲಿ ಒಂದೇ ದಿನ 90 ಹೊಸ ಕೋವಿಡ್ -19 ಪ್ರಕರಣಗಳು ದಾಖಲು

ಗಾಂಧಿನಗರ : ಗುಜರಾತ್‌ನಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 90 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ ಎಂದು ಗುಜರಾತ್ ಮಾಹಿತಿ ಇಲಾಖೆ ಬುಧವಾರ ಹಂಚಿಕೊಂಡ ಪತ್ರಿಕಾ ಪ್ರಕಟಣೆ ತಿಳಿಸಿದೆ. ಸೋಮವಾರ 45 ಹೊಸ ಕೋವಿಡ್ 19 ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಮತ್ತೆ ಕೋವಿಡ್ 19 ಪ್ರಕರಣಗಳು ಪತ್ತೆಯಾಗಿವೆ. ಮಂಗಳವಾರ 58 ಪ್ರಕರಣಗಳಿದ್ದು, ಬುಧವಾರ ಪ್ರಕರಣಗಳ … Continued

ಕರ್ನಾಟಕ ಚುನಾವಣೆ 2023: ನಾಳಿನ ಸಿಇಸಿ ಸಭೆಯ ನಂತರ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಅಂತಿಮಗೊಳಿಸುವ ಸಾಧ್ಯತೆ

ನವದೆಹಲಿ: ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿಯು ಮಾರ್ಚ್ 17, ಶುಕ್ರವಾರ ದೆಹಲಿಯಲ್ಲಿ ಸಭೆ ಸೇರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಕರ್ನಾಟಕದಲ್ಲಿ ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾರ್ಚ್ 20 ರಂದು ಬೆಳಗಾವಿಗೆ ಭೇಟಿ ನೀಡಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ.ಕಾಂಗ್ರೆಸ್ … Continued

ಎರಿಕ್ ಗಾರ್ಸೆಟ್ಟಿ ಭಾರತಕ್ಕೆ ಅಮೆರಿಕದ ನೂತನ ರಾಯಭಾರಿ

ನವದೆಹಲಿ: ಅಮೆರಿಕ ಅಂತಿಮವಾಗಿ ಮಾಜಿ ಲಾಸ್ ಏಂಜಲೀಸ್ ಮೇಯರ್ ಮತ್ತು ಅಧ್ಯಕ್ಷ ಜೋ ಬೈಡನ್‌ ಅವರ ನಿಕಟವರ್ತಿಯಾದ ಎರಿಕ್ ಗಾರ್ಸೆಟ್ಟಿ ಅವರನ್ನು ಭಾರತಕ್ಕೆ ತನ್ನ ರಾಯಭಾರಿಯನ್ನು ಘೋಷಿಸಿದೆ. ಅವರ ನಾಮನಿರ್ದೇಶನದ ಮೇಲಿನ ಚರ್ಚೆಯನ್ನು ಸೀಮಿತಗೊಳಿಸುವ ಕ್ಲೋಚರ್ ಮೋಷನ್ ಮೇಲೆ ಬುಧವಾರ ಸೆನೆಟ್ ಮತ ಚಲಾಯಿಸಿದ ನಂತರ ಈ ಬೆಳವಣಿಗೆಯು ಬಂದಿದೆ. ಬುಧವಾರ ಬೆಳಿಗ್ಗೆ, ಗಾರ್ಸೆಟ್ಟಿ ತನ್ನ … Continued

ಕಾರವಾರ, ಹಾವೇರಿ, ರಾಣೆಬೆನ್ನೂರು ಸೇರಿ 34 ನಗರಗಳಲ್ಲಿ ಜಿಯೋ ಟ್ರೂ 5ಜಿ ಸೇವೆ ಆರಂಭ

ಬೆಂಗಳೂರು : ರಿಲಯನ್ಸ್ ಜಿಯೋ ಕಾರವಾರ, ರಾಣೆಬೆನ್ನೂರು, ಹಾವೇರಿಯಲ್ಲಿ ಜಿಯೋ ಟ್ರೂ 5ಜಿ ಸೇವೆ ಗುರುವಾರ ಮಾರ್ಚ್ 15ರಿಂದ ಆರಂಭಿಸಿದೆ. ಕರ್ನಾಟಕದ ಈ 3 ನಗರ ಸೇರಿದಂತೆ ದೇಶದ ಒಟ್ಟು 34 ಹೊಸ ನಗರಗಳಲ್ಲಿ ತನ್ನ ಟ್ರೂ 5G ಸೇವೆಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿತು. ಇದರೊಂದಿಗೆ ದೇಶದ 365 ನಗರಗಳಲ್ಲಿ ಜಿಯೋ ಟ್ರೂ 5ಜಿ ಸೇವೆಗಳು ಲಭ್ಯ … Continued

ಮಡಗಾಸ್ಕರ್‌ನಿಂದ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಿ 34 ಮಂದಿ ಸಾವು

ಅಂಟಾನಾನರಿವೊ (ಮಡಗಾಸ್ಕರ್): ಮಯೊಟ್ಟೆಗೆ ತೆರಳಲು ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಬೋಟ್‌ ಮುಳುಗಿದ ನಂತರ ಮಡಗಾಸ್ಕರ್‌ನ ಅಧಿಕಾರಿಗಳು ಹಿಂದೂ ಮಹಾಸಾಗರದಿಂದ 34 ಮೃತದೇಹಗಳನ್ನು ಹೊರತೆಗೆದಿದ್ದಾರೆ. ಮಲಗಾಸಿ ಕಡಲ ಅಧಿಕಾರಿಗಳು ಪ್ರಕಾರ, 58 ಪ್ರಯಾಣಿಕರನ್ನು ಹೊತ್ತ ಬೋಟ್‌ ಅಧಿಕೃತ ವಲಸೆ ಅಥವಾ ಕಸ್ಟಮ್ಸ್ ನಿಯಂತ್ರಣಗಳ ಮೂಲಕ ಹೋಗದೆ ರಹಸ್ಯವಾಗಿ ಸಾಗಿತು ಮತ್ತು ಮಡಗಾಸ್ಕರ್‌ನ ವಾಯುವ್ಯ ಕರಾವಳಿಯಲ್ಲಿ ಶನಿವಾರ ತಡರಾತ್ರಿ ಮುಳುಗಿತು. … Continued