ಪಾನಿಪುರಿ ಮದುವೆ..: ಮದುಮಗಳಿಗೆ ಪಾನಿಪುರಿ ಅಲಂಕಾರ..! ವಿಡಿಯೋ ವೈರಲ್‌

posted in: ರಾಜ್ಯ | 0

ಬೆಂಗಳೂರು: ಜೀವನದಲ್ಲಿ ಮದುವೆ ಆಗೋದು ಒಂದೇ ಸಲ. ಅದನ್ನು ಆದಷ್ಟೂ ಒಳ್ಳೆ ರೀತಿಯಲ್ಲಿ ಹಾಗೂ ಸ್ಮರಣೆಯಲ್ಲುಳಿಯುವ ರೀತಿ ಆಗಬೇಕು ಎಂದು ಎಷ್ಟೋ ಯುವಕ ಯುವತಿಯರು ಕನಸು ಕಾಣುವುದು ಸಹಜ. ಕೆಲವರಿಗೆ ವಿಭಿನ್ನ ರೀತಿಯಲ್ಲಿ ಮದುವೆಯಾಗಬೇಕು ಎನ್ನುವ ಹಂಬಲ. ಅದಕ್ಕಾಗಿಯೇ ಏನೇನೋ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಇನ್ನು ಕೆಲವರಿಗೆ ವಿಶೇಷವಾಗಿ ಮದುವೆಯಾದರೆ ಪ್ರಸಿದ್ಧರಾಗುತ್ತೇವೆ ಎನ್ನುವತ್ತಲೂ ಒಲವು ಹೊಂದಿರುತ್ತಾರೆ. … Continued

ರಾಜ್ಯಕ್ಕೆ ೧೩೫.೯೨ ಕೋಟಿ ರೂ. ಆದಾಯ ಕೊರತೆ ಅನುದಾನ ಬಿಡುಗಡೆ

posted in: ರಾಜ್ಯ | 0

ಹೊಸದಿಲ್ಲಿ: ಕೇಂದ್ರ ಹಣಕಾಸು ಸಚಿವಾಲಯವು ೧೭ ರಾಜ್ಯಗಳಿಗೆ ೯,೮೭೧ ಕೋಟಿ ರೂ. ಆದಾಯ ಕೊರತೆ ಅನುದಾನ ಬಿಡುಗಡೆ ಮಾಡಿದೆ. ಇದರಲ್ಲಿ ಕರ್ನಾಟಕಕ್ಕೆ ೧೩೫.೯೨ ಕೋಟಿ ರೂ. ನೀಡಲಾಗಿದ್ದು, ೨೦೨೧-೨೨ನೇ ಸಾಲಿನಲ್ಲಿ ಒಟ್ಟು ೫೪೩.೬೭ ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಸಚಿವಾಲಯದ ವೆಚ್ಚ ಇಲಾಖೆ ವಿತರಣೆ ನಂತರದ ಆದಾಯ ಕೊರತೆಯ(ಪಿಡಿಆರ್‌ಡಿ) ೪ನೇ ಮಾಸಿಕ ಅನುದಾನದ ಮೊತ್ತ ೯,೮೭೧ … Continued

ರೈತರಿಗೆ 721 ಕೋಟಿ ಕನಿಷ್ಠ ಬೆಂಬಲ ಬೆಲೆ : ಸರ್ಕಾರಕ್ಕೆ ಸಂಪುಟ ಉಪಸಮಿತಿ ಶಿಫಾರಸು

ಬೆಂಗಳೂರು: ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿಸಿರುವ ರಾಗಿ, ಭತ್ತ ಹಾಗೂ ಗೋಗೆ 2-3 ದಿನದಲ್ಲಿ 721 ಕೋಟಿ ರೂ. ಬಾಕಿ ಪಾವತಿಸಲು ಸಂಪುಟ ಉಪಸಮಿತಿ ತೀರ್ಮಾನಿಸಿದೆ. ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಉಪಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ನಾಲ್ಕೈದು ತಿಂಗಳ ಹಿಂದೆ ರಾಗಿ, ಭತ್ತ ಹಾಗೂ ಗೋಯನ್ನು ಬೆಂಬಲ … Continued

ಜಲಜೀವನ ಮಿಷನ್ ಅನ್ವಯ ಕರ್ನಾಟಕಕ್ಕೆ 5,009 ಕೋಟಿ ರೂ.

posted in: ರಾಜ್ಯ | 0

ಹೊಸದಿಲ್ಲಿ: ಪ್ರತಿ ಮನೆಗೂ ಶುದ್ಧ  ನಲ್ಲಿ  ನೀರು ಒದಗಿಸುವ ಪ್ರಧಾನಿ ಮೋದಿಯವರ ಆಶಯ ಕಾರ್ಯರೂಪಕ್ಕೆ ತರುವ ಜಲ ಜೀವನ್ ಮಿಷನ್ ಅನ್ವಯ ಕೇಂದ್ರ ಸರ್ಕಾರವು ೨೦೨೧-೨೨ರ ಸಾಲಿಗೆ ಕರ್ನಾಟಕಕ್ಕೆ ೫,೦೦೮.೭೯ ಕೋಟಿ ರೂ. ಅನುದಾನ ಹೆಚ್ಚಿಸಿದೆ. ೨೦೨೦-೨೧ರಲ್ಲಿ ಈ ಹಣ ೧,೧೮೯.೪೦ ಕೋಟಿ ರೂ. ಆಗಿತ್ತು. ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು … Continued

ನಟ ದುನಿಯಾ ವಿಜಯ್ ತಾಯಿ ವಿಧಿವಶ

posted in: ರಾಜ್ಯ | 0

ಬೆಂಗಳೂರು: ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಅವರ ತಾಯಿ ನಾರಾಯಣಮ್ಮ ಇಂದು ವಿಧಿವಶರಾಗಿದ್ದಾರೆ. ಈ ಕುರಿತು ನಟ ದುನಿಯಾ ವಿಜಯ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. ನಾರಾಯಣಮ್ಮ ಅವರಿಗೆ ಬ್ರೇನ್ ಸ್ಟ್ರೋಕ್ ಆಗಿದ್ದ ಕಾರಣದಿಂದ ಮನೆಯಲ್ಲಿಯೇ ಚಿಕಿತ್ಸೆಗಾಗಿ ದುನಿಯಾ ವಿಜಯ್ ವ್ಯವಸ್ಥೆ ಮಾಡಿದ್ದರು. ಕಳೆದ 23 ದಿನದಿಂದ ವೈದ್ಯರು ಮನೆಗೆ ಆಗಮಿಸಿ … Continued

ಮಹಿಳಾ ಸಬಲೀಕರಣ, ಸಮಗ್ರ ಭಾರತದ ಅಭಿವೃದ್ಧಿ ನನ್ನ ಗುರಿ

posted in: ರಾಜ್ಯ | 0

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನಗಳನ್ನು ಕಾಯ್ದಿರಿಸುವ ಮೂಲಕ ರಾಜಕೀಯದಲ್ಲಿನ ಲಿಂಗ ಅಸಮಾನತೆಯನ್ನು ಹೋಗಲಾಡಿಸಲು ಶ್ರಮಿಸುತ್ತಿದ್ದಾರೆ. ರಾಜಕೀಯದಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದೆ. ಇದು ಮಹಿಳೆಯರ ಸಮಸ್ಯೆಗಳನ್ನು ಸಮರ್ಥವಾಗಿ ಪರಿಹರಿಸಲು ಸರ್ಕಾರಕ್ಕೆ ಸಹಾಯ ಮಾಡುತ್ತದೆ ಎಂದು ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ … Continued

ತಾಪಂ-ಜಿಪಂ ಮೀಸಲಾತಿ ನಿಗದಿಗೆ ಸಚಿವ ಈಶ್ವರಪ್ಪ ಅಸಮಾಧಾನ

ಕಲಬುರಗಿ: ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಮೀಸಲಾತಿ ನಿಗದಿಗೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನ ಪ್ರತಿನಿಧಿಯಾಗಿ ಇದು ನನ್ನ ವಯಕ್ತಿಕ ಅಭಿಪ್ರಾಯವೇ ಹೊರತು ಸಚಿವನಾಗಿ ಅಲ್ಲ ಎಂದು ಹೇಳಿದ್ದಾರೆ. ಡಿಸೆಂಬರ್ ವರೆಗೆ ಚುನಾವಣೆ ಮುಂದೂಡಬೇಕೆಂದು ಸರ್ಕಾರ ರಾಜ್ಯ … Continued

ಸಿಎಂ ಬಿಎಸ್ ವೈಗೆ ಬಿಗ್ ರಿಲೀಫ್ : ಭ್ರಷ್ಟಾಚಾರ ಆರೋಪದಡಿ ಪ್ರಕರಣ ದಾಖಲಿಸುವಂತೆ ಕೋರಿದ್ದ ಅರ್ಜಿ ವಜಾ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಅವರ ಪುತ್ರ ವಿಜಯೇಂದ್ರ ಹಾಗೂ ಆಪ್ತರ ವಿರುದ್ಧ ಭ್ರಷ್ಟಾಚಾರ ಆರೋಪದಡಿ ತನಿಖೆ ನಡೆಸಲು ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾ ಮಾಡಿದೆ. 2021ರ ಜೂನ್ 6 ರಂದು ಟಿ.ಜೆ.ಅಬ್ರಹಾಂ ಭ್ರಷ್ಟಾಚಾರ ಆರೋಪದಡಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಪುತ್ರ … Continued

ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಬೆಳೆವಿಮೆ : ಮುಂಚಿತವಾಗಿ ಕಂತು ಪಾವತಿಸಿ

posted in: ರಾಜ್ಯ | 0

ಗದಗ: ಕರ್ನಾಟಕ ರೈತ ಸುರಕ್ಷಾ ಫಸಲ್ ಬಿಮಾ ಯೋಜನೆಯಡಿ ಮುಂಗಾರು ಬೆಳೆಗಳಾದ ಹೆಸರು ಬೆಳೆಗೆ ವಿಮಾ ಕಂತು ತುಂಬಲು ಜುಲೈ 15 ಕೊನೆಯ ದಿನವಾಗಿದೆ. ಶೇಂಗಾ, ಮುಸುಕಿನ ಜೋಳ, ಜೋಳ, ಹತ್ತಿ, ಸಜ್ಜೆ, ಒಣ ಮೆಣಸಿನಕಾಯಿ ಹಾಗೂ ಈರುಳ್ಳಿ ಬೆಳೆಗಳಿಗೆ ವಿಮಾ ಕಂತು ತುಂಬಲು ಜುಲೈ 31 ಹಾಗೂ ಸೂರ್ಯಕಾಂತಿ ಬೆಳೆಗೆ ಅಗಸ್ಟ 16 ಕೊನೆಯ … Continued

ಗದಗ: ಆಗಸ್ಟ 14 ರಂದು ಮೆಗಾ ಲೋಕ್ ಅದಾಲತ್

posted in: ರಾಜ್ಯ | 0

ಗದಗ: ಅಗಸ್ಟ 14 ರಂದು ಜಿಲ್ಲಾದ್ಯಂತ  ನಡೆಯುವ ಮೆಗಾ ಲೋಕ್ ಅದಾಲತ್‌ ನಲ್ಲಿ ಸಾರ್ವಜನಿಕರು ಹೆಚ್ಚು ಹೆಚ್ಚು ಪಾಲ್ಗೊಂಡು ರಾಜಿ ಸಂದಾನದ ಮೂಲಕ ವ್ಯಾಜ್ಯಗಳನ್ನು ಇತ್ಯರ್ಥ್ಯ ಮಾಡಿಕೊಳ್ಳುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರಾದ ಶ್ರೀಮತಿ ಎಸ್. ಮಹಾಲಕ್ಷ್ಮಿ ನೇರಳೆ ಅವರು ಹೇಳಿದರು. ಜಿಲ್ಲಾ ನ್ಯಾಯಾಯಲದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು … Continued