ಉತ್ತರ ಪ್ರದೇಶ, ಮಣಿಪುರ, ಉತ್ತರಾಖಂಡ ಬಿಜೆಪಿಗೆ ಮುನ್ನಡೆ, ಪಂಜಾಬಿನಲ್ಲಿ ಭರ್ಜರಿ ಜಯಭೇರಿಯತ್ತ ಆಪ್‌, ಗೋವಾದಲ್ಲಿ ನೆಕ್‌ಟು ನೆಕ್‌

ಉತ್ತರ ಪ್ರದೇಶದ ಸೇರಿದಂತೆ ಐದು ರಾಜ್ಯಗಳಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಈವರೆಗೆ ಬಂದ ಮಾಹಿತಿ ಪ್ರಕಾರ. ಉತ್ತರ ಪ್ರದೇಶ, ಉತ್ತರಾಖಂಡ ಹಾಗೂ ಮಣಿಪುರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಪಂಜಾಬ್‌ನಲ್ಲಿ ಎಎಪಿ ಭಾಋಈ ಮುನ್ನಡೆ ಪಡೆದಿದೆ. ಗೋವಾದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಮಧ್ಯೆ ನೆಕ್‌ ಟು ನೆಕ್‌ ಫೈಟ್‌ ನಡೆಯುತ್ತಿದೆ. ಈವರೆಗೆ ಬಂದ ವಿವಿಧ ಕ್ಷೇತ್ರಗಳಲ್ಲಿ ಮುನ್ನಡೆಗಳು … Continued

ಕೃಷಿ ಯಂತ್ರ ಖರೀದಿಗೆ ನೀಡುತ್ತಿರುವ ಸಬ್ಸಿಡಿ ಶೇ.50ರಿಂದ 75%ಕ್ಕೆ ಏರಿಕೆ

ಬೆಂಗಳೂರು: ಸಾಮಾನ್ಯ ವರ್ಗದ ಜನರು ಕೃಷಿ ಯಂತ್ರೋಪಕರಣಗಳನ್ನು ಖರೀದಿಸಲು ನೀಡಲಾಗುತ್ತಿರುವ ಸಬ್ಸಿಡಿಯನ್ನು ಶೇ.50ರಿಂದ 75ಕ್ಕೆ ಏರಿಕೆ ಮಾಡಲು ಕೃಷಿ ಸಚಿವ ಬಿ.ಸಿ.ಪಾಟೀಲ ವಿಧಾನಸಭೆಗೆ ತಿಳಿಸಿದರು. ಶಾಸಕ ಆನಂದ್ ಸಿದ್ದನ್ಯಾಮೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸಾಮಾನ್ಯವರ್ಗದ ಜನರು ಕೃಷಿ ಯಂತ್ರೋಪಕರಣಗಳನ್ನು ಖರೀದಿಸಲು ಈವರೆಗೂ ಶೇ..50ರಷ್ಟು ಸಬ್ಸಿಡಿ ನೀಡಲಾಗುತ್ತಿತ್ತು. ಇದನ್ನು ಶೇ.75ಕ್ಕೆ ಏರಿಸುವ ಬಗ್ಗೆ ಚರ್ಚೆ ಮಾಡಲಾಗಿದೆ. … Continued

ಪಾರ್ಟಿ ಬಳಿಕ ತೆಪ್ಪದಲ್ಲಿ ರೌಂಡ್ಸ್ ಹಾಕುವಾಗ ದುರಂತ; ಮೂವರು ನೀರುಪಾಲು

ಕೋಲಾರ: ಪಾರ್ಟಿ ಮುಗಿಸಿ ತೆಪ್ಪದಲ್ಲಿ ರೌಂಡ್ಸ್ ಹಾಕುವಾಗ ಕೆರೆಯಲ್ಲಿ ತೆಪ್ಪ ಮಗುಚಿ ಬಿದ್ದು ಮೂವರು ಯುವಕರು ನೀರುಪಾಲಾದ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ನೇರಳಕೆರೆ ಸಮೀಪ ನಡೆದಿದೆ. ಮೃತರನ್ನು ನವೀನ(32), ರಾಜೇಂದ್ರ(32), ಮೋಹನ್(28) ಎಂದು ಹೇಳಲಾಗಿದೆ. ಇವರೊಂದಿಗೆ ಬಂದಿದ್ದ ಮತ್ತೊಬ್ಬ ಊಟ ತರಲು ಹೋಗಿದ್ದ ಕಾರಣಕ್ಕೆ ಬದುಕುಳಿದಿದ್ದಾನೆ ಎನ್ನಲಾಗಿದೆ. ಕೆರೆ ಬಳಿ ಪಾರ್ಟಿ ಮಾಡಿದ … Continued

ಅಯೋಧ್ಯಾ ರಾಮ ಜನ್ಮಭೂಮಿಯಿಂದ ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೆ ವಿಮಾನ-ರೈಲ್ವೆ ಸಂಪರ್ಕ: ಶಶಿಕಲಾ ಜೊಲ್ಲೆ

ಬೆಂಗಳೂರು: ಹನುಮ ಜನ್ಮಸ್ಥಳ ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೆ ಅಯೋಧ್ಯೆಯಿಂದ ವಿಮಾನಯಾನ ಹಾಗೂ ರೈಲ್ವೆ ಮೂಲಕ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಈ ಬಗ್ಗೆ ಶೀಘ್ರ ಕ್ರಮಕೈಗೊಳ್ಳಲಾಗುವುದು ಎಂದು ಮುಜರಾಯಿ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಭರವಸೆ ನೀಡಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಬುಧವಾರ ಎನ್‌.ರವಿಕುಮಾರ್‌ ಪ್ರಶ್ನೆಗೆ ಉತ್ತರಿಸಿದ ಅವರು, ಹನುಮನ ಜನ್ಮಸ್ಥಳ ಅಂಜನಾದ್ರಿಯ ಸಮಗ್ರ ಅಭಿವೃದ್ದಿಯ … Continued

ತನ್ನ ಹೃದಯಕ್ಕೆ ಹಂದಿಯ ಹೃದಯ ಕಸಿ ಮಾಡಿಸಿಕೊಂಡಿದ್ದ ವಿಶ್ವದ ಮೊದಲ ವ್ಯಕ್ತಿ ಶಸ್ತ್ರಚಿಕಿತ್ಸೆಯ ಎರಡು ತಿಂಗಳ ನಂತರ ಸಾವು

ಬಾಲ್ಟಿಮೋರ್ (ಅಮೆರಿಕ) : ಹಂದಿಯಿಂದ ಹೃದಯ ಕಸಿ ಮಾಡಿಸಿಕೊಂಡಿದ್ದ ವಿಶ್ವದ ಮೊದಲ ವ್ಯಕ್ತಿ ಶಸ್ತ್ರಚಿಕಿತ್ಸೆ ನಡೆದು ಎರಡು ತಿಂಗಳ ನಂತರ ಮೃತಪಟ್ಟಿದ್ದಾರೆ ಎಂದು ಶಸ್ತ್ರಚಿಕಿತ್ಸೆ ನಡೆಸಿದ ಮೇರಿಲ್ಯಾಂಡ್ ಆಸ್ಪತ್ರೆ ಬುಧವಾರ ಪ್ರಕಟಿಸಿದೆ. ಡೇವಿಡ್ ಬೆನೆಟ್ (57) ಅವರು ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ವೈದ್ಯಕೀಯ ಕೇಂದ್ರದಲ್ಲಿ ಮಂಗಳವಾರ ನಿಧನರಾದರು. ವೈದ್ಯರು ಸಾವಿಗೆ ನಿಖರವಾದ ಕಾರಣವನ್ನು ನೀಡಲಿಲ್ಲ, ಅವರ ಸ್ಥಿತಿಯು … Continued

NEET-UG: ಎಲ್ಲ ಕೆಟಗರಿ ಅಭ್ಯರ್ಥಿಗಳಿಗೂ ಗರಿಷ್ಠ ವಯಸ್ಸಿನ ಮಿತಿ ತೆಗೆದುಹಾಕಿದ ರಾಷ್ಟ್ರೀಯ ವೈದ್ಯಕೀಯ ಆಯೋಗ

ನವದೆಹಲಿ: ಮಹತ್ವದ  ನಿರ್ಧಾರವೊಂದರಲ್ಲಿ ವೈದ್ಯಕೀಯ ಪದವಿ ಪ್ರವೇಶ ಪರೀಕ್ಷೆ (NEET-UG )ಯಲ್ಲಿ ಕಾಣಿಸಿಕೊಳ್ಳಲು ಈವರೆಗೆ ಇದ್ದ ಗರಿಷ್ಠ ವಯಸ್ಸಿನ ಮಿತಿಯನ್ನು ಅನ್ನು ಎಲ್ಲಾ ಅಭ್ಯರ್ಥಿಗಳಿಗೆ ತೆಗೆದುಹಾಕಲಾಗಿದೆ ಎಂದು ದೇಶದ ವೈದ್ಯಕೀಯ ಶಿಕ್ಷಣದ ಉನ್ನತ ನಿಯಂತ್ರಣ ಸಂಸ್ಥೆಯಾದ ರಾಷ್ಟ್ರೀಯ ವೈದ್ಯಕೀಯ ಆಯೋಗ (the National Medical Commission) ತಿಳಿಸಿದೆ. ಈ ಮೊದಲು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 25 … Continued

ಅಸ್ಸಾಂ ಸ್ಥಳೀಯ ಸಂಸ್ಥೆ ಚುನಾವಣೆ: ಬಿಜೆಪಿ ಕ್ಲೀನ್ ಸ್ವೀಪ್, 80 ಪೌರ ಸಂಸ್ಥೆಗಳಲ್ಲಿ 73ರಲ್ಲಿ ಗೆಲುವು

ಗುವಾಹತಿ: ರಾಜ್ಯ ಚುನಾವಣಾ ಆಯೋಗ (ಎಸ್‌ಇಸಿ) ಪ್ರಕಟಿಸಿದ ಫಲಿತಾಂಶಗಳ ಪ್ರಕಾರ, ಭಾರತೀಯ ಜನತಾ ಪಕ್ಷ (ಬಿಜೆಪಿ) ಬುಧವಾರ ಅಸ್ಸಾಂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಟ್ಟು 80 ರಲ್ಲಿ 73 ಪೌರ ಸಂಸ್ಥೆಗಳಲ್ಲಿ ಭರ್ಜರಿ ಜಯ ಸಾಧಿಸಿದೆ. ಈಶಾನ್ಯ ರಾಜ್ಯದಲ್ಲಿ ಮುಖ್ಯ ಪ್ರತಿಪಕ್ಷವಾಗಿರುವ ಕಾಂಗ್ರೆಸ್ ಪಕ್ಷವು ಇಲ್ಲಿಯವರೆಗೆ ಒಂದೇ ಒಂದು ಪೌರ ಸಂಸ್ಥೆಯನ್ನು ಗೆಲ್ಲಲು ವಿಫಲವಾಗಿದೆ. ಒಂದು … Continued

ಗೃಹ ಸಚಿವ ಅರಗ ಜ್ಞಾನೇಂದ್ರರನ್ನು ಭೇಟಿಯಾದ ತಮಿಳುನಾಡು ಸಚಿವರ ಪುತ್ರಿ; ತಮಗೆ ಪೊಲೀಸ್ ರಕ್ಷಣೆ ನೀಡುವಂತೆ ಮನವಿ

ಬೆಂಗಳೂರು: ಬೆಂಗಳೂರು : ತಮಿಳು ನಾಡು ಮುಜರಾಯಿ ಖಾತೆ ಸಚಿವ ಶೇಖರ್ ಬಾಬು ಅವರ ಪುತ್ರಿ ಜಯ ಕಲ್ಯಾಣಿ (24) ಹಾಗೂ ಅವರ ಪತಿ ಸತೀಶ ಇಂದು, ಬುಧವಾರ ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ಭೇಟಿಯಾಗಿ, ಪೊಲೀಸ್ ರಕ್ಷಣೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ. ಸಚಿವರನ್ನು ಭೇಟಿಯಾಗುವ ಪೂರ್ವದಲ್ಲಿ, ಇವರಿಬ್ಬರು ನಗರ ಪೊಲೀಸ್ ಆಯುಕ್ತರನ್ನು … Continued

ಮಾರಿಯುಪೋಲ್‌ನಲ್ಲಿ 4,00,000 ಜನರನ್ನು ಒತ್ತೆಯಾಳಾಗಿಟ್ಟುಕೊಂಡ ರಷ್ಯಾ-ಉಕ್ರೇನಿಯನ್ ಸಚಿವರ ಆರೋಪ, ಮಾತುಕತೆ ಪ್ರಗತಿಯಲ್ಲಿ-ರಷ್ಯಾ

ಕೀವ್‌: ಉಕ್ರೇನ್‌ನ ವಿದೇಶಾಂಗ ವ್ಯವಹಾರಗಳ ಸಚಿವ ಡಿಮಿಟ್ರೋ ಕುಲೆಬಾ ಅವರು ಬುಧವಾರ ಮಾರಿಯುಪೋಲ್‌ನಲ್ಲಿ 4,00,000 ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದು, ನಗರದಲ್ಲಿ ‘ವಿವೇಚನಾರಹಿತ’ ಶೆಲ್ ದಾಳಿ ಮುಂದುವರಿದಿದೆ ಎಂದು ಹೇಳಿದ್ದಾರೆ. ಸುಮಾರು 3,000 ನವಜಾತ ಶಿಶುಗಳಿಗೆ ಆಹಾರ ಮತ್ತು ಔಷಧದ ಕೊರತೆ ಇದೆ ಎಂದು ಅವರು ಹೇಳಿದರು. ಮಾರಿಯುಪೋಲ್‌ನಲ್ಲಿ ರಷ್ಯಾ 4,00,000 ಕ್ಕೂ ಹೆಚ್ಚು ಜನರನ್ನು ಒತ್ತೆಯಾಳಾಗಿ … Continued

ಎಸಿಬಿ ಬಲೆಗೆ ಬಿದ್ದ ಸಬ್ ರಿಜಿಸ್ಟ್ರಾರ್, ಬಾಂಡ್ ರೈಟರ್

ಬೆಳಗಾವಿ: ಪಿತ್ರಾರ್ಜಿತ ಆಸ್ತಿ ಪರಭಾರೆಗೆ ಸಂಬಂಧಪಟ್ಟ ದಾಖಲಾತಿಗಳನ್ನು ನೀಡಲು 4,000 ರೂ.ಗಳನ್ನು ಲಂಚ ಕೇಳಿದ ಸವದತ್ತಿ ತಾಲೂಕು ಮುರಗೋಡದ ಸಬ್ ರಿಜಿಸ್ಟ್ರಾರ್ ಮತ್ತು ಸಬ್ ರಿಜಿಸ್ಟ್ರಾರ್ ಪರವಾಗಿ ಲಂಚವನ್ನು ಸ್ವೀಕರಿಸಿದ ಬಾಂಡ್ ರೈಟರ್ ಬುಧವಾರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಬಲೆಗೆ ಬಿದ್ದಿದ್ದಾರೆ. ಆರೋಪಿಗಳಾದ ಸಬ್ ರಿಜಿಸ್ಟ್ರಾರ್ ಸಂಜೀವ ವೀರಭದ್ರ ಕಪಾಲಿ ಹಾಗೂ ಸ್ಥಳೀಯ ಬಾಂಡ್ … Continued