ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಬೇಕೇ’: ವಿವಾದಕ್ಕೆ ಕಾರಣವಾದ ಮಧ್ಯಪ್ರದೇಶ ನಾಗರಿಕ ಸೇವಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ, ಇಬ್ಬರು ಅಧಿಕಾರಿಗಳು ಡಿಬಾರ್‌

ಇಂದೋರ್/ಭೋಪಾಲ್ : ಮಧಯಪ್ರದೇಶ ರಾಜ್ಯ ಸೇವೆಗಳ ಪೂರ್ವಭಾವಿ ಪರೀಕ್ಷೆಯ ಜನರಲ್ ಆಪ್ಟಿಟ್ಯೂಡ್ ಪರೀಕ್ಷೆಯಲ್ಲಿ ಕಾಶ್ಮೀರದ ಕುರಿತು ವಿವಾದಾತ್ಮಕ ಪ್ರಶ್ನೆಯನ್ನು ಕೇಳಿದ ನಂತರ ಮಧ್ಯಪ್ರದೇಶ ಸಾರ್ವಜನಿಕ ಸೇವಾ ಆಯೋಗ (MPPSC) ಮಂಗಳವಾರ ಪೇಪರ್ ಸೆಟ್ಟರ್ ಮತ್ತು ಮಾಡರೇಟರ್ ಅನ್ನು ಕಪ್ಪುಪಟ್ಟಿಗೆ ಸೇರಿಸಿದೆ. ಭಾನುವಾರ ನಡೆದ ಪರೀಕ್ಷೆಯಿಂದ ಎಂಪಿಪಿಎಸ್‌ಸಿ ವಿವಾದಾತ್ಮಕ ಪ್ರಶ್ನೆಯನ್ನು ಹಿಂತೆಗೆದುಕೊಂಡಿದೆ. ಅಧಿಕಾರಿಗಳ ಪ್ರಕಾರ, ಜಮ್ಮು ಮತ್ತು … Continued

2002ರ ಗುಜರಾತ್ ಗಲಭೆ: ಮೋದಿಗೆ ಎಸ್‌ಐಟಿ ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿದ್ದ ಝಕಿಯಾ ಜಾಫ್ರಿ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ: ಹಿಂಸಾಚಾರದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ 63 ಮಂದಿಗೆ ವಿಶೇಷ ತನಿಖಾ ತಂಡವು ಕ್ಲೀನ್ ಚಿಟ್ ನೀಡಿರುವುದನ್ನು ಪ್ರಶ್ನಿಸಿ ಮೃತ ಕಾಂಗ್ರೆಸ್ ನಾಯಕ ಎಹ್ಸಾನ್ ಜಾಫ್ರಿ ಅವರ ವಿಧವೆ ಝಕಿಯಾ ಜಾಫ್ರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಫೆಬ್ರವರಿ 28, 2002 ರಂದು ಅಹಮದಾಬಾದ್‌ನ ಗುಲ್ಬರ್ಗ್ ಸೊಸೈಟಿಯಲ್ಲಿ … Continued

ಭಾರತದಲ್ಲಿ 17,336 ಹೊಸ ಕೊರೊನಾ ಸೋಂಕು ದಾಖಲು, 13 ಜನರ ಸಾವು

ನವದೆಹಲಿ: ದೇಶದಾದ್ಯಂತ ಶುಕ್ರವಾರ ಬೆಳಿಗ್ಗೆ ಕೊನೆಗೊಂಡ 24 ಗಂಟೆ ಅವಧಿಯಲ್ಲಿ ಹೊಸದಾಗಿ 17,336 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಟಣೆ ತಿಳಿಸಿದೆ. ಗುರುವಾರಕ್ಕೆ ಹೋಲಿಸಿದರೆ ಇದು ಶೇ. 30ರಷ್ಟು ಜಾಸ್ತಿಯಾಗಿದೆ. ಗುರುವಾರ 13,313 ಕೊರೊನಾ ಸೋಂಕು ಪ್ರಕರಣ ವರದಿಯಾಗಿತ್ತು. ಕಳೆದ 24 ಗಂಟೆ ಅವಧಿಯಲ್ಲಿ ಅವಧಿಯಲ್ಲಿ 13,059 ಮಂದಿ ಚೇತರಿಸಿಕೊಂಡಿದ್ದು, 13 … Continued

ಅಸ್ಸಾಂ ಪ್ರವಾಹ: ಸಾವಿನ ಸಂಖ್ಯೆ 107ಕ್ಕೆ ಏರಿಕೆ, 45 ಲಕ್ಷ ಸಂತ್ರಸ್ತರ ಪರಿಸ್ಥಿತಿ ಭೀಕರ

ಗುವಾಹತಿ: ಪ್ರವಾಹದಿಂದಾಗಿ ಅಸ್ಸಾಂನಲ್ಲಿ ಕಳೆದ 24 ಗಂಟೆಗಳಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಏಳು ಜನರು ಸಾವಿಗೀಡಾಗಿದ್ದು, ಮಹಾಮಳೆಗೆ ಮೃತರ ಸಂಖ್ಯೆ 107ಕ್ಕೆ ತಲುಪಿದೆ, ಭೂಕುಸಿತದಲ್ಲಿ 17 ಮಂದಿ ಮೃತಪಟ್ಟಿದ್ದಾರೆ. ಒಟ್ಟು 4,536 ಗ್ರಾಮಗಳು ಇನ್ನೂ ಪ್ರವಾಹದ ನೀರಿನಲ್ಲಿ ತತ್ತರಿಸಿವೆ. ಬಾರ್ಪೇಟಾ ಅತ್ಯಂತ ಹೆಚ್ಚು ಹಾನಿಗೊಳಗಾದ ಜಿಲ್ಲೆಯಾಗಿದ್ದು, 10.32 ಲಕ್ಷಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ. ರಾಜ್ಯದ 30 … Continued

ಕೋವಿಡ್‌-19 ಲಸಿಕೆಗಳಿಂದ 2021ರಲ್ಲಿ 42 ಲಕ್ಷಕ್ಕೂ ಹೆಚ್ಚು ಸಂಭವನೀಯ ಸಾವುಗಳನ್ನು ತಡೆಗಟ್ಟಿದ ಭಾರತ: ಲ್ಯಾನ್ಸೆಟ್ ಅಧ್ಯಯನ

ನವದೆಹಲಿ: ಕೋವಿಡ್‌-19 ಲಸಿಕೆಗಳು 2021 ರಲ್ಲಿ ಭಾರತದಲ್ಲಿ 42 ಲಕ್ಷಕ್ಕೂ ಹೆಚ್ಚು ಸಂಭಾವ್ಯ ಸಾವುಗಳನ್ನು ತಡೆಗಟ್ಟಿವೆ ಎಂದು ಅಧ್ಯಯನ ವರದಿಯು ಹೇಳಿಕೊಂಡಿದೆ. ಸಾಂಕ್ರಾಮಿಕ ಸಮಯದಲ್ಲಿ ದೇಶದಲ್ಲಿ “ಹೆಚ್ಚುವರಿ” ಮರಣಗಳ ಅಂದಾಜು ಕಂಡುಹಿಡಿಯಲು ನಡೆಸಿದ ಅಧ್ಯಯನವು ಕೋವಿಡ್‌-19 ಲಸಿಕೆಗಳಿಂದ ಸಂಭವನೀಯ ಸಾವಿನ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಹೇಳಿಕೊಂಡಿದೆ. ದಿ ಲ್ಯಾನ್ಸೆಟ್ ಸಾಂಕ್ರಾಮಿಕ ರೋಗಗಳ ಜರ್ನಲ್‌ನಲ್ಲಿ … Continued

ತಮ್ಮ 60ನೇ ಜನ್ಮದಿನದ ಅಂಗವಾಗಿ ಸಾಮಾಜಿಕ ಕಾರ್ಯಗಳಿಗೆ 60,000 ಕೋಟಿ ರೂ.ದೇಣಿಗೆ ಘೋಷಿಸಿದ ಗೌತಮ್ ಅದಾನಿ

ಮುಂಬೈ: ಅದಾನಿ ಗ್ರೂಪ್‌ನ ಅಧ್ಯಕ್ಷರಾದ ಗೌತಮ್ ಅದಾನಿ ಅವರು ಸಾಮಾಜಿಕ ಕಾರಣಗಳಿಗಾಗಿ, ವಿಶೇಷವಾಗಿ ಆರೋಗ್ಯ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಗಾಗಿ 60,000 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಶುಕ್ರವಾರ (ಜೂನ್ 24) ಗೌತಮ್ ಅದಾನಿ ಅವರ 60ನೇ ಜನ್ಮದಿನದ ಅಂಗವಾಗಿ ಈ ದಾಖಲೆಯ ದೇಣಿಗೆಯನ್ನು ಘೋಷಿಸಿದ್ದಾರೆ. ಗೌತಮ್ ಅದಾನಿ ಅವರ ತಂದೆ ಶಾಂತಿಲಾಲ್ ಅದಾನಿ ಅವರ … Continued

ಏಕನಾಥ್ ಶಿಂಧೆ, 11 ಬಂಡಾಯ ಶಾಸಕರ ಅನರ್ಹಕ್ಕೆ ಉಪ ಸ್ಪೀಕರ್‌ಗೆ ಅರ್ಜಿ ಸಲ್ಲಿಸಿದ ಉದ್ಧವ್ ಠಾಕ್ರೆ

ಮುಂಬೈ: 12 ಬಂಡಾಯ ಶಾಸಕರ ಅನರ್ಹತೆ ಅರ್ಜಿಗಳೊಂದಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಇಂದು ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮತ್ತೆ ಪ್ರಯತ್ನ ಮಾಡಿದ್ದಾರೆ. ಇದು ವಿಶ್ವಾಸ ಮತದ ಸಂದರ್ಭದಲ್ಲಿ ಅವರ ಪರವಾಗಿ ವಿಧಾನಸಭೆಯಲ್ಲಿನ ಸಂಖ್ಯೆಯನ್ನು ತರಲು ಸಹಾಯ ಮಾಡುತ್ತದೆ. ಏಕನಾಥ್ ಶಿಂಧೆ ಅರ್ಜಿ ಅಕ್ರಮ ಎಂದು ಹೇಳಿದ್ದಾರೆ. ಗುವಾಹಟಿಯಲ್ಲಿ ಬೀಡುಬಿಟ್ಟಿರುವ ಬಂಡುಕೋರರ ಸಂಖ್ಯೆ 40 ಕ್ಕೆ … Continued

ಎನ್‌ಐಎ ಮುಖ್ಯಸ್ಥರಾಗಿ ಪಂಜಾಬ್ ಕೇಡರ್‌ನ ಹಿರಿಯ ಐಪಿಎಸ್ ಅಧಿಕಾರಿ ದಿನಕರ್ ಗುಪ್ತಾ ನೇಮಕ

ನವದೆಹಲಿ: ಮುಂಬೈನಲ್ಲಿ 26/11 ದಾಳಿಯ ನಂತರ ರಚಿಸಲಾದ ಭಯೋತ್ಪಾದನಾ ವಿರೋಧಿ ತನಿಖಾ ಸಂಸ್ಥೆಯಾದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಯ ಹೊಸ ಮಹಾನಿರ್ದೇಶಕರನ್ನಾಗಿ ಪಂಜಾಬ್ ಮಾಜಿ ಡಿಜಿಪಿ ದಿನಕರ್ ಗುಪ್ತಾ ಅವರನ್ನು ಗುರುವಾರ ನೇಮಿಸಲಾಗಿದೆ. ಯೋಗೇಶ್ ಸಿ. ಮೋದಿ ಅವರ ನಿವೃತ್ತಿಯ ನಂತರ ಕಳೆದ ವರ್ಷ ಮೇ ತಿಂಗಳಲ್ಲಿ ಸಿಆರ್‌ಪಿಎಫ್ ಮಹಾನಿರ್ದೇಶಕ ಕುಲದೀಪ್ ಸಿಂಗ್‌ಗೆ ಎನ್‌ಐಎ … Continued

ರಾಷ್ಟ್ರಪತಿ ಸ್ಥಾನಕ್ಕೆ ಯಶವಂತ್ ಸಿನ್ಹಾ ಉತ್ತಮ ಅಭ್ಯರ್ಥಿ ಅಲ್ಲ: ಸಿಪಿಐ(ಎಂ) ಸಂಸದ

ನವದೆಹಲಿ: ರಾಷ್ಟ್ರಪತಿ ಸ್ಥಾನಕ್ಕೆ ಯಶವಂತ್ ಸಿನ್ಹಾ ಅತ್ಯುತ್ತಮ ಅಭ್ಯರ್ಥಿ ಅಲ್ಲ. ಆದರೆ ವಿರೋಧ ಪಕ್ಷಗಳ ಒಗ್ಗಟ್ಟಿನ ದೃಷ್ಟಿಯಿಂದ ಇದನ್ನು ಒಪ್ಪಿಕೊಳ್ಳಬೇಕು ಎಂದು ಪಶ್ಚಿಮ ಬಂಗಾಳದ ಸಿಪಿಐ(ಎಂ)ನ ಏಕೈಕ ಸಂಸದ ಬಿಕಾಶ್ ರಂಜನ್ ಭಟ್ಟಾಚಾರ್ಯ ಗುರುವಾರ ಹೇಳಿದ್ದಾರೆ. ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್‌ನಲ್ಲಿದ್ದ ಸಿನ್ಹಾ ಅವರ ಉಮೇದುವಾರಿಕೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಭಟ್ಟಾಚಾರ್ಯ, ಹೆಚ್ಚು ಸ್ವೀಕಾರಾರ್ಹ … Continued

ಮದುವೆ ಸಂಭ್ರಮಾಚರಣೆಗೆಂದು ವರ ಹಾರಿಸಿದ ಗುಂಡಿನಿಂದ ಸ್ನೇಹಿತನ ಸಾವು

ಲಕ್ನೋ: ಮದುವೆ ಮೆರವಣಿಗೆ ವೇಳೆ ವರನೊಬ್ಬ ಸಂಭ್ರಮದ ನಿಮಿತ್ತ ಹಾರಿಸಿದ ಗುಂಡು ಅಲ್ಲೇ ಇದ್ದ ಸ್ನೇಹಿತನಿಗೆ ತಗುಲಿ ಆತ ಸಾವಿಗೀಡಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮನೀಶ್ ಮಧೇಶಿಯಾ ಎಂಬ ವರ ಮದುವೆ ಮೆರವಣಿಗೆ ಸಮಯದಲ್ಲಿ ಸಂಭ್ರಮದಲ್ಲಿ ಗುಂಡು ಹಾರಿಸಿದ್ದಾನೆ. ಅದು ಯಡವಟ್ಟಾಗಿ ಸ್ನೇಹಿತ ಬಾಬು ಲಾಲ್ ಯಾದವ್ ಎಂಬವರಿಗೆ ತಗುಲಿ ಆತ ಮೃತಪಟ್ಟಿದ್ದಾರೆ. ಸೋನಭದ್ರ … Continued