ಬಜೆಟ್‌ ೨೦೨೧-೨೨: ಆರ್ಥಿಕ ಚೇತರಿಕೆಗೆ ಹಲವಾರು ಕ್ರಮ

ನವ ದೆಹಲಿ: ಮುಂದಿನ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಸೋಮವಾರ ಮಂಡಿಸಿದ್ದಾರೆ. ಅವರು ಕೊರೋನಾದಿಂದ(ಕೋವಿಡ್ -19)  ಪಾತಾಳಕ್ಕೆ ಕುಸಿದಿರುವ ಆರ್ಥಿಕತೆಯ ಚೇತರಿಕೆಗೆ ನೆರವಾಗುವ ಅನೇಕ ಕ್ರಮಗಳನ್ನು ಪ್ರಕಟಿಸಿದರು. ಕೆಲವೇ ತಿಂಗಳಲ್ಲಿ ನಡೆಯಲಿರುವ  ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳಕ್ಕೆ ಮೂಲಸೌಕರ್ಯ ಯೋಜನೆಗಳನ್ನು ಪ್ರಕಟಿಸುವ ಮೂಲಕ ಕೇಂದ್ರದ ಎನ್‌ಡಿಎ … Continued

ಮ್ಯಾನ್ಮಾರ್‌ನಲ್ಲಿ ಮತ್ತೆ ಸೈನ್ಯ ಕ್ರಾಂತಿ

ಯಾಂಗೊನ್: ನಾಗರಿಕ ನಾಯಕ ಆಂಗ್ ಸಾನ್ ಸೂಕಿ ಮತ್ತು ಅವರ ಸರ್ಕಾರದೊಂದಿಗೆ ಸಂಘರ್ಷಕ್ಕೆ ಇಳಿದಿದ್ದ  ಮ್ಯಾನ್ಮಾರ್ ಮಿಲಿಟರಿ ಸೋಮವಾರ ಆಡಳಿತವನ್ನು ಸೇನೆ ಹಿಡಿತಕ್ಕೆ ತೆಗೆದುಕೊಂಡಿದೆ. ಕಳೆದ ನವೆಂಬರ್‌ನಲ್ಲಿ ನಡೆದ ರಾಷ್ಟ್ರೀಯ ಚುನಾವಣೆಯ ನಂತರ ಮೊದಲ ಸಂಸತ್ ಅಧಿವೇಶನ ನಡೆಯಬೇಕಿದ್ದ   ದಿನವೇ  ಸೇನೆಯು ಸೂಕಿ ಮತ್ತು ಇತರ ಉನ್ನತ ನಾಗರಿಕ ನಾಯಕರನ್ನು ವಶಕ್ಕೆ ಪಡೆಯಿತು. 2017ರಲ್ಲಿ ರೋಹಿಂಗ್ಯಾ … Continued

ಕೃಷಿ ಕಾನೂನು: ಪ್ರತ್ಯೇಕ ಚರ್ಚೆಗೆ ವಿಪಕ್ಷಗಳ ಒತ್ತಾಯ

ನವ ದೆಹಲಿ: ಕೃಷಿ ಕಾನೂನುಗಳಿಂದ ಉಂಟಾದ ಬಿಕ್ಕಟ್ಟಿನ ಬಗ್ಗೆ ಸಂಸತ್ತಿನಲ್ಲಿ ಪ್ರತ್ಯೇಕ ಚರ್ಚೆ ನಡೆಸಬೇಕು ಎಂಬ  ಪ್ರತಿಪಕ್ಷದ ಬೇಡಿಕೆಗೆ ಕೇಂದ್ರ ಸರ್ಕಾರ ಸಿದ್ಧವಾಗಿಲ್ಲ. ಬಜೆಟ್ ಅಧಿವೇಶನದ ಮೊದಲಾರ್ಧದಲ್ಲಿ ರೈತರ ಆಂದೋಲನದ ಬಗ್ಗೆ ಪ್ರಧಾನವಾಗಿ  ಚರ್ಚೆ  ನಡೆಯುವ ಸಾಧ್ಯತೆ ಬಗ್ಯಿಗೆ ಸರ್ಕಾರ ಏನೂ ಹೇಳಿಲ್ಲ. ರಾಜ್ಯಸಭಾ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರು ಭಾನುವಾರ ಮೇಲ್ಮನೆಯ  (ರಾಜ್ಯಸಭೆ) ನಾಯಕರ … Continued

ಬಿಎಸ್ ವೈ ಸಿಂಹ ಘರ್ಜನೆ ಎಲ್ಲಿ ಅಡಗಿಹೋಯಿತು?

  ಅರುಣಕುಮಾರಹಬ್ಬು ಕರ್ನಾಟಕದ ರಾಜಕೀಯದಲ್ಲಿ ನಿರಂತರ ಸಿಂಹ ಘರ್ಜನೆ ಮಾಡುತ್ತಾ ಮೆರೆಯುತ್ತಿದ್ದ ಸಿಂಹದ ಧ್ವನಿ ಅಡಗಿ ಹೋಯಿತೇ? ಏನಾಯಿತು ಈ ಸಿಂಹಕ್ಕೆ? ಉತ್ಸಾಹ ಕುಸಿಯಿತೇ? ಇಲ್ಲವೇ ರಾಜಕೀಯದ ಒಳಸುಳಿಗಳಿಗೆ ಸಿಕ್ಕು ದುರ್ಬಲಗೊಂಡಿತೇ? ರಾಜಕೀಯದ ಓಘ ಹೀಗೇ ಎಂದು ಹೇಳುವಂತಿಲ್ಲ. ಅದು ಎಂದಿಗಾದರೂ ಯಾವುದಾದರೂ ತಿರುವು ಪಡೆಯಬಹುದು ಎನ್ನುವುದಕ್ಕೆಈಗಿನ ರಾಜಕೀಯ ಬೆಳವಣಿಗೆಗಳುಉದಾಹರಣೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ … Continued