ಬೀಳು ಜಮೀನು ಪ್ರಕರಣ: ಪಹಣಿ (RTC) ತಿದ್ದುಪಡಿಗೆ ಮತ್ತೊಮ್ಮೆ ಅವಕಾಶ-ಸಚಿವ ಅಶೋಕ

ಬೆಂಗಳೂರು: ರಾಜ್ಯದಲ್ಲಿರುವ ಬೀಳು ಜಮೀನು ಪ್ರಕರಣಗಳಲ್ಲಿ ಆರ್ ಟಿ ಸಿ ಯನ್ನು ತಿದ್ದುಪಡಿ ಮಾಡಲು ಮತ್ತೊಮ್ಮೆ ಅವಕಾಶ ನೀಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ವಿಧಾನ ಪರಿಷತ್ ನ ಪ್ರಶ್ನೋತ್ತರದಲ್ಲಿ ಜೆಡಿಎಸ್ ನ ಶ್ರೀಕಂಠೇಗೌಡರ ಪ್ರಶ್ನೆಗೆ ಉತ್ತರಿಸಿದ ಅವರು ಅವರು, ರಾಜ್ಯದಲ್ಲಿ 1,08,09,018 ಎಕರೆ ಕಂದಾಯ ಬೀಳು ಜಮೀನುಗಳಿವೆ. 1966ರ ಕರ್ನಾಟಕ ಭೂ ಕಂದಾಯ … Continued

ತಂದೆ ನೇಣಿಗೆ ಶರಣಾದ ಸುದ್ದಿ ಕೇಳಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಗ..

ಮಡಿಕೇರಿ : ತಂದೆ ಹಾಗೂ ಮಗ ಇಬ್ಬರೂ ಆತ್ಮಹತ್ಯೆಗೆ ಶರಣಾದ ಘಟನೆ ವಿರಾಜಪೇಟೆಯ ಬಿಳುಗುಂದ ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಗ್ರಾಮದ ನಿವಾಸಿಗಳಾದ ತಂದೆ ಸುಬ್ಬಯ್ಯ (76) ಹಾಗೂ ಪುತ್ರ ಗಿರೀಶ್ (39) ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ. ಮಾ.7ರಂದು ಸಂಜೆ ಮಂಡಲ ಕಚೇರಿಗೆ ಹೋಗಿ ಬರುವುದಾಗಿ ತೆರಳಿದ್ದ ಸುಬ್ಬಯ್ಯ ತೋಟದ ಮಧ್ಯೆ ನೇಣು ಬಿಗಿದುಕೊಂಡು … Continued

ಕರ್ನಾಟಕ ಮೇಕೆದಾಟು ಅಣೆಕಟ್ಟು ಕಟ್ಟಲು ತಮಿಳುನಾಡು ಬಿಡುವುದಿಲ್ಲ: ಸಚಿವ

ಚೆನ್ನೈ: ಮೇಕೆದಾಟು ಅಣೆಕಟ್ಟು ಕಟ್ಟಲು ಕರ್ನಾಟಕಕ್ಕೆ ತಮಿಳುನಾಡು ಅವಕಾಶ ನೀಡುವುದಿಲ್ಲ ಎಂದು ತಮಿಳುನಾಡು ಜಲಸಂಪನ್ಮೂಲ ಸಚಿವ ಎಸ್.ದುರೈಮುರುಗನ್ ಹೇಳಿದ್ದಾರೆ. ಮೇಕೆದಾಟು ಎಂಬಲ್ಲಿ ಅಣೆಕಟ್ಟು ನಿರ್ಮಿಸುವುದರಿಂದ ತಮಿಳುನಾಡಿಗೆ ಕಾವೇರಿ ನೀರು ಹರಿಯುವುದಕ್ಕೆ ತಡೆ ಉಂಟಾಗುತ್ತದೆ ಎಂದು ಡಿಎಂಕೆ ಹಿರಿಯ ನಾಯಕ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಣೆಕಟ್ಟು ನಿರ್ಮಾಣಕ್ಕೆ ಕರ್ನಾಟಕ ತನ್ನ ಬಜೆಟ್ ಅನ್ನು 1,000 ಕೋಟಿಯಿಂದ 5,000 ಕೋಟಿಗೆ … Continued

ವಿಧಾನ ಪರಿಷತ್‌ ಸದಸ್ಯ ಡಿ.ಎಸ್.ಅರುಣ್​​ಗೆ ಜೀವ ಬೆದರಿಕೆ

ಶಿವಮೊಗ್ಗ: ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ. ಅರುಣ್ ಅವರು ವಿಧಾನ ಪರಿಷತ್​​ನ ಮಾಜಿ ಸಭಾಪತಿ ಡಿ.ಎಸ್. ಶಂಕರಮೂರ್ತಿ ಅವರ ಮಗ. ಇವರಿಗೆ ಮುಸ್ತಾಕ್ ಅಲಿ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಸಂದೇಶ ಕಳುಹಿಸಲಾಗಿದೆ ಎಂದು ಆರೋಪಿಸಲಾಗಿದೆ. ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ … Continued

ಎನ್‌ಇಪಿ ಅಡಿ ಕನ್ನಡ ಕಲಿಕೆ ಕಡ್ಡಾಯವಲ್ಲ; ಹೈಕೋರ್ಟಿಗೆ ತಿಳಿಸಿದ ಕೇಂದ್ರ ಸರ್ಕಾರ

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)- 2020 ಮತ್ತು ಅದರ ನಿಬಂಧನೆಗಳಲ್ಲಿ ಯಾವುದೇ ಭಾಷೆಯನ್ನು ಕಡ್ಡಾಯಗೊಳಿಸುವ ಸಂಬಂಧ ಉಲ್ಲೇಖಗಳಿಲ್ಲ. ಹೀಗಾಗಿ, ಎನ್‌ಇಪಿ ನಿಬಂಧನೆಗಳನ್ನು ಪುನರ್‌ವ್ಯಾಖ್ಯಾನಿಸುವ ಅಗತ್ಯ ಉದ್ಭವಿಸುವುದಿಲ್ಲ ಎಂದು ಕೇಂದ್ರ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ. ಇದರಿಂದಾಗಿ ಪದವಿ ಹಂತದಲ್ಲಿ ಭಾಷೆಯಾಗಿ ಕನ್ನಡ ಕಲಿಕೆಯನ್ನು ಕಡ್ಡಾಯ ಮಾಡಿರುವ ರಾಜ್ಯ ಸರ್ಕಾರಕ್ಕೆ ತೀವ್ರ ಹಿನ್ನೆಡೆಯಾಗಿದೆ. ಪದವಿ ಹಂತದಲ್ಲಿ … Continued

ಮೇಕೆದಾಟು: ಮುಂದಿನ ವಾರ ಸರ್ವಪಕ್ಷ ಸಭೆ ಕರೆದು ಮುಂದಿನ ನಿರ್ಧಾರ: ಸಿಎಂ ಬೊಮ್ಮಾಯಿ

ಬೆಂಗಳೂರು: ಮೇಕೆದಾಟು ಯೋಜನೆ ಕುರಿತು ಚರ್ಚೆ ನಡೆಸಲು ಇದೇ ವಾರ ಸರ್ವಪಕ್ಷಗಳ ಸಭೆ ಕರೆಯಲಾಗುವುದು  ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ. ವಿಧಾನಸಭೆಯಲ್ಲಿ ಮಾತಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಮೇಕೆದಾಟು ಯೋಜನೆ ಬಗ್ಗೆ ಇದೇ ವಾರ ಸರ್ವಪಕ್ಷಗಳ ಸಭೆ ಕರೆಯಲಾಗುವುದು ಎಂದರು. ಮೇಕೆದಾಟು ಯೋಜನೆಗೆ ಬಜೆಟ್‌ನಲ್ಲಿ 1000 ಕೋಟಿ ರೂ.ಗಳನ್ನು ಮೀಸಲಿಟ್ಟರೂ ಕೇಂದ್ರದಿಂದ ಅಗತ್ಯ ಅನುಮತಿಗಳನ್ನು ನೀಡದಿದ್ದರೆ … Continued

ಗ್ರಾಪಂ, ತಾಪಂ, ಜಿಪಂ ಜನಪ್ರತಿನಿಧಿಗಳ ವೇತನ ಹೆಚ್ಚಳಕ್ಕೆ ಚಿಂತನೆ: ಸಚಿವ ಈಶ್ವರಪ್ಪ

ಬೆಂಗಳೂರು: ಸರ್ಕಾರ ಈಗ ಸ್ಥಳೀಯ ಸಂಸ್ಥೆ ಜನಪ್ರತಿನಿಧಿಗಳ ವೇತನ ಹೆಚ್ಚಳಕ್ಕೂ ಚಿಂತನೆ ನಡೆಸಿದೆ. ಈ ಕುರಿತು ವಿಧಾನ ಪರಿಷತ್ತಿನಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯತ, ತಾಲೂಕು ಪಂಚಾಯತ ಮತ್ತು ಜಿಲ್ಲಾ ಪಂಚಾಯತ ಪ್ರತಿನಿಧಿಗಳ ವೇತನ ಹೆಚ್ಚಳ ಸಂಬಂಧ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು. ಸ್ಥಳೀಯ … Continued

ಗೃಹ ರಕ್ಷಕ ಸ್ವಯಂಸೇವಕರ ಭತ್ಯೆ ಹೆಚ್ಚಿಸಿದ ಸರ್ಕಾರ

ಬೆಂಗಳೂರು : ರಾಜ್ಯದಲ್ಲಿ ಪೊಲೀಸ್ ಇಲಾಖೆ ಹೊರತುಪಡಿಸಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು 3025 ಗೃಹ ರಕ್ಷಕ ಸ್ವಯಂಸೇವಕರ ಭತ್ಯೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ನಿರ್ಧಾರದಿಂದ ರಾಜ್ಯದ ವಿವಿಧ ಇಲಾಖೆಯಲ್ಲಿ ಗೃಹ ರಕ್ಷಕ ಸ್ವಯಂಸೇವಕರಾಗಿ ಕರ್ತವ್ಯ ನಿರ್ವಹಿಸುತ್ತಿರುವವರ ಬಹಳ ದಿನಗಳ ಬೇಡಿಕೆ ಈಡೆರಿಸಿದಂತಾಗಿದೆ ಎಂದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು … Continued

ಬೆಂಗಳೂರು: ಸ್ನೇಹ ಸೇತು 2022′ ಕಾರ್ಯಕ್ರಮ ಉದ್ಘಾಟನೆ

ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಉತ್ತರ ಕನ್ನಡ ಸಂಘದ ‘ಸ್ನೇಹ ಸೇತು 2022’ ಕಾರ್ಯಕ್ರಮ ಸಂಘದ ಸ್ವಂತ ಕಟ್ಟಡ ‘ಉತ್ತರ ಕನ್ನಡ ಭವನ’ದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾದ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಡಾ. ಜಿ ಎಲ್ ಹೆಗಡೆ ‘ಸದಸ್ಯತ್ವ ಅಭಿಯಾನ ಕಾರ್ಯಕ್ರಮ’ ಉದ್ಘಾಟಿಸಿದರು. ಶ್ರೀ ಚೌಡೇಶ್ವರಿ ದೇವಸ್ಥಾನದ ವ್ಯವಸ್ಥಾಪಕ ಧರ್ಮದರ್ಶಿ ಶ್ರೀ ಅನಂತರಾಮ ದಂಪತಿ ಕಾರ್ಯಕ್ರಮದಲ್ಲಿ … Continued

ಶಿಕ್ಷಕರಾಗುವವರಿಗೆ ಗುಡ್‌ ನ್ಯೂಸ್‌…ಇನ್ಮುಂದೆ ವರ್ಷದಲ್ಲಿ ಎರಡು ಬಾರಿ ಟಿಇಟಿ ಪರೀಕ್ಷೆ

ಬೆಂಗಳೂರು: ಶಿಕ್ಷಕರ ಹುದ್ದೆ ಆಕಾಂಕ್ಷಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವರ್ಷಕ್ಕೆ 2 ಬಾರಿ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಹೆಜ್ಜೆ ಇಟ್ಟಿದೆ. ಈ ಕುರಿತು ಶಿಕ್ಷಣ ಇಲಾಖೆ ಪ್ರತಿ ವರ್ಷ 2 ಬಾರಿ ಶಿಕ್ಷಕರ ಅರ್ಹಾ ಪರೀಕ್ಷೆ (ಟಿಇಟಿ) ಪರೀಕ್ಷೆ ನಡೆಸಲು ಸೂಚಿಸಿದೆ. ಈ ಕುರಿತು ಪ್ರಾಥಮಿ ಶಿಕ್ಷಣ ಇಲಾಖೆಯ ಸರ್ಕಾರದ … Continued