ರಷ್ಯಾದ ʼಸ್ಪುಟ್ನಿಕ್ ಲೈಟ್ʼ ಲಸಿಕೆ ರಫ್ತಿಗೆ ಅನುಮತಿ ನೀಡಿದ ಕೇಂದ್ರ ಸರ್ಕಾರ

ನವದೆಹಲಿ : ಭಾರತದಲ್ಲಿ ಉತ್ಪಾದಿಸಲಾದ ರಷ್ಯಾದ ಒಂದೇ ಡೋಸ್ (Russia’s single-dose) ಕೋವಿಡ್-19 ಲಸಿಕೆ ಸ್ಪುಟ್ನಿಕ್ ಲೈಟ್ (Sputnik Light) ರಫ್ತಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಭಾರತೀಯ ಔಷಧ ಸಂಸ್ಥೆ ಹೆಟೆರೊ ಬಯೋಫಾರ್ಮಾ ಲಿಮಿಟೆಡ್ (Hetero Biopharma Limited) ಗೆ 40 ಲಕ್ಷ ಡೋಸ್ ಸ್ಪುಟ್ನಿಕ್ ಲೈಟ್ʼನ್ನ ರಷ್ಯಾಕ್ಕೆ ರಫ್ತು ಮಾಡಲು ಅನುಮತಿ ನೀಡಲಾಗಿದೆ … Continued

ಮುಂಜಾನೆ ವಾಕಿಂಗ್‌ಗೆ ತೆರಳಿದ್ದ 7 ಮಕ್ಕಳು ನಾಪತ್ತೆ, ನಮಗೆ ಓದಿನಲ್ಲಿ ಆಸಕ್ತಿಯಿಲ್ಲ, ಕ್ರೀಡೆಯಲ್ಲಿ ಆಸಕ್ತಿ ಎಂದು ಬರೆದಿಟ್ಟ ಪತ್ರಗಳು ಪತ್ತೆ

ಬೆಂಗಳೂರು : ಮುಂಜಾನೆ ವಾಕಿಂಗ್‌ಗೆ ತೆರಳಿದ್ದ ಏಳು ಮಕ್ಕಳು ನಾಪತ್ತೆಯಾಗಿರುವ ಘಟನೆ ಬೆಂಗಳೂರಿನ ಸೋಲದೇವನಹಳ್ಳಿ ಹಾಗೂ ಬಾಗಲಗುಂಟೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಕ್ಕಳು ನಾಪತ್ತೆಯಾದ ಬೆನ್ನಲ್ಲೇ ಪೋಷಕರು ಕಂಗಾಲಾಗಿದ್ದಾರೆ. ನಾಪತ್ತೆಯಾಗಿರುವ ಮಕ್ಕಳ ಮನೆಯಲ್ಲಿ ಒಂದೇ ರೀತಿಯ ಪತ್ರ ದೊರೆತಿದ್ದು, ಅನುಮಾನಕ್ಕೆ ಕಾರಣವಾಗಿದೆ. ಬೆಂಗಳೂರಿನ ಬಾಗಲಗುಂಟೆಯ ಶೇಷಾದ್ರಿ ಲೇಔಟ್‌ನ ನಿವಾಸಿಯಾಗಿರುವ ಕಿರಣ್‌ ಎನ್.‌ ( 15 … Continued

ಕರ್ನಾಟಕದಲ್ಲಿ ಭಾನುವಾರ 406 ಜನರಿಗೆ ಕೊರೊನಾ ಹೊಸ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಇಂದು (ಭಾನುವಾರ) ಹೊಸದಾಗಿ 406 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು 10 ಮಂದಿ ಮೃತಪಟ್ಟಿದ್ದಾರೆ. ಇದೇವೇಳೆ 637 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 10,154 ರಷ್ಟು ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಈವರೆಗೆ ಒಟ್ಟಾರೆ ಸೋಂಕಿತರ ಸಂಖ್ಯೆ 29,81,027 ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ … Continued

ಯುಜಿಸಿ ನೆಟ್ 2021 ಪರೀಕ್ಷೆ ಮತ್ತೊಮ್ಮೆ ಮುಂದೂಡಿಕೆ

ನವದೆಹಲಿ: ಯುಜಿಸಿ ನೆಟ್ 2021: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮತ್ತೊಮ್ಮೆ ವಿಶ್ವವಿದ್ಯಾಲಯ ಅನುದಾನ ಆಯೋಗದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಯುಜಿಸಿ ನೆಟ್) 2021 ಪರೀಕ್ಷೆಯನ್ನು ಮುಂದೂಡಿದೆ. ಪರೀಕ್ಷೆಯನ್ನು ಈ ಹಿಂದೆ ಅಕ್ಟೋಬರ್ 17 ರಿಂದ ಅಕ್ಟೋಬರ್ 25 ರ ನಡುವೆ ನಡೆಸಲು ನಿರ್ಧರಿಸಲಾಗಿತ್ತು. ಈಗ, ಪರಿಷ್ಕೃತ ಪರೀಕ್ಷಾ ದಿನಾಂಕಗಳನ್ನು ಯುಜಿಸಿ- ugcnet.nta.nic.in ಅಧಿಕೃತ ವೆಬ್‌ಸೈಟ್‌ನಲ್ಲಿ … Continued

5792.63 ಕೋಟಿ ರೂ.ಗಳಿಗೆ ಆರ್‌ಇಸಿ ಸೋಲಾರ್ ಹೋಲ್ಡಿಂಗ್ಸ್ ಖರೀಸಿದ ರಿಲಯನ್ಸ್ ಇಂಡಸ್ಟ್ರೀಸ್

ಮುಖೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಭಾನುವಾರ ಆರ್‌ಇಸಿ ಸೋಲಾರ್ ಹೋಲ್ಡಿಂಗ್ಸ್ ಅನ್ನು ಚೀನಾ ನ್ಯಾಷನಲ್ ಬ್ಲೂಸ್ಟಾರ್‌ನಿಂದ 771 ಮಿಲಿಯನ್ ಡಾಲರ್‌ಗೆ ಸ್ವಾಧೀನಪಡಿಸಿಕೊಂಡಿತು. ರಿಲಯನ್ಸ್ ನ್ಯೂ ಎನರ್ಜಿ ಸೋಲಾರ್ ಲಿಮಿಟೆಡ್ (RNESL), ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ನ ಸಂಪೂರ್ಣ ಒಡೆತನದ ಅಂಗಸಂಸ್ಥೆಯಾಗಿದೆ, ಚೀನಾ ನ್ಯಾಷನಲ್ ಬ್ಲೂಸ್ಟಾರ್ (ಗ್ರೂಪ್) ಕೋ ಲಿಮಿಟೆಡ್ ನಿಂದ ರಿಲಯನ್ಸ್ … Continued

ಮದುವೆಗೆ ಬಟ್ಟೆ ಖರೀದಿಸಲು ಹೋಗುತ್ತಿದ್ದಾಗ ಅಪಘಾತ: ಮದುಮಗ ಸೇರಿ ಮೂವರು ಸಾವು, ನಾಲ್ವರಿಗೆ ಗಾಯ

ಮೈಸೂರು: ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಗೂಡ್ಸ್‌ ಆಟೋ ನಡುವೆ ಅಪಘಾತ ಸಂಭವಿಸಿ, ದಸರಾ ದೀಪಾಲಂಕಾರ ನೋಡಲು ಬರುತ್ತಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಭಾನುವಾರ ನಡೆದಿದೆ ಎಂದು ವರದಿಯಾಗಿದೆ. ಇಮ್ರಾನ್ ಪಾಷಾ (30), ಯಾಸ್ಮಿನ್ (28), ಅಫ್ನಾನ್ (2) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಇಮ್ರಾನ್‌ ಪಾಷಾ ಅವರಿಗೆ ಮದುವೆ ನಿಶ್ಚಯವಾಗಿತ್ತು. ನಗರದಲ್ಲಿ ಬಟ್ಟೆ ಖರೀದಿಸಿ, ದೀಪಾಲಂಕಾರ … Continued

ಅಸ್ಸಾಂನ ಒಂದೇ ಜಿಲ್ಲೆಯ ಎರಡು ಜೈಲುಗಳಲ್ಲಿ ಒಂದು ತಿಂಗಳಲ್ಲಿ 85 ಕೈದಿಗಳಲ್ಲಿ ಏಡ್ಸ್ ಪತ್ತೆ.. !

ಅಸ್ಸಾಂನ ನಾಗಂವ್ ಜಿಲ್ಲೆಯ ಎರಡು ಜೈಲುಗಳಲ್ಲಿ ಕಳೆದ ಒಂದು ತಿಂಗಳಲ್ಲಿ 85 ಎಚ್​ಐವಿ ಪಾಸಿಟಿವ್ ಪ್ರಕರಣಗಳು (HIV Positive Cases) ಪತ್ತೆಯಾಗಿವೆ. ಸೆಂಟ್ರಲ್ ಜೈಲು ಮತ್ತು ಸ್ಪೆಷಲ್​ ಜೈಲಿನಲ್ಲಿ ಈ ಪ್ರಕರಣಗಳು ವರದಿಯಾಗಿವೆ. ಈ ಜೈಲುಗಳು ಅಸ್ಸಾಂನ ನಾಗಂವ್ ಜಿಲ್ಲೆಯಲ್ಲಿದ್ದು, ಪೂರ್ವ ಗುವಾಹಟಿಯಿಂದ 125 ಕಿ.ಮೀ. ದೂರದಲ್ಲಿದೆ. ಜಿಲ್ಲಾ ಆರೋಗ್ಯ ಸೇವೆ ಜಂಟಿ ನಿರ್ದೇಶಕ ಅತುಲ್ … Continued

ಅತಿಥಿ ಉಪನ್ಯಾಸಕರ ಕಾಯಂ ಅಸಾಧ್ಯ: ಸಚಿವ ಡಾ.ಅಶ್ವತ್ಥನಾರಾಯಣ

ಬೀದರ: ಅತಿಥಿ ಉಪನ್ಯಾಸಕರನ್ನು ಕಾಯಂ ಮಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶ ಇಲ್ಲ. ಹೀಗಾಗಿ ಅವರನ್ನು ಪ್ರಶ್ನೆಯೇ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥನಾರಾಯಣ ಹೇಳಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿಥಿ ಉಪನ್ಯಾಸಕರ ಕಾಯಂ ಕುರಿತು ಸುಳ್ಳು ಆಶ್ವಾಸನೆ ಕೊಡುವುದಿಲ್ಲ. ಅವರ ಸೇವೆಯನ್ನು ಪ್ರತಿ ವರ್ಷದಂತೆ ಮುಂದುವರೆಸಿಕೊಳ್ಳಲಾಗುತ್ತದೆ. ರಾಜ್ಯದಲ್ಲಿ ವಿದ್ಯಾರ್ಥಿಗಳ ಅನುಪಾತದಲ್ಲಿ ಉಪನ್ಯಾಸಕರ … Continued

ಗುತ್ತಿಗೆದಾರರ ಮನೆ ಕಚೇರಿಯಲ್ಲಿ 4ನೇ ದಿನವೂ ಐಟಿ ಇಲಾಖೆ ಶೋಧ

ಬೆಂಗಳೂರು: ಆದಾಯ ತೆರಿಗೆ ವಂಚನೆ ಸಂಬಂಧಿಸಿದಂತೆ ನಗರದಲ್ಲಿ ಸತತ ನಾಲ್ಕನೇ ದಿನವೂ ಐಟಿ ದಾಳಿ ಮುಂದುವರಿದಿದೆ. ಗುತ್ತಿಗೆದಾರರ ಮನೆ ಮತ್ತು ಕಚೇರಿಗಳಲ್ಲಿ ಇಂದು (ಭಾನುವಾರ) ಆದಾಯ ತೆರಿಗೆ(ಐಟಿ)ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಉದ್ಯಮಿ ಸೋಮಶೇಖರ್, ಗುತ್ತಿಗೆದಾರ ಉಪ್ಪಾರ್ ಸೇರಿದಂತೆ ಹಲವರ ಮನೆ, ಕಚೇರಿಗಳಲ್ಲಿ ಪರಿಶೀಲನೆ ಕಾರ್ಯ ನಡೆಯುತ್ತಿದೆ ಸದಾಶಿವನಗರದಲ್ಲಿರುವ ಉಪ್ಪಾರ್ ಕಚೇರಿ, ಬಸವೇಶ್ವರನಗರದ … Continued

ಕಲ್ಲಿದ್ದಲು ಕೊರತೆ, ವಿದ್ಯುತ್​ ಪೂರೈಕೆ ವ್ಯತ್ಯಯ ಎಂಬುದೆಲ್ಲ ತಪ್ಪು ಕಲ್ಪನೆ, ಯಾವುದೇ ಭಯ ಬೇಡ ಎಂದ ಕೇಂದ್ರ ಸರ್ಕಾರ

ನವದೆಹಲಿ: ಚೀನಾ ಮತ್ತು ಯುರೋಪ್​​​ಗಳಲ್ಲಿ ಶುರುವಾಗಿರುವ ಕಲ್ಲಿದ್ದಲು ಅಭಾವದ ಬಿಕ್ಕಟ್ಟು (Coal Crisis) ಭಾರತದಲ್ಲೂ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದೆ. ಗುಜರಾತ್, ಪಂಜಾಬ್, ರಾಜಸ್ಥಾನ, ದೆಹಲಿ ಮತ್ತು ತಮಿಳುನಾಡು ಸೇರಿದಂತೆ ಅನೇಕ ರಾಜ್ಯಗಳಲ್ಲಿ ಇದು ವಿದ್ಯುತ್ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ ಎಂದು ವರದಿಯಾಗುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಕಲ್ಲಿದ್ದಲು ಬಗ್ಗೆ ಅಭಯ ನೀಡಿದೆ. ಕಲ್ಲಿದ್ದಲು ಕೊರತೆ ಆತಂಕ … Continued