ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಸಂಭವಿಸಿರುವ ಭೀಕರ ಭೂಕುಸಿತದಿಂದ ಮೃತಪಟ್ಟ ಮತ್ತು ಹಾನಿಗೊಳಗಾದವರ ಕುಟುಂಬಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಬುಧವಾರ ಪರಿಹಾರ ಚೆಕ್ ವಿತರಿಸಿದ್ದಾರೆ.
ಶಿರೂರುನಲ್ಲಿ ಗುಡ್ಡ ಕುಸಿತದಿಂದ ಮೃತಪಟ್ಟ ೩ ವ್ಯಕ್ತಿಗಳ ಕುಟುಂಬಗಳ ವಾರಿಸುದಾರರಿಗೆ ತಲಾ ೫ ಲಕ್ಷ ರೂ. ಗಳ ಪರಿಹಾರ ಚೆಕ್ ನೀಡಿದರು. ಅಲ್ಲದೆ, ಶಿರೂರು ಗ್ರಾಮದಲ್ಲಿ ಗುಡ್ಡ ಕುಸಿದು ನದಿಗೆ ಬಿದ್ದ ಪರಿಣಾಮ ನದಿ ನೀರು ಉಕ್ಕು ಪಕ್ಕದ ದಡಕ್ಕೆ ಅಪ್ಪಳಿಸಿ ಹಾನಿ ಸಂಭವಿಸಿದ ಉಳುವರೆ ಗ್ರಾಮಕ್ಕೆ ಭೇಟಿ ನೀಡಿ ಮನೆ ಹಾನಿ ಸಂಭವಿಸಿದ ಕುಟುಂಬಗಳಿಗೆ ತಲಾ ೧.೨೦ ಲಕ್ಷ ರೂ. ಪರಿಹಾರದ ಚೆಕ್ಕುಗಳನ್ನು ವಿತರಿಸಿದರು.
ಕಾರವಾರದ ಕಿನ್ನರದಲ್ಲಿ ಗುಡ್ಡ ಕುಸಿದು ಸಾವಿಗೀಡಾದವರ ಕುಟುಂಬಕ್ಕೂ ೫ ಲಕ್ಷರೂ. ಚೆಕ್ ,ಮತ್ತು ಮನೆಹಾನಿಗೆ ೧.೨೫ ರೂ. ಚೆಕ್ ವಿತರಿಸಲಾಗಿದೆ. ಈ ಸಂದರ್ಭದಲ್ಲಿ ಶಾಸಕ ಸತೀಶ ಸೈಲ್, ಜಿಲ್ಲಾಕಾರಿ ಲಕ್ಷ್ಮಿಪ್ರಿಯಾ ಮೊದಲಾದವರಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ