ಮೂವರು ಮಕ್ಕಳನ್ನು ನೀರಿನ ಸಂಪ್‌ ಗೆ ಎಸೆದು ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ

ವಿಜಯಪುರ : ಜಿಲ್ಲೆಯ ತಿಕೋಟಾ ತಾಲೂಕಿನ ಜಾಲಗೇರಿ ಗ್ರಾಮದ ಸಮೀಪ ವಿಠ್ಠಲವಾಡಿ ತಾಂಡಾದಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮೂವರು ಮಕ್ಕಳನ್ನು ನೀರಿನ ಸಂಪ್‌ಗೆ ಎಸೆದು ತಾನೂ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಇಂದು, ಭಾನುವಾರ ಬೆಳಗ್ಗೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆ (ತಾಯಿ)ಯನ್ನು ಗೀತಾ ರಾಮು ಚೌವ್ಹಾಣ (32), ಹಾಗೂ ಮಕ್ಕಳನ್ನು ಸೃಷ್ಟಿ (6) … Continued

ಅಂಚೆ ಇಲಾಖೆಯಿಂದ 40,889 ಹುದ್ದೆಗಳಿಗೆ ಅರ್ಜಿ ಆಹ್ವಾನ : ಕರ್ನಾಟಕದಲ್ಲೂ 3036 ಹುದ್ದೆಗಳಿಗೆ ನೇಮಕ: ಎಸ್‌ಎಸ್‌ಎಲ್‌ಸಿ ಆದವರು ಅರ್ಜಿ ಅರ್ಜಿ ಸಲ್ಲಿಸಬಹುದು

ಭಾರತೀಯ ಪೋಸ್ಟ್ ಗ್ರಾಮೀಣ ಡಾಕ್‌ ಸೇವಕ (ಜಿಡಿಎಸ್) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ದೇಶಾದ್ಯಂತ ಒಟ್ಟು 40,889 ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕದಲ್ಲಿ 3036 ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ (www.indiapostgdsonline.gov.in) ಹೋಗಿ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಗಳ ಮಾಹಿತಿ ಬ್ರಾಂಚ್ ಪೋಸ್ಟ್ ಮಾಸ್ಟರ್ (ಬಿಪಿಎಂ), ಅಸಿಸ್ಟೆಂಟ್ ಬ್ರಾಂಚ್ … Continued

ಚೀನಾ 1962ರಲ್ಲಿ ಭಾರತದ ಭೂಮಿ ಆಕ್ರಮಿಸಿಕೊಂಡಿತ್ತು: ರಾಹುಲ್ ಗಾಂಧಿ ವಿರುದ್ಧ ವಿದೇಶಾಂಗ ಸಚಿವ ಜೈಶಂಕರ್ ವಾಗ್ದಾಳಿ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಿದೇಶಾಂಗ ಸಚಿವ ಎಸ್ ಜೈಶಂಕರ್ ಶನಿವಾರ ವಾಗ್ದಾಳಿ ನಡೆಸಿದ್ದು, ಚೀನಾ ಆಕ್ರಮಿಸಿಕೊಂಡಿದೆ ಎಂದು ವಿರೋಧ ಪಕ್ಷದ ನಾಯಕರು ಹೇಳುವ ಭೂಮಿಯನ್ನು ವಾಸ್ತವವಾಗಿ 1962ರಲ್ಲಿ ಚೀನಾ ಆಕ್ರಮಿಸಿಕೊಂಡಿದೆ ಎಂದು ಹೇಳಿದ್ದಾರೆ. ಕೇವಲ ರಾಜಕೀಯಕ್ಕಾಗಿ ಕೆಲವರು ಉದ್ದೇಶಪೂರ್ವಕವಾಗಿ ಚೀನಾ ವಿಚಾರದಲ್ಲಿ ಜನರಿಗೆ ತಪ್ಪು ಮಾಹಿತಿ ಹರಡುತ್ತಿದ್ದಾರೆ. ಇದು ಇತ್ತೀಚೆಗೆ ನಡೆದಿದೆ … Continued

ಕನ್ನಡದ ಹಿರಿಯ ನಟ ಮನದೀಪ್ ರಾಯ್ ನಿಧನ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಮನ​ದೀಪ್ ರಾಯ್(Mandeep Roy) ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಕಾವಲ್​ಭೈರಸಂಧ್ರದ ನಿವಾಸದಲ್ಲಿ ರಾತ್ರಿ 1:45ರ ಸುಮಾರಿಗೆ ಅವರಿಗೆ ಹೃದಯಾಘಾತವಾಗಿತ್ತು. ಕಳೆದ ಡಿಸೆಂಬರ್​ನಲ್ಲಿ ಇವರಿಗೆ ಹೃದಯಾಘಾತವಾಗಿ ಬೆಂಗಳೂರಿನ ಶೇಷಾದ್ರಿಪುರದಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ರು. ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾದರೂ ಆಗಾಗ್ಗೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು, ಭಾನುವಾರ … Continued

ಕ್ಯಾಲಿಫೋರ್ನಿಯಾದಲ್ಲಿ ಮತ್ತೊಂದು ಗುಂಡಿನ ದಾಳಿ: ಮೂವರು ಸಾವು, 4 ಮಂದಿಗೆ ಗಾಯ- ಈ ತಿಂಗಳಲ್ಲಿ ಆರನೇ ದಾಳಿ

ನವದೆಹಲಿ: ಶನಿವಾರ ಮುಂಜಾನೆ ಲಾಸ್ ಏಂಜಲೀಸ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ ಮೂವರು ಸಾವಿಗೀಡಾಗಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ. ಈ ತಿಂಗಳು ಕ್ಯಾಲಿಫೋರ್ನಿಯಾದಲ್ಲಿ ಇದು ಕನಿಷ್ಠ ಆರನೇ ಸಾಮೂಹಿಕ ಗುಂಡಿನ ದಾಳಿಯಾಗಿದೆ. ಸಾರ್ಜೆಂಟ್ ಲಾಸ್ ಏಂಜಲೀಸ್ ಪೊಲೀಸ್ ಇಲಾಖೆಯ ಫ್ರಾಂಕ್ ಪ್ರಿಸಿಯಾಡೊ ಅವರು ಬೆವರ್ಲಿ ಕ್ರೆಸ್ಟ್‌ನಲ್ಲಿ ಬೆಳಗಿನ ಜಾವ 2:30ರ ನಂತರ ಗುಂಡಿನ ದಾಳಿ ನಡೆದಿದೆ … Continued

ಬೈಕ್‌ಗಳ ಮುಖಾಮುಖಿ ಡಿಕ್ಕಿ: ಸ್ಥಳದಲ್ಲಿಯೇ ಮೂವರು ಸಾವು

ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿ ಹಳ್ಳದ ಬಳಿಯಲ್ಲಿ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್‌ನಲ್ಲಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶನಿವಾರ ಸಂಜೆ ನಡೆದ ವರದಿಯಾಗಿದೆ. ರಾಯಬಾಗ- ಹಾರೂಗೇರಿ ಮುಖ್ಯರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು, ಎರಡೂ ಬೈಕ್‌ಗಳಲ್ಲಿ ಅತಿ ವೇಗವಾಗಿ ಬರುತ್ತಿತ್ತು ಹಾಗೂ ಬೈಕ್‌ ಸವಾರರು ಹೆಲ್ಮೆಟ್‌ ಧರಿಸಿರಲಿಲ್ಲ ಎಂದು ಹೇಳಲಾಗಿದೆ. ಡಿಕ್ಕಿಯ … Continued

ಎರಡು ಐಎಎಫ್ ಯುದ್ಧ ವಿಮಾನ ಪತನ: ಬೆಳಗಾವಿಯ ವಿಂಗ್ ಕಮಾಂಡರ್ ಹುತಾತ್ಮ

ಬೆಳಗಾವಿ : ತರಬೇತಿ ಕಾರ್ಯಾಚರಣೆಯಲ್ಲಿದ್ದ ಭಾರತೀಯ ವಾಯುಪಡೆ(ಐಎಎಫ್)ಯ ಎರಡು ಯುದ್ಧ ವಿಮಾನಗಳು ಶನಿವಾರ ಬೆಳಗ್ಗೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಪತನಗೊಂಡಿದ್ದು, ದುರಂತದಲ್ಲಿ ಬೆಳಗಾವಿ ಮೂಲದ ವಿಂಗ್ ಕಮಾಂಡರ್ ಹನುಮಂತ ರಾವ್ ರೇವಣ್ಣಸಿದ್ದಪ್ಪ ಸಾರಥಿ (34) ಹುತಾತ್ಮರಾಗಿದ್ದಾರೆ. ಯುದ್ಧ ವಿಮಾನ ಪತನಗೊಂಡ ನಂತರ ಹನುಮಂತ ರಾವ್ ಸಾರಥಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದು, ಇತರ ಇಬ್ಬರು ಪೈಲಟ್‌ಗಳು (ಸುಖೋಯ್ … Continued

ಪ್ರಧಾನಿ ಮೋದಿ ಕುರಿತು ಬಿಬಿಸಿ ಸರಣಿ ವಿವಾದ : ಬ್ರಿಟೀಷರ ದೌರ್ಜನ್ಯದ ಕುರಿತು ಬಿಬಿಸಿ ಸಾಕ್ಷ್ಯಚಿತ್ರ ಯಾಕೆ ಮಾಡಿಲ್ಲ-ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಪ್ರಶ್ನೆ

ನವದೆಹಲಿ: ಗುಜರಾತ್ ಗಲಭೆ ಕುರಿತು ಬಿಬಿಸಿ ಸಾಕ್ಷ್ಯಚಿತ್ರವನ್ನು ನಿರ್ಮಿಸಿದವರು ಬ್ರಿಟಿಷರ ದೌರ್ಜನ್ಯದ ಬಗ್ಗೆ ಏಕೆ ಸರಣಿ ಮಾಡಲಿಲ್ಲ ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಪ್ರಶ್ನಿಸಿದ್ದಾರೆ. ಭಾರತವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ವಿದೇಶಿ ಸಾಕ್ಷ್ಯಚಿತ್ರ ತಯಾರಕರು “ನಿರಾಶೆ ಅನುಭವಿಸುತ್ತಿದ್ದಾರೆ” ಎಂದು ಅವರು ಹೇಳಿದರು. “ಭಾರತವು ಪ್ರಪಂಚದಾದ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಆದ್ದರಿಂದ ಈ ಜನರು ನಿರಾಶೆ … Continued

ರಾಷ್ಟ್ರಪತಿ ಭವನದ ಐತಿಹಾಸಿಕ ಮೊಘಲ್ ಉದ್ಯಾನವನಕ್ಕೆ ‘ಅಮೃತ ಉದ್ಯಾನ’ ಎಂದು ಮರುನಾಮಕರಣ ಮಾಡಿದ ಸರ್ಕಾರ

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿರುವ ಮೊಘಲ್ ಗಾರ್ಡನ್ಸ್ ಹೆಸರನ್ನು ಕೇಂದ್ರ ಸರ್ಕಾರ ಶನಿವಾರ ಬದಲಾವಣೆ ಮಾಡಿದ್ದು, ಅದಕ್ಕೆ ‘ಅಮೃತ ಉದ್ಯಾನ’ ಎಂದು ಮರುನಾಮಕರಣ ಮಾಡಿದೆ. ಭಾರತದ ಸ್ವಾತಂತ್ರ್ಯದ 75 ವರ್ಷಗಳನ್ನು ಗುರುತಿಸುವ ‘ಅಮೃತ ಮಹೋತ್ಸವ’ದ ಥೀಮ್‌ಗೆ ಅನುಗುಣವಾಗಿ ಕೇಂದ್ರ ಸರ್ಕಾರವು ಮೊಘಲ್ ಗಾರ್ಡನ್ಸ್ ಹೆಸರನ್ನು ಅಮೃತ ಉದ್ಯಾನ ಎಂದು ಬದಲಾಯಿಸಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ … Continued

ಧಾರವಾಡದಲ್ಲಿ ವಿಧಿ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಕೇಂದ್ರ ಗೃಹ ಸಚಿವ ಅಮಿತ್​ ಶಾ

ಧಾರವಾಡ: ಧಾರವಾಡದಲ್ಲಿ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಇಂದು, ಶನಿವಾರ ಗೃಹಸಚಿವ ಅಮಿತ್‌ ಶಾ ಶಂಕುಸ್ಥಾಪನೆ ನೆರವೇರಿಸಿದ್ದಾರೆ. “ದೆಹಲಿಯಲ್ಲಿ ಫಾರೆನ್ಸಿಕ್‌ ವಿಶ್ವವಿದ್ಯಾಲಯವಿದೆ. ಕರ್ನಾಟಕದ ವಿದ್ಯಾರ್ಥಿಗಳಿಗೂ ಅನುಕೂಲವಾಗುವಂತೆ ಧಾರವಾಡದಲ್ಲಿಯೂ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ನಿರ್ಮಾಣಗೊಳ್ಳುತ್ತಿದೆ. ಭವಿಷ್ಯದಲ್ಲಿ ಭಾರತವು ಅತಿ ಹೆಚ್ಚು ಫಾರೆನ್ಸಿಕ್‌ ತಜ್ಞರನ್ನು ಹೊಂದಿರುವ ದೇಶವಾಗಲಿದೆ ಎಂದು ಈ ವೇಳೆ ಅಮಿತ್‌ ಶಾ ಹೇಳಿದರು. ವಿಧಿ ವಿಜ್ಞಾನಕ್ಕೆ … Continued