ಭಾರತದಲ್ಲಿ 14,313 ಹೊಸ ಕೋವಿಡ್ ಪ್ರಕರಣಗಳು ದಾಖಲು

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 14,313 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ನಿನ್ನೆಗಿಂತ ಶೇಕಡಾ 0.2 ರಷ್ಟು ಇಳಿಕೆಯಾಗಿದೆ. ಏತನ್ಮಧ್ಯೆ, ಭಾರತದ ಒಟ್ಟು ಸಂಖ್ಯೆ 3,42,60,470ಕ್ಕೆ ತಲುಪಿದೆ. ಇದೇ ಸಮಯದಲ್ಲಿ ದೇಶವು 549 ಹೊಸ ಸಾವುಗಳನ್ನು ವರದಿ ಮಾಡಿದ್ದು, ಒಟ್ಟು ವರದಿಯಾದ ಸಾವಿನ ಸಂಖ್ಯೆಯನ್ನು 4,57,740 ಕ್ಕೆ ತರುತ್ತದೆ. ಕಳೆದ 24 ಗಂಟೆಗಳಲ್ಲಿ ಒಟ್ಟು … Continued

ಇದೆಂಥ ಶಿಕ್ಷೆ.. ಬಾಲ್ಕನಿಯಲ್ಲಿ ಆರು ವರ್ಷದ ಮಗುವನ್ನು ತಲೆಕೆಳಗಾಗಿ ನೇತು ಹಾಕಿದ ಶಾಲೆ ಪ್ರಾಂಶುಪಾಲ..! ವೀಕ್ಷಿಸಿ

ಲಕ್ನೋ: ಗೋಲ್ ಗಪ್ಪಾಸ್ ತಿಂದಿದ್ದಕ್ಕಾಗಿ ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ಶಾಲೆಯೊಂದರ ಪ್ರಾಂಶುಪಾಲರು ಆರು ವರ್ಷದ ವಿದ್ಯಾರ್ಥಿಯನ್ನು ಕಟ್ಟಡದ ಮೊದಲ ಮಹಡಿಯಿಂದ ತಲೆಕೆಳಗಾಗಿ ನೇತಾಡಿಸಿ ಶೀಕ್ಷೆ ನೀಡಿದ ವಿಡಿಯೋ ವೈರಲ್‌ ಆದ ನಂತರ ಅವರನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಗುರುವಾರ ಸಂಭವಿಸಿದ ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ … Continued

ಇಟಲಿಯಲ್ಲಿ ಪ್ರಧಾನಿ ಮೋದಿಗೆ ಸಂಸ್ಕೃತ ಮಂತ್ರ ಪಠಿಸಿ ಸ್ವಾಗತ

ನವದೆಹಲಿ: ಜಿ-20 ಶೃಂಗಸಭೆ ಮತ್ತು 26ನೇ ಕಾನ್ಫರೆನ್ಸ್ ಆಫ್ ಪಾರ್ಟೀಸ್‌ನಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಇಟಲಿಯನ್ನು ತಲುಪಿದ್ದಾರೆ. ಅಲ್ಲಿ ಅವರಿಗೆ ಸಂಸ್ಕೃತ ಮಂತ್ರಗಳನ್ನು ಪಠಿಸುವ ಮೂಲಕ ಅವರ ಅಭಿಮಾನಿಗಳು ಸ್ವಾಗತ ಕೋರಿದ್ದಾರೆ. ವಿಶೇಷ ವಿಮಾನದ ಮೂಲಕ ಇಟಲಿಗೆ ತೆರಳಿರುವ ಪ್ರಧಾನಿ ಮೋದಿ, ರೋಮ್‌ನಲ್ಲಿ ನಡೆಯಲಿರುವ 16ನೇ ಜಿ-20 ರಾಷ್ಟ್ರಗಳ ನಾಯಕರ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇಟಲಿ … Continued

ಮೋದಿ ಸರ್‌ನೇಮ್‌ ಕುರಿತು ಆಕ್ಷೇಪಾರ್ಹ ಹೇಳಿಕೆ ವಿರುದ್ಧ ಪ್ರಕರಣ: ರಾಹುಲ್‌ ಕೋರ್ಟ್‌ಗೆ ಹಾಜರ್‌

ನವದೆಹಲಿ: 2019ರ ಚುನಾವಣಾ ರ‍್ಯಾಲಿ ಸಂದರ್ಭದಲ್ಲಿ ಮೋದಿ ಸರ್​ನೇಮ್​ ಕುರಿತಾಗಿ ಆಕ್ಷೇಪಾರ್ಹ ಹೇಳಿಕೆಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಸೂರತ್​ನ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರಾದರು. ರಾಹುಲ್​ ಗಾಂಧಿ ಹೇಳಿಕೆಗೆ ಸಂಬಂಧಿಸಿದಂತೆ ಇವರ ವಿರುದ್ಧ ಬಿಜೆಪಿ ಶಾಸಕ ಪೂರ್ಣೇಶ್​ ಮೋದಿ ಮಾನನಷ್ಟ ಪ್ರಕರಣ ದಾಖಲು ಮಾಡಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಸೂರತ್​ನ ಮ್ಯಾಜಿಸ್ಟ್ರೇಟ್ … Continued

ಕ್ರೂಸ್ ಡ್ರಗ್ಸ್ ಪ್ರಕರಣ: ಆರ್ಯನ್ ಖಾನ್ ಗೆ ಜಾಮೀನು ಸಿಕ್ಕರೂ ಇಂದು ಬಿಡುಗಡೆ ಇಲ್ಲ

ಮುಂಬೈ: ಮುಂಬೈ ತೀರದಲ್ಲಿ ಕ್ರೂಸ್ ಹಡಗಿನಲ್ಲಿ ನಿಷೇಧಿತ ಡ್ರಗ್ಸ್ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿ ಜೈಲಿನಲ್ಲಿರುವ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್​ ಖಾನ್​ ಅವರಿಗೆ ಗುರುವಾರ ಬಾಂಬೆ ಹೈಕೋರ್ಟ್ ಜಾಮೀನು ನೀಡಿದ್ದರೂ ಶುಕ್ರವಾರ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಹೀಗಾಗಿ ಆರ್ಯನ್ ಖಾನ್ ಮತ್ತೊಂದು ರಾತ್ರಿ ಜೈಲಿನಲ್ಲಿಯೇ ಕಳೆಯಬೇಕಾಗಿದೆ. ಆರ್ಥರ್ ರೋಡ್ ಜೈಲಿನ ಅಧಿಕಾರಿಗಳ … Continued

ಬದುಕಿನ ಪಯಣ ಮುಗಿಸಿದ ಎಲ್ಲರ ಪ್ರೀತಿಯ ಅಪ್ಪು.. ಬಾಲದಲ್ಲೇ ನಟನೆಗೆ ರಾಷ್ಟ್ರ ಪ್ರಶಸ್ತಿ..ಸಿನೆಮಾ ಸಂಭಾವನೆ ಒಂದು ಭಾಗ ಅನಾಥಾಶ್ರಮ, ಗೋಶಾಲೆಗಳಿಗೆ

ಬೆಂಗಳೂರು: ಸ್ಯಾಂಡಲ್​ವುಡ್​ನ ಪವರ್​ ಸ್ಟಾರ್ ಎಂದು ಕರೆಸಿಕೊಳ್ಳುವ ನಟ ಪುನೀತ್ ರಾಜ್​ಕುಮಾರ್​ ಅಭಿಮಾನಿಗಳಿಗೆ ಪ್ರೀತಿಯ ಅಪ್ಪು. 46 ವರ್ಷದ ನಟನಿಗೆ ಇಂದು ಬೆಳಿಗ್ಗೆ ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಎದೆ ನೋವು ಕಾಣಿಸಿಕೊಂಡಿತ್ತು. ಬೆಳಿಗ್ಗೆ 11:30ಕ್ಕೆ ಪುನೀತ್​ ಅವರಿಗೆ ಹೃದಯಾಘಾತವಾಗಿದ್ದು, ಮೊದಲು ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಅಲ್ಲಿ ಇಸಿಜಿ ಮಾಡಿದ ನಂತರ ಅವರನ್ನು ತಕ್ಷಣವೇ … Continued

ಆರ್‌ಬಿಐ ಗವರ್ನರ್‌ ಆಗಿ ಮತ್ತೆ ಮೂರು ವರ್ಷಗಳ ಅವಧಿಗೆ ಶಕ್ತಿಕಾಂತ ದಾಸ್ ಮರು ನೇಮಕ

ನವದೆಹಲಿ : ಭಾರತೀಯ ರಿಸರ್ವ್‌ ಬ್ಯಾಂಕಿನ (Reserve Bank of India) ಗವರ್ನರ್‌ ಆಗಿ ಶಕ್ತಿಕಾಂತ್‌ ದಾಸ್‌ ಅವರು ಮತ್ತೆ ಮೂರು ವರ್ಷಗಳ ಕಾಲ ಮುಂದುವರಿಯಲಿದ್ದಾರೆ. ಕೇಂದ್ರ ಸರ್ಕಾರ ಅವರನ್ನು ಮತ್ತೆ ಮೂರು ವರ್ಷಗಳ ಅವಧಿಗೆ ಮರು ನೇಮಕ ಮಾಡಿದೆ. ಈಗ ಅವರು ಆರ್‌ಬಿಐ (RBI)ನ 25 ನೇ ಗವರ್ನರ್ ಮತ್ತೆ ಅಧಿಕಾರ ವಹಿಸಿಕೊಂಡಿದ್ದಾರೆ. ಶಕ್ತಿಕಾಂತ … Continued

ಭಾರತದಲ್ಲಿ 14,348 ಹೊಸ ಕೋವಿಡ್ -19 ಪ್ರಕರಣಗಳು ದಾಖಲು.. ಇದು ನಿನ್ನೆಗಿಂತ 11.2% ಕಡಿಮೆ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು 14,348 ಹೊಸ ಕೊರೊನಾ ವೈರಸ್ ಪ್ರಕರಣಗಳನ್ನು ದಾಖಲಿಸಿದೆ, ನಿನ್ನೆಗಿಂತ 11.2 ಶೇಕಡಾ ಕಡಿಮೆಯಾಗಿದೆ. ಈಗ ದೇಶದಲ್ಲಿ ಒಟ್ಟು ಪ್ರಕರಣ 3,42,46,157ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ 805 ಮಂದಿ ಸೋಂಕಿಗೆ ಮೃತಪಟ್ಟಿದ್ದಾರೆ. ಇದರೊಂದಿಗೆ ದೇಶದಲ್ಲಿ ಸಾವಿನ ಸಂಖ್ಯೆ 4,57,191 ಕ್ಕೆ ಏರಿಕೆಯಾಗಿದೆ. ಇದೇ ಸಮಯದಲ್ಲಿ ಒಟ್ಟು 13,198 ರೋಗಿಗಳು … Continued

ಆರ್ಯನ್ ಖಾನ್ ಡ್ರಗ್ ಪ್ರಕರಣ: ಪ್ರಮುಖ ಸಾಕ್ಷಿ ಕಿರಣ್ ಗೋಸಾವಿ 8 ದಿನ ಪೊಲೀಸ್ ವಶಕ್ಕೆ

ಮುಂಬೈ: ಆರ್ಯನ್ ಖಾನ್ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿರುವ ಕಿರಣ್ ಗೋಸಾವಿಯನ್ನು ಪುಣೆ ನ್ಯಾಯಾಲಯ ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ೮ ದಿನಗಳ ಪೊಲೀಸ್ ವಶಕ್ಕೆ ಒಪ್ಪಿಸಿದೆ. ಎನ್ ಸಿ ಬಿ ಆರ್ಯನ್ ಖಾನ್ ರನ್ನು ವಶಕ್ಕೆ ಪಡೆದ ದಿನಗಳಲ್ಲೇ ಗೋಸಾವಿ, ಆರ್ಯನ್ ಖಾನ್ ಜೊತೆ ಇರುವ ಸೆಲ್ಫಿ ಮತ್ತು ವಿಡಿಯೊಗಳು ಅಂತರ್ಜಾಲದಲ್ಲಿ ವೈರಲ್ ಆಗಿದ್ದವು. ಒಡನೆಯೇ ಪುಣೆಯ … Continued

ಫೇಸ್‌ಬುಕ್‌ ಹೆಸರು ಮೆಟಾ ಎಂದು ಬದಲಾವಣೆ, ಹೊಸ ವರ್ಚುವಲ್ ಪ್ರಪಂಚ ರಚಿಸಲು ಮೆಟಾವರ್ಸ್ ಯೋಜನೆ ಪ್ರಕಟಿಸಿದ ಮಾರ್ಕ್ ಜುಕರ್‌ಬರ್ಗ್

ನ್ಯೂಯಾರ್ಕ್‌ : ಫೇಸ್‌ಬುಕ್ ಗುರುವಾರ ಮೆಟಾ ಎಂದು ಹೆಸರು ಬದಲಾಯಿಸಿ ಮರುಬ್ರಾಂಡ್ ಮಾಡುವುದಾಗಿ ಹೇಳಿದೆ. ಕಂಪನಿಯು ತನ್ನ ಮಾರುಕಟ್ಟೆ ಶಕ್ತಿ, ಅದರ ಅಲ್ಗಾರಿದಮಿಕ್ ನಿರ್ಧಾರಗಳು ಮತ್ತು ಅದರ ಪ್ಲಾಟ್‌ಫಾರ್ಮ್‌ಗಳಲ್ಲಿನ ದುರುಪಯೋಗಗಳ ಪೋಲೀಸಿಂಗ್‌ ಮೇಲೆ ಜನಪ್ರತಿನಿಧಿಗಳು ಹಾಗೂ ನಿಯಂತ್ರಕರಿಂದ ಟೀಕೆಗಳನ್ನು ಎದುರಿಸುತ್ತಿರುವಾಗ ಈ ಹೆಸರು ಬದಲಾವಣೆಯಾಗಿದೆ. ಫೇಸ್‌ಬುಕ್ ಇಂಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು ಗುರುವಾರ ವರ್ಚುವಲ್ … Continued