ಬ್ಯಾಂಕ್‌ ವಿರುದ್ಧ ಏಕಾಂಗಿಯಾಗಿ ಧರಣಿ ಕುಳಿತು ಗೆದ್ದ ಮಹಿಳೆ

ಮೈಸೂರು: ಸ್ವಯಂ ಉದ್ಯೋಗಕ್ಕಾಗಿ ಸಾಲ ಪಡೆಯಲು ಬ್ಯಾಂಕಿಗೆ ಅಲೆದಾಡಿದರೂಆರ್ಥಿಕ ನೆರವು ದೊರೆಯದಿದ್ದಾಗ ಮಹಿಳೆಯೊಬ್ಬರು ಬ್ಯಾಂಕಿನ ಮುಂಭಾಗದಲ್ಲಿಯೇ ಧರಣಿಗೆ ಕುಳಿತು ನ್ಯಾಯ ಪಡೆದ ಘಟನೆ ಮೈಸೂರಿನಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಮಹಿಳೆಯ ಹೋರಾಟದಿಂದ ಎಚ್ಚೆತ್ತ ಬ್ಯಾಂಕಿನ ಅಧಿಕಾರಿಗಳು ಆ ಮಹಿಳೆಗೆ ಸಾಲ ಸೌಲಭ್ಯ ನೀಡುವ ಭರವಸೆ ನೀಡಿದ್ದಾರೆ. ಮೈಸೂರಿನ ನೀಲಿ ಕಲಾ ಕ್ರಿಯೇಷನ್ಸ್‌ನ ಸಂಸ್ಥಾಪಕಿ, ಮಣ್ಣಿನ ಆಭರಣಗಳ … Continued

ದೂಧ್‌ಸಾಗರ್ ಬಳಿ ಹಳಿತಪ್ಪಿದ ಎಕ್ಸ್‌ಪ್ರೆಸ್ ಹೌರಾ ರೈಲು: ಪ್ರಯಾಣಿಕರು ಸುರಕ್ಷಿತ

ಬೆಳಗಾವಿ: ಮಂಗಳವಾರ ಬೆಳಗ್ಗೆ ಹೌರಾಕ್ಕೆ ತೆರಳುತ್ತಿದ್ದ ದೂಧ್‌ಸಾಗರ್ ಬಳಿ ಹಳಿತಪ್ಪಿದೆ. ವರದಿಗಳ ಪ್ರಕಾರ, ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ವಾಸ್ಕೋ-ಡಿ-ಗಾಮಾ ಹೌರಾ ಅಮರಾವತಿ ಎಕ್ಸ್‌ಪ್ರೆಸ್ ಇಂದು, ಸೋಮವಾರ ಬೆಳಿಗ್ಗೆ 8:56 ಕ್ಕೆ ದೂಧ್‌ಸಾಗರ್ ಮತ್ತು ಕರಂಜೋಲ್ (ಗೋವಾದಲ್ಲಿ) ನಡುವೆ ಹಳಿತಪ್ಪಿತು, ಅದರ ಪ್ರಮುಖ ಲೊಕೊದ ಮುಂಭಾಗದ ಜೋಡಿ ಚಕ್ರಗಳು ಹಳಿತಪ್ಪಿದವು. ಘಟನೆಯಲ್ಲಿ ಯಾವುದೇ ಪ್ರಾಣಹಾನಿ … Continued

ಸಾಹಿತಿ ಚಂದ್ರಶೇಖರ ಕಂಬಾರ ಪತ್ನಿ ಸತ್ಯಭಾಮ ಕಂಬಾರ ನಿಧನ

ಬೆಂಗಳೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ ಪತ್ನಿ ಸತ್ಯಭಾಮ ಕಂಬಾರ (76) ಇಂದು, ಸೋಮವಾರ ಬೆಳಿಗ್ಗೆ ನಿಧನರಾದರು. ಸತ್ಯಭಾಮ ಅವರುಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಅವರನ್ನು ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಜನವರಿ 3ರಂದು ಸತ್ಯಭಾಮ ಆಸ್ಪತ್ರೆಗೆ ದಾಖಲಾಗಿದ್ದರು. ಸತ್ಯಭಾಮ ಚಂದ್ರಶೇಖರ ಕಂಬಾರ ನಿಧನಕ್ಕೆ ಸಿಎಂ ಬೊಮ್ಮಾಯಿ ಸಂತಾಪ ವ್ಯಕ್ತಪಡಿಸಿದ್ದಾರೆ: ಜ್ಞಾನಪೀಠ ಪ್ರಶಸ್ತಿ … Continued

ಕಾರಿನ ಟೈರ್ ಸ್ಫೋಟದಿಂದ ಅಪಘಾತ: ಸ್ಥಳದಲ್ಲೇ ಇಬ್ಬರ ಸಾವು

ಚಿಕ್ಕಮಗಳೂರು: ಕಾರಿನ ಟೈರ್ ಸ್ಫೋಟದಿಂದ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಆಗುಂಬೆಯಿಂದ ಕೊಪ್ಪಕ್ಕೆ ಬರುತ್ತಿರುವಾಗ ಕೊಪ್ಪ ಹರಿಹರಪುರ ರಸ್ತೆಯ ಬಳಿ ನಾಗಲಾಪುರ ಸೇತುವೆ ಸಮೀಪ ಈ ಅಪಘಾತ ಸಂಭವಿಸಿದೆ. ಕಾರಿನಲ್ಲಿ ಒಟ್ಟು ನಾಲ್ಕು ಜನ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದ್ದು, ಇಬ್ಬರು ಸ್ಥಳದಲ್ಲಿಯೇ ಮೃತರಾಗಿದ್ದಾರೆ. ಇನ್ನಿಬ್ಬರಿಗೆ … Continued

ಯಲ್ಲಾಪುರ: ಅಂಬುಲೆನ್ಸ್ ನಲ್ಲಿಯೇ ಅವಳಿ ಮಕ್ಕಳ ಜನನ

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಹೆರಿಗೆಗೆಂದು ಆಸ್ಪತ್ರೆಗೆ ಕರೆತರುತ್ತಿರುವಾಗಲೇ ಮಹಿಳೆ 108 ಅಂಬುಲೆನ್ಸ್ ನಲ್ಲಿಯೇ ಅವಳಿ ಮಕ್ಕಳಿಗೆ ಜನ್ಮ ನೀಡಿರುವ ವಿದ್ಯಮಾನ ವರದಿಯಾಗಿದೆ..! ತಾಲೂಕಿನ ಕರಡೊಳ್ಳಿಯ ಸುಮಿತ್ರಾ ಶಿಂಧೆ ಎಂಬವರನ್ನು ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೋಮವಾರ (ಜನವರಿ 17) ಹೆರಿಗೆ ಮಾಡಿಸಲೆಂದು ಆಸ್ಪತ್ರೆಗೆ ದಾಖಲಿಸಲು 108 ಅಂಬ್ಯುಲೆನ್ಸ್ ವಾಹನದಲ್ಲಿ ಕರೆತರಲಾಗುತ್ತಿತ್ತು. ಈ ವೇಳೆ … Continued

ಬೆಳಗಾವಿಯಲ್ಲಿ ಮೂವರು ಶಿಶುಗಳ ಸಾವು ಪ್ರಕರಣ: ಸಮಗ್ರ ವರದಿ ಕೇಳಿದ ಸಿಎಂ ಬೊಮ್ಮಾಯಿ

ಬೆಂಗಳೂರು: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಎರಡು ಗ್ರಾಮಗಳಲ್ಲಿ ಸೋಮವಾರ, ಜನವರಿ 17 ರಂದು 10-15 ತಿಂಗಳ ವಯಸ್ಸಿನಮೂರು ಶಿಶುಗಳು ದಡಾರ-ರುಬೆಲ್ಲಾ ಲಸಿಕೆಯನ್ನು ಪಡೆದ ನಂತರ ಮೃತಪಟ್ಟಿಪ್ಪಿವೆ. ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾಧಿಕಾರಿಅವರಿಂದ ವಿವರವಾದ ವರದಿ ಕೇಳಿದ್ದಾರೆ. ಬೆಳಗಾವಿ ಡಿಸಿ ಜತೆ ದೂರವಾಣಿ ಮೂಲಕ ಮಾತನಾಡಿದ ಬೊಮ್ಮಾಯಿ, ಪ್ರಕರಣದ ಸಮಗ್ರ ವರದಿ … Continued

ಕೇರಳ ಸರ್ಕಾರ ಮಾರ್ಗದರ್ಶಿ ಸೂತ್ರ ನಿರ್ಲಕ್ಷಿಸಿದ್ದರಿಂದ ನಾರಾಯಣ ಗುರುಗಳ ಸ್ತಬ್ಧಚಿತ್ರ ತಿರಸ್ಕಾರ; ಕಟೀಲು

ಬೆಂಗಳೂರು: ಗಣರಾಜ್ಯೋತ್ಸವ ಸಮಿತಿಯಿಂದ ನಾರಾಯಣ ಗುರುಗಳ ಸ್ತಬ್ಧಚಿತ್ರ ತಿರಸ್ಕಾರ ಮಾಡಿದ್ದಕ್ಕೆ ಕೇರಳ ಸರ್ಕಾರದ ನಿರ್ಲಕ್ಷ್ಮ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಗಣರಾಜ್ಯೋತ್ಸವ ದಿನದಂದು ದೆಹಲಿಯ ರಾಜಪಥದಲ್ಲಿ ಚಲಿಸುವ ಟ್ಯಾಬ್ಲೋಗಳಿಗೆ ಕೆಲವು ಮಾರ್ಗದರ್ಶಿ ಸೂತ್ರಗಳಿವೆ. ಕೇಂದ್ರ ಕಳುಹಿಸಿದ ಮಾರ್ಗದರ್ಶಿ ಸೂತ್ರಗಳನ್ನು ಕೇರಳ ನಿರ್ಲಕ್ಷ್ಯ ಮಾಡಿದೆ … Continued

ಕರ್ನಾಟಕದಲ್ಲಿ ಒಂದೇ ದಿನ 287 ಜನರಿಗೆ ಓಮಿಕ್ರಾನ್‌ ಸೋಂಕು ದೃಢ

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿನ ರೂಪಾಂತರಿ ಓಮಿಕ್ರಾನ್ ಸೋಮವಾರ 287 ಜನರಲ್ಲಿ ಕಾಣಿಸಿಕೊಂಡಿದ್ದು ಈವರೆಗೆ ಒಂದೇ ದಿನ ಅತಿ ಹೆಚ್ಚು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಂತಾಗಿದೆ. ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಸೇರಿದಂತೆ ಇಲ್ಲಿಯ ತನಕ ಓಮಿಕ್ರಾನ್ ಸೋಂಕು ಸಂಖ್ಯೆ 766 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.‌ಸುಧಾಕರ್ ತಿಳಿಸಿದ್ದಾರೆ‌ ಈ ಕುರಿತು … Continued

ಬೆಳಗಾವಿ ಜಿಲ್ಲೆಯಲ್ಲಿ ಮೂವರು ಮಕ್ಕಳ ಸಾವು ; ಇಬ್ಬರ ಅಮಾನತು

ಬೆಳಗಾವಿ/ಬೆಂಗಳೂರು: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮೂವರು ಮಕ್ಕಳ ನಿಗೂಢ ಸಾವಿಗೆ ಸಂಬಂಧಿಸಿ ಇಬ್ಬರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, ಜನವರಿ 12 ರಂದು ರಾಮದುರ್ಗ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲ ಮಕ್ಕಳಿಗೆ ಚುಚ್ಚುಮದ್ದು ಹಾಕಲಾಗಿತ್ತು.ಆಗ … Continued

ಸುಗಾವಿ: ಕಾಡುನಾಯಿಗಳಿಂದ ತಪ್ಪಿಸಿಕೊಂಡು ಗ್ರಾಮದೊಳಕ್ಕೆ ಬಂದ ಜಿಂಕೆ ಮರಿ ರಕ್ಷಣೆ

ಶಿರಸಿ: ತಾಲೂಕಿನ ಸುಗಾವಿ ಗ್ರಾಮದಲ್ಲಿ ಕಾಡು ನಾಯಿಗಳ ದಾಳಿಯಿಂದ ತಪ್ಪಿಸಿಕೊಂಡ ತನ್ನನ್ನು ರಕ್ಷಿಸಿಕೊಳ್ಳಲು ಗ್ರಾಮದೊಳಕ್ಕೆ ಬಂದ ಜಿಂಕೆ ಮರಿಯನ್ನು ರಕ್ಷಿಸಿ ಪುನಃ ಕಾಡಿಗೆ ಬಿಡಲಾಗಿದೆ. ಕಾಡುನಾಯಿಗಳ (ಸೀಳುನಾಯಿಗಳು) ದಾಳಿಯಿಂದ ಜೀವತಪ್ಪಿಸಿಕೊಂಡು ಬಂದ ಜಿಂಕೆ ಮರಿ ಗ್ರಾಮದೊಳಕ್ಕೆ ಬಂದಿದೆ. ಜಿಂಕೆಮರಿ ಕಂಡ ನಾಯಿಗಳು  ಬೆನ್ನಟ್ಟಿವೆ. ಇದನ್ನು ಕಂಡ ಗ್ರಾಮಸ್ಥರು ಜಿಂಕೆಮರಿಯನ್ನು ನಾಯಿಗಳಿಂದ ರಕ್ಷಿಸಿದ್ದಾರೆ. ಸಂಜೆ 5ರ ಸುಮಾರಿಗೆ … Continued