ಬಸ್‌-ಕಾರಿನ​ ನಡುವೆ ಭೀಕರ ಅಪಘಾತ: ಐವರು ವಿದ್ಯಾರ್ಥಿಗಳು ಸಾವು

ಹಾಸನ: ಜಿಲ್ಲೆಯ ಬೇಲೂರು ತಾಲೂಕಿನ ಸಂಕೇನಹಳ್ಳಿ ಸಮೀಪ ಹಾಸನ – ಬೇಲೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಮತ್ತು ಆಲ್ಟೊ ಕಾರು ನಡುವೆ ಡಿಕ್ಕಿ ಸಂಭವಿಸಿ ಐವರು ಯುವಕರು ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ. ಮೃತಪರನ್ನು ವಿದ್ಯಾರ್ಥಿಗಳಾದ ಅಕ್ಮಲ್(18), ಜಿಲಾನಿ(19), ತೋಹಿದ್(18), ಕೈಫ್ (18) ಎಂಬವರು ಸ್ಥಳದಲ್ಲೇ ಮೃತಪಟ್ಟರೆ, ರಿಹಾನ್ (19) ಆಸ್ಪತ್ರೆಗೆ ಸಾಗಿಸುವಾಗ … Continued

ಜಾಗತಿಕವಾಗಿ ವೇಗವಾಗಿ ಹರಡುತ್ತಿರುವ ಕೋವಿಡ್‌-19 ವೈರಸ್ಸಿನ ಉಪರೂಪಾಂತರಿ ಸ್ಟೆಲ್ತ್ ಓಮಿಕ್ರಾನ್ BA.2…ಇದರ ಬಗ್ಗೆ ತಿಳಿದುಕೊಳ್ಳಬೇಕಾದದ್ದು

ನವದೆಹಲಿ: ಕೋವಿಡ್‌-19 ವೈರಸ್ಸಿನ ರೂಪಾಂತರಿ ಓಮಿಕ್ರಾನ್ ಉಪ ರೂಪಾಂತರಿ ಬಿಎ.2 ಅಮೆರಿಕದಲ್ಲಿ ತನ್ನ ನೆಲೆ ಸ್ಥಾಪಿಸುವುದನ್ನು ಮುಂದುವರೆಸಿದೆ. ಹೆಚ್ಚು ಸಾಂಕ್ರಾಮಿಕ ಬಿಎ.2 ಉಪ ರೂಪಾಂತರಿಯಿಂದಾಗಿ ಚೀನಾ, ಪಶ್ಚಿಮ ಯುರೋಪ್‌ನಲ್ಲಿ ಕೋವಿಡ್‌-19 ಮತ್ತೆ ಉಲ್ಬಣಗೊಳ್ಳುತ್ತಿದೆ ಎಂದು ತಜ್ಞರು ಹೇಳಿದ್ದಾರೆ. ಅಮೆರಿಕದ ಸ್ಯಾನ್ ಡಿಯಾಗೋ ಮೂಲದ ಜೀನೋಮಿಕ್ಸ್ ಸಂಸ್ಥೆಯಾದ ಹೆಲಿಕ್ಸ್, BA.2 ರೂಪಾಂತರವನ್ನು ಜನವರಿ ಆರಂಭದಲ್ಲಿ ಅಮೆರಿಕದಲ್ಲಿ ಮೊದಲು … Continued

ಗೂಡಿಗೆ ನುಗ್ಗಿದ ದೈತ್ಯಾಕಾರದ ಕರಡಿಯನ್ನೇ ಹೆದರಿಸಿ ಓಡಿಸಿದ ಎರಡು ಸಾಕು ಹಂದಿಗಳು..! ದೃಶ್ಯ ಸಿಸಿಟಿಯಲ್ಲಿ ಸೆರೆ..

ಅಮೆರಿಕದ ಕನೆಕ್ಟಿಕಟ್‌ನಲ್ಲಿ ತಮ್ಮ ಆವರಣಕ್ಕೆ ಬಂದ ದೈತ್ಯ ಕರಡಿಯೊಂದಿಗೆ ಎರಡು ಹಂದಿಗಳು ಹೋರಾಟ ನಡೆಸಿ ಅದನ್ನು ಓಡಿಸಿರುವ ಘಟನೆ ವೀಡಿಯೊದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಪ್ಪು ಕರಡಿ ಆವರಣದ ಬೇಲಿಯನ್ನು ದಾಟಿ ಒಳನುಗ್ಗಿದ್ದನ್ನು ವೀಡಿಯೊದಲ್ಲಿ ಮತ್ತು ಹಂದಿಗಳಲ್ಲಿ ಒಂದು ಕರಡಿಯ ಮೇಲೆ ಆಕ್ರಮಣ ಮಾಡುವುದರೊಂದಿಗೆ ಇದು ಪ್ರಾರಂಭವಾಗುತ್ತದೆ. ಬಿಳಿ ಹಂದಿ ತನ್ನ ಎಲ್ಲಾ ಶಕ್ತಿಯನ್ನೂ … Continued

ಶ್ರೀಪಾದ ಭಟ್ಟರಿಗೆ ಅಭಿನಯ ಭಾರತಿ ರಂಗ ಪ್ರಶಸ್ತಿ

ಹುಬ್ಬಳ್ಳಿ: ನಾಡಿನ ಹೆಸರಾಂತ ರಂಗಕರ್ಮಿ, ನಿರ್ದೇಶಕ ಡಾ. ಶ್ರೀಪಾದ ಭಟ್ಟ ಅವರಿಗೆ ಪ್ರಸಕ್ತ ಸಾಲಿನ  ಧಾರವಾಡದ ಅಭಿನಯ ಭಾರತಿ ರಂಗ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಧಾರವಾಡ ರಂಗಾಯಣದ ಸಹಯೋಗದೊಂದಿಗೆ ಸಂಸ್ಕೃತಿ ಸಮುಚ್ಚಯ ಭವನದಲ್ಲಿ ಮಾರ್ಚ್ 27ರಂದು ಬೆಳಿಗ್ಗೆ10:30 ಗಂಟೆಗೆ ಪ್ರದಾನ ಮಾಡಲಾಗುತ್ತದೆ. ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿದ್ದ ಶ್ರೀಪಾದ‌ ಭಟ್ಟರು ನಂತರ ಸ್ವಯಂ ನಿವೃತ್ತಿ ಪಡೆದು ಪೂರ್ಣಾವಧಿ … Continued

ಹದಗೆಟ್ಟ ಲಾಲು ಪ್ರಸಾದ್ ಯಾದವ್ ಆರೋಗ್ಯ, ದೆಹಲಿ ಏಮ್ಸ್‌ಗೆ ಸ್ಥಳಾಂತರ

ರಾಂಚಿ: ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ಲಾಲು ಪ್ರಸಾದ್ ಯಾದವ್ ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಮಂಗಳವಾರ ರಾಂಚಿಯ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆ (ರಿಮ್ಸ್) ನಿಂದ ದೆಹಲಿಯ ಏಮ್ಸ್‌ಗೆ ಕರೆದೊಯ್ಯಲಾಗುತ್ತಿದೆ. ಅವರಿಗೆ ಹೃದಯ ಮತ್ತು ಮೂತ್ರಪಿಂಡದಲ್ಲಿ ಸಮಸ್ಯೆ ಇರುವುದು ಕಂಡುಬಂದಿದೆ. ಉತ್ತಮ ಚಿಕಿತ್ಸೆಗಾಗಿ ದೆಹಲಿಯ ಏಮ್ಸ್‌ಗೆ ಕಳುಹಿಸಲಾಗುತ್ತಿದೆ. ಜೈಲಿನ ಅಧಿಕಾರಿಗಳು (ದಿನಾಂಕ) … Continued

ಎಸಿಬಿ ದಾಳಿ ವೇಳೆ ಬಿಡಿಎ ಮಧ್ಯವರ್ತಿ ಮನೆಯಲ್ಲಿ 4.5 ಕೆಜಿ ಚಿನ್ನ ಪತ್ತೆ..!

ಬೆಂಗಳೂರು: ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಲಂಚ ಮತ್ತು ಪ್ರಭಾವ ಬೀರಿ ಸರ್ಕಾರಿ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದ ಆರೋಪದ ಮೇಲೆ ಒಂಬತ್ತು ಮಂದಿ ಖಾಸಗಿ ಮಧ್ಯವರ್ತಿಗಳ ಮೇಲೆ ಮಂಗಳವಾರ ಬೆಳಿಗ್ಗೆ ದಾಳಿ ಮಾಡಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶೋಧ ನಡೆಸುತ್ತಿದೆ. ಮೋಹನ್ ವಿರುದ್ಧ ಭ್ರಷ್ಟಾಚಾರ, ಅವ್ಯವಹಾರದ ಆರೋಪದ ಹಿನ್ನೆಲೆಯಲ್ಲಿ ಆರ್.ಟಿ.ನಗರದ ಮನೋರಾಯನಪಾಳ್ಯದಲ್ಲಿರುವ ಅವರ ಮನೆ … Continued

ಪುನೀತ ರಾಜಕುಮಾರಗೆ ಮೈಸೂರು ವಿವಿಯಿಂದ ಮರಣೋತ್ತರ ಡಾಕ್ಟರೇಟ್ ಪ್ರದಾನ

ಮೈಸೂರು ವಿ.ವಿ ಘಟಿಕೋತ್ಸವ: ಪುನೀತ್‌ ರಾಜ್‌ಕುಮಾರ್‌ಗೆ ಗೌರವ ಡಾಕ್ಟರೇಟ್‌ ಪ್ರದಾನ ಮೈಸೂರು: ವಿಜ್ಞಾನಿ ‌ಡಾ.ವಿ.ಕೆ.ಆತ್ರೆ, ನಟ ಪುನೀತ್‌ ರಾಜ್‌ಕುಮಾರ್‌ (ಮರಣೋತ್ತರ) ಹಾಗೂ ಜಾನಪದ ಕಲಾವಿದ ಎಂ.ಮಹಾದೇವಸ್ವಾಮಿ ಅವರಿಗೆ ಮೈಸೂರು ವಿಶ್ವವಿದ್ಯಾಲಯದ 102ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಯಿತು. ಮಂಗಳವಾರ ಕ್ರಾಫರ್ಡ್‌ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಥಾವರಚಂದ್‌ ಗೆಹ್ಲೋಟ್‌ ಪ್ರದಾನ ಮಾಡಿದರು. ಪುನೀತ್‌ ಪರವಾಗಿ … Continued

ಪಶ್ಚಿಮ ಬಂಗಾಳ: ಪಂಚಾಯತ ನಾಯಕನ ಹತ್ಯೆಯ ನಂತರ 8 ಜನರ ಸಜೀವ ದಹನ ಮಾಡಿದ ಗುಂಪು..

ಕೋಲ್ಕತ್ತಾ: ಆಘಾತಕಾರಿ ಘಟನೆಯಲ್ಲಿ ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿ ಗುಂಪೊಂದು ಮನೆಗಳಿಗೆ ಬೆಂಕಿ ಹಚ್ಚಿದ ಪರಿಣಾಮ ಕನಿಷ್ಠ 8 ಜನರು ಸಜೀವ ದಹನವಾದ ಘಟನೆ ಸೋಮವಾರ ರಾತ್ರಿ ನಡೆದಿದೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳ ಪ್ರಕಾರ, ಬಿರ್ಭೂಮ್‌ನಲ್ಲಿ ಪಂಚಾಯತ್ ನಾಯಕನಾಗಿ ಸೇವೆ ಸಲ್ಲಿಸಿದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕನನ್ನು ಹತ್ಯೆಗೈದ … Continued

ಅಪಹರಣದ ಯತ್ನಕ್ಕೆ ಪ್ರತಿರೋಧ: ಪಾಕಿಸ್ತಾನದಲ್ಲಿ ಹಿಂದೂ ಯುವತಿಯ ಗುಂಡಿಕ್ಕಿ ಹತ್ಯೆ

ಕರಾಚಿ: ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ ಅಪಹರಣ ಯತ್ನ ವಿಫಲವಾದ ನಂತರ 18 ವರ್ಷದ ಹಿಂದೂ ಯುವತಿಯನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಸೋಮವಾರ ಮಾಧ್ಯಮಗಳು ವರದಿ ಮಾಡಿವೆ. ಪಾಕಿಸ್ತಾನದ ಸಿಂಧ್‌ ಪ್ರಾಂತದ ರೋಹಿ ಸುಕ್ಕೂರ್‌ನಲ್ಲಿ ದಾಳಿಕೋರರಿಗೆ ಪ್ರತಿರೋಧ ತೋರಿದ ನಂತರ ಪೂಜಾ ಓಡ್ ಎಂಬ ಹಿಂದೂ ಯುವತಿಯನ್ನು ರಸ್ತೆಯ ಮಧ್ಯದಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆಎಂದು ದಿ ಫ್ರೈಡೇ … Continued

ಮಾತು ಬಾರದ, ಕಿವಿ ಕೇಳದ ಯುವಕನ ವರಿಸಿದ ಪದವೀಧರ ಯುವತಿ

ನರಗುಂದ (ಗದಗ): ಕಂಕಣ ಬಲ ಕೂಡಿಬಂದರೆ ಯಾರೂ ತಡೆಯಲು ಸಾಧ್ಯವಿಲ್ಲ ಎಂಬಂತೆ ಪಟ್ಟಣದಲ್ಲಿ ಸೋಮವಾರ ಮಾತು ಬಾರದ, ಕಿವಿಯೂ ಕೇಳದ ಯುವಕನನ್ನು ಪದವೀಧರ ಯುವತಿಯೊಬ್ಬರು ವರಿಸಿದ್ದಾರೆ. ನರಗುಂದ ಪಟ್ಟಣದ ದಂಡಾಪುರ ಬಡಾವಣೆಯ ಲಾಲಮಹಮ್ಮದ್, ಆರೀಫಾಭಾನು ದಂಪತಿ ಪುತ್ರ ಮಹಮ್ಮದ್ ಸಾಧಿಕ್ ಹಾಗೂ ಗದುಗಿನ ಗಂಗಿಮಡಿ ಬಡಾವಣೆಯ ಮಲೀಕಸಾಬ್-ಮಮತಾಜ್‌ಬೇಗಂ ಪಲ್ಲೇದ ದಂಪತಿ ಪುತ್ರಿ ಸುಮಯ್ಯಾ ಸುಮಯ್ಯಾ ಭಾನುವಾರ … Continued