ಕನ್ನಡ ಕೊಳಕು ಭಾಷೆ ಎಂದು ಅಪಮಾನಿಸಿದ ಗೂಗಲ್ ಸರ್ಚ್​ ಎಂಜಿನ್…!

ಬೆಂಗಳೂರು: 2 ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಭಾರತದ ಅತ್ಯಂತ ಅಸಹ್ಯಕರ, ಕೊಳಕು ಭಾಷೆ ಎಂದು ಗೂಗಲ್ ಹೇಳಿದೆ..! ತಂತ್ರಜ್ಞಾನ ದೈತ್ಯ ಎಂದು ಕರೆಯಲ್ಪಡುವ ಗೂಗಲ್​ನಲ್ಲಿ ಭಾರತದಲ್ಲೇ ಅತ್ಯಂತ ಕೊಳಕು ಭಾಷೆ ಯಾವುದು ಎಂದು ಹುಡುಕಿದರೆ ಕನ್ನಡ ಎಂಬ ಉತ್ತರ ಬರುತ್ತಿದೆ. ಆ ಮೂಲಕ ಕನ್ನಡ ಭಾಷೆಗೆ, ಕನ್ನಡಿಗರಿಗೆ ಅವಮಾನ ಎಸಗುವ ಹುನ್ನಾರ ನಡೆದಿದೆ. … Continued

ಎರಡೂವರೆ ವರ್ಷದ ಪುಟ್ಟಹುಡುಗಿ 205 ದೇಶಗಳ ರಾಜಧಾನಿ ಹೆಸರು ಹೇಳ್ತಾಳೆ…ಅವಳ ಜೀನಿಯಸ್‌ಗೆ ನೀವೂ ಬೆರಗಾಗ್ತೀರಿ..!

ಪ್ರಪಂಚದಾದ್ಯಂತದ ಎಲ್ಲ ರಾಷ್ಟ್ರಗಳ ರಾಜಧಾನಿಗಳ ಹೆಸರನ್ನು ಒಂದೇ ಬಾರಿಗೆ ಯಾವುದೇ ತಪ್ಪಿಲ್ಲದೆ ಉತ್ತರಿಸುವ ಎರಡೂವರೆ ವರ್ಷ ವಯಸ್ಸಿನ ಹುಡುಗಿಯ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಯಾರೇ ನೋಡಿದರೂ ಬೆರಗಾಗಲೇಬೇಕು. ಹಾಗಿದ್ದಾಳೆ ಈ ಪುಟ್ಟ ಜೀನಿಯಸ್‌..! ನೆಟಿಜನ್‌ಗಳನ್ನು ದಿಗ್ಭ್ರಮೆಗೊಳಿಸಿದ ಜೀನಿಯಸ್ ಕಿಡ್‌ನ ವಿಡಿಯೋವನ್ನು ಛತ್ತೀಸ್‌ಗಡದ ಐಎಎಸ್ ಅಧಿಕಾರಿ ಡಾ. ಪ್ರಿಯಾಂಕಾ ಶುಕ್ಲಾ ಹಂಚಿಕೊಂಡಿದ್ದಾರೆ. ಅವಳು … Continued

ಕರ್ನಾಟಕ – ಕೇರಳ ಸಾರಿಗೆಯಲ್ಲಿ ಪೈಪೋಟಿ ಏನಿಲ್ಲ, ತೀರ್ಪಿನಲ್ಲಿ ಏನಿದೆ ಎಂಬುದು ಅಧಿಕೃತವಾಗಿ ಬಂದಿಲ್ಲ:ಸವದಿ

ಬೆಂಗಳೂರು: ಕೇರಳವು ಕೆಎಸ್ಆರ್‌ಟಿಸಿ ಎಂಬ ಶಬ್ದವನ್ನು ತಾವೇ ಮೊದಲು ಬಳಸಿದ್ದರಿಂದ ಕರ್ನಾಟಕವು  ಈ ಶಬ್ದ ಬಳಸಬಾರದು ಎಂದು ತಕರಾರು ತೆಗೆದ ಬಗ್ಗೆ ಈಗ ಟ್ರೇಡ್ಮಾರ್ಕ್ ರಜಿಸ್ಟ್ರಿಯು ತೀರ್ಪು ನೀಡಿದೆ ಎಂದು ಮಾಹಿತಿ ಬಂದಿದೆ. ಆದರೆ ಈ ತೀರ್ಪಿನಲ್ಲಿ ಏನಿದೆ ಎಂಬ ಅಂಶವು ನಮಗೆ ಅಧಿಕೃತವಾಗಿ ಇನ್ನೂ ಬಂದಿಲ್ಲ, ಅದು ಲಭ್ಯವಾದ ನಂತರ ಕರ್ನಾಟಕ ರಾಜ್ಯದ ಮುಂದಿನ … Continued

ಕರ್ನಾಟಕದ ಇಂದು, ನಾಳೆ ಭಾರೀ ಮಳೆ ಸಾಧ್ಯತೆ, 17 ಜಿಲ್ಲೆಗಳಲ್ಲಿ ಹಳದಿ ಅಲರ್ಟ್​ ಘೋಷಣೆ

ಬೆಂಗಳೂರು: ಅರಬ್ಬೀ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ತೀವ್ರಗೊಂಡಿರುವುದರಿಂದ ಕರ್ನಾಟಕದಲ್ಲಿ ಇನ್ನೂ 4 ದಿನಗಳ ಕಾಲ ರಾಜ್ಯಾದ್ಯಂತ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ , ದಕ್ಷಿಣ ಕನ್ನಡ , ಉಡುಪಿ, ಗದಗ , ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ಕೊಡಗು, ಕೋಲಾರ, ತುಮಕೂರು, ಹಾಸನ, ಕೊಪ್ಪಳ, … Continued

ಕೆಎಸ್‌ಆರ್‌ಟಿಸಿ ಅಂದ್ರೆ ಇನ್ಮೇಲೆ ಕೇರಳ ಸಾರಿಗೆ: ಕಾನೂನು ಹೋರಾಟದಲ್ಲಿ ಕರ್ನಾಟಕಕ್ಕೆ ಸೋಲು

ಬೆಂಗಳೂರು: ಕೆಎಸ್​ಆರ್​ಟಿಸಿ (KSRTC) ಲೋಗೋ ಬಳಕೆ ವಿಚಾರವಾಗಿ ಕರ್ನಾಟಕ ಮತ್ತು ಕೇರಳ ನಡುವೆ ನಡೆಯುತ್ತಿದ್ದ 27 ವರ್ಷಗಳ ತಿಕ್ಕಾಟಕ್ಕೆ ಬ್ರೇಕ್ ಬಿದ್ದಿದ್ದು, ಕರ್ನಾಟಕ ರಾಜ್ಯಕ್ಕೆ ಹಿನ್ನಡೆಯಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(Karnataka State Road Transport Corporation)- ಈ ಲೋಗೋವನ್ನು ಇನ್ಮುಂದೆ ಕರ್ನಾಟಕ ಬಳಸುವಂತಿಲ್ಲ. ಈಗ ಕೆಎಸ್​ಆರ್​ಟಿಸಿ ಲೋಗೋ( KSRTC Logo) ಕೇರಳದವರಿಗೆ ದಕ್ಕಿದೆ. … Continued

ಭಾರೀ ಖೋಟಾ ನೋಟು ಜಾಲ ಪತ್ತೆ; 72 ಲಕ್ಷ ರೂ.ನಕಲಿ ನೋಟು ವಶಕ್ಕೆ ಪಡೆದ ಪೊಲೀಸರು

ಕಾರವಾರ: ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಪೊಲೀಸರು, ದಾಂಡೇಲಿ ತಾಲೂಕಿನ ಭರ್ಚಿಯಲ್ಲಿ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಖೋಟಾ ನೋಟು ಸಾಗಿಸುತ್ತಿದ್ದ ಆರು ಆರೋಪಿಗಳನ್ನು ಕಾರು ಹಾಗೂ 72 ಲಕ್ಷ ಖೋಟಾ ನೋಟು ಮತ್ತು 4.50 ಲಕ್ಷ ರೂ.ಗಳನ್ನು ವಶಕ್ಕೆ ಪಡೆದಿದ್ದಾರೆ. ಸ್ವಿಫ್ಟ್ ಕಾರಿನಲ್ಲಿ ಖೋಟಾ ನೋಟು ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ನಂತರ … Continued

ರಾಜ್ಯದಲ್ಲಿ ಬುಧವಾರ 16387 ಹೊಸ ಕೇಸ್ ಪತ್ತೆ, 21199 ಜನರು ಗುಣಮುಖ

ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 16387 ಹೊಸ ಕೇಸ್ ಪತ್ತೆಯಾಗಿವೆ. ಇದೇವೇಳೆ 21199 ಜನರು ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ ಕಳೆದ 24 ಗಂಟೆಗಳ ಅವಧಿಯಲ್ಲಿ 463 ಜನರು ಮೃತಪಟ್ಟಿದ್ದಾರೆ.. … Continued

ಮೂರನೇ ಅಲೆ: ವಾರದಲ್ಲಿ ಕಾರ್ಯಪಡೆಯಿಂದ ವರದಿ ಸಲ್ಲಿಕೆ

ಬೆಂಗಳೂರು:ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬುಧವಾರ ಕೋವಿಡ್ 3ನೇ ಅಲೆಗೆ ಸಂಬಂಧಿಸಿದ ಪೂರ್ವ ಸಿದ್ಧತೆ ಕುರಿತಂತೆ ರಚಿಸಲಾಗಿರುವ ಡಾ. ದೇವಿಪ್ರಸಾದ್ ಶೆಟ್ಟಿ ನೇತೃತ್ವದ ಕಾರ್ಯಪಡೆಯೊಂದಿಗೆ ಸಭೆ ನಡೆಸಿ, ಚರ್ಚಿಸಿದರು. ಕೋವಿಡ್ 3ನೇ ಅಲೆ ತಡೆಗಟ್ಟಲು ಕೈಗೊಳ್ಳಬೇಕಾಗಿರುವ ಮುಂಜಾಗರೂಕತಾ ಕ್ರಮಗಳು, ಕಲ್ಪಿಸಬೇಕಾದ ಮೂಲಸೌಕರ್ಯ ಹಾಗೂ ಚಿಕಿತ್ಸಾ ಸೌಲಭ್ಯಗಳು, ಅಗತ್ಯವಿರುವ ಮಾನವ ಸಂಪನ್ಮೂಲ, ಔಷಧಗಳು ಮೊದಲಾದ ವಿಷಯಗಳ ಕುರಿತು ಚರ್ಚಿಸಲಾಯಿತು. … Continued

ನಾಳೆಯಿಂದ ರಪ್ತು ಆಧಾರಿತ ಕೈಗಾರಿಕೆಗಳ ಆರಂಭಕ್ಕೆ ರಾಜ್ಯ ಸರ್ಕಾರ ಅನುಮತಿ

ಬೆಂಗಳೂರು:ರಾಜ್ಯದಲ್ಲಿ ಕೊರೊನಾ ಸೋಂಕಿನ ಹೆಚ್ಚಳದಿಂದಾಗಿ ಜೂನ್ 7ರ ವರೆಗೆ ಲಾಕ್ ಡೌನ್ ಜಾರಿಯಲ್ಲಿದೆ. ಜೂನ್ 7ರ ನಂತರವೂ ಲಾಕ್ ಡೌನ್ ಮುಂದುವರೆಯಲಿದೆ ಎನ್ನಲಾಗುತ್ತಿದೆ. ಇದರ ನಡುವೆಯೂ ರಾಜ್ಯ ಸರ್ಕಾರ ಆರ್ಥಿಕ ಚಟುವಟಿಕೆಗೆ ಗ್ರೀನ್ ಸಿಗ್ನಲ್ ನೀಡಿದ್ದು, ಜೂನ್‌ 3ರಿಂದ (ನಾಳೆಯಿಂದ) ರಪ್ತು ಆಧಾರಿತ ಕೈಗಾರಿಕೆಗಳಿಗೆ ಶೇ.50ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸಲು ಅವಕಾಶ ನೀಡಿದೆ. ಈ ಕುರಿತು … Continued

ಸರ್ಕಾರದಿಂದಲೇ ಕಾವೇರಿ ನದಿಯಲ್ಲಿ ಕೋವಿಡ್‌ನಿಂದ ಮೃತಪಟ್ಟ 1,200 ಜನರ ಚಿತಾಭಸ್ಮ ವಿಸರ್ಜನೆ..!

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಪ್ರಾಣ ಬಿಟ್ಟವರ ಚಿತಾಭಸ್ಮವನ್ನು ಅವರ ಕುಟುಂಬದವರು ತೆಗೆದುಕೊಂಡು ಹೋಗುತ್ತಿಲ್ಲ. ಕೊರೊನಾ ವೈರಸ್‌ ಭಯಕ್ಕೆ ಅವರಿಗೆ ಮಾಹಿತಿ ನೀಡಿದರೂ ಅವರು ಬಂದಿರಲಿಲ್ಗಲ. ಈಗ ರಾಜ್ಯ ಸರ್ಕಾರದವರೇ  ಕೋವಿಡ್‌ನಿಂದ ಮೃತಪಟ್ಟ  ಸುಮಾರು 1,200  ಜನರ ಚಿತಾಭಸ್ಮವನ್ನು ಕಾವೇರಿ ನದಿಯಲ್ಲಿ ವಿಸರ್ಜಿಸಿದೆ. ಮಂಡ್ಯ ಜಿಲ್ಲೆಯ ಮಾಲವಳ್ಳಿ ತಾಲ್ಲೂಕಿನ ಬೆಲಕವಾಡಿಯಲ್ಲಿರುವ ಕಾವೇರಿ ನದಿಯಲ್ಲಿ ಕೋವಿಡ್ … Continued