ಆನ್‌ಲೈನ್ ತರಗತಿ ಫೋನ್ ಗಾಗಿ ಪುಟ್ಟ ಹುಡುಗಿಯಿಂದ ಬೀದಿಯಲ್ಲಿ ಮಾವಿನಹಣ್ಣು ಮಾರಾಟ.. 12 ಮಾವಿನಹಣ್ಣಿಗೆ ಬಂತು 1.2 ಲಕ್ಷ ರೂ.

ಜಮ್ಶೆಡ್ಪುರ: ಜಮ್‌ಶೆಡ್‌ಪುರದ 11 ವರ್ಷದ ಬಾಲಕಿಯೊಬ್ಬಳು ಫೋನ್ ಖರೀದಿಸಲು ಹಣವಿಲ್ಲದ ಕಾರಣ ತನ್ನ ಆನ್‌ಲೈನ್‌ ಕಲಿಕೆಗೆ ಬೇಕಾದ ಸ್ಮಾರ್ಟ್‌ ಫೋನ್‌ ಖರೀದಿಸಲು ಬೇಕಾದ ಹಣ ಸಂಪಾದಿಸಲು ಬೀದಿಯಲ್ಲಿ ಮಾವಿನಹಣ್ಣು ಮಾರುತ್ತಿರುವ ವಿಡಿಯೋ ವೈರಲ್ ಆದ ನಂತರ ಆಕೆಯ ಕಲಿಯುವ ಇಚ್ಛಾಶಕ್ತಿಗೆ ಅದರ ಹತ್ತುಪಟ್ಟು ಹಣ ಅವಳ ಬಳಿಯೇ ಬಂದಿದೆ. ಹತ್ತು ಮಾವಿನ ಹಣ್ಣುಗಳಿಗೆ 1.2 ಲಕ್ಷ … Continued

ಮನಿ ಲಾಂಡರಿಂಗ್ ಪ್ರಕರಣದಲ್ಲಿ ಇಡಿ ಮುಂದೆ ಹಾಜರಾಗಲು ಅನಿಲ ದೇಶ್ಮುಖ್‌ ವಿಫಲ:ವರ್ಚುವಲ್ ಸಂವಹನಕ್ಕೆ ಮನವಿ

ಕೋವಿಡ್‌-19 ಮತ್ತು ಅವರ ವೃದ್ಧಾಪ್ಯವನ್ನು ಉಲ್ಲೇಖಿಸಿ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ಅವರು ಮಂಗಳವಾರ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಲಿಲ್ಲ ಮತ್ತು ಕೇಂದ್ರ ಏಜೆನ್ಸಿಗೆ ಸೂಕ್ತವಾದ ದಿನ ಸಮಯ ಕೋರಿದ್ದಾರೆ. 71 ವರ್ಷದ ಎನ್‌ಸಿಪಿ ಮುಖಂಡರನ್ನು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಇಡಿ) … Continued

ಸೆಂಟ್ರಲ್ ವಿಸ್ಟಾ ಯೋಜನೆಗೆ ತಡೆ ನೀಡಲು ಸುಪ್ರೀಂ ನಕಾರ: ಮೇಲ್ಮನವಿ ಅರ್ಜಿ ವಜಾ

ನವದೆಹಲಿ: ಕೊರೊನಾ ಸಂಕಷ್ಟ ಕಾಲದಲ್ಲಿ ನಿರ್ಮಾಣಗೊಳ್ಳುತ್ತಿರುವ ಸೆಂಟ್ರಲ್ ವಿಸ್ಟಾ ಯೋಜನೆಗೆ ತಡೆ ನೀಡಲು ನಿರಾಕರಿಸಿರುವ ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಸೆಂಟ್ರಲ್ ವಿಸ್ಟಾ ಯೋಜನೆ ಸ್ಥಗಿತಕ್ಕೆ ತಡೆ ನೀಡಲು ನಿರಾಕರಿಸಿರುವ ದೆಹಲಿ ಹೈಕೋರ್ಟ್ ತೀರ್ಪಿನಲ್ಲಿ ಮೂಗು ತೂರಿಸಲು ಸಾಧ್ಯವಿಲ್ಲ ಎಂದು ಆಭಿಪ್ರಾಯಪಟ್ಟಿರುವ ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವೀಲ್ಕರ್, ದಿನೇಶ್ ಮಹೇಶ್ವರಿ ಹಾಗೂ … Continued

ಭಾರತದಲ್ಲಿ ತುರ್ತು ಬಳಕೆಗೆ ಮಾಡರ್ನಾ ಕೋವಿಡ್‌ ಲಸಿಕೆ ಆಮದಿಗೆ ಸಿಪ್ಲಾಕ್ಕೆ ಅನುಮೋದನೆ ನೀಡಿದ ಡಿಸಿಜಿಐ

ನವದೆಹಲಿ: ಅನುಮೋದನೆ ಕೋರಿದ ಕೆಲವೇ ಗಂಟೆಗಳ ನಂತರ, ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಜಿಸಿಎ) ಮಂಗಳವಾರ ಸಿಪ್ಲಾಗೆ ಮಾಡರ್ನಾ ಅವರ ಕೋವಿಡ್ -19 ಲಸಿಕೆ ಆಮದು ಮಾಡಿಕೊಳ್ಳಲು ಒಪ್ಪಿಗೆ ನೀಡಿತು. ಕೇಂದ್ರವು ಶೀಘ್ರದಲ್ಲೇ ವಿವರವಾದ ಪ್ರಕಟಣೆ ನೀಡುವ ಸಾಧ್ಯತೆಯಿದೆ ಎಂದು ಸುದ್ದಿ ಸಂಸ್ಥೆ ತಿಳಿಸಿದೆ. ಸಿಪ್ಲಾ ಮುಂಬೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಬಹುರಾಷ್ಟ್ರೀಯ ಔಷಧೀಯ … Continued

ಮೊಬೈಲ್‌ ನೆಟ್‌ವರ್ಕ್‌ಗೆಂದು ಮರ ಹತ್ತಿದ ಹುಡುಗರು, ಸಿಡಿಲು ಬಡಿದು ಓರ್ವ ಸಾವು, ಮೂವರಿಗೆ ಗಾಯ

ಪಾಲ್ಘರ್‌: ಮೊಬೈಲ್‌ ನೆಟ್‌ವರ್ಕ್‌ಗಾಗಿ ಮರ ಹತ್ತಿದ ಸುಮಾರು 15 ವರ್ಷದ ಹುಡುಗನೊಬ್ಬ ಸಿಡಿಲಿನ ಬಡಿದು ಮೃತ ಪಟ್ಟ ಘಟನೆ ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆಯಲ್ಲಿ ಸಂಭವಿಸಿದೆ. ದುರ್ಘಟನಯಲ್ಲಿ ಇತರ ಮೂವರು ಹುಡುಗರು ಗಾಯಗೊಂಡಿದ್ದಾರೆ. ಸೋಮವಾರ ಸಂಜೆ ಪಾಲ್ಘರ್‌ನ ದಹನು ತಾಲೂಕಿನ ಮಂಕಾರ್‌ಪದ ಎಂಬಲ್ಲಿ ನಾಲ್ವರು ಹುಡುಗರು ದನ ಮೇಯಿಸಲು ಬಯಲಿಗೆ ತೆರಳಿದ್ದಾಗ ಈ ಘಟನೆ ನಡೆದಿದೆ ಎಂದು … Continued

ಟ್ವಿಟರ್ ಎಂಡಿಗೆ ರಿಲೀಫ್‌ ನೀಡುವ ಕರ್ನಾಟಕ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋದ ಉತ್ತರ ಪ್ರದೇಶ ಸರ್ಕಾರ

ಲಕ್ನೋ: ಈ ತಿಂಗಳ ಆರಂಭದಲ್ಲಿ ಗಾಜಿಯಾಬಾದ್‌ನಲ್ಲಿ ವೃದ್ಧರೊಬ್ಬರ ಮೇಲೆ ಹಲ್ಲೆ ನಡೆಸಿದ ವೈರಲ್ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ಬಂಧನದಿಂದ ರಕ್ಷಣೆ ನೀಡಿದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಉತ್ತರ ಪ್ರದೇಶ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ತೆರಳಿದೆ. ಇದಕ್ಕೂ ಮುನ್ನ ಜೂನ್ 24 ರ ಆದೇಶದಲ್ಲಿ ಘಜಿಯಾಬಾದ್‌ನಲ್ಲಿ … Continued

ಜುಲೈ 31ರೊಳಗೆ ವಲಸಿಗರಿಗಾಗಿ ಒಂದು ರಾಷ್ಟ್ರ, ಒಂದು ಪಡಿತರ ಕಾರ್ಡ್ ಯೋಜನೆ ಜಾರಿಗೊಳಿಸಿ:ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಸೂಚನೆ

ನವದೆಹಲಿ: ವಲಸಿಗರಿಗೆ ದೇಶಾದ್ಯಂತ ಸಬ್ಸಿಡಿ ಆಹಾರವನ್ನು ಪಡೆಯಲು ಅವಕಾಶ ನೀಡುವ ಉದ್ದೇಶದಿಂದ ‘ಒಂದು ರಾಷ್ಟ್ರ, ಒಂದು ಪಡಿತರ ಚೀಟಿ ಯೋಜನೆ’ ಜಾರಿಗೆ ತರಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಜುಲೈ 31 ರ ಗಡುವನ್ನು ಸುಪ್ರೀಂ ಕೋರ್ಟ್ ಮಂಗಳವಾರ ನಿಗದಿಪಡಿಸಿದೆ. ಸಾಂಕ್ರಾಮಿಕ ರೋಗದ ಅಂತ್ಯದ ವರೆಗೆ ವಲಸೆ ಕಾರ್ಮಿಕರಲ್ಲಿ ಉಚಿತ ವಿತರಣೆಗೆ ಪಡಿತರವನ್ನು ಒದಗಿಸುವಂತೆ ನ್ಯಾಯಮೂರ್ತಿ … Continued

ಎರಡಲ್ಲ.. ಮೂರು..! ಮಹಿಳೆಗೆ ನಿಮಿಷದ ಅಂತರದಲ್ಲಿ ಮೂರು ಕೋವಿಡ್ -19 ಲಸಿಕೆ ಡೋಸ್‌ ನೀಡಿದ ಆರೋಗ್ಯ ಸಿಬ್ಬಂದಿ..!

ಥಾಣೆ: ಆನಂದನಗರದ ವ್ಯಾಕ್ಸಿನೇಷನ್ ಕೇಂದ್ರದಲ್ಲಿ ಶುಕ್ರವಾರ ತನಗೆ ಮೂರು ಡೋಸ್ ಕೋವಿಡ್ -19 ಲಸಿಕೆ ನೀಡಲಾಗಿದೆ ಎಂದು ಥಾಣೆ ಮೂಲದ 28 ವರ್ಷದ ಮಹಿಳೆ ಹೇಳಿದ್ದಾರೆ. ಗಾಬರಿಗೊಂಡ ಮಹಿಳೆ ಥಾಣೆ ಮುನ್ಸಿಪಲ್ ಕಾರ್ಪೊರೇಶನ್‌ನ (ಟಿಎಂಸಿ) ಉದ್ಯೋಗಿಯಾಗಿರುವ ಪತಿಗೆ ಈ ಘಟನೆಯನ್ನು ವಿವರಿಸಿದ ನಂತರ ತೀವ್ರ ನಿರ್ಲಕ್ಷ್ಯದ ಪ್ರಕರಣ ಬೆಳಕಿಗೆ ಬಂದಿದೆ. ನಂತರ ಪತಿ ಸ್ಥಳೀಯ ಕಾರ್ಪೋರೇಟರ್ … Continued

ವಿರೂಪಗೊಳಿಸಿದ ಭಾರತದ ನಕ್ಷೆ ಪ್ರಕಟ: ಟ್ವಿಟರ್ ಇಂಡಿಯಾ ಎಂಡಿ ಮನೀಶ್ ಮಹೇಶ್ವರಿ ವಿರುದ್ಧ ಉತ್ತರ ಪ್ರದೇಶದಲ್ಲಿ ಪ್ರಕರಣ ದಾಖಲು

ನವದೆಹಲಿ: ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಭಾರತದ ವಿಕೃತ ನಕ್ಷೆಯೊಂದರ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಟ್ಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಭಜರಂಗದಳದವರೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಸೋಮವಾರ ಸಂಜೆ ಬುಲಂದ್‌ಶಹರ್ ಜಿಲ್ಲೆಯ ಖುರ್ಜಾ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಟ್ವಿಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ … Continued

ಜಮ್ಮು ಐಎಎಫ್ ವಾಯು ನೆಲೆಗೆ ದ್ರೋನ್‌ ದಾಳಿ: ಎನ್‌ಐಎಗೆ ತನಿಖೆ ಹೊಣೆ

ಶ್ರೀನಗರ್: ಭಾರತೀಯ ವಾಯುಸೇನೆ ನಿಯಂತ್ರಣದ ಜಮ್ಮು ವಾಯುನೆಲೆ ಮೇಲೆ ನಡೆದ ಡ್ರೋನ್ ದಾಳಿ ಪ್ರಕರಣವನ್ನು ಕೇಂದ್ರ ಗೃಹ ಸಚಿವಾಲಯವು ರಾಷ್ಟ್ರೀಯ ತನಿಖಾ ತಂಡ(ಎನ್‌ಐಎ)ಕ್ಕೆ ವಹಿಸಿದೆ. ಜೂನ್ 27ರ ಭಾನುವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಐದು ನಿಮಿಷಗಳ ಅಂತರದಲ್ಲಿ ಎರಡು ಸ್ಫೋಟ ಸಂಭವಿಸಿದ್ದು, ಇಬ್ಬರು ಭಾರತೀಯ ಸೇನಾ ಪಡೆ ಸಿಬ್ಬಂದಿ ಗಾಯಗೊಂಡಿದ್ದರು. ಬೆಳಗಿನ ಜಾವ … Continued