ಅಸ್ಸಾಂ ಚಹಾ ವಿರುದ್ಧ ವಿದೇಶಿ ಶಕ್ತಿಗಳ ಪಿತೂರಿ: ಮೋದಿ

ಆಸ್ಸಾಂ: ಕೆಲ ವಿದೇಶಿ ಶಕ್ತಿಗಳು ನಮ್ಮ ಭಾರತೀಯ ಚಹಾದ ಘನತೆ ಕುಂದಿಸುಲ್ಲಿ ನಿರತವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅವರು ಆಸ್ಸಾಂನಲ್ಲಿ ಚಹಾ ತೋಟಗಳ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿ, ಅಸ್ಸಾಂ ಚಹಾದ ವಿರುದ್ಧ ಕೆಲ ವಿದೇಶಿ ಶಕ್ತಿಗಳು ಪಿತೂರಿ ನಡೆಸಿವೆ. ಭಾರತೀಯ ಚಹಾದ ಘನತೆಯನ್ನು ವಿಶ್ವಾದ್ಯಂತ ವ್ಯವಸ್ಥಿತವಾಗಿ ಹಾಳು ಮಾಡುವಲ್ಲಿ ಕೆಲ ಶಕ್ತಿಗಳು ನಿರತವಾಗಿವೆ ಎಂದರು. … Continued

ಉತ್ತರಾಖಂಡದಲ್ಲಿ ಹಿಮಪದರ ಕುಸಿತ: ೨೬ ಸಾವು, 15 ಜನರ ರಕ್ಷಣೆ

ಉತ್ತರಾಖಂಡ: ಚಮೋಲಿ ಜಿಲ್ಲೆಯಲ್ಲಿ ಹಿಮನದಿ ಸ್ಫೋಟಗೊಂಡ ನಂತರ ಉತ್ತರಾಖಂಡದ ತಪೋವನ್ ಜಲ-ವಿದ್ಯುತ್ ಶಕ್ತಿ ಅಣೆಕಟ್ಟು ಸಂಪೂರ್ಣವಾಗಿ ಕೊಚ್ಚಿ ಹೋಗಿದೆ ಎಂದು ಭಾರತೀಯ ವಾಯುಪಡೆಯ ಆರಂಭಿಕ ವರದಿಯಲ್ಲಿ ತೋರಿಸಲಾಗಿದೆ. ಧೌಲಿ ಗಂಗಾ ಮತ್ತು ರಿಷಿ ಗಂಗಾ ನದಿಗಳ ಸಂಗಮದಲ್ಲಿರುವ ಅಣೆಕಟ್ಟು ಸಂಪೂರ್ಣವಾಗಿ ನಾಶವಾಗಿದೆ ಎಂದು ಸಮೀಕ್ಷೆಯ ಚಿತ್ರಗಳು ತೋರಿಸಿದೆ. ಮಲಾರಿ ಕಣಿವೆಯ ಪ್ರವೇಶದ್ವಾರದಲ್ಲಿ ಮತ್ತು ತಪೋವನ್ ಬಳಿಯಿರುವ … Continued

ರೈತ ಹೋರಾಟದಲ್ಲಿ ಈಗ ಜಾಟರ ಪ್ರಾಬಲ್ಯ

ಗಾಜಿಪುರ: ರೈತ ಹೋರಾಟ ಹಿಂಸಾತ್ಮಕ ರೂಪ ತಳೆದಿದ್ದಕ್ಕೆ ರೈತ ಮುಖಂಡ ರಾಕೇಶ್‌ ಟಿಕಾಯತ್‌ ಕಣ್ಣೀರು ಸುರಿಸಿದ್ದು ಸುದ್ದಿವಾಹಿನಿಗಳಲ್ಲಿ ಬಿತ್ತರಗೊಂಡ ನಂತರ ಪಂಜಾಬ್‌ ಸಿಖ್‌ ಕೇಂದ್ರಿತ ರೈತರ ಹೋರಾಟ ಈಗ ಜಾಟ್‌ ಪ್ರಾಬಲ್ಯದ ರೈತ ಹೋರಾಟವಾಗಿ ರೂಪುಗೊಂಡಿದೆ. ಸದ್ಯ ಜಾಟ್‌ ಸಮುದಾಯವೇ ಆಂದೋಲನವನ್ನು ನಿಯಂತ್ರಿಸುತ್ತಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಹಿಂದೆ ಸಿಂಗು ಗಡಿಯಲ್ಲಿ ಹೋರಾಟ ತೀವ್ರವಾಗಿತ್ತು. ಆದರೆ ಈಗ … Continued

ಹೊಸ ಸಾರಿಗೆ ನೀತಿಯಿಂದ ೧೦ ಲಕ್ಷ ಕೋಟಿ ಆದಾಯ:ಗಡ್ಕರಿ

ನವದೆಹಲಿ: ಹಳೆಯ ಮತ್ತು ಮಾಲಿನ್ಯಕಾರಕ ವಾಹನಗಳನ್ನುಗುಜರಿಗೆ ಹಾಕಿ ಹೊಸ ವಾಹನಗಳನ್ನು ಖರೀದಿಸುವವರಿಗೆ ಹೊಸ ನೀತಿಯಡಿ ವಿವಿಧ ಪ್ರಯೋಜನಗಳನ್ನು ನೀಡಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತೀನ್‌ ಗಡ್ಕರಿ ತಿಳಿಸಿದರು. ಹೊಸ ಸಾರಿಗೆ ನೀತಿ ವರದಾನವಾಗಿದ್ದು, ಇದರಿಂದ ಮುಂದಿನ ವರ್ಷಗಳಲ್ಲಿ ಭಾರತದ ವಾಹನ ಉದ್ಯಮದ ವಹಿವಾಟು ಶೇ.೩೦ರಷ್ಟು ಹೆಚ್ಚಳವಾಗುವುದಲ್ಲದೇ ೧೦ ಲಕ್ಷ ಕೋಟಿ ರೂ. ಆದಾಯ ದೊರೆಯಲಿದೆ … Continued

ಹೊರಗಿನ ಕೆಲವರಿಂದ ದೇಶದ ಘನತೆಗೆ ಧಕ್ಕೆ: ಮೋದಿ

ಸೋನಿತ್‌ಪುರ (ಆಸ್ಸಾಮ್):‌ ದೇಶದ ಹೊರಗಿರುವ ಕೆಲವರು ದೇಶದ ಘನತೆಗೆ ಕಳಂಕತರುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅವರು ರಸ್ತೆ ಅಭಿವೃದ್ಧಿ ಯೋಜನೆ ಅಸೋಮ್‌ ಮಾಲಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕೆಲ ವ್ಯಕ್ತಿಗಳು ನಮ್ಮ ದೇಶದ ಘನತೆಯನ್ನು ಹಾಳು ಮಾಡುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ರಾಷ್ಟ್ರದ ಸಂಸ್ಕೃತಿಗೆ ಚ್ಯುತಿ ತರುತ್ತಿರುವ ಕುರಿತು ಕೆಲ … Continued

ಶ್ರೀಲಂಕಾ ಬಂದರು ಅಭಿವೃದ್ಧಿಗೆ ಅದಾನಿ ಹೂಡಿಕೆಗೆ ಆಸಕ್ತಿ

ನವದೆಹಲಿ: ಭಾರತದ ಹೂಡಿಕೆದಾರ ಸಂಸ್ಥೆ ಅದಾನಿ ಗ್ರೂಪ್‌ ವೆಸ್ಟ್‌ ಕಂಟೇನರ್‌ ಟರ್ಮಿನಲ್‌ ನಿರ್ಮಾಣದಲ್ಲಿ ಹೂಡಿಕೆ ಮಾಡಲು ಉತ್ಸುಕವಾಗಿದೆ ಎಂದು ಶ್ರೀಲಂಕಾದ ಸಚಿವರೊಬ್ಬರು ತಿಳಿಸಿದ್ದಾರೆ. ಕೊಲಂಬೊ ಬಂದರಿನ ಈಸ್ಟ್‌ ಕಂಟೇನರ್‌ ಟರ್ಮಿನಲ್‌ (ಇಸಿಟಿ) ನಿರ್ಮಾಣ ಕುರಿತು ಭಾರತ ಹಾಗೂ ಜಪಾನ್‌ ಜೊತೆಗಿನ ಒಪ್ಪಂದವನ್ನು ಶ್ರೀಲಂಕಾ ರದ್ದುಪಡಿಸಿರುವುದು ಉಭಯ ರಾಷ್ಟ್ರಗಳ ರಾಜತಾಂತ್ರಿಕ ಸಂಬಂಧದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. … Continued

ರೈತರ ಚಕ್‌ ಜಾಮ್‌ ನಂತರ ದೆಹಲಿ ಗಡಿಗಳಲ್ಲಿ ಹೆಚ್ಚಿದ ಭದ್ರತೆ

ದೆಹಲಿ: ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ರೈತರು ಶನಿವಾರ ದೇಶವ್ಯಾಪಿ ಚಕ್ಜಾಮ್ ‌ ನಡೆಸಿದ ನಂತರ ದೆಹಲಿಯ ಎಲ್ಲ ಗಡಿಗಳಲ್ಲಿ ಭದ್ರತೆ ಇನ್ನಷ್ಟು ತೀವ್ರಗೊಳಿಸಲಾಗಿದೆ. ರಾಷ್ಟ್ರ ರಾಜಧಾನಿಯನ್ನು ಹರಿಯಾಣದೊಂದಿಗೆ ಸಂಪರ್ಕಿಸುವ ಟಿಕ್ರಿ ಗಡಿಯಲ್ಲಿ ಪೋಲಿಸ್ ಮತ್ತು ಅರೆಸೈನಿಕ ಪಡೆಗಳ ಭಾರಿ ನಿಯೋಜನೆ ಕಂಡುಬಂದಿದೆ. ಜೊತೆಗೆ ದೆಹಲಿಯನ್ನು ಉತ್ತರ ಪ್ರದೇಶಕ್ಕೆ ಸಂಪರ್ಕಿಸುವ ಗಾಜಿಪುರ ಗಡಿಯಲ್ಲಿಯೂ ಭದ್ರತೆ … Continued

ಕೇರಳ ಚುನಾವಣೆಯಲ್ಲಿ ಶಬರಿಮಲೆ ಕಾರ್ಡ್‌ ಬಳಸಲು ಕಾಂಗ್ರೆಸ್‌ ಚಿಂತನೆ

ಮುಂಬರಲಿರುವ ಕೇರಳ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಶಬರಿಮಲೆ ಕಾರ್ಡ್‌ ಬಳಸಲು ಕಾಂಗ್ರೆಸ್‌ ಮುಂದಾಗಿದೆ. ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಯುಡಿಎಫ್ ಅಧಿಕಾರಕ್ಕೆ ಬಂದರೆ ಶಬರಿಮಲೆ ದೇವಾಲಯದ ಪದ್ಧತಿಗಳ ರಕ್ಷಣೆಗೆ ಕಾನೂನನ್ನು ಜಾರಿಗೆ ತರಲಿದೆ ಎಂದು ಹೇಳಿದರು. ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಶಾಸಕ ತಿರುವಂಚೂರು ರಾಧಾಕೃಷ್ಣನ್ ಬಿಡುಗಡೆ ಮಾಡಿದ ‘ಕರಡು ಪ್ರತಿಯಲ್ಲಿ ಶಬರಿಮಲೆ ದೇವಾಲಯದ … Continued

ಭಿಂದ್ರನ್‌‌ವಾಲೆಗೆ ಹೋಲುವ ಭಾವಚಿತ್ರದ ಧ್ವಜ ಪ್ರದರ್ಶನ..ನಿಜವಾದರೆ ಸರಿಯಲ್ಲ ಎಂದ ಟಿಕಾಯಿತ

ಪಂಜಾಬಿನ ಲುಧಿಯಾನದಲ್ಲಿ ನಡೆದ ‘ಚಕ್ಕಾ ಜಾಮ್’ ಪ್ರತಿಭಟನೆಯಲ್ಲಿ ಭಿಂದ್ರಾನ್‌ವಾಲೆಗೆ ಹೋಲುವ ಭಾವಚಿತ್ರವನ್ನು ಹೊಂದಿರುವ ಧ್ವಜವನ್ನು ಟ್ರ್ಯಾಕ್ಟರ್‌ನಲ್ಲಿ ನೋಡಲಾಗಿದೆ ಎಂದು ಎಎನ್‌ಐ ವರದಿ ಮಾಡಿದೆ. ಏತನ್ಮಧ್ಯೆ, ಘಟನೆ ಬಗ್ಗೆ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯಿತ್‌ ಪ್ರತಿಕ್ರಿಯಿಸಿದ್ದು, ಅಂತಹ ಕೆಲಸಗಳನ್ನು ಮಾಡಬಾರದು ಎಂದು ಹೇಳಿದ್ದಾರೆ. ಅಲ್ಲದೆ ಅಲ್ಲಿನ ಜನರೊಂದಿಗೆ ಈ ವಿಷಯದ ಬಗ್ಗೆ ಮಾತನಾಡುತ್ತೇನೆ ಎಂದು … Continued

ಕಬ್ಬಿನ ಪ್ರೋತ್ಸಾಹ ಧನ ವಿಳಂಬ: ಯುಪಿ ರೈತರ ಹೋರಾಟ ತೀವ್ರಕ್ಕೆ ಕಾರಣ

ಮುಜಫರನಗರ: ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಕಬ್ಬಿನ ಪ್ರೋತ್ಸಾಹಧನ ಪಾವತಿಯಲ್ಲಿ ವಿಳಂಬವಾಗುತ್ತಿರುವುದು ಕೂಡ ರೈತರ ಹೋರಾಟ ತೀವ್ರಗೊಳ್ಳಲು ಮತ್ತೊಂದು ಕಾರಣವಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಲತಾಯಿ ಧೋರಣೆ ಅನುಸರಿಸುತ್ತಿವೆ ಎಂಬುದು ರೈತರ ಆರೋಪವಾಗಿದೆ. ರೈತರ ಆಂದೋಲನ ತೀವ್ರಗೊಂಡ ನಂತರವೇ ಕೆಲ ಭಾಗದ ರೈತರಿಗೆ ಕಬ್ಬಿನ ಹಣ ಪಾವತಿಸಲಾಗಿದೆ. ಇನ್ನೂ ಹಲವು ರೈತರು ನಾಲ್ಕು ತಿಂಗಳುಗಳಿಂದ … Continued