ಅಲೋಪತಿ ಬಗ್ಗೆ ‘ಸುಳ್ಳು ಮಾಹಿತಿ’ ಹರಡಿದ ಆರೋಪ: ಛತ್ತೀಸಗಡದಲ್ಲಿ ಬಾಬಾ ರಾಮದೇವ್ ವಿರುದ್ಧ ಎಫ್‌ಐಆರ್

ರಾಯ್ಪುರ: ಖ್ಯಾತ ಯೋಗ ಗುರು ರಾಮದೇವ್‌ ವಿರುದ್ಧ ಛತ್ತೀಸ್‌ಗಡದಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ವರದಿಗಳ ಪ್ರಕಾರ, ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಛತ್ತೀಸ್‌ಗಡದ ಘಟಕವು ನೀಡಿದ ದೂರಿನ ಆಧಾರದ ಮೇಲೆ ಬಾಬಾ ರಾಮ್‌ದೇವ್ ವಿರುದ್ಧ ಬುಧವಾರ ರಾತ್ರಿ ಪ್ರಕರಣ ದಾಖಲಿಸಲಾಗಿದೆ ಎಂದು ರಾಯ್ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಯಾದವ್ ತಿಳಿಸಿದ್ದಾರೆ. ರಾಮದೇವ್ ವಿರುದ್ಧ ಸೆಕ್ಷನ್ … Continued

ಮಹತ್ವದ ಸೂಚನೆ..ಡಿಎಲ್‌, ಆರ್‌ಸಿ ಮಾನ್ಯತೆ ಅವಧಿ ಸೆಪ್ಟೆಂಬರ್ 30ರ ವರೆಗೆ ವಿಸ್ತರಿಸಿದ ಸರ್ಕಾರ

ನವದೆಹಲಿ: ಕೋವಿಡ್ ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಮೋಟಾರು ವಾಹನ ದಾಖಲೆಗಳ ಚಾಲನಾ ಪರವಾನಗಿ (ಡಿಎಲ್), ನೋಂದಣಿ ಪ್ರಮಾಣಪತ್ರ (ಆರ್‌ಸಿ) ಮತ್ತು ಪರವಾನಗಿಗಳನ್ನು 2021 ಸೆಪ್ಟೆಂಬರ್ 30 ರ ವರೆಗೆ ಸರ್ಕಾರ ವಿಸ್ತರಿಸಿದೆ. ಫಿಟ್‌ನೆಸ್, ಪರ್ಮಿಟ್ (ಎಲ್ಲಾ ರೀತಿಯ), ಪರವಾನಗಿ, ನೋಂದಣಿ ಅಥವಾ ಇತರ ಯಾವುದೇ ಸಂಬಂಧಿತ ದಾಖಲೆ (ಗಳ) ಮಾನ್ಯತೆಯನ್ನು ಸೆಪ್ಟೆಂಬರ್ 30 ರವರೆಗೆ ಮಾನ್ಯವಾಗಿ … Continued

ದೆಹಲಿ ಗಲಭೆ ಪ್ರಕರಣ: ಹೈಕೋರ್ಟ್ ಜಾಮೀನಿನ ನಂತರ ನಾರ್ವಾಲ್, ಕಾಲಿತಾ, ತನ್ಹಾ ಜೈಲಿನಿಂದ ಬಿಡುಗಡೆಗೆ ಕೋರ್ಟ್‌ ಆದೇಶ

ನವದೆಹಲಿ: ಜೂನ್ 15 ರಂದು ನಡೆದ ದೆಹಲಿ ಗಲಭೆ ಪ್ರಕರಣದಲ್ಲಿ ಹೈಕೋರ್ಟ್‌ನಿಂದ ಜಾಮೀನು ಪಡೆದ ನಂತರ ವಿದ್ಯಾರ್ಥಿ ಕಾರ್ಯಕರ್ತರಾದ ನತಾಶಾ ನರ್ವಾಲ್, ದೇವಂಗನಾ ಕಲಿತಾ ಮತ್ತು ಆಸಿಫ್ ಇಕ್ಬಾಲ್ ತನ್ಹಾ ಅವರನ್ನು ತಿಹಾರ್ ಜೈಲಿನಿಂದ ಬಿಡುಗಡೆ ಮಾಡಲು ದೆಹಲಿ ನ್ಯಾಯಾಲಯ ಗುರುವಾರ ವಾರಂಟ್ ಹೊರಡಿಸಿದೆ. ಕಾರ್ಯಕರ್ತರ ವಿಳಾಸಗಳು ಮತ್ತು ಅವರ ಜಾಮೀನುಗಳನ್ನು ಪರಿಶೀಲಿಸಲು ಹೆಚ್ಚಿನ ಸಮಯ … Continued

ಮಹತ್ವದ ಸುದ್ದಿ… ಸಿಬಿಎಸ್‌ಇ -12 ಫಲಿತಾಂಶ 10, 11, 12ನೇ ತರಗತಿ ಅಂಕಗಳ ಮೇಲೆ ನಿರ್ಧಾರ, ಜುಲೈ 31 ರೊಳಗೆ ಫಲಿತಾಂಶ

ನವದೆಹಲಿ: 10 ನೇ ತರಗತಿ, 11 ನೇ ತರಗತಿ ಮತ್ತು 12 ನೇ  ತರಗತಿ ಪ್ರೀ ಬೋರ್ಡ್‌ ಅಂಕಗಳ ಆಧಾರದ ಮೇಲೆ 12 ನೇ ತರಗತಿ ಫಲಿತಾಂಶವನ್ನು ನಿರ್ಧರಿಸಲಾಗುವುದು ಎಂದು ಸಿಬಿಎಸ್‌ಇ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ. ಈ ನೀತಿಯ ಆಧಾರದ ಮೇಲೆ, 12 ನೇ ತರಗತಿ ಅಂಕಗಳಿಗೆ (ಯುನಿಟ್ / ಮಿಡ್-ಟರ್ಮ್ / ಪ್ರಿ-ಬೋರ್ಡ್ … Continued

ಮಾಜಿ ಎನ್ಕೌಂಟರ್ ಸ್ಪೆಷಲಿಸ್ಟ್ ಶರ್ಮಾ ನಿವಾಸದ ಮೇಲೆ ಎನ್‌ಐಎ ದಾಳಿ

ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ಅವರ ನಿವಾಸ ಆಂಟಿಲಿಯಾ ಸಮೀಪ ಸ್ಫೋಟಕ ತುಂಬಿದ ವಾಹನ ಪತ್ತೆಯಾದ ಪ್ರಕರಣ ಹಾಗೂ ಉದ್ಯಮಿ ಮನ್ಸುಖ್ ಹಿರೆನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಏಜೆನ್ಸಿ(ಎನ್ ಐಎ) ಗುರುವಾರ ಮುಂಬೈ ಮಾಜಿ ಎನ್ ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾ ನಿವಾಸದ ಮೇಲೆ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಪ್ರದೀಪ್ ಶರ್ಮಾ … Continued

ಜಾರ್ಖಂಡ್: ಅಧಿಕೃತ ವಾಟ್ಸಾಪ್‌ ವೇದಿಕೆಯಲ್ಲಿ ‘ಜೈ ಶ್ರೀರಾಮ್’ ಬರೆದಿದ್ದಕ್ಕೆ ಎನ್‌ಎಸ್‌ಯುಐ ಏಳು ಪ್ರಮುಖರ ಅಮಾನತು..!

ರಾಂಚಿ,(ಜಾರ್ಖಂಡ್): ಎನ್‌ಎಸ್‌ಯುಐ ಅಧಿಕೃತ ವಾಟ್ಸಾಪ್‌ನಲ್ಲಿ ‘ಜೈ ಶ್ರೀ ರಾಮ್’ ಶುಭಾಶಯವಾಗಿ ಬಳಸಿದ್ದಕ್ಕಾಗಿ ಜಮ್ಶೆಡ್ಪುರದಲ್ಲಿ ಕಾಂಗ್ರೆಸ್ಸಿನ ವಿದ್ಯಾರ್ಥಿ ವಿಭಾಗವಾದ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‌ಎಸ್‌ಯುಐ) ಏಳು ನಾಯಕರನ್ನು ಸಂಘಟನೆಯಿಂದ ಅಮಾನತುಗೊಳಿಸಲಾಗಿದೆ. ಎನ್‌ಎಸ್‌ಯುಐನ ಪೂರ್ವ ಸಿಂಗ್‌ಭೂಮ್ ಜಿಲ್ಲಾ ಸಮಿತಿಗೆ ಸೇರಿದ ಏಳು ಮಂದಿಯನ್ನು ಸಮಿತಿಯ ಅಧ್ಯಕ್ಷರಾದ ರೋಸ್ ಟಿರ್ಕಿ ಮೂರು ವರ್ಷಗಳ ಕಾಲ ಹೊರಹಾಕಿದ್ದಾರೆ. ನಾವೆಲ್ಲರೂ ಎನ್‌ಎಸ್‌ಯುಐ ಕಾರ್ಯಕರ್ತರು … Continued

4ಜಿ ಡೌನ್‌ಲೋಡ್ ವೇಗದಲ್ಲಿ ಜಿಯೋಗೆ ಮತ್ತೆ ಮೊದಲ ಸ್ಥಾನ :ಟ್ರಾಯ್‌

ನವದೆಹಲಿ: ಪ್ರತಿ ಸೆಕೆಂಡಿಗೆ ಸರಾಸರಿ 20.7 ಮೆಗಾಬೈಟ್ ಡೌನ್‌ಲೋಡ್ ವೇಗ ಹೊಂದಿರುವ ರಿಲಯನ್ಸ್ ಜಿಯೋ, 4ಜಿ ವಿಭಾಗದಲ್ಲಿ ತನ್ನ ಮುಂದಾಳತ್ವ ಕಾಯ್ದುಕೊಂಡಿದೆ. ಮೇ ತಿಂಗಳಿನ ಪಟ್ಟಿಯಲ್ಲಿ ಅಪ್‌ಲೋಡ್ ವಿಭಾಗದಲ್ಲಿ ವೊಡಾಫೋನ್ ಐಡಿಯಾ 6.7 ಎಂಬಿಪಿಎಸ್ ಡೇಟಾ ವೇಗದೊಂದಿಗೆ ಮೊದಲ ಸ್ಥಾನ ಪಡೆದಿದೆ. ರಿಲಯನ್ಸ್ ಜಿಯೋದ 4ಜಿ ನೆಟ್‌ವರ್ಕ್ ಡೌನ್‌ಲೋಡ್‌ ವೇಗವು ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದರೆ … Continued

ಭಾರತದಲ್ಲಿ 71 ದಿನಗಳಲ್ಲಿಯೇ ಅತ್ಯಂತ ಕಡಿಮೆ ಸಕ್ರಿಯ ಪ್ರಕರಣಗಳು

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತ 67,208 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದ್ದು, ಒಟ್ಟಾರೆ ಕೊರೊನಾ ವೈರಸ್ ಸೋಂಕಿಗೆ ಒಳಗಾದವರನ್ನು 2,97,00,313 ಕ್ಕೆ ತಳ್ಳಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಗುರುವಾರ ಬೆಳಿಗ್ಗೆ ಮಾಹಿತಿ ಬಿಡುಗಡೆ ಮಾಡಿದೆ. ಏತನ್ಮಧ್ಯೆ, ಕೊರೊನಾ ವೈರಸ್ ಸೋಂಕಿತ 2,84,91,670 ಜನರನ್ನು ಈವರೆಗೆ ಬಿಡುಗಡೆ ಮಾಡಲಾಗಿದೆ, ಕಳೆದ … Continued

ಆತ್ಮನಿರ್ಭರ ಭಾರತ..ಕೇರಳದಲ್ಲಿ ಒಬ್ಬನೇ ಆಳವಾದ ಬಾವಿಯನ್ನೂ ಅಗೆಯುತ್ತಾನೆ, ಮಣ್ಣನ್ನೂ ಮೇಲೆತ್ತುತ್ತಾನೆ..! ವಿಡಿಯೊದಲ್ಲಿ ನೋಡಿ

ಮಾನವ ಅದಮ್ಯ ಮನೋಭಾವಕ್ಕೆ ಬಂದಾಗ, ಏನೆಲ್ಲ ಸಾಧಿಸುತ್ತಾನೆ. ಇವರು ದೊಡ್ಡ ವ್ಯಕ್ತಿಗಳಲ್ಲ, ಆದರೆ ತಮ್ಮ ದೃಢ ನಿಶ್ಚಯದಿಂದ ಸಾನಮಾನ್ಯರಾಗಿದ್ದುಕೊಂಡೇ ಅಸಾಮಾನ್ಯ ಕೆಲಸಗಳನ್ನು ಮಾಡುತ್ತಾರೆ. ಅಂತಹ ಒಬ್ಬ ವ್ಯಕ್ತಿ ಕೇರಳದವನಾಗಿದ್ದು, ಸ್ವತಃ ಬಾವಿಯನ್ನು ಅಗೆಯಲು ನಿರ್ಧರಿಸಿದ ಮತ್ತು ಏಕಾಂಗಿಯಾಗಿ ಅದನ್ನು ಮಾಡಿ ತೋರಿಸಿದ್ದಾನೆ. ಈ ವಿಡಿಯೋ ಟ್ವಿಟರ್‌ನಲ್ಲಿ ವೈರಲ್ ಆಗುತ್ತಿದ್ದು, ಇದನ್ನು ಪ್ರಧಾನಿ ನರೇಂದ್ರ ಮೋದಿ ಜನಪ್ರಿಯಗೊಳಿಸಿರುವ … Continued

ಮುಂಬೈ ಹೌಸಿಂಗ್ ಸೊಸೈಟಿಯಲ್ಲಿ ವ್ಯಾಕ್ಸಿನೇಷನ್ ಹಗರಣ: ನಿವಾಸಿಗಳಿಗೆ ನಕಲಿ ಲಸಿಕೆ ನೀಡಿದ ಆರೋಪ

ಮುಂಬೈ ಪೊಲೀಸರು ಎರಡು ವಾರಗಳ ಹಿಂದೆ ಖಾಸಗಿ ವ್ಯಾಕ್ಸಿನೇಷನ್ ಡ್ರೈವ್ ಕೈಗೊಂಡ ಐಷಾರಾಮಿ ಕಂಡಿವಲಿ ವಸತಿ ಸಮುಚ್ಚಯದಲ್ಲಿ ವಂಚನೆ ನಡೆದಿರುವ ಬಗ್ಗೆ ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೊಸೈಟಿ ದೂರಿನ ನಂತರ ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ, ಆದರೆ ಇಲ್ಲಿಯವರೆಗೆ ಯಾವುದೇ ಎಫ್ಐಆರ್ ದಾಖಲಾಗಿಲ್ಲ ಅಥವಾ ಯಾವುದೇ ಬಂಧನಗಳು ಆಗಿಲ್ಲ ಎಂದು ಪೊಲೀಸ್ … Continued