ಪೋಖ್ರಾನ್ ಶ್ರೇಣಿಯ ಸ್ಥಳೀಯ ಸ್ಟ್ಯಾಂಡ್-ಆಫ್ ಎಂಟಿ-ಟ್ಯಾಂಕ್ ಕ್ಷಿಪಣಿ ಯಶಸ್ವಿಯಾಗಿ ಪರೀಕ್ಷಿಸಿದ ಭಾರತ- ವೀಕ್ಷಿಸಿ

ನವದೆಹಲಿ: ದೇಶದ ರಕ್ಷಣಾ ವಲಯದ ಮಹತ್ವದ ಸಾಧನೆಯಲ್ಲಿ ಪೋಖ್ರಾನ್ ಶ್ರೇಣಿಗಳಿಂದ ಹೆಲಿಕಾಪ್ಟರ್‌ನಿಂದ ಉಡಾಯಿಸುವ ಸ್ಥಳೀಯವಾಗಿ ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ ಸ್ಟ್ಯಾಂಡ್-ಆಫ್ ಎಂಟಿ-ಟ್ಯಾಂಕ್ (ಎಸ್‌ಎಎನ್‌ಟಿ) ಕ್ಷಿಪಣಿಯನ್ನು ಭಾರತ ಶನಿವಾರ ಯಶಸ್ವಿಯಾಗಿ ಪರೀಕ್ಷಿಸಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮತ್ತು ಭಾರತೀಯ ವಾಯುಪಡೆ (ಐಎಎಫ್) ಜಂಟಿಯಾಗಿ ಹಾರಾಟ ಪರೀಕ್ಷೆ ನಡೆಸಿವೆ. ಪರೀಕ್ಷೆಯು ಅದರ ಎಲ್ಲ ಉದ್ದೇಶಗಳನ್ನು … Continued

ವಾಯುಸೇನೆ ಹೆಲಿಕಾಪ್ಟರ್‌ ದುರಂತ: ಆರು ಮೃತದೇಹದ ಗುರುತು ಪತ್ತೆ, ನಾಲ್ವರ ಗುರುತು ಪತ್ತೆಗೆ ಕಾಯುತ್ತಿದೆ ಕುಟುಂಬ

ನವದೆಹಲಿ: ವಾಯುಸೇನಾ ಹೆಲಿಕಾಪ್ಟರ್ ಅಪಘಾತದಲ್ಲಿ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಪತ್ನಿ ಮಧುಲಿಕಾ ಸೇರಿ 13 ಮಂದಿ ಸೇನಾಧಿಕಾರಿಗಳು ನಿಧನರಾಗಿದ್ದಾರೆ. ಮಡಿದವರ ಪೈಕಿ ಇಂದು ಮತ್ತೆ 6 ಮೃತದೇಹದ ಗುರುತು ಪತ್ತೆಯಾಗಿದೆ. ಆದರೆ ಇನ್ನೂ ನಾಲ್ವರ ಗುರುತು ಪತ್ತೆಯಾಗಬೇಕಿದ್ದು, ಕುಟುಂಬದವರು ಕಾಯುತ್ತಿದ್ದಾರೆ. ಬಿಪಿನ್ ರಾವತ್, ಮಧುಲಿಕಾ ರಾವತ್, ಬ್ರಿಗೇಡಿಯರ್ ಎಲ್ಎಸ್ ಲಿಡ್ಡರ್ ಹಾಗೂ ಲಫ್ಟಿನೆಂಟ್ … Continued

ಕೇವಲ 2 ಗಂಟೆಗಳಲ್ಲಿ ಓಮಿಕ್ರಾನ್‌ ವೈರಸ್‌ ಪತ್ತೆ ಹಚ್ಚುವ ʼಪರೀಕ್ಷಾ ಕಿಟ್ʼ ಅಭಿವೃದ್ಧಿಪಡಿಸಿದ ಐಸಿಎಂಆರ್

ನವದೆಹಲಿ : ಅಸ್ಸಾಂನ ದಿಬ್ರುಗಢ್‌ನಲ್ಲಿರುವ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಹೊಸ ಕೋವಿಡ್ -19 ಪರೀಕ್ಷಾ ಕಿಟ್ ವಿನ್ಯಾಸಗೊಳಿಸಿದ್ದು, ಇದು ಕೇವಲ ಎರಡು ಗಂಟೆಗಳಲ್ಲಿ ಹೊಸ ಕೊರೊನಾ ವೈರಸ್ ರೂಪಾಂತರ ಓಮಿಕ್ರಾನ್ ಪತ್ತೆಹಚ್ಚುವ ಸಾಮರ್ಥ್ಯವನ್ನು ಹೊಂದಿದೆ. ಅನೇಕ ರಾಜ್ಯಗಳಲ್ಲಿ ಓಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ ಈ ಬೆಳವಣಿಗೆ ಗಮನಾರ್ಹವಾಗಿದೆ. ಇಲ್ಲಿಯವರೆಗೆ ಪ್ರಸ್ತುತ ಮಾರುಕಟ್ಟೆಯಲ್ಲಿ … Continued

ಪುಣೆಯಲ್ಲಿ ಓಮಿಕ್ರಾನ್ ಸೋಂಕಿಗೆ ಒಳಗಾದ ಒಂದೂವರೆ ವರ್ಷದ ಬಾಲಕಿ ಗುಣಮುಖಳಾಗಿ ಆಸ್ಪತ್ರೆಯಿಂದ ಬಿಡುಗಡೆ

ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪಿಂಪ್ರಿ ಚಿಂಚ್‌ವಾಡ್ ಪ್ರದೇಶದಲ್ಲಿ ಇತ್ತೀಚೆಗೆ ಕೊರೊನಾ ವೈರಸ್‌ನ ಓಮಿಕ್ರಾನ್ ರೂಪಾಂತರ ಸೋಂಕು ದೃಢಪಟ್ಟಿದ್ದ ಒಂದೂವರೆ ವರ್ಷದ ಬಾಲಕಿ ಸೋಂಕಿನಿಂದ ಚೇತರಿಸಿಕೊಂಡ ನಂತರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾಳೆ. ಓಮಿಕ್ರಾನ್‌ ಸೋಂಕಿಗೆ ಒಳಗಾದ ಮೂರು ವರ್ಷದ ಹುಡುಗ ಕೂಡ ಲಕ್ಷಣರಹಿತವಾಗಿದ್ದು ಮತ್ತು ಆರೋಗ್ಯವಾಗಿದ್ದಾನೆ ಎಂದು ಆರೋಗ್ಯ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಪಿಂಪ್ರಿ ಚಿಂಚ್‌ವಾಡ್ ಮುನ್ಸಿಪಲ್ ಕಾರ್ಪೊರೇಷನ್ … Continued

ಉತ್ತರ ಪ್ರದೇಶದ ಬಲರಾಂಪುರದಲ್ಲಿ ಸರಯೂ ನಹರ್ ರಾಷ್ಟ್ರೀಯ ಯೋಜನೆ ಉದ್ಘಾಟಿಸಿದ ಪ್ರಧಾನಿ ಮೋದಿ

ಬಲರಾಂಪುರ(ಉತ್ತರ ಪ್ರದೇಶ): ಪ್ರಧಾನಿ ನರೇಂದ್ರ ಮೋದಿ ಶನಿವಾರ ಬಲರಾಂಪುರದಲ್ಲಿ ಸರಯೂ ನಹರ್ ರಾಷ್ಟ್ರೀಯ ಯೋಜನೆಯನ್ನು ಉದ್ಘಾಟಿಸಿದರು. 9,800 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾದ ಈ ಯೋಜನೆಯು ಈ ಪ್ರದೇಶದ ಜಲಸಂಪನ್ಮೂಲಗಳ ಅತ್ಯುತ್ತಮ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಐದು ನದಿಗಳಾದ ಘಘರಾ, ಸರಯು, ರಾಪ್ತಿ, ಬಂಗಂಗಾ ಮತ್ತು ರೋಹಿಣಿಗಳನ್ನು ಪರಸ್ಪರ ಜೋಡಿಸುವುದನ್ನು ಒಳಗೊಂಡಿರುತ್ತದೆ. ಉತ್ತರ ಪ್ರದೇಶ ಮುಖ್ಯಮಂತ್ರಿ … Continued

ಸಿಡಿಎಸ್‌ ಬಿಪಿನ್ ರಾವತ್ ಸಾವಿನ ಸಂಭ್ರಮಾಚರಣೆ ವಿರೋಧಿಸಿ ಇಸ್ಲಾಂ ತೊರೆದ ಮಲಯಾಳಂ ನಿರ್ದೇಶಕ ಅಲಿ ಅಕ್ಬರ್: ಪತ್ನಿ ಸಮೇತ ಹಿಂದೂ ಧರ್ಮ ಸ್ವೀಕರಿಸಲು ನಿರ್ಧಾರ

ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟ ಸುದ್ದಿಗೆ ಕೆಲವು ಮುಸ್ಲಿಮರ ಅಗೌರವದ ಪ್ರತಿಕ್ರಿಯೆಯನ್ನು ಖಂಡಿಸಿರುವ ಕೇರಳದ ಚಲನಚಿತ್ರ ನಿರ್ಮಾಪಕ ಅಲಿ ಅಕ್ಬರ್ ಅವರು ತಾನು ಧರ್ಮದಲ್ಲಿ ನಂಬಿಕೆ ಕಳೆದುಕೊಂಡಿದ್ದೇನೆ ಮತ್ತು ತಮ್ಮ ಪತ್ನಿಯೊಂದಿಗೆ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲಿದ್ದೇನೆ ಎಂದು ಹೇಳಿದ್ದಾರೆ. ಬಿಪಿನ್​ ರಾವತ್​ ಅವರ ನಿಧನಕ್ಕೆ ಸಂಬಂಧಿಸಿದ ಸೋಶಿಯಲ್​ … Continued

ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾರ ಕಳುವಾದ ವಾಚ್‌ ಅಸ್ಸಾಂನಲ್ಲಿ ಪತ್ತೆ…!

ಗುವಾಹಟಿ: ದುಬೈನಲ್ಲಿ ಕಳವು ಮಾಡಲಾಗಿದ್ದ ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಅವರ ವಾಚ್ ಶನಿವಾರ ಬೆಳಗ್ಗೆ ಅಸ್ಸಾಂನ ಶಿವಸಾಗರ್ ಜಿಲ್ಲೆಯಿಂದ ವಶಪಡಿಸಿಕೊಳ್ಳಲಾಗಿದೆ ಹಾಗೂ ಈ ಸಂಬಂಧ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯು ದಿವಂಗತ ಅರ್ಜೆಂಟೀನಾದ ಫುಟ್ಬಾಲ್ ಆಟಗಾರನ ವಸ್ತುಗಳನ್ನು ಸಂಗ್ರಹಿಸುತ್ತಿದ್ದ ದುಬೈನಲ್ಲಿರುವ ಕಂಪನಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾನೆ ಎಂದು ಅವರು ಹೇಳಿದರು. … Continued

ತಿರುಪತಿ ತಿಮ್ಮಪ್ಪನಿಗೆ 3 ಕೋಟಿ ರೂ. ಮೌಲ್ಯದ ವಜ್ರ ಖಚಿತ ಚಿನ್ನಾಭರಣ ಕಾಣಿಕೆ ನೀಡಿದ ಅನಾಮಧೇಯ ಭಕ್ತ

ತಿರುಪತಿ: ತಿರುಪತಿ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಗೆ ಅಪರೂಪದ ಕಾಣಿಕೆ ಬಂದಿದೆ. ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಗೆ ಅನಾಮಧೇಯ ಭಕ್ತರೊಬ್ಬರು 3 ಕೋಟಿ ರೂಪಾಯಿ ಮೌಲ್ಯದ ವಜ್ರ ಖಚಿತ ಚಿನ್ನಾಭರಣ ಕಾಣಿಕೆಯಾಗಿ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಇವುಗಳನ್ನು ಶ್ರೀಗಳ ದರ್ಶನ ಪಡೆದ ದಾನಿ ಸ್ವಾಮಿಗೆ ಉಡುಗೊರೆ ರೂಪದಲ್ಲಿ ನೀಡಲಾಯಿತು. ತನ್ನನ್ನು ತಾನು ಗುರುತಿಸಿಕೊಳ್ಳುವುದನ್ನು ಬಯಸದ ಅನಾಮಧೇಯ … Continued

ಮಹಾರಾಷ್ಟ್ರದಲ್ಲಿ ಒಂದೇ ದಿನ 7 ಓಮಿಕ್ರಾನ್​ ಸೋಂಕು ದೃಢ; ಮುಂಬೈನಲ್ಲಿ 144 ಸೆಕ್ಷನ್​ ಜಾರಿ

ಮುಂಬೈ: ದೇಶದಲ್ಲಿ ಓಮಿಕ್ರಾನ್​ ಪ್ರಕರಣಗಳು ಹೆಚ್ಚುತ್ತಿವೆ. ಮಹಾರಾಷ್ಟ್ರದಲ್ಲಿ ನಿನ್ನೆ ಶುಕ್ರವಾರ ಮತ್ತೆ ಏಳು ಪ್ರಕರಣಗಳು ಪತ್ತೆಯಾಗಿದ್ದು, ಇಂದು, ಶನಿವಾರ ದೆಹಲಿಯಲ್ಲಿ ಮತ್ತೊಂದು ಪ್ರಕರಣ ವರದಿಯಾಗಿದೆ. ದೇಶದಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ ಈಗ 33ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲೇ 17ಕ್ಕೆ ಏರಿಕೆಯಾಗಿದೆ. ಓಮಿಕ್ರಾನ್ ಸೋಂಕು ಹೆಚ್ಚಾದ ಬೆನ್ನಲ್ಲೇ ಮುಂಬೈನಲ್ಲಿ ಇಂದು ಮತ್ತು ನಾಳೆ (ಡಿ.11 ಮತ್ತು 12ರಂದು) ಸೆಕ್ಷನ್​ … Continued

ದೆಹಲಿಯಲ್ಲಿ ಓಮಿಕ್ರಾನ್ ರೂಪಾಂತರದ ಎರಡನೇ ಪ್ರಕರಣ ದೃಢ: ಜಿಂಬಾಬ್ವೆಯಿಂದ ಬಂದ ಪ್ರಯಾಣಿಕನಲ್ಲಿ ಸೋಂಕು ಪತ್ತೆ

ನವದೆಹಲಿ: ಕೊರೊನಾ ವೈರಸ್‌ನ ಓಮಿಕ್ರಾನ್ ರೂಪಾಂತರದ ಎರಡನೇ ಪ್ರಕರಣವನ್ನು ದೆಹಲಿ ಶನಿವಾರ ವರದಿ ಮಾಡಿದೆ. ಕಳೆದ ಭಾನುವಾರ ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರು ಹೊಸ, ಹೆಚ್ಚು ಹರಡುವ ವೈರಸ್‌ನ ಮೊದಲ ಪ್ರಕರಣವನ್ನು ದೃಢಪಡಿಸಿದ್ದರು. ಈ ವಾರ ಜಿಂಬಾಬ್ವೆಯಿಂದ ದೆಹಲಿಗೆ ಆಗಮಿಸಿದ ಪ್ರಯಾಣಿಕನಿಂದ ತೆಗೆದ ಮಾದರಿಯ ಜಿನೋಮ್ ಅನುಕ್ರಮವು ಓಮಿಕ್ರಾನ್ ರೂಪಾಂತರವನ್ನು ಪತ್ತೆ ಹಚ್ಚಿದೆ. … Continued