ವಿಧಾನ ಪರಿಷತ್ ಚುನಾವಣೆ: ಮೂವರು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, ಒಂದು ಕ್ಷೇತ್ರಕ್ಕೆ ಹೆಸರು ಪ್ರಕಟಿಸದ ಬಿಜೆಪಿ

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಮೂವರು ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ವಾಯವ್ಯ ಶಿಕ್ಷಕರ ಕ್ಷೇತ್ರ- ಅರುಣ್ ಶಹಾಪುರ (ಹಾಲಿ ಸದಸ್ಯ), ವಾಯವ್ಯ ಪದವೀಧರ ಕ್ಷೇತ್ರ – ಹನುಮಂತ ನಿರಾಣಿ (ಹಾಲಿ ಸದಸ್ಯ)ದಕ್ಷಿಣ ಪದವೀಧರ ಕ್ಷೇತ್ರ -ಎಂ.ವಿ.ರವಿಶಂಕರ್ ಅವರ ಹೆಸರನ್ನು ಬಿಡುಗಡೆ ಮಾಡಿದೆ. ಗೋ.ಮಧುಸೂದನ ಅವರಿಗೆ ಈ ಬಾರಿಯೂ ಟಿಕೆಟ್ ನೀಡಿಲ್ಲ. … Continued

ಸಮಾಜದವಾದಿ ಪಾರ್ಟಿ ಜಂಗಲ್ ರಾಜ್’ ಪುನಃ ಬರಬಹುದೆಂಬ ಭಯದಲ್ಲಿ ಬಿಜೆಪಿಗೆ ಮತ ಹಾಕಿದ ದಲಿತರು- ಒಬಿಸಿಗಳು:ಮಾಯಾವತಿ

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ 403 ಸ್ಥಾನಗಳಲ್ಲಿ 1 ಸ್ಥಾನವನ್ನು ಮಾತ್ರ ಗೆದ್ದ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಸಾಧನೆಗೆ ಪ್ರತಿಕ್ರಿಯಿಸಿದ ಮಾಯಾವತಿ, ಸಮಾಜವಾದಿ ಪಕ್ಷದ ಜಂಗಲ್ ರಾಜ್‌ನ ಮರುಕಳಿಸುವಿಕೆಯ ಭಯದಿಂದ ದಲಿತರು ಸಹ ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಹೇಳಿದ್ದಾರೆ. ಪ್ರಾಥಮಿಕವಾಗಿ ಮೇಲ್ಜಾತಿ ಹಿಂದೂಗಳು ಮತ್ತು ಹಲವಾರು ಇತರೆ ಹಿಂದುಳಿದ ವರ್ಗಗಳ ಸಮುದಾಯಗಳಿಗೆ ಸೇರಿದ … Continued

ಏಪ್ರಿಲ್ 26 ರಿಂದ ಸಿಬಿಎಸ್‌ಇ 10, 12 ತರಗತಿ ಟರ್ಮ್‌-2 ಬೋರ್ಡ್ ಪರೀಕ್ಷೆಗಳು ; ಇಲ್ಲಿದೆ ಸಂಪೂರ್ಣ ಮಾಹಿತಿ

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಗುರುವಾರ 10 ಮತ್ತು 12 ನೇ ತರಗತಿಗಳಿಗೆ ಟರ್ಮ್ 2 ಪರೀಕ್ಷೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಧಿಕೃತ ಸೈಟ್‌ನಲ್ಲಿ ಬಿಡುಗಡೆ ಮಾಡಿದ ಸುತ್ತೋಲೆಯಲ್ಲಿ, ಎರಡೂ ತರಗತಿಗಳಿಗೆ ಏಪ್ರಿಲ್ 26, 2022 ರಿಂದ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಮಂಡಳಿ ತಿಳಿಸಿದೆ. 10 ನೇ ತರಗತಿಗೆ, ಮೇ 24 … Continued

ವಸತಿ ಯೋಜನೆ ಆದಾಯ ಮಿತಿ ಹೆಚ್ಚಳಕ್ಕೆ ಕ್ರಮ: ಸಚಿವ ಸೋಮಣ್ಣ

ಬೆಂಗಳೂರು: ರಾಜ್ಯದ ವಸತಿ ಯೋಜನೆಗಳ ಫಲಾನುಭವಿಗಳಿಗೆ ನಿಗದಿಪಡಿಸಿರುವ ಆದಾಯದ ಮಿತಿಯನ್ನು ಹೆಚ್ಚಳ ಮಾಡಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ ವಿಧಾನಸಭೆಯಲ್ಲಿ ಇಂದು, ಶುಕ್ರವಾರ ಹೇಳಿದರು. ಶೂನ್ಯ ವೇಳೆಯಲ್ಲಿ ಕಾಂಗ್ರೆಸ್ ರಮೇಶ್ ಕುಮಾರ್ ಾವರು ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಅವರು, ವಸತಿ ಯೋಜನೆಗಳಿಗೆ ಫಲಾನುಭವಿಗಳಾಗಲು ಪ್ರಸ್ತುತ 32 ಸಾವಿರ ರೂ.ಗಳ ವಾರ್ಷಿಕ ಆದಾಯ ನಿಗದಿ ಮಾಡಲಾಗಿದ್ದು, … Continued

17 ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ.. ಇದು ಭಾರತದ ಎಷ್ಟು ಭೂ ಪ್ರದೇಶ-ಜನಸಂಖ್ಯೆ ಒಳಗೊಂಡಿದೆಯೆಂದರೆ..

ನವದೆಹಲಿ: ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ಮತ್ತು ಮಣಿಪುರದ ನಾಲ್ಕು ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಅಧಿಕಾರಕ್ಕೆ ಮರಳುವುದರೊಂದಿಗೆ, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು (ಎನ್‌ಡಿಎ) 17 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶ ಸೇರಿ ಈಗ ದೇಶದ 44% ರಷ್ಟು ಭೂ ಪ್ರದೇಶಗಳನ್ನು ಒಳಗೊಂಡಿ ಮತ್ತು ಶೇಕಡಾ 49.5 ಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಒಳಗೊಂಡಿದೆ. … Continued

ಬೆಂಗಳೂರಿನ ಸುತ್ತಮುತ್ತ 4 ಹೊಸ ಸ್ಯಾಟ್‌ಲೈಟ್‌ ಟೌನ್ಶಿಪ್‌, ಕರ್ನಾಟಕದಲ್ಲಿ 6 ಸಮಗ್ರ ನಗರಗಳ ನಿರ್ಮಾಣಕ್ಕೆ ಚಿಂತನೆ:ಸಿಎಂ ಬೊಮ್ಮಾಯಿ

ಬೆಂಗಳೂರು: ‘ಬೆಂಗಳೂರಿನ ಸುತ್ತಲೂ ನಾಲ್ಕು ಹೊಸ ಬೆಂಗಳೂರು’ ಮತ್ತು ಕರ್ನಾಟಕದಲ್ಲಿ ಆರು ಸಮಗ್ರ ಪಟ್ಟಣಗಳನ್ನು ನಿರ್ಮಿಸುವ ಕಲ್ಪನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಪ್ರಸ್ತಾಪಿಸಿದ್ದಾರೆ. 2040 ರಲ್ಲಿ ಬೆಂಗಳೂರಿನ ಜನಸಂಖ್ಯೆಯು ಈಗಿರುವ 1.3 ಕೋಟಿಯಿಂದ ಮೂರರಿಂದ ನಾಲ್ಕು ಕೋಟಿಗೆ ಏರುತ್ತದೆ ಎಂದು ಊಹಿಸಿದ ಬೊಮ್ಮಾಯಿ ನಗರವನ್ನು ಉಪಗ್ರಹಗಳಿಂದ ಸುತ್ತುವರಿದ ಗ್ರಹದಂತೆ ಅಭಿವೃದ್ಧಿಪಡಿಸಬೇಕು ಎಂದು ಅಭಿಪ್ರಾಯಪಟ್ಟರು. ನನ್ನ … Continued

ಉತ್ತರ ಪ್ರದೇಶ ಚುನಾವಣೆ: ಕಡಿಮೆ -ಹೆಚ್ಚು ಅಂತರದಿಂದ ಸೋಲು-ಗೆಲುವಿನ ಮಾಹಿತಿ ಇಲ್ಲಿದೆ..

ನವದೆಹಲಿ: ಉತ್ತರ ಪ್ರದೇಶದಲ್ಲಿ ಜನರು ಮತ್ತೊಮ್ಮೆ ಬಿಜೆಪಿಗೆ ಸರ್ಕಾರ ರಚಿಸಲು ಮತ ಚಲಾಯಿಸಿದ್ದಾರೆ. ಬರೋಬ್ಬರಿ 255 ಸೀಟುಗಳನ್ನು ಬಿಜೆಪಿ ಪಡೆದಿದ್ದು, ಮೈತ್ರಿ ಪಕ್ಷಗಳನ್ನೂ ಸೇರಿ ಒಟ್ಟು 272ಕ್ಕೆ ಕ್ಷೇತ್ರಗಳಲ್ಲಿ ಜಯಗಳಿಸಿದೆ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷಕ್ಕೆ ನಿರಾಸೆಯಾಗಿದೆ. ಕಾಂಗ್ರೆಸ್ ಮತ್ತು ಬಿಎಸಿಪಿಯ ರಾಜಕೀಯ ನೆಲ ಜಾರುತ್ತಿರುವಂತೆ ತೋರುತ್ತಿದೆ. ಉತ್ತರ ಪ್ರದೇಶದಲ್ಲಿ ಅನೇಕ ಕಡೆ ಅಭ್ಯರ್ಥಿಗಳು ತೀವ್ರ … Continued

ಬ್ರಿಟಿಷ್ ಕೌನ್ಸಿಲ್ ಜೊತೆ 3 ವರ್ಷಗಳ ಒಡಂಬಡಿಕೆಗೆ ಉನ್ನತ ಶಿಕ್ಷಣ ಇಲಾಖೆ ಅಂಕಿತ

ಬೆಂಗಳೂರು: ರಾಜ್ಯದ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದಲ್ಲಿ ಉದ್ಯೋಗಾವಕಾಶಗಳನ್ನು ತಂದುಕೊಡುವ ಮೂರು ವರ್ಷಗಳ ಒಡಂಬಡಿಕೆಗೆ ಕರ್ನಾಟಕ ಸರ್ಕಾರ ಮತ್ತು ಬ್ರಿಟಿಷ್ ಕೌನ್ಸಿಲ್ ಸಂಸ್ಥೆಗಳು ಶುಕ್ರವಾರ ಅಂಕಿತ ಹಾಕಿವೆ. ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಪರವಾಗಿ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ ನಾಯಕ್ ಮತ್ತು ಬ್ರಿಟಿಷ್ ಕೌನ್ಸಿಲ್ ಪರವಾಗಿ ಆ ಸಂಸ್ಥೆಯ ದಕ್ಷಿಣ … Continued

ಇಬ್ಬರು ಕೂಲಿ ಕಾರ್ಮಿಕರನ್ನು ತುಳಿದು ಸಾಯಿಸಿದ ಆನೆ

ಹಾಸನ: ಕಾಫಿ ಎಸ್ಟೇಟ್‌ನ ಇಬ್ಬರು ಕೂಲಿ ಕಾರ್ಮಿಕರು ಆನೆ ತುಳಿದು ಮೃತಪಟ್ಟ ಘಟನೆ ಬೇಲೂರು ತಾಲೂಕಿನ ಕಡೆಗರ್ಜೆ ಗ್ರಾಮದ ಬಳಿ ಶುಕ್ರವಾರ ನಡೆದಿದೆ. ಮೃತರನ್ನು ಅದೇ ಗ್ರಾಮದ ಚಿಕ್ಕಯ್ಯ (50) ಮತ್ತು ಈರಯ್ಯ (52) ಎಂದು ಗುರುತಿಸಲಾಗಿದೆ. ಕಾರ್ಮಿಕರು ಕಾಫಿ ಎಸ್ಟೇಟ್‌ಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಆನೆಯು ಮೊದಲು ತನ್ನ ಸೊಂಡಿಲಿನಿಂದ ಇಬ್ಬರನ್ನು ಹೊಡೆದು … Continued

ವಿಶ್ವ ಮಹಾಯುದ್ಧ I, II ಆರಂಭ ದಿನಾಂಕಗಳು, ಉಕ್ರೇನ್‌ ಮೇಲೆ ರಷ್ಯಾ ದಾಳಿ ದಿನಾಂಕದ ನಡುವಿನ ವಿಚಿತ್ರ ಹೋಲಿಕೆ: ಹೊಸ ಗಣಿತ ಸೂತ್ರ ವೈರಲ್​ ಆಯ್ತು..!

ಟ್ವಿಟರ್ ಬಳಕೆದಾರರು ವಿಶ್ವ ಸಮರ I, ವಿಶ್ವ ಸಮರ II ಮತ್ತು ಉಕ್ರೇನ್‌ನ ರಷ್ಯಾದ ಆಕ್ರಮಣದ ಪ್ರಾರಂಭದ ದಿನಾಂಕಗಳ ನಡುವಿನ ಅಸಾಮಾನ್ಯ ಹೋಲಿಕೆಯನ್ನು ಗುರುತಿಸಿದ್ದಾರೆ. ವಾಣಿಜ್ಯೋದ್ಯಮಿ ಪ್ಯಾಟ್ರಿಕ್ ಬೆಟ್-ಡೇವಿಡ್ ಜುಲೈ 28 1914 ರಂದು ನೋಡಿದರು, ಆಸ್ಟ್ರಿಯಾ-ಹಂಗೇರಿ ಸೆರ್ಬಿಯಾ ಮೇಲೆ ಯುದ್ಧವನ್ನು ಘೋಷಿಸಿದ ದಿನಾಂಕ, ಪರಿಣಾಮಕಾರಿಯಾಗಿ ಮೊದಲ ವಿಶ್ವ ಯುದ್ಧವನ್ನು ಪ್ರಾರಂಭಿಸಿತು. 7 28 19 … Continued