ಉಡವನ್ನೂ ಬಿಡದ ಕಾಮುಕರು… ಬೆಂಗಾಲ್ ಮಾನಿಟರ್ ದೈತ್ಯ ಹಲ್ಲಿಯ ಮೇಲೆ ಸಾಮೂಹಿಕ ಅತ್ಯಾಚಾರ…!-ನಾಲ್ವರ ಬಂಧನ

ಮುಂಬೈ: ವಿಲಕ್ಷಣ ಘಟನೆಯೊಂದರಲ್ಲಿ, ಮಹಾರಾಷ್ಟ್ರದ ಗೋಠಾಣೆ ಗ್ರಾಮದ ಬಳಿಯಿರುವ ಸಹ್ಯಾದ್ರಿ  ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬಂಗಾಳದ ಮಾನಿಟರ್ ಹಲ್ಲಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ…! ವರದಿಗಳ ಪ್ರಕಾರ, ನಾಲ್ವರು ಆರೋಪಿಗಳನ್ನು ಬೇಟೆಗಾರರು ಎಂದು ಗುರುತಿಸಲಾಗಿದ್ದು, ಗೊಠಾಣೆಯಲ್ಲಿನ ಗಭಾ ಪ್ರದೇಶದ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದ ಕೋರ್ ಝೋನ್‌ಗೆ ಪ್ರವೇಶಿಸಿ ಬಂಗಾಳದ ಮಾನಿಟರ್ … Continued

ಬೆಳಗಾವಿ: ಸ್ವಗ್ರಾಮ ತಲುಪಿದ ಸಂತೋಷ ಪಾಟೀಲ ಮೃತದೇಹ – ಕುಟುಂಬಸ್ಥರ ಆಕ್ರಂದನ

ಬೆಳಗಾವಿ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಖಾತೆ ಸಚಿವ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದ, ಉಡುಪಿಯ ಲಾಡ್ಜ್ ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಸಂತೋಷ ಪಾಟೀಲ್ ಮೃತದೇಹವನ್ನು ಉಡುಪಿಯಿಂದ ಸ್ವಗ್ರಾಮ ಬಡಸ ಗ್ರಾಮಕ್ಕೆ ತರಲಾಗಿದೆ. ಪಾರ್ಥಿವ ಶರೀರ ತಾಲೂಕಿನ ಬಡಸ ಗ್ರಾಮಕ್ಕೆ  ಪಾರ್ಥಿವ ಶರೀರ ಬರುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.ಆರೋಪಿಗಳನ್ನು ಬಂಧಿಸುವವರೆಗೂ ಶವ … Continued

ಆಂಧ್ರಪ್ರದೇಶದ ಕೆಮಿಕಲ್ ಫ್ಯಾಕ್ಟರಿಯಲ್ಲಿ ಸ್ಫೋಟ: ಆರು ಮಂದಿ ಸಾವು, 13 ಮಂದಿಗೆ ಗಾಯ

ಅಮರಾವತಿ: ಆಂಧ್ರಪ್ರದೇಶದ ಎಲೂರು ಜಿಲ್ಲೆಯ ಪೋರಸ್ ಲ್ಯಾಬೋರೇಟರೀಸ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ ಆರು ಜನರು ಮೃತಪಟ್ಟಿದ್ದಾರೆ ಮತ್ತು 13 ಮಂದಿ ಗಾಯಗೊಂಡಿದ್ದಾರೆ. ಪ್ರಯೋಗಾಲಯದಲ್ಲಿ ಸ್ಫೋಟದ ನಂತರ, ಬೆಂಕಿ ಕಾಣಿಸಿಕೊಂಡು ಆರು ಜನರು ಮೃತಪಟ್ಟಿದರು, ಸುಮಾರು 13 ಮಂದಿ ಗಾಯಗೊಂಡರು ಮತ್ತು ಸ್ಥಳೀಯ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಪಘಾತದ ವೇಳೆ ಬ್ಲಾಕ್‌ನಲ್ಲಿ 30 ಮಂದಿ ಕೆಲಸ ಮಾಡುತ್ತಿದ್ದರು. ಏಪ್ರಿಲ್ 13 … Continued

ತಮ್ಮದೇ ಶಸ್ತ್ರಸಜ್ಜಿತ ವಾಹನ ಸ್ಪೋಟ ಮಾಡಿದ ರಷ್ಯಾ ಪಡೆಗಳ ಯುದ್ಧ ಟ್ಯಾಂಕ್‌ಗಳು: ದೃಶ್ಯ ಡ್ರೋನ್‌ ವೀಡಿಯೊದಲ್ಲಿ ಸೆರೆ

ರಷ್ಯಾದ ಟ್ಯಾಂಕ್ ಮತ್ತೊಂದು ರಷ್ಯಾದ ಶಸ್ತ್ರಸಜ್ಜಿತ ವಾಹನವನ್ನು ಸ್ಫೋಟಿಸುವುದನ್ನು ತೋರಿಸುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಮಾರ್ಚ್ 31 ರಂದು ರಾಜಧಾನಿ ಕೈವ್ ಬಳಿಯ ಡಿಮಿಟ್ರಿವ್ಕಾ ಗ್ರಾಮದ ಬಳಿ ಉಕ್ರೇನಿಯನ್ ಕಣ್ಗಾವಲು ಡ್ರೋನ್‌ನಿಂದ ವೀಡಿಯೊವನ್ನು ಸೆರೆಹಿಡಿಯಲಾಗಿದೆ. ಉಕ್ರೇನಿಯನ್ನರ ಪ್ರಕಾರ, ರಷ್ಯಾದ ಟ್ಯಾಂಕ್‌ಗಳು ತಮ್ಮ ಸೈನಿಕರ ಮೇಲೆ ಹತ್ತಿರದಿಂದ ಗುಂಡು ಹಾರಿಸುವುದನ್ನು ಸಹ ಇದು ತೋರಿಸುತ್ತದೆ. … Continued

ಸಿ ವರ್ಗದ ದೇಗುಲಗಳ ತಸ್ತಿಕ್‌ ಮೊತ್ತ 60 ಸಾವಿರ ರೂ.ಗೆ ಹೆಚ್ಚಳ, ಉಚಿತ ಸಾಮೂಹಿಕ ವಿವಾಹ-ಸಪ್ತಪದಿ ಮರಚಾಲನೆಗೆ ಆದೇಶ

ಬೆಂಗಳೂರು: ತಸ್ತಿಕ್‌ ಮೊತ್ತವನ್ನು 48 ಸಾವಿರ ರೂಪಾಯಿಯಿಂದ 60 ಸಾವಿರ ರೂಪಾಯಿಗೆ ಹೆಚ್ಚಿಸಿ ಸರ್ಕಾರ ಆದೇಶ ನೀಡಿದೆ. ಸಿ ವರ್ಗದ ದೇಗುಲಗಳಲ್ಲಿ ಪ್ರಸ್ತುತ ತಸ್ತಿಕ್‌ ಮೊತ್ತ 48 ಸಾವಿರ ಇತ್ತು. ಈಗ 60 ಸಾವಿರಕ್ಕೆ ಹೆಚ್ಚಿಸಿ ಸರ್ಕಾರ ಆದೇಶ ನೀಡಿದೆ. ಪ್ರಸಕ್ತ ಆರ್ಥಿಕ ವರ್ಷದಿಂದಲೇ ಹೆಚ್ಚಳ ಆದೇಶ ಅನ್ವಯವಾಗಲಿದೆ. ಅಷ್ಟೇ ಅಲ್ಲದೆ, ಕೊರೊನಾ ವೈರಸ್ ಸಾಂಕ್ರಾಮಿಕದ … Continued

ಉಕ್ರೇನ್ ಆಕ್ರಮಣದ ಹಿನ್ನೆಲೆ: ರಷ್ಯಾದಿಂದ ಹೊರಕ್ಕೆ ಬಂದ ಇನ್ಫೋಸಿಸ್

ಬೆಂಗಳೂರು: ರಷ್ಯಾದಿಂದ ಐಟಿ ದಿಗ್ಗಜ ಇನ್ಫೋಸಿಸ್ ಹೊರಬರುತ್ತಿದೆ. ಏಪ್ರಿಲ್ ತಿಂಗಳ ಮೊದಲ ವಾರದಲ್ಲೇ ಈ ಬಗ್ಗೆ ಸುದ್ದಿ ಬಂದಿತ್ತು. ಇಂದು ಇನ್ಫೋಸಿಸ್ ತ್ರೈಮಾಸಿಕ ವರದಿ ಪ್ರಕಟವಾದ ಬೆನ್ನಲ್ಲೇ ಸಿಇಒ ಸಲೀಲ್ ಪರೇಖ್ ಈ ಕುರಿತು ಅಧಿಕೃತ ಹೇಳಿಕೆ ನೀಡಿದ್ದಾರೆ. ರಷ್ಯಾದಲ್ಲಿ ಇನ್ಫೋಸಿಸ್ ಅಸ್ತಿತ್ವದ ಬಗ್ಗೆ ಹಾಗೂ ಪತ್ನಿ ಅಕ್ಷತಾ ಮೂರ್ತಿ ಅವರ ಪಾಲು ಇರುವ ಬಗ್ಗೆ … Continued

ದಕ್ಷಿಣ ಆಫ್ರಿಕಾ: ಭೀಕರ ಪ್ರವಾಹಕ್ಕೆ 250ಕ್ಕೂ ಹೆಚ್ಚು ಮಂದಿ ಸಾವು

ದಕ್ಷಿಣ ಆಫ್ರಿಕಾದ ಕ್ವಾಝುಲು-ನಟಾಲ್ ಪ್ರಾಂತ್ಯದಲ್ಲಿ ಸಾವಿನ ಸಂಖ್ಯೆ 250 ಕ್ಕೂ ಹೆಚ್ಚು ತಲುಪಿದೆ ಎಂದು ವರದಿಗಳು ತಿಳಿಸಿವೆ. ಕೆಲವು ಪ್ರದೇಶಗಳಲ್ಲಿ ಒಂದೇ ದಿನದಲ್ಲಿ ತಿಂಗಳ ಮಳೆ ಬಿದ್ದ ನಂತರ ಸ್ಥಳೀಯ ಅಧಿಕಾರಿಗಳು ವಿಪತ್ತಿನ ಸ್ಥಿತಿಯನ್ನು ಘೋಷಿಸಿದ್ದಾರೆ. ಅಧಿಕಾರಿಗಳು ಇದನ್ನು “ನಮ್ಮ ದೇಶದ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಹವಾಮಾನ ಬಿರುಗಾಳಿಗಳಲ್ಲಿ ಒಂದಾಗಿದೆ” ಎಂದು ಕರೆದಿದ್ದಾರೆ. ಮಣ್ಣು ಕುಸಿದು … Continued

ಜಾರ್ಖಂಡ್‌ನಲ್ಲಿ ಕೇಬಲ್ ಕಾರುಗಳು ಡಿಕ್ಕಿ ಹೊಡೆದ ಕ್ಷಣದ ಚಿಲ್ಲಿಂಗ್ ವೀಡಿಯೊ ಬಹಿರಂಗ: ಭಯದಿಂದ ಕೆಲವರು ಕೂಗಿಕೊಳ್ಳುತ್ತಾರೆ, ಕೆಲವರು ದೇವರ ಸ್ಮರಿಸುತ್ತಾರೆ…ವೀಕ್ಷಿಸಿ

ನವದೆಹಲಿ: ಭಾರತೀಯ ವಾಯುಪಡೆಯು ರಕ್ಷಣಾ ಕಾರ್ಯಾಚರಣೆ ಪೂರ್ಣಗೊಳಿಸಿದ ನಂತರ ಜಾರ್ಖಂಡ್‌ನ ದಿಯೋಘರ್‌ನಲ್ಲಿ ಸಂಭವಿಸಿದ ದುರಂತ ರೋಪ್‌ವೇ ಅಪಘಾತದ ಕ್ಷಣಗಳ ವೀಡಿಯೊವೊಂದು ಬಹಿರಂಗವಾಗಿದೆ. ಕೇಬಲ್ ಕಾರ್ ಮತ್ತೊಬ್ಬರಿಗೆ ಡಿಕ್ಕಿ ಹೊಡೆದ ಜನರ ಮೊಬೈಲ್ ಫೋನ್ ಕ್ಯಾಮರಾದಿಂದ ಚಿತ್ರೀಕರಿಸಲಾದ ವೀಡಿಯೊ ಕ್ಲಿಪ್ ಹಿನ್ನೆಲೆಯಲ್ಲಿ ಸಂಭಾಷಣೆಗಳೊಂದಿಗೆ ತೋರಿಸುತ್ತದೆ ಮತ್ತು ಇದ್ದಕ್ಕಿದ್ದಂತೆ ಮುಂದೆ ಬರುತ್ತಿರುವ ಕೆಂಪು ಕೇಬಲ್ ಕಾರ್ ಡಿಕ್ಕಿ ಹೊಡೆದು … Continued

ಉಡುಗೊರೆ ನೆಕ್ಲೇಸ್ ಮಾರಾಟಕ್ಕೆ ಸಂಬಂಧಿಸಿದಂತೆ ಇಮ್ರಾನ್ ಖಾನ್ ವಿರುದ್ಧ ಪಾಕಿಸ್ತಾನದ ಉನ್ನತ ತನಿಖಾ ಸಂಸ್ಥೆಯಿಂದ ತನಿಖೆ

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಅಧಿಕಾರಾವಧಿಯಲ್ಲಿ ಉಡುಗೊರೆಯಾಗಿ ಪಡೆದ ದುಬಾರಿ ನೆಕ್ಲೆಸ್ ಅನ್ನು ರಾಜ್ಯದ ಉಡುಗೊರೆ ಭಂಡಾರಕ್ಕೆ ಠೇವಣಿ ಇಡುವ ಬದಲು 18 ಕೋಟಿ ರೂ.ಗಳಿಗೆ ಆಭರಣ ವ್ಯಾಪಾರಿಗೆ ಮಾರಾಟ ಮಾಡಲಾಗಿದೆ ಎಂಬ ಆರೋಪದ ಮೇಲೆ ಪಾಕಿಸ್ತಾನದ ಉನ್ನತ ತನಿಖಾ ಸಂಸ್ಥೆ ವಿಚಾರಣೆಯನ್ನು ಆರಂಭಿಸಿದೆ ಎಂದು ಬುಧವಾರ ಮಾಧ್ಯಮ ವರದಿಗಳು ತಿಳಿಸಿವೆ. … Continued

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲಿನಲ್ಲಿರುವ ನವಾಬ್ ಮಲಿಕ್ ಆಸ್ತಿ ಜಪ್ತಿ ಮಾಡಿದ ಇಡಿ

ಮುಂಬೈ: ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಮತ್ತು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರ ವಿರುದ್ಧದ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಪ್ರಕರಣದಲ್ಲಿ ಹಲವಾರು ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಏಪ್ರಿಲ್ 13 ಬುಧವಾರ ತಿಳಿಸಿದೆ. ಮೊಹಮ್ಮದ್ ನವಾಬ್ ಮೊಹಮ್ಮದ್ ಇಸ್ಲಾಂ ಮಲಿಕ್ ಅಲಿಯಾಸ್ ನವಾಬ್ ಮಲಿಕ್, ಅವರ ಕುಟುಂಬ … Continued