ಚುನಾವಣಾ ರಾಜಕೀಯದ ಮೇಲೆ ಮೇಲೆ ಫೇಸ್‌ಬುಕ್, ಟ್ವಿಟ್ಟರ್‌ನಂತಹ ಸಾಮಾಜಿಕ ಮಾಧ್ಯಮಗಳ ಹಸ್ತಕ್ಷೇಪ ಕೊನೆಗಾಣಿಸಿ’: ಲೋಕಸಭೆಯಲ್ಲಿ ಸೋನಿಯಾ ಗಾಂಧಿ ಒತ್ತಾಯ

ನವದೆಹಲಿ: ದೇಶದಲ್ಲಿ ಚುನಾವಣಾ ರಾಜಕೀಯದ ಮೇಲೆ ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳ ಪ್ರಭಾವ ಕೊನೆಗೊಳಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬುಧವಾರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಲೋಕಸಭೆಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ಭಾರತೀಯ ಜನತಾ ಪಕ್ಷದ ಹೆಸರನ್ನು ಹೇಳದೆ, ಆಡಳಿತ ಮಂಡಳಿಯ ಕುತಂತ್ರದಿಂದಾಗಿ ಫೇಸ್‌ಬುಕ್‌ನಿಂದ ಸಾಮಾಜಿಕ ಸಾಮರಸ್ಯ ಹಾಳಾಗುತ್ತಿದೆ ಎಂದು ಆರೋಪಿಸಿದರು. ದೇಶದ ಪ್ರಜಾಪ್ರಭುತ್ವವನ್ನು … Continued

156 ದೇಶಗಳಿಗೆ ಮಾನ್ಯವಾದ ಇ-ವೀಸಾ ಮರುಸ್ಥಾಪಿಸಿದ ಭಾರತ; ಎಲ್ಲರಿಗೂ ನಿಯಮಿತ ವೀಸಾಗಳು

ನವದೆಹಲಿ: ಅಮಾನತುಗೊಂಡ ಎರಡು ವರ್ಷಗಳ ನಂತರ 156 ದೇಶಗಳ ನಾಗರಿಕರಿಗೆ ಪ್ರಸ್ತುತ ಮಾನ್ಯವಾಗಿರುವ ಐದು ವರ್ಷಗಳ ಇ-ಟೂರಿಸ್ಟ ವೀಸಾ ಮತ್ತು ಎಲ್ಲ ದೇಶಗಳ ಪ್ರಜೆಗಳಿಗೆ ನಿಯಮಿತ ಪೇಪರ್ ವೀಸಾವನ್ನು ಭಾರತವು ತಕ್ಷಣವೇ ಜಾರಿಗೆ ತರಲಿದೆ. ಅಮೆರಿಕ ಮತ್ತು ಜಪಾನಿನ ಪ್ರಜೆಗಳಿಗೆ ತಾಜಾ ದೀರ್ಘಾವಧಿಯ (10 ವರ್ಷ) ಪ್ರವಾಸಿ ವೀಸಾವನ್ನು ಸಹ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. … Continued

ಹಿಜಾಬ್ ನಿಷೇಧ ಪ್ರಶ್ನಿಸಿದ ಮೇಲ್ಮನವಿಯ ತುರ್ತು ವಿಚಾರಣೆಗೆ ನಕಾರ, ಹೋಳಿ ನಂತರ ಪರಿಗಣನೆ ಎಂದ ಸುಪ್ರೀಂ ಕೋರ್ಟ್

ನವದೆಹಲಿ: ಕರ್ನಾಟಕದ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧದ ಆದೇಶ ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್‌ ತೀರ್ಪಿನ ವಿರುದ್ಧ ಸಲ್ಲಿಸಲಾದ ಮೇಲ್ಮನವಿಗಳ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಬುಧವಾರ ನಿರಾಕರಿಸಿದೆ. ಇಂದು, ಬುಧವಾರ ಈ ವಿಷಯವನ್ನು ಪ್ರಸ್ತಾಪಿಸಿದ ಹಿರಿಯ ವಕೀಲ ಸಂಜಯ್ ಹೆಗ್ಡೆ ಅವರು, ” ಹಲವಾರು ಹುಡುಗಿಯರು ಕಾಲೇಜುಗಳಿಗೆ ಹಾಜರಾಗಬೇಕಾಗಿದೆ. ಹೀಗಾಗಿ ತುರ್ತು … Continued

ಶ್ರೀನಗರದಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

ಶ್ರೀನಗರದಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಸಿಬ್ಬಂದಿ; ಮುಂದುವರಿದ ಕಾರ್ಯಾಚರಣೆ ನಿನ್ನೆ ಜಮ್ಮು-ಕಾಶ್ಮೀರದ ಪುಲ್ವಾಮಾದ ಆವಂತಿಪೋರಾದಲ್ಲಿ ಕೂಡ ಭಯೋತ್ಪಾದಕರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಅದರಲ್ಲಿ ಜೈಶ್​ ಇ ಮೊಹಮ್ಮದ್​ ಸಂಘಟನೆಯ ಉಗ್ರನೊಬ್ಬನನ್ನು ಹತ್ಯೆ ಶ್ರೀನಗರದ ನೌಗಮ್​​ ಪ್ರದೇಶದಲ್ಲಿ ಇಂದು, ಬುಧವಾರ ಭದ್ರತಾ ಪಡೆ ಸಿಬ್ಬಂದಿ ಮೂವರು ಉಗ್ರರನ್ನು ಹತ್ಯೆ ಮಾಡಿದ್ದಾರೆ. … Continued

ಏಕಕಾಲಕ್ಕೆ ಕರ್ನಾಟಕದ 78 ಕಡೆಗಳಲ್ಲಿ 200ಕ್ಕೂ ಹೆಚ್ಚು ಅಧಿಕಾರಿಗಳಿಂದ ಎಸಿಬಿ ದಾಳಿ

ಬೆಳ್ಳಂಬೆಳಗ್ಗೆ 75 ಕಡೆಗಳಲ್ಲಿ ಎಸಿಬಿ ದಾಳಿ ಮಾಡಿರುವ 18 ಸರ್ಕಾರಿ ಅಧಿಕಾರಿಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಬೆಂಗಳೂರು: ಕರ್ನಾಟಕದ 78 ಕಡೆಗಳಲ್ಲಿ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನ ಮೂರು ಸ್ಥಳಗಳು ಸೇರಿ ರಾಜ್ಯದ 78 ಸ್ಥಳಗಳಲ್ಲಿ ಎಸಿಬಿ ದಾಳಿ ನಡೆಸಿದೆ. 18 ಸರ್ಕಾರಿ ಅಧಿಕಾರಿಗಳಿಗೆ ಸೇರಿದ 78 ಸ್ಥಳಗಳಲ್ಲಿ, ಏಕಕಾಲಕ್ಕೆ 200ಕ್ಕೂ ಹೆಚ್ಚು … Continued

ಯುದ್ಧ ಭೂಮಿಯಿಂದ 30 ಲಕ್ಷ ಉಕ್ರೇನಿಯನ್ನರ ಪಲಾಯನ.. ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ರಾಜಿ ಸಂಧಾನದ ಸುಳಿವು ನೀಡಿದ ಉಕ್ರೇನ್‌ ಅಧ್ಯಕ್ಷ

ರಷ್ಯಾದ ಪಡೆಗಳು ತಮ್ಮ ಆಕ್ರಮಣವನ್ನು ಮುಂದುವರೆಸಿದ್ದು, ಈಗ ಉಕ್ರೇನಿಯನ್ ರಾಜಧಾನಿ ಕೀವ್‌ನ ಹೃದಯಭಾಗಕ್ಕೆ ಹತ್ತಿರವಾಗುತ್ತಿದ್ದಂತೆ ಸ್ಫೋಟಗಳು ಮತ್ತು ಜ್ವಾಲೆಗಳು ಮಂಗಳವಾರ ಕಾಣಿಸಿಕೊಂಡವು. ಈ ವೇಳೆ ಸುಮಾರು ಮೂವತ್ತು ಲಕ್ಷ ಉಕ್ರೇನಿಯನ್ನರು ಪಲಾಯನ ಮಾಡಿದ್ದಾರೆ ಎಂದು ವರದಿಗಳು ಅಂದಾಜಿಸಿವೆ. ರಷ್ಯಾ-ಉಕ್ರೇನ್ ಘರ್ಷಣೆಯು ಇಪ್ಪತ್ತನೇ ದಿನಕ್ಕೆ ಕಾಲಿಟ್ಟಿದ್ದು, ಅಧ್ಯಕ್ಷ ಝೆಲೆನ್ಸ್ಕಿ ಶೀಘ್ರದಲ್ಲೇ ಯುದ್ಧದ ನಿಲುಗಡೆಗೆ ಕಾರಣವಾಗುವ ರಾಜಿ ಬಗ್ಗೆ … Continued

ಮುಸ್ಲಿಂ ಹುಡುಗಿಯರನ್ನು ಇನ್ನು ಮುಂದೆ ನಿರ್ಬಂಧಿಸಲಾಗುವುದಿಲ್ಲ: ಹಿಜಾಬ್ ತೀರ್ಪನ್ನು ಶ್ಲಾಘಿಸಿದ ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್

ಇಸ್ಲಾಮಿಕ್ ನಂಬಿಕೆಯಲ್ಲಿ ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯ ಭಾಗವಲ್ಲ ಎಂದು ಮಂಗಳವಾರ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪನ್ನು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಸ್ವಾಗತಿಸಿದ್ದಾರೆ. ಮುಸ್ಲಿಂ ಯುವತಿಯರನ್ನು ಮನೆಯ ನಾಲ್ಕು ಗೋಡೆಗಳ ಮಧ್ಯೆ ತಳ್ಳುವ ಇಂತಹ ನಿರಂತರ ಪ್ರಯತ್ನಗಳು ವಿಫಲವಾಗುತ್ತದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಹೈಕೋರ್ಟ್‌ ತರಗತಿಗಳಲ್ಲಿ ಹಿಜಾಬ್ ಧರಿಸಲು ಅನುಮತಿ … Continued

ಕ್ರಮಕ್ಕೆ ಪ್ರತಿಕ್ರಮವಾಗಿ ಅಮೆರಿಕ ಅಧ್ಯಕ್ಷ ಬೈಡನ್‌ ಸೇರಿ ಹಲವಾರು ಅಮೆರಿಕದ ಉನ್ನತ ಅಧಿಕಾರಿಗಳನ್ನು ನಿರ್ಬಂಧಿಸಿದ ರಷ್ಯಾ

ಮಾಸ್ಕೋ: ಅಮೆರಿಕದ ನಿರ್ಬಂಧಗಳಿಗೆ ಪ್ರತಿಕ್ರಿಯೆಯಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಇತರ ಹನ್ನೆರಡು ಉನ್ನತ ಅಧಿಕಾರಿಗಳು ದೇಶಕ್ಕೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ಮಂಗಳವಾರ ತಿಳಿಸಿದೆ. ಈ ಕ್ರಮವು ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಮತ್ತು ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರಿಗೂ ಅನ್ವಯಿಸುತ್ತದೆ, “ಪ್ರಸ್ತುತ ಅಮೆರಿಕ ಆಡಳಿತವು ಅನುಸರಿಸುತ್ತಿರುವ ಅತ್ಯಂತ … Continued

12-14 ವರ್ಷದೊಳಗಿನ 4.71 ಕೋಟಿ ಮಕ್ಕಳಿಗೆ ಇಂದಿನಿಂದ ಕೋವಿಡ್‌ ಲಸಿಕೆ ನೀಡುವುದು ಆರಂಭ

ನವದೆಹಲಿ: 12ರಿಂದ 14 ವರ್ಷ ವಯಸ್ಸಿನ ಅಂದಾಜು 4.71 ಕೋಟಿ ಮಕ್ಕಳಿಗೆ ಬುಧವಾರದಿಂದ ಲಸಿಕೆ ನೀಡಲಾಗುತ್ತಿದ್ದು, 60 ವರ್ಷಕ್ಕಿಂತ ಮೇಲ್ಪಟ್ಟ 13.75 ಕೋಟಿ ಜನರು ತಮ್ಮ ಬೂಸ್ಟರ್ ಶಾಟ್‌ಗಳಿಗೆ ಅರ್ಹರಾಗಿರುತ್ತಾರೆ ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ. ಭಾರತದಲ್ಲಿ ಶಾಲೆಗಳು ಪ್ರಾರಂಭವಾಗುತ್ತಿದ್ದಂತೆ 12ರಿಂದ14 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವ ಬಹು ನಿರೀಕ್ಷಿತ ನಿರ್ಧಾರವನ್ನು ಸೋಮವಾರ ಪ್ರಕಟಿಸಿದ … Continued

ರಿಯಾಯ್ತಿ ದರದಲ್ಲಿ ರಷ್ಯಾದ ಕಚ್ಚಾ ತೈಲ ಖರೀದಿಗೆ ಭಾರತದಿಂದ ಮಾತುಕತೆ

ನವದೆಹಲಿ: ರಷ್ಯಾ ಕಚ್ಚಾ ತೈಲವನ್ನು ಖರೀದಿಸಲು ಭಾರತವು ಆಯ್ಕೆಗಳನ್ನು ಅನ್ವೇಷಿಸುತ್ತಿದೆ ಎಂದು ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ. ಉಕ್ರೇನ್ ಸಂಘರ್ಷಕ್ಕೆ ಜಾಗತಿಕ ಹಿನ್ನಡೆಯ ಹಿನ್ನೆಲೆಯಲ್ಲಿ ಬೆಲೆಗಳು ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದಿವೆ. ನವ ದೆಹಲಿಯು ಮಾಸ್ಕೋದೊಂದಿಗೆ ಐತಿಹಾಸಿಕ ರಾಜತಾಂತ್ರಿಕ ಮತ್ತು ರಕ್ಷಣಾ ಸಂಬಂಧಗಳನ್ನು ಹೊಂದಿದೆ, ಕಳೆದ ವರ್ಷದ ಕೊನೆಯಲ್ಲಿ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರು ಅಪರೂಪದ ಸಾಗರೋತ್ತರ … Continued