ಉಕ್ರೇನ್‌: ಬಾಂಬ್ ದಾಳಿಯಿಂದ ಅವಶೇಷಗಳಡಿ ಹೂತುಹೋಗಿದ್ದ ಪುಟ್ಟ ನಾಯಿಮರಿ ರಕ್ಷಣೆ…ಕೊನೆಗೂ ಮಾಲೀಕನಿಗೆ ಹಸ್ತಾಂತರ..! ವೀಕ್ಷಿಸಿ

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ದೇಶದ ಮೇಲೆ ಯುದ್ಧ ಘೋಷಿಸಿದಾಗಿನಿಂದ ಉಕ್ರೇನ್‌ನಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ರಷ್ಯಾದ ಸೇನೆಯ ನಿರಂತರ ಶೆಲ್ ದಾಳಿಯಲ್ಲಿ ಸಾವಿರಾರು ಜನರು ತಮ್ಮ ಮನೆಗಳನ್ನು ಕಳೆದುಕೊಂಡರು ಮತ್ತು ಗಾಯಗೊಂಡರು. ಆದಾಗ್ಯೂ, ಉಕ್ರೇನ್‌ನಲ್ಲಿ ಬಾಂಬ್ ಸ್ಫೋಟಗೊಂಡ ನಗರದ ಅವಶೇಷಗಳಿಂದ ಅಕ್ಷರಶಃ ಒಂದು ಸಣ್ಣ ಭರವಸೆಯ ಕಥೆ ಹೊರಹೊಮ್ಮಿದೆ. ಉಕ್ರೇನ್‌ನ ಆಂತರಿಕ ವ್ಯವಹಾರಗಳ ಸಚಿವರ ಸಲಹೆಗಾರ … Continued

ವ್ಯಾಟ್ಸಸ್‌ನಿಂದ ಅನೇಕ ಹೊಸ ಫೀಚರ್ಸ್​ ಘೋಷಣೆ ​: ವಾಟ್ಸಪ್‌ ಗ್ರುಪ್‌ಗಳಿಗೆ ಶೀಘ್ರವೇ 4 ಹೊಸ ವೈಶಿಷ್ಟ್ಯಗಳು ಲಭ್ಯ

ಮೆಟಾ ಒಡೆತನದ ಭಾರತದ ಅತ್ಯಂತ ಜನಪ್ರಿಯ ಮಸೇಜಿಂಗ್​ ವೇದಿಕೆ ವಾಟ್ಸ್​ಆಯಪ್​ ತನ್ನ ಬಳಕೆದಾರರಿಗೆ ‘ಕಮ್ಯೂನಿಟೀಸ್​’ ಹೆಸರಿನ ಹೊಸ ಫೀಚರ್​ ಅನ್ನು ಪರಿಚಯಿಸಲಿದೆ. ಶೀಘ್ರದಲ್ಲಿ ಈ ಹೊಸ ಫೀಚರ್​ ಜಾಗತಿಕವಾಗಿ ಎಲ್ಲ ಸ್ಮಾರ್ಟ್​ಫೋನ್​ಗಳಲ್ಲೂ ಲಭ್ಯವಾಗಲಿದೆ. ಗ್ರುಪ್‌ ನಿರ್ವಾಹಕರಿಗೆ ಅಳಿಸುವಿಕೆಗೆ ಅವಕಾಶ (ಅಡ್ಮಿನ್ ಡಿಲೀಟ್), ವಿಸ್ತೃತ ಧ್ವನಿ ಕರೆಗಳಿಗೆ ಅವಕಾಶ, ಸಂದೇಶ ಪ್ರತಿಕ್ರಿಯೆಗಳು ಮತ್ತು ದೊಡ್ಡ ಫೈಲ್ ಹಂಚಿಕೆ … Continued

ಕೇಸರಿ ಬಣ್ಣ ಅವಮಾನಿಸಿದರೆ ಕಠಿಣ ಕ್ರಮ: ಜೆಎನ್‌ಯು ಬಳಿ ಭಿತ್ತಿಪತ್ರ ಹಾಕಿದ ಹಿಂದೂ ಸೇನೆ ಸಂಘಟನೆ

ನವದೆಹಲಿ: ರಾಮನವಮಿಯಂದು ಮಾಂಸಾಹಾರ ನೀಡಿದ್ದಕ್ಕಾಗಿ ಹಾಸ್ಟೆಲ್‌ನಲ್ಲಿ ಘರ್ಷಣೆ ನಡೆದ ಒಂದು ವಾರದ ನಂತರ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಮುಖ್ಯ ದ್ವಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಿಂದೂ ಸೇನೆಯು ಪೋಸ್ಟರ್‌ಗಳು ಮತ್ತು ಕೇಸರಿ ಧ್ವಜಗಳನ್ನು ಹಾಕಿದೆ. ಕೇಸರಿ ಬಣ್ಣಕ್ಕೆ ಅವಮಾನವಾದರೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅದು ಎಚ್ಚರಿಸಿದೆ. ಬಲಪಂಥೀಯ ಸಂಘಟನೆಯ ರಾಷ್ಟ್ರೀಯ ಉಪಾಧ್ಯಕ್ಷ ಸುರ್ಜಿತ್ ಸಿಂಗ್ … Continued

ಚಹಾ ಜೊತೆ ಬೆಳಗಿನ ಉಪಾಹಾರ ಕೊಡಲಿಲ್ಲವೆಂದು ಸೊಸೆಗೆ ತನ್ನ ರಿವಾವಲ್ವರ್‌ನಿಂದ ಗುಂಡು ಹಾರಿಸಿದ ಮಾವ..!

ಥಾಣೆ: ಚಹಾದ ಜೊತೆಗೆ ಉಪಾಹಾರ ನೀಡಲಿಲ್ಲ ಎಂಬ ಕಾರಣಕ್ಕೆ ಸಿಟಿಗೆದ್ದ ಮಾವ ತನ್ನ ರಿವಾಲ್ವರ್‌ನಿಂದ ತನ್ನ ಸೊಸೊಗೆ ಗುಂಡು ಹಾರಿಸಿದ ಘಟನೆ ಥಾಣೆ ನಗರದಲ್ಲಿ ನಡೆದಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಥಾಣೆಯ ರಾಬೋಡಿ ಪ್ರದೇಶದ ನಿವಾಸಿ 42 ವರ್ಷದ ಮಹಿಳೆಯ ಹೊಟ್ಟೆಯಲ್ಲಿ ಗುಂಡು ತಗುಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ … Continued

ಬ್ರಿಟನ್ನಿನಲ್ಲಿ 48 ಮಹಿಳಾ ರೋಗಿಗಳ ಮೇಲೆ ಭಾರತೀಯ ಮೂಲದ ವೈದ್ಯ ಎಸಗಿದ ಲೈಂಗಿಕ ಅಪರಾಧ ಸಾಬೀತು

ಲಂಡನ್: ಸ್ಕಾಟ್ಲೆಂಡ್‌ನಲ್ಲಿ ಪ್ರಾಕ್ಟೀಸ್‌ ಮಾಡುತ್ತಿರುವ 72 ವರ್ಷದ ಭಾರತೀಯ ಮೂಲದ ವೈದ್ಯರೊಬ್ಬರು 35 ವರ್ಷ ಮೇಲ್ಪಟ್ಟ 48 ಮಹಿಳಾ ರೋಗಿಗಳ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಗುರುವಾರ ತಪ್ಪಿತಸ್ಥರೆಂದು ಸಾಬೀತಾಗಿದೆ. ವೈದ್ಯ ಕೃಷ್ಣ ಸಿಂಗ್ ಅವರು ಚುಂಬನ, ತಬ್ಬಿಕೊಳ್ಳುವುದು, ಅನುಚಿತ ಪರೀಕ್ಷೆಗಳನ್ನು ಮಾಡುವುದು ಮತ್ತು ಕೊಳಕು ಕಾಮೆಂಟ್‌ಗಳನ್ನು ಮಾಡುತ್ತಾರೆ ಎಂಬಿತ್ಯಾದಿ ಆರೋಪಗಳನ್ನು ಎದುರಿಸುತ್ತಿದ್ದರು. ಅವರು … Continued

ಸಮಾಧಾನದ ಸುದ್ದಿ…ಈ ವರ್ಷವೂ ದೇಶಾದ್ಯಂತ ಉತ್ತಮ ಮುಂಗಾರು ಮಳೆ ನಿರೀಕ್ಷೆ: ಭಾರತೀಯ ಹವಾಮಾನ ಇಲಾಖೆ

ನವದೆಹಲಿ: ನವದೆಹಲಿ: ಈ ವರ್ಷವೂ ವಾಡಿಕೆಯ 99%ರಷ್ಟು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಲಾ ನಿನಾ ವಿದ್ಯಮಾನದ ಪರಿಣಾಮ ಪ್ರಸಕ್ತ ವರ್ಷವೂ ನೈರುತ್ಯ ಮಾನ್ಸೂನ್ ಅವಧಿ ಭಾರತದಲ್ಲಿ ಉತ್ತಮ ಮಳೆ ತರುವ ನಿರೀಕ್ಷೆ ಇದೆ ಎಂದು ತಿಳಿಸಿದ್ದು, ಸತತ 4ನೇ ವರ್ಷವೂ … Continued

ಇಂದು ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ, ಆರೆಂಜ್‌ ಅಲರ್ಟ್‌ ಘೋಷಣೆ

ಬೆಂಗಳೂರು: ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಕರಾವಳಿ ಹಲವೆಡೆ ಇಂದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗುರುವಾರ ರಾತ್ರಿ ಬೆಂಗಳೂರು, ಬೆಳಗಾವಿ, ವಿಜಯಪುರ, ದಾವಣಗೆರೆ, ಚಿತ್ರದುರ್ಗ, ವಿಜಯನಗರ, ಬಳ್ಳಾರಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಹಾಗೂ ವಿಜಯಪುರ ತಾಲೂಕಿನ ಮದಭಾವಿ ಗ್ರಾಮದಲ್ಲಿ ಇಬ್ಬರು … Continued

ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್‌ನಿಂದ ಅಹೋರಾತ್ರಿ ಧರಣಿ

ಬೆಂಗಳೂರು: ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆಎಸ್ ಈಶ್ವರಪ್ಪ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ವಿಧಾನಸೌಧದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಮುಂದುವರಿದಿದೆ. ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಎಸ್‌ ಈಶ್ವರಪ್ಪ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದ್ದಾರೆ. ಶುಕ್ರವಾರ ಸಂಜೆ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ … Continued

ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ: ಪಂಜಾಬ್‌ನಲ್ಲಿ ಖಾಸಗಿ ವ್ಯಾಪಾರಿಗಳಿಂದ ಸಾರ್ವಕಾಲಿಕ ಗರಿಷ್ಠ ಗೋಧಿ ಖರೀದಿ..!

ಚಂಡೀಗಡ: ಜಾಗತಿಕ ಗೋಧಿ ಪೂರೈಕೆಯಲ್ಲಿ ರಷ್ಯಾ ಮತ್ತು ಉಕ್ರೇನ್ ಸುಮಾರು 40 ಪ್ರತಿಶತದಷ್ಟು ಪಾಲು ಹೊಂದಿದ್ದು, ರ್ಷಯಾ-ಉಕ್ರೇನ್‌ ಯುದ್ಧದಿಂದಾಗಿ ಪೂರೈಕೆಗೆ ಅಡ್ಡಿಯಾಗಿದೆ. ಹೀಗಾಗಿ ಭಾರತದ ಗೋಧಿಗೆ ಬೇಡಿಕೆ ಹೆಚ್ಚಿದೆ. ದೇಶದಲ್ಲೇ ಅತಿ ಹೆಚ್ಚು ಗೋಧಿ ಉತ್ಪಾದಿಸುವ ರಾಜ್ಯವಾಗಿರುವ ಪಂಜಾಬಿನಲ್ಲಿ ಕೇವಲ ಎರಡು ವಾರಗಳಲ್ಲಿ ರಾಜ್ಯಾದ್ಯಂತ ಧಾನ್ಯ ಮಾರುಕಟ್ಟೆಗಳಿಂದ ಖಾಸಗಿ ಕಂಪನಿಗಳು ಈಗಾಗಲೇ ಒಂದು ಲಕ್ಷ ಟನ್‌ಗಳಷ್ಟು … Continued

ಪ್ರವಾಸದ ಸಂದರ್ಭದಲ್ಲಿ ಹೋಟೆಲ್‌ಗಳಲ್ಲಿ ಬೇಡ, ಸರ್ಕಾರಿ ಗೆಸ್ಟ್‌ಹೌಸ್‌ಗಳಲ್ಲಿ ಉಳಿಯಿರಿ: ಉತ್ತರ ಪ್ರದೇಶದ ಸಚಿವರಿಗೆ, ಅಧಿಕಾರಿಗಳಿಗೆ ಸಿಎಂ ಆದಿತ್ಯನಾಥ ತಾಕೀತು

ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ತಮ್ಮ ಸಂಪುಟದ ಸಚಿವರ ಕಾರ್ಯವೈಖರಿಗಾಗಿ ಹಲವು ನಿಯಮಗಳನ್ನು ರೂಪಿಸಿದ್ದಾರೆ. ಇನ್ನು ಮುಂದೆ ಸಚಿವರು ರಾಜ್ಯದ ಯಾವುದೇ ನಗರಗಳಿಗೆ ತೆರಳಿದರೆ ಐಷಾರಾಮಿ ಹೋಟೆಲ್‌ಗಳ ಬದಲು ಸರಕಾರಿ ಅತಿಥಿ ಗೃಹಗಳಲ್ಲಿಯೇ ತಂಗಬೇಕು ಎಂಬುದು ಸೇರಿ ಹಲವು ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಉತ್ತರ ಪ್ರದೇಶದ ಸಚಿವರು ಯಾವುದೇ ಭಾಗಗಳಿಗೆ ತೆರಳಿದರೂ … Continued