ಮಾನಸಿಕ ವಿಶೇಷ ಚೇತನ ಮಗನ ಮಾತ್ರೆ ತರಲು 280 ಕಿಮೀ ಸೈಕಲ್‌ ತುಳಿದ ತಂದೆ..!

ಮೈಸೂರು: ರಾಜ್ಯವನ್ನು ಕಾಡುತ್ತಿರುವ ಕೊರೊನಾ ಲಾಕ್​ಡೌನ್ ​ನಿಂದಾಗಿ​ ಕೆಲವರು ಅಗತ್ಯ ವಸ್ತು ಹಾಗೂ ಔಷಧಗಳಿಗೆ ತೀವ್ರ ಪರಿತಪಿಸುವಂತಾಗಿದೆ. ಇಲ್ಲೊಬ್ಬ ತಂದೆ ಕೂಡ ಲಾಕ್​ಡೌನ್​ನಿಂದಾಗಿ ಮಗನಿಗೆ ಮಾತ್ರೆ ತರಲು ಹರಸಾಹಸ ಪಟ್ಟ ಘಟನೆ ವರದಿಯಾಗಿದೆ. ಲಾಕ್​ಡೌನ್​ನಿಂದ ಮಗನಿಗೆ ಔಷಧಿ ತರಲು ತಂದೆ ಬರೋಬ್ಬರು 280 ಕಿ.ಮೀ ಸೈಕಲ್​ ತುಳಿದು ಮಾತ್ರೆ ತಂದಿರುವ ಮನಕಲಕುವ ಘಟನೆ ಮೈಸೂರಿನಲ್ಲಿ ನಡೆದಿದೆ … Continued

ಕೃಷಿ ಚಟುವಟಿಕೆಗೆ ಕೊರೊನಾ ಮಾರ್ಗಸೂಚಿ ಅಡ್ಡಿಯಾಗುವುದು ಬೇಡ

ಗದಗ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಶೇಕಡಾವಾರು ಪ್ರಮಾಣ ಇಳಿಮುಖವಾಗುತ್ತಿದೆ. ಮುಂಗಾರು ಹಂಗಾಮು ಆರಂಭವಾಗಿದ್ದು ರೈತರು ಕೃಷಿ ಚಟುವಟಿಕೆ ಕೈಗೊಳ್ಳಲು ಕೊರೊನಾ ಮಾರ್ಗಸೂಚಿಗಳು ಅಡ್ಡಿಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೊಹಮ್ಮದ್ ಮೊಹಸಿನ್ ಸೂಚಿಸಿದರು. ಗದಗ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಪ್ರಗತಿ ಪರಿಶೀಲನಾ ಸಭೆ ಹಾಗೂ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯ … Continued

ಬೆಂಗಳೂರಲ್ಲಿ ಹಂತಹಂತವಾಗಿ ಲಾಕ್‌ಡೌನ್ ಸಡಿಲ: ಸರ್ಕಾರದ ಚಿಂತನೆ

ಬೆಂಗಳೂರು:ಕೋವಿಡ್ ಸಂಬಂಧ ರಾಜಧಾನಿ ಬೆಂಗಳೂರಿನಲ್ಲಿ ಸೋಂಕಿನ ಪ್ರಕರಣಗಳು ಗಣನೀಯವಾಗಿ ಇಳಿಕೆ ಕಾಣುತ್ತಿರುವುದರಿದ ಜೂ.೭ರ ಬಳಿಕ ಹಂತ ಹಂತವಾಗಿ ಲಾಕ್‌ಡೌನ್ ಸಡಿಲಗೊಳಿಸುವ ಕುರಿತು ಚರ್ಚೆ ನಡೆಯುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ತಿಳಿಸಿದ್ದಾರೆ. ಸೋಮವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್‌ಡೌನ್ ಸಡಿಲಿಕೆ ಮಾಡುವುದಾದರೆ, ಹಂತ ಹಂತವಾಗಿ ಮಾಡಬೇಕು. ಆಗ ಮಾತ್ರ … Continued

ಸಹಕಾರ ಬ್ಯಾಂಕ್ ಗಳಿಗೆ ರೈತರಿಗೆ 20,810 ಕೋಟಿ ರೂ. ಬೆಳೆ ಸಾಲ ನೀಡುವ ಗುರಿ :ಸಚಿವ ಸೋಮಶೇಖರ

ಬೆಂಗಳೂರು: ಸಹಕಾರ ಬ್ಯಾಂಕ್ ಗಳ ಮೂಲಕ ಈ ವರ್ಷ20,810 ಕೋಟಿ ರೂ. ಬೆಳೆ ಸಾಲ ನೀಡುವ ಗುರಿ ನೀಡಲಾಗಿದೆ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಗುರಿ ತಲುಪಲು ರಾಜ್ಯದ 212 ಡಿಸಿಸಿ ಬ್ಯಾಂಕ್ ಗಳಿಗೆ ತಿಳಿಸಲಾಗಿದೆ‌. 303 ಲಕ್ಷ ರೈತರನ್ನು ತಲುಪಲು ಗುರಿ ನೀಡಲಾಗಿದೆ ಎಂದರು‌. … Continued

ಕರ್ನಾಟಕದಲ್ಲಿ ವಿದೇಶಕ್ಕೆ ಹೋಗುವ ವಿದ್ಯಾರ್ಥಿಗಳು, ನೌಕರರಿಗೆ ಆದ್ಯತೆ ಮೇಲೆ ಲಸಿಕೆ

ಬೆಂಗಳೂರು: 18-44 ವರ್ಷದವರಿಗೆ ಕೋವಿಡ್‌-19 ಲಸಿಕೆಗಾಗಿ ಫಲಾನುಭವಿಗಳ ಪಟ್ಟಿಯನ್ನು ಕರ್ನಾಟಕ ಸರ್ಕಾರ ಪರಿಷ್ಕರಿಸಿದೆ. ವಿದೇಶಗಳಲ್ಲಿನ ವಿಶ್ವವಿದ್ಯಾಲಯಗಳಿಗೆ ಹೋಗಲು ಕಾಯುತ್ತಿರುವ ವಿದ್ಯಾರ್ಥಿಗಳಿಗೆ ವಿವಿಧ ಕ್ಷೇತ್ರಗಳ ಕಾರ್ಮಿಕರೊಂದಿಗೆ ಆದ್ಯತೆಯ ಆಧಾರದ ಮೇಲೆ ಲಸಿಕೆ ನೀಡಲಾಗುವುದು ಎಂದು ರಾಜ್ಯ ಪ್ರಕಟಿಸಿದೆ ಎಂದು ದಿ ನ್ಯೂಸ್‌ ಮಿನಿಟ್‌ ವರದಿ ಮಾಡಿದೆ. ಉದ್ಯೋಗಕ್ಕಾಗಿ ವಿದೇಶಕ್ಕೆ ವಲಸೆ ಹೋಗುವವರಿಗೂ ಲಸಿಕೆ ನೀಡಲಾಗುವುದು ಎಂದು ಸರ್ಕಾರ … Continued

ಕರ್ನಾಟಕದಲ್ಲಿ ಮೂರು ದಿನಗಳು ಭಾರೀ ಮಳೆ ಸಾಧ್ಯತೆ

ಬೆಂಗಳೂರು: ಮುಂದಿನ ಐದು ದಿನಗಳಲ್ಲಿ ಕರ್ನಾಟಕ ಕರಾವಳಿಯಲ್ಲಿ ಪೂರ್ವಕೇಂದ್ರೀಯ ಅರೇಬಿಯನ್ ಸಮುದ್ರದ ಮೇಲೆ ಚಂಡಮಾರುತವು ಹರಡಿದೆ, ಇದು ಕರ್ನಾಟಕ, ಕೇರಳ ಸೇರಿದಂತೆ ಪರ್ಯಾಯ ದ್ವೀಪ ಭಾರತಕ್ಕೆ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಮುಂದಿನ 2-3 ದಿನಗಳಲ್ಲಿ ನೈಋತ್ಯ ಮಾರುತಗಳು ಸಹ ಬಲಗೊಳ್ಳುವ ಸಾಧ್ಯತೆಯಿದೆ. ಇದರ ಪ್ರಭಾವದಡಿಯಲ್ಲಿ ಕರ್ನಾಟಕ, ಕೇರಳ ಮತ್ತು … Continued

ಒಂದುವೇಳೆ ಮಕ್ಕಳಿಗೆ ಸೋಂಕು ತಗುಲಿದರೆ ಅವರಿಗೂ ಕೋವಿಡ್‌ ಲಸಿಕೆ : ಸಚಿವ ಸುಧಾಕರ

ಬೆಂಗಳೂರು : ಒಂದು ವೇಳೆ ಮಕ್ಕಳಿಗೆ ಸೋಂಕು ಬಂದರೆ ಅವರಿಗೂ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಖಾತೆ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈಗ ಮಕ್ಕಳ ಮೇಲೆ ಪ್ರಯೋಗ ಮಾಡಲಾಗುತ್ತಿದೆ.ಅನೇಕ ಲಸಿಕಾ ಕಂಪನಿಗಳು ಕೆಲವೆಡೆ ಟ್ರಯಲ್ ರನ್ ಮಾಡುತ್ತಿವೆ ಎಂದು ತಿಳಿಸಿದರು. ಎಲ್ಲವನ್ನೂ ನೋಡಿಕೊಂಡು ನಮ್ಮ ಮಕ್ಕಳಿಗೂ ಲಸಿಕೆ ಹಾಕಿಸಲಾಗುವುದು.ಹಿರಿಯರಿಗೆ ಮೊದಲು, … Continued

ಕಾಶಿ ಜಗದ್ಗುರು ಪೀಠದಿಂದ ಪಿಎಂ ಕೇರ್ಸ್‌ ಫಂಡ್‌ಗೆ ಐದು ಲಕ್ಷ ರೂ. ದೇಣಿಗೆ

ಧಾರವಾಡ : ಕೋವಿಡ್-೧೯ ನಿಯಂತ್ರಣದ ವ್ಯಾಕ್ಸಿನೇಷನ್ ನಿರ್ವಹಣೆಗಾಗಿಯೇ ವೀರಶೈವ ಧರ್ಮದ ಸನಾತನ ಪಂಚಪೀಠಗಳಲ್ಲಿ ಒಂದಾಗಿರುವ ಕಾಶಿ ಜಗದ್ಗುರು ಪೀಠದಿಂದ ಪ್ರಧಾನಮಂತ್ರಿಗಳ ಕೇರ್ಸ್ ಫಂಡಿಗೆ ೫ ಲಕ್ಷ ರೂ.ಗಳ ದೇಣಿಗೆಯನ್ನು ಭಾನುವಾರ ವಾರಣಾಸಿಯ ವಿಭಾಗಾಧಿಕಾರಿಗಳ ಮೂಲಕ ಸಮರ್ಪಿಸಲಾಯಿತು. ವಾರಣಾಸಿ ವಿಭಾಗಾಧಿಕಾರಿ ದೀಪಕ್ ಅಗ್ರವಾಲ್ ಅವರಿಗೆ ಪ್ರಧಾನ ಮಂತ್ರಿಗಳ ಹೆಸರಿನ ೫ ಲಕ್ಷ ರೂ.ಗಳ ಚೆಕ್ ನೀಡಿ ಮಾತನಾಡಿದ … Continued

ಕರ್ನಾಟಕದಲ್ಲಿ ಸ್ಥಿರವಾದ ಕೊರೊನಾ ದೈನಂದಿನ ಸೋಂಕು

ಬೆಂಗಳೂರು:ಕರ್ನಾಟಕದಲ್ಲಿ ಭಾನುವಾರ ಹೊಸದಾಗಿ 20,378 ಜನರಿಗೆ ಹೊಸ ಕೊರೊನಾ ಸೋಂಕು ದಾಖಲಾಗಿದೆ. ಇದೇವೇಳೆ 382 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. 28,053 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.ಒಟ್ಟು ಸೋಂಕಿತರ ಸಂಖ್ಯೆ 25,87,827 ಕ್ಕೆ ಏರಿಕೆಯಾಗಿದೆ. ಇದುವರೆಗೆ 28,679 ಸೋಂಕಿತರು ಮೃತಪಟ್ಟಿದ್ದಾರೆ. ಇದುವರೆಗೆ 22,17,117 ಜನ ಗುಣಮುಖರಾಗಿದ್ದು, 3,42,010 ಸಕ್ರಿಯ ಪ್ರಕರಣಗಳು ಇವೆ. ಬೆಂಗಳೂರಿನಲ್ಲಿ ಭಾನುವಾರ 4734 ಜನರಿಗೆ … Continued