ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ: ಬಿಎಸ್ ವೈ

ಬೆಂಗಳೂರು: ಪಂಚರಾಜ್ಯ ಚುನಾವಣೆ ಫಲಿತಾಂಶ ಬಳಿಕ ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗುತ್ತದೆ ಎಂಬುದು ಕೇವಲ ಊಹಾಪೋಹ. ಬಸವರಾಜ ಬೊಮ್ಮಾಯಿ ಈ ಸರ್ಕಾರದ ಪೂರ್ಣಾವಧಿ ಮುಖ್ಯಮಂತ್ರಿ ಆಗಿರಲಿದ್ದಾರೆ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿ, ಮುಖ್ಯಮಂತ್ರಿ ಬದಲಾವಣೆ ಸುದ್ದಿಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದ್ದಾರೆ. ಪಂಚ … Continued

ಬೀದಿ ನಾಯಿ ಮೇಲೆ ಆಸಿಡ್ ದಾಳಿ; ಐವರ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಬೀದಿ ನಾಯಿಯನ್ನು ಥಳಿಸಿ ಅದರ ಮೇಲೆ ಆಸಿಡ್ ಸುರಿದ ಆರೋಪದ ಮೇಲೆ ಐವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಇದನ್ನು ಪ್ರಶ್ನಿಸಿದ ವೃದ್ಧೆಗೂ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಬನಶಂಕರಿ ಪೊಲೀಸರು ಎಫ್‌ಐಆರ್‌ ದಾಖಲಾಗಿದೆ. ಪೊಲೀಸರ ಪ್ರಕಾರ, ಆರೋಪಿಗಳು ರಾತ್ರಿಯ ವೇಳೆ ಕುಡಿದ ಮತ್ತಿನಲ್ಲಿ ಬೀದಿಗಳಲ್ಲಿ ಸಂಚರಿಸುತ್ತಿದ್ದರು. ಬೀದಿ … Continued

ಮಲ್ಪೆ: ಬೋಟ್ ನಲ್ಲಿ ಸಿಲುಕಿಕೊಂಡ 250 ಕೆಜಿ ತೂಕದ ಗರಗಸ ಮೀನು..!

ಉಡುಪಿ: ಮಲ್ಪೆ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದ ವೇಳೆ ಅಪರೂಪದ ಮತ್ತು ಅಳಿವಿನಂಚಿನಲ್ಲಿರು ಮೀನೊಂದು ಬೋಟ್ ನಲ್ಲಿ ಸಿಲುಕಿಕೊಂಡಿದೆ. ಸ್ಥಳೀಯ ಭಾಷೆಯಲ್ಲಿ ಇದನ್ನು ಗರಗಸ ಮೀನು (carpenter shark ) ಎಂದು ಕರೆಯಲಾಗುತ್ತದೆ ಹಾಗೂ ಇದಕ್ಕೆ ಗರಗಸ ಶಾರ್ಕ್ ಎಂದೂ ಹೇಳುತ್ತಾರೆ. ಹತ್ತು ಅಡಿಗೂ ಅಧಿಕ ಉದ್ದವಿರುವ ಮೀನಿನ ಬಾಯಿಂದ ಗರಗಸ ಮಾದರಿಯ ಮೊನಚಾದ ಹಲ್ಲುಗಳು ಹೊರ … Continued

ಕೃಷಿ ಯಂತ್ರ ಖರೀದಿಗೆ ನೀಡುತ್ತಿರುವ ಸಬ್ಸಿಡಿ ಶೇ.50ರಿಂದ 75%ಕ್ಕೆ ಏರಿಕೆ

ಬೆಂಗಳೂರು: ಸಾಮಾನ್ಯ ವರ್ಗದ ಜನರು ಕೃಷಿ ಯಂತ್ರೋಪಕರಣಗಳನ್ನು ಖರೀದಿಸಲು ನೀಡಲಾಗುತ್ತಿರುವ ಸಬ್ಸಿಡಿಯನ್ನು ಶೇ.50ರಿಂದ 75ಕ್ಕೆ ಏರಿಕೆ ಮಾಡಲು ಕೃಷಿ ಸಚಿವ ಬಿ.ಸಿ.ಪಾಟೀಲ ವಿಧಾನಸಭೆಗೆ ತಿಳಿಸಿದರು. ಶಾಸಕ ಆನಂದ್ ಸಿದ್ದನ್ಯಾಮೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸಾಮಾನ್ಯವರ್ಗದ ಜನರು ಕೃಷಿ ಯಂತ್ರೋಪಕರಣಗಳನ್ನು ಖರೀದಿಸಲು ಈವರೆಗೂ ಶೇ..50ರಷ್ಟು ಸಬ್ಸಿಡಿ ನೀಡಲಾಗುತ್ತಿತ್ತು. ಇದನ್ನು ಶೇ.75ಕ್ಕೆ ಏರಿಸುವ ಬಗ್ಗೆ ಚರ್ಚೆ ಮಾಡಲಾಗಿದೆ. … Continued

ಪಾರ್ಟಿ ಬಳಿಕ ತೆಪ್ಪದಲ್ಲಿ ರೌಂಡ್ಸ್ ಹಾಕುವಾಗ ದುರಂತ; ಮೂವರು ನೀರುಪಾಲು

ಕೋಲಾರ: ಪಾರ್ಟಿ ಮುಗಿಸಿ ತೆಪ್ಪದಲ್ಲಿ ರೌಂಡ್ಸ್ ಹಾಕುವಾಗ ಕೆರೆಯಲ್ಲಿ ತೆಪ್ಪ ಮಗುಚಿ ಬಿದ್ದು ಮೂವರು ಯುವಕರು ನೀರುಪಾಲಾದ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ನೇರಳಕೆರೆ ಸಮೀಪ ನಡೆದಿದೆ. ಮೃತರನ್ನು ನವೀನ(32), ರಾಜೇಂದ್ರ(32), ಮೋಹನ್(28) ಎಂದು ಹೇಳಲಾಗಿದೆ. ಇವರೊಂದಿಗೆ ಬಂದಿದ್ದ ಮತ್ತೊಬ್ಬ ಊಟ ತರಲು ಹೋಗಿದ್ದ ಕಾರಣಕ್ಕೆ ಬದುಕುಳಿದಿದ್ದಾನೆ ಎನ್ನಲಾಗಿದೆ. ಕೆರೆ ಬಳಿ ಪಾರ್ಟಿ ಮಾಡಿದ … Continued

ಅಯೋಧ್ಯಾ ರಾಮ ಜನ್ಮಭೂಮಿಯಿಂದ ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೆ ವಿಮಾನ-ರೈಲ್ವೆ ಸಂಪರ್ಕ: ಶಶಿಕಲಾ ಜೊಲ್ಲೆ

ಬೆಂಗಳೂರು: ಹನುಮ ಜನ್ಮಸ್ಥಳ ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೆ ಅಯೋಧ್ಯೆಯಿಂದ ವಿಮಾನಯಾನ ಹಾಗೂ ರೈಲ್ವೆ ಮೂಲಕ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಈ ಬಗ್ಗೆ ಶೀಘ್ರ ಕ್ರಮಕೈಗೊಳ್ಳಲಾಗುವುದು ಎಂದು ಮುಜರಾಯಿ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಭರವಸೆ ನೀಡಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಬುಧವಾರ ಎನ್‌.ರವಿಕುಮಾರ್‌ ಪ್ರಶ್ನೆಗೆ ಉತ್ತರಿಸಿದ ಅವರು, ಹನುಮನ ಜನ್ಮಸ್ಥಳ ಅಂಜನಾದ್ರಿಯ ಸಮಗ್ರ ಅಭಿವೃದ್ದಿಯ … Continued

ಗೃಹ ಸಚಿವ ಅರಗ ಜ್ಞಾನೇಂದ್ರರನ್ನು ಭೇಟಿಯಾದ ತಮಿಳುನಾಡು ಸಚಿವರ ಪುತ್ರಿ; ತಮಗೆ ಪೊಲೀಸ್ ರಕ್ಷಣೆ ನೀಡುವಂತೆ ಮನವಿ

ಬೆಂಗಳೂರು: ಬೆಂಗಳೂರು : ತಮಿಳು ನಾಡು ಮುಜರಾಯಿ ಖಾತೆ ಸಚಿವ ಶೇಖರ್ ಬಾಬು ಅವರ ಪುತ್ರಿ ಜಯ ಕಲ್ಯಾಣಿ (24) ಹಾಗೂ ಅವರ ಪತಿ ಸತೀಶ ಇಂದು, ಬುಧವಾರ ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ಭೇಟಿಯಾಗಿ, ಪೊಲೀಸ್ ರಕ್ಷಣೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ. ಸಚಿವರನ್ನು ಭೇಟಿಯಾಗುವ ಪೂರ್ವದಲ್ಲಿ, ಇವರಿಬ್ಬರು ನಗರ ಪೊಲೀಸ್ ಆಯುಕ್ತರನ್ನು … Continued

ಎಸಿಬಿ ಬಲೆಗೆ ಬಿದ್ದ ಸಬ್ ರಿಜಿಸ್ಟ್ರಾರ್, ಬಾಂಡ್ ರೈಟರ್

ಬೆಳಗಾವಿ: ಪಿತ್ರಾರ್ಜಿತ ಆಸ್ತಿ ಪರಭಾರೆಗೆ ಸಂಬಂಧಪಟ್ಟ ದಾಖಲಾತಿಗಳನ್ನು ನೀಡಲು 4,000 ರೂ.ಗಳನ್ನು ಲಂಚ ಕೇಳಿದ ಸವದತ್ತಿ ತಾಲೂಕು ಮುರಗೋಡದ ಸಬ್ ರಿಜಿಸ್ಟ್ರಾರ್ ಮತ್ತು ಸಬ್ ರಿಜಿಸ್ಟ್ರಾರ್ ಪರವಾಗಿ ಲಂಚವನ್ನು ಸ್ವೀಕರಿಸಿದ ಬಾಂಡ್ ರೈಟರ್ ಬುಧವಾರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಬಲೆಗೆ ಬಿದ್ದಿದ್ದಾರೆ. ಆರೋಪಿಗಳಾದ ಸಬ್ ರಿಜಿಸ್ಟ್ರಾರ್ ಸಂಜೀವ ವೀರಭದ್ರ ಕಪಾಲಿ ಹಾಗೂ ಸ್ಥಳೀಯ ಬಾಂಡ್ … Continued

ಅಂಕೋಲಾ: ಶಾಲೆಯ ಮೇಲ್ಛಾವಣಿ ಪ್ಲಾಸ್ಟರಿಂಗ್ ಕುಸಿದು ಐವರು ವಿದ್ಯಾರ್ಥಿಗಳಿಗೆ ಗಾಯ

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣದ ನಿರ್ಮಲ ಹೃದಯ ಆಂಗ್ಲ ಮಾಧ್ಯಮ ಶಾಲೆಯ 4 ತರಗತಿ ಕೊಠಡಿಯ ಮೇಲ್ಛಾವಣಿಯ ತಳಬಾಗದ ಕಾಂಕ್ರೀಟ್ ಪದರು ಕುಸಿದು ಬಿದ್ದು ನಾಲ್ಕೈದು ವಿದ್ಯಾರ್ಥಿಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿರುವುದಾಗಿ ತಿಳಿದು ಬಂದಿದೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಧ್ಯಾಹ್ನ 12:30ರ ಸಮಯಕ್ಕೆ ಊಟದ ವಿರಾಮ ಇದ್ದ ಸಮಯದಲ್ಲಿ … Continued

ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಅರ್ಜಿ ಶುಲ್ಕ ಹೆಚ್ಚಳ

ಬೆಂಗಳೂರು: ಮೇ ತಿಂಗಳಲ್ಲಿ 15,000 ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸಿಇಟಿ ಪರೀಕ್ಷೆ ನಡೆಸಲು ಸಂಬಂಧಪಟ್ಟ ಅಧಿಕಾರಿಗಳು ಗ್ರೀನ್‌ ಸಿಗ್ನಲ್‌ ನೀಡಿದ್ದು, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6-8ನೇ ತರಗತಿ) ನೇಮಕಾತಿ ಪರೀಕ್ಷೆಗೆ ಅರ್ಜಿ ಶುಲ್ಕ ದರವನ್ನು ಶೇ. 25ರಷ್ಟು ಹೆಚ್ಚಳ ಮಾಡಲಾಗಿದೆ. ಪರಿಶಿಷ್ಟ ಜಾತಿ, ಪಂಗಡ, ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಒಂದು ಹುದ್ದೆಗೆ 625 … Continued