ಮೇ 3ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹ

ಉಜಿರೆ: ಕರಾವಳಿಯ ಪ್ರಸಿದ್ಧ ಐತಿಹಾಸಿಕ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮೇ 3ರಂದು ಸಂಜೆ 6:40ಕ್ಕೆ ಗೋಧೂಳಿ ಲಗ್ನದಲ್ಲಿ 51ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ. ಸಾಮೂಹಿಕ ವಿವಾಹದಲ್ಲಿ ಭಾಗ ವಹಿಸಲು ಬಯಸುವವರು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ಸಾಮೂಹಿಕ ವಿವಾಹದಲ್ಲಿ ಎರಡನೇ ಮದುವೆಗೆ ಅವಕಾಶವಿಲ್ಲ. ವಧುವಿಗೆ ಸೀರೆ, ರವಿಕೆ ಕಣ, ಮಂಗಳಸೂತ್ರ, ವರನಿಗೆ ಧೋತಿ, ಶಾಲು … Continued

ಅತ್ಯಾಚಾರ ಪ್ರಕರಣದಲ್ಲಿ ಅಸಾರಾಂ ಬಾಪು ದೋಷಿ ಎಂದು ಗಾಂಧಿನಗರ ನ್ಯಾಯಾಲಯ ತೀರ್ಪು

ದಶಕದಷ್ಟು ಹಳೆಯದಾದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ದೋಷಿ ಎಂದು ಗುಜರಾತ್ ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ. ಸುಮಾರು 10 ವರ್ಷಗಳ ಹಿಂದೆ ಅಹಮದಾಬಾದ್‌ನ ಮೊಟೆರಾದಲ್ಲಿರುವ ಅವರ ಆಶ್ರಮದಲ್ಲಿದ್ದಾಗ ಸೂರತ್ ಮೂಲದ ಮಹಿಳೆಯೊಬ್ಬರು ತಮ್ಮ ಮೇಲೆ ಪದೇ ಪದೇ ಅತ್ಯಾಚಾರವೆಸಗಿದ್ದಾರೆ ಎಂದು ಅಸಾರಾಂ ಬಾಪು ಆರೋಪಿಸಿದ್ದರು. ಇಂದು, ಸೋಮವಾರ ಅಸಾರಾಂ … Continued

ತುಳುವಿಗೆ ರಾಜ್ಯದ ಎರಡನೇ ಅಧಿಕೃತ ಭಾಷೆ ಸ್ಥಾನಮಾನ : ಸಮಿತಿ ರಚನೆ

ಬೆಂಗಳೂರು: ತುಳು ಭಾಷೆಯನ್ನು ಕರ್ನಾಟಕದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವ ಕುರಿತು ಅಧ್ಯಯನ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಕುರಿತು ಸೋಮವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲಕುಮಾರ ಟ್ವೀಟ್ ಮಾಡಿದ್ದು, ‘ತುಳು ಭಾಷೆಯನ್ನು ಕರ್ನಾಟಕದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವ ಸಂಬಂಧ, ಅಧ್ಯಯನ ನಡೆಸಿ ಸೂಕ್ತ ಶಿಫಾರಸ್ಸಿನೊಂದಿಗೆ ವರದಿ ನೀಡಲು ಡಾ. … Continued

ಡಿಕೆಶಿ ವಿರುದ್ಧ ರಮೇಶ ಜಾರಕಿಹೊಳಿ ಸಮರ: ಯುವತಿ ಸೇರಿ ಸಿಡಿ ಗ್ಯಾಂಗ್ ಬಂಧಿಸಲು ಒತ್ತಾಯ

ಬೆಳಗಾವಿ: ರಮೇಶ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ. ಸಿಡಿ ವಿಚಾರದಲ್ಲಿ ಷಡ್ಯಂತ್ರ ರೂಪಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ಆಶ್ರಯದಲ್ಲಿ ಆ ಯುವತಿ ಬೆಂಗಳೂರಿನಲ್ಲಿ ನೆಲೆಸಿದ್ದು, ಯುವತಿ ಸೇರಿದಂತೆ ಸಿಡಿ ಗ್ಯಾಂಗ್ ಅನ್ನು ಬಂಧಿಸಬೇಕು ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಆಗ್ರಹಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, … Continued

ಪ್ರಾಥಮಿಕ ಶಾಲಾ ಶಿಕ್ಷಕರ ತಾತ್ಕಾಲಿಕ ಆಯ್ಕೆ ಪಟ್ಟಿ ರದ್ದು: ಹೈಕೋರ್ಟ್ ಆದೇಶ

ಬೆಂಗಳೂರು:15 ಸಾವಿರ ಪದವೀಧರ ಶಾಲಾ ಶಿಕ್ಷಕರ ನೇಮಕಾತಿಗೆ (Teachers Recruitment) 1:1 ತಾತ್ಕಾಲಿಕ ಆಯ್ಕೆ ಪಟ್ಟಿಗೆ ತಡೆಯಾಜ್ಞೆ ನೀಡಿದ್ದ ಹೈಕೋರ್ಟ್, ಈಗ ಆ ಪಟ್ಟಿ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ 15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ 1:1 ಅನುಪಾತದಲ್ಲಿ ‘ತಾತ್ಕಾಲಿಕ ಆಯ್ಕೆ’ ಪಟ್ಟಿ ಬಿಡುಗಡೆ ಮಾಡಿತ್ತು. ಆದರೆ, ಇಂದು … Continued

ಪಾಕಿಸ್ತಾನದ ಪೇಶಾವರ ಮಸೀದಿಯಲ್ಲಿ ಸ್ಫೋಟದಲ್ಲಿ 28 ಸಾವು, 150 ಮಂದಿ ಗಾಯ

ಪಾಕಿಸ್ತಾನದ ಉತ್ತರ ನಗರವಾದ ಪೇಶಾವರದಲ್ಲಿರುವ ಮಸೀದಿಯೊಂದರಲ್ಲಿ ಸೋಮವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 28 ಜನರು ಮೃತಪಟ್ಟಿದ್ದಾರೆ ಮತ್ತು 150 ಜನರು ಗಾಯಗೊಂಡಿದ್ದಾರೆ. ಶಂಕಿತ ಆತ್ಮಾಹುತಿ ದಾಳಿಯಿಂದ ಸ್ಫೋಟ ಸಂಭವಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಪೇಶಾವರದ ಪೊಲೀಸ್ ಲೈನ್ಸ್ ಪ್ರದೇಶದ ಬಳಿ ಮಧ್ಯಾಹ್ನ 1:40 ರ ಸುಮಾರಿಗೆ ಮಧ್ಯಾಹ್ನದ ಪ್ರಾರ್ಥನೆಯ ಸಮಯದಲ್ಲಿ ಮಾರಣಾಂತಿಕ ಸ್ಫೋಟ … Continued

ಆಸ್ಟ್ರೇಲಿಯಾದಲ್ಲಿ ತ್ರಿವರ್ಣ ಧ್ವಜ ಹಿಡಿದ ಭಾರತೀಯರ ಮೇಲೆ ದೊಣ್ಣೆ-ಕತ್ತಿ ಹಿಡಿದು ದಾಳಿ ಮಾಡಿದ ಖಾಲಿಸ್ತಾನ್ ಪರ ಗುಂಪು

ನವದೆಹಲಿ; ಜನವರಿ 29, ಭಾನುವಾರದಂದು, ಭಾರತೀಯ ಆಸ್ಟ್ರೇಲಿಯನ್ನರು ಭಾರತೀಯ ತ್ರಿವರ್ಣ ಧ್ವಜ ಹಿಡಿದು ಪ್ರದರ್ಶನ ನಡೆಸುತ್ತಿದ್ದಾಗ ಖಾಲಿಸ್ತಾನ್‌  ಪರ ಗುಂಪು ದೊಣ್ಣೆ ಹಾಗ ಕತ್ತಿಗಳಿಂದ ದಾಳಿ ಮಾಡಿದ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ. ದೇಶದಲ್ಲಿ ಹೆಚ್ಚುತ್ತಿರುವ ಖಾಲಿಸ್ತಾನ್ ಪರ ಚಟುವಟಿಕೆಗಳ ವಿರುದ್ಧ ಮೆಲ್ಬೋರ್ನ್‌ನ ಫೆಡರೇಶನ್ ಸ್ಕ್ವೇರ್‌ನಲ್ಲಿ ಪ್ರತಿಭಟನೆ ನಡೆಸುವುದಾಗಿ ಭಾರತೀಯ ಆಸ್ಟ್ರೇಲಿಯನ್ನರು ವಿಕ್ಟೋರಿಯಾ ಪೊಲೀಸರಿಗೆ … Continued

ಖಾಸಗಿ ಬಸ್-ಬೈಕ್‌ ಡಿಕ್ಕಿ: ತಂದೆ-ಮಗಳು ಸಾವು

ತುಮಕೂರು: ಖಾಸಗಿ ಬಸ್ ಬೈಕ್‌ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ತಂದೆ-ಮಗಳು ಮೃತಪಟ್ಟ ಘಟನೆ ಭಾನುವಾರ (ಜನವರಿ 29) ಹೆಬ್ಬೂರಿನ ಬನ್ನಿಮರದಕಟ್ಟೆ ಬಳಿ ಸಂಭವಿಸಿದೆ. ಮೃತರನ್ನು ತಿರುಮಲೇಗೌಡ (50), ಚಂದನ (20) ಎಂದು ಗುರುತಿಸಲಾಗಿದೆ. ಅಪಘಾತದ ಸ್ಥಳದಲ್ಲೇ ತಂದೆ ತಿರುಮಲೇಗೌಡ ಮೃತಪಟ್ಟಿದ್ದು, ಪುತ್ರಿ ಚಂದನಾ ಅವರಿಗೆ ಕುಣಿಗಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ತುಮುಕೂರು ಆಸ್ಪತ್ರೆಗೆ ಕರೆದೊಯ್ಯುವಾಗ … Continued

ಬಸ್ ನಿಲ್ಲಿಸಿ ಕೆರೆಗೆ ಹಾರಿ ಮುಳುಗುತ್ತಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ರಕ್ಷಿಸಿದ ಕೆಎಸ್‌ಆರ್‌ಟಿಸಿ ಬಸ್‌ ಚಾಲಕ..!

ತುಮಕೂರು : ಕೆರೆಯಲ್ಲಿ ಮುಳುಗುತ್ತಿದ್ದ ಇಬ್ಬರು ಬಾಲಕಿಯರನ್ನು ರಕ್ಷಿಸಲು ಕೆಎಸ್‌ಆರ್‌ಟಿಸಿ ಬಸ್‌ ಚಾಲಕನೊಬ್ಬ ಬಸ್‌ ನಿಲ್ಲಿಸಿ ಕೆರೆಗೆ ಹಾರಿ ಅವರನ್ನು ರಕ್ಷಿಸಿದ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನಲ್ಲಿ ಭಾನುವಾರ ನಡೆದಿದೆ. ಶಿರಾ ತಾಲೂಕಿನ ಹಂದಿಕುಂಟೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆಕಸ್ಮಿಕವಾಗಿ ಕೆರೆಯಲ್ಲಿ ಕಾಲುಜಾರಿ ಬಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಇಬ್ಬರು ಬಾಲಕಿಯರನ್ನು … Continued

ಫೈನಲ್‌ನಲ್ಲಿ ಇಂಗ್ಲೆಂಡ್ ಸೋಲಿಸಿ ಚೊಚ್ಚಲ U19 ಮಹಿಳಾ T20 ವಿಶ್ವಕಪ್‌ ಚಾಂಪಿಯನ್ ಆದ ಭಾರತ

ನವದೆಹಲಿ: ಶಫಾಲಿ ವರ್ಮಾ ನಾಯಕತ್ವದ ಭಾರತ, ದಕ್ಷಿಣ ಆಫ್ರಿಕಾದಲ್ಲಿ ನಡೆದ U19 ಮಹಿಳಾ T20 ಕಪ್‌ನ ಉದ್ಘಾಟನಾ ಪಂದ್ಯಾವಳಿಯಲ್ಲಿ ವಿಶ್ವ ಕಪ್‌ ಗೆದ್ದು ಇತಿಹಾಸ ನಿರ್ಮಿಸಿದೆ. ಭಾನುವಾರ, ಜನವರಿ 29 ರಂದು ಪಾಚೆಫ್‌ಸ್ಟ್ರೂಮ್‌ನ ಸೆನ್ವೆಸ್ ಪಾರ್ಕ್‌ನಲ್ಲಿ ನಡೆದ ಫೈನಲ್‌ನಲ್ಲಿ ಭಾರತವು ಗ್ರೇಸ್ ಸ್ಕ್ರಿವೆನ್ಸ್‌ ನಾಯಕತ್ವದ ಇಂಗ್ಲೆಂಡ್ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿತು. ಮೊದಲು ಫೀಲ್ಡಿಂಗ್ ಆಯ್ದುಕೊಂಡ … Continued