ಕೋವಿಡ್‌ ಹೊಸ ರೂಪಾಂತರಿ ಓಮಿಕ್ರಾನ್‌’ ತಡೆಗೆ ಕಟ್ಟೆಚ್ಚರ, ವಿದೇಶಿ ಪ್ರಯಾಣಿಕರ ಮೇಲೆ ತೀವ್ರ ನಿಗಾ, ಅಂತಾರಾಷ್ಟ್ರೀಯ ವಿಮಾನಯಾನ ನಿರ್ಬಂಧ ತೆರವು ಮರುಚಿಂತನೆ

ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ, ಅತ್ಯಂತ ಅಪಾಯಕಾರಿ ಎನ್ನಲಾದ ಕೋವಿಡ್‌ ಹೊಸ ರೂಪಾಂತರಿ ‘ಓಮಿಕ್ರಾನ್‌’ ಈಗ ವಿಶ್ವದಲ್ಲಿ ಆತಂಕಕ್ಕೆ ಕಾರಣವಾಗಿದೆ. ಭಾರತದಲ್ಲಿ ಈ ತಳಿಯ ವೈರಸ್‌ ಪತ್ತೆಯಾಗಿಲ್ಲವಾದರೂ, ಇದು ಭಾರತಕ್ಕೆ ವ್ಯಾಪಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸಮರೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮೊದಲನೇ ಮತ್ತು ಎರಡನೇ ಅಲೆಯಿಂದ ಕಲಿತ ಪಾಠಗಳನ್ನು ಬಳಸಿ ಮೂರನೇ ಅಲೆ ತಡೆಗೆ ಕಾರ್ಯತಂತ್ರ … Continued

ಕೋವಿಡ್ ಹೊಸ ರೂಪಾಂತರ ಪತ್ತೆ, ಕರ್ನಾಟಕದಲ್ಲಿ ಕೊರೊನಾ ಹೆಚ್ಚಳ : ಸಿಎಂ ಸಭೆ ನಂತರ ರಾಜ್ಯದ ಜನರಿಗೆ ಹೊರಬಿತ್ತು ಸರ್ಕಾರದ ಮಹತ್ವದ ಸೂಚನೆಗಳು

ಬೆಂಗಳೂರು : ಕೋವಿಡ್ 19 , ರೂಪಾಂತರಿ ವೈರಸ್ ಒಮಿಕ್ರಾನ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಅನೇಕ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಹಾಗೂ ರಾಜ್ಯದ ಜನರಿಗೆ ಹಲವಾರು ಸೂಚನೆಗಳನ್ನು ನೀಡಲಾಗಿದೆ. ಈ ಕುರಿತು ಮಾಧ್ಯಮದವರ ಜೊತೆಗೆ ಮಾತನಾಡಿದ ಕಂದಾಯ ಸಚಿವ ಆರ್, ಅಶೋಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸರ್ಕಾರ … Continued

ಮಳೆಯಿಂದ ತತ್ತರಿಸಿದ ಆಂಧ್ರದಲ್ಲಿ ಶೋಧ ಕಾರ್ಯಾಚರಣೆ ವೇಳೆ 44 ಶವ ಪತ್ತೆ, 16 ಜನ ನಾಪತ್ತೆ

ಹೈದರಾಬಾದ್‌: ಆಂಧ್ರಪ್ರದೇಶದಲ್ಲಿ ಅಭೂತಪೂರ್ವ ಮಳೆಯಿಂದ ಉಂಟಾದ ಪ್ರವಾಹದಿಂದ 44 ಜನರು ಮೃತಪಟ್ಟಿದ್ದಾರೆ ಎಂದು ಆಂಧ್ರಪ್ರದೇಶ ಸರ್ಕಾರ ಮಾಹಿತಿ ನೀಡಿದೆ. ಕಳೆದ ಹತ್ತು ದಿನಗಳಿಂದಲೂ ನಿರಂತರವಾಗಿ ಸುರಿಯುತ್ತಿರುವ ಅವ್ಯಾಹತ ಮಳೆಗೆ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ. ಹುಡುಕಾಟ ನಡೆಸಿದಲ್ಲೆಲ್ಲ ಶವಗಳು ಪತ್ತೆಯಾಗುತ್ತಿದೆ. ಈವರೆಗೆ 44 ಶವಗಳನ್ನು ರಕ್ಷಣಾ ಸಿಬ್ಬಂದಿ ಹೊರ … Continued

ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದ ಕೋವಿಡ್‌ ಹೊಸ ರೂಪಾಂತರ ತಳಿಗೆ ‘ಒಮಿಕ್ರಾನ್’ ಎಂದು ಹೆಸರಿಟ್ಟ ಡಬ್ಲ್ಯುಎಚ್‌ಒ, ಜಾಗರೂಕರಾಗಿರಿ ಎಂದು ಎಚ್ಚರಿಕೆ

ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ಮೊಟ್ಟ ಮೊದಲ ಬಾರಿಗೆ ಕಂಡು ಬಂದಿರುವ ಕೋವಿಡ್-19 ಸಾಂಕ್ರಾಮಿಕದ ಹೊಸ ತಳಿ ಬಿ.1.1.529 ಅನ್ನು ವಿಶ್ವ ಆರೋಗ್ಯ ಸಂಸ್ಥೆ ‘ಓಮಿಕ್ರಾನ್’ ಎಂದು ಹೆಸರಿಸಿದ್ದು, ಈ ಹೊಸ ತಳಿ ವಿಶ್ವಕ್ಕೆ ಹೊಸ ಸಂಕಟ ತಂದೊಡ್ಡಿದೆ ಎಂದು ತಿಳಿಸಿದೆ. ಕೋವಿಡ್‌ ಅನ್ನು ಕಾಲಕಾಲಕ್ಕೆ ನಿಗಾವಹಿಸುವ ಹಾಗೂ ಅದರ ವಿಕಾಸವನ್ನು ಮೌಲ್ಯಮಾಪನ ಮಾಡುವಂತಹ ತಜ್ಞರ ಸ್ವತಂತ್ರ … Continued

ಹಳಿ ದಾಟುತ್ತಿದ್ದಾಗ ರೈಲು ಡಿಕ್ಕಿ: ಮೂರು ಆನೆಗಳು ಸಾವು

ಚೆನ್ನೈ: ಒಂದು ಹೆಣ್ಣಾನೆ ಅದರ ಎರಡು ಹೆಣ್ಣು ಮರಿಗಳು ರೈಲಿಗೆ ಸಿಲುಕಿ ಮೃತಪಟ್ಟ ಘಟನೆ ತಮಿಳುನಾಡು-ಕೇರಳದ ಗಡಿಯಾದ ನವಕ್ಕರೈ ಸಮೀಪದ ಮಾವುತ್ತಂಪತ್ತಿ ಗ್ರಾಮದ ಬಳಿ ನಡೆದ ಬಗ್ಗೆ ವರದಿಯಾಗಿದೆ. ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಸುಮಾರು 25 ವರ್ಷದ ಹೆಣ್ಣಾನೆ ಹಾಗೂ ಅದರ 12 ವರ್ಷದ ಎರಡು ಮರಿಗಳು ರೈಲು ಹಳಿ ದಾಟುತ್ತಿದ್ದಾಗ ಮಂಗಳೂರು … Continued

ನವೆಂಬರ್‌ 29ರ ಉದ್ದೇಶಿತ ಟ್ರ್ಯಾಕ್ಟರ್ ರ್ಯಾಲಿ ಹಿಂಪಡೆದ ಕಿಸಾನ್ ಯೂನಿಯನ್: ಡಿಸೆಂಬರ್‌ 4ಕ್ಕೆ ತಮ್ಮ ಮುಂದಿನ ಕ್ರಮ ಪ್ರಕಟ

ನವದೆಹಲಿ: ಸದ್ಯಕ್ಕೆ ದೆಹಲಿಯಲ್ಲಿ ಉದ್ದೇಶಿತ ಟ್ರಾಕ್ಟರ್ ರ್ಯಾಲಿ ಕೈಬಿಡಲು ಸಿಂಘು ಗಡಿಯಲ್ಲಿ ನಡೆದ ರೈತರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಸಂಯುಕ್ತ ಕಿಸಾನ್ ಮೋರ್ಚಾದ (ಎಸ್‌ಕೆಎಂ) ಕೋರ್ ಕಮಿಟಿಯು ಡಿಸೆಂಬರ್ 4 ರಂದು ತಮ್ಮ ಮುಂದಿನ ಕ್ರಮವನ್ನು ಪ್ರಕಟಿಸುವುದಾಗಿ ಶನಿವಾರ ತಿಳಿಸಿದೆ. ನವಂಬರ್ 29 ರಂದು ನಡೆಸಲು ಉದ್ದೇಶಿಸಿದ್ದ ಟ್ರಾಕ್ಟರ್ ರ್ಯಾಲಿ ರದ್ದುಗೊಳಿಸಲಾಗಿದೆ ಎಂದು ಕಿಸಾನ್ ಯೂನಿಯನ್ … Continued

ತಮಿಳುನಾಡಿನಲ್ಲಿ ಮಳೆ: 23 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ

ನವದೆಹಲಿ: ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶನಿವಾರ ತಮಿಳುನಾಡಿನ ಕರಾವಳಿ ಜಿಲ್ಲೆಗಳಲ್ಲಿ ಅರೆಡ್ ಅಲರ್ಟ್ ಘೋಷಿಸಿದ್ದು, ಅತಿ ಹೆಚ್ಚು ಮಳೆಯಾಗುವ ಎಚ್ಚರಿಕೆ ನೀಡಿದೆ. ಕಳೆದ 24 ಗಂಟೆಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಮಿಳುನಾಡಿನ 23 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಮಳೆಯಿಂದಾಗಿ ಹಲವಾರು ಪ್ರದೇಶಗಳು ಜಲಾವೃತವಾಗಿದ್ದು, ಮತ್ತೆ ಪ್ರವಾಹಕ್ಕೆ ಕಾರಣವಾಗಿದೆ. ಅಧಿಕೃತ ಆದೇಶದ ಪ್ರಕಾರ, ಚೆನ್ನೈ, … Continued

ಗಡಿ ಭದ್ರತಾ ಪಡೆ ಅಧಿಕಾರ ವ್ಯಾಪ್ತಿ ನಿರ್ಧರಿಸುವ ಕೇಂದ್ರದ ಅಧಿಕಾರ ಪ್ರಶ್ನಿಸಿ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಮನವಿ

ಕೋಲ್ಕತ್ತಾ: ಕೇಂದ್ರ ಸರ್ಕಾರಕ್ಕೆ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಪ್ರಾದೇಶಿಕ ವ್ಯಾಪ್ತಿಯನ್ನು ನಿರ್ಧರಿಸುವ ಅನಿರ್ಬಂಧಿತ ಅಧಿಕಾರಗಳನ್ನು ನೀಡುವ ಬಿಎಸ್‌ಎಫ್‌ ಕಾಯಿದೆ 1968ರ ಸೆಕ್ಷನ್‌ 139(1) ಅನ್ನು ಪ್ರಶ್ನಿಸಿ ಕೋಲ್ಕತ್ತಾ ಹೈಕೋರ್ಟ್‌ಗೆ ಮನವಿಯೊಂದು ಸಲ್ಲಿಕೆಯಾಗಿದೆ. ಕೇಂದ್ರ ಗೃಹ ಇಲಾಖೆಯು ಗಡಿ ರಾಜ್ಯಗಳಲ್ಲಿ ಬಿಎಸ್‌ಎಫ್‌ ಪ್ರಾದೇಶಿಕ ವ್ಯಾಪ್ತಿಯನ್ನು 15 ಕಿಮೀಯಿಂದ 50 ಕಿಮೀ ಹೆಚ್ಚಿಸಿರುವ ಇತ್ತೀಚೆಗಿನ ನಿರ್ಧಾರವನ್ನು ವಕೀಲ … Continued

ಶುಕ್ರವಾರ ಸೆನ್ಸೆಕ್ಸ್‌ 1,688 ಪಾಯಿಂಟ್ಸ್‌ ಕುಸಿತ: ಷೇರು ಮಾರುಕಟ್ಟೆಯಲ್ಲಿ 7.36 ಲಕ್ಷ ಕೋಟಿ ರೂ.ಕಳೆದುಕೊಂಡ ಹೂಡಿಕೆದಾರರು..!

ಶುಕ್ರವಾರ ಸೆನ್ಸೆಕ್ಸ್‌ 1,688 ಪಾಯಿಂಟ್ಸ್‌ ಕುಸಿತ: ಷೇರು ಮಾರುಕಟ್ಟೆಯಲ್ಲಿ 7.36 ಲಕ್ಷ ಕೋಟಿ ರೂ.ಕಳೆದುಕೊಂಡ ಹೂಡಿಕೆದಾರರು..! ನವದೆಹಲಿ: ಹಲವಾರು ದೇಶಗಳು ಕೊರೊನಾ ವೈರಸ್‌ನ ಹೊಸ ರೂಪಾಂತರವನ್ನು ಪತ್ತೆಹಚ್ಚಿದ ಕಾರಣ ವ್ಯಾಪಾರಿಗಳು ತಮಗೆ ಸಾಧ್ಯವಿರುವ ಎಲ್ಲವನ್ನೂ ಮಾರಾಟ ಮಾಡಿದ್ದರಿಂದ ಏಳು ತಿಂಗಳ ಅತಿದೊಡ್ಡ ಮಾರುಕಟ್ಟೆ ಕುಸಿತ ಕಂಡಿದ್ದು, ಶುಕ್ರವಾರ 7.36 ಲಕ್ಷ ಕೋಟಿ ರೂ.ಗಳಷ್ಟು ಸಂಪತ್ತನ್ನು ಹೂಡಿಕೆದಾರರು … Continued

ತಮಗೆ ಕೊಟ್ಟ 75 ಲಕ್ಷ ರೂ. ವರದಕ್ಷಿಣೆ ಹಣ ಬಾಲಕಿಯರ ಹಾಸ್ಟೆಲ್‌ ನಿರ್ಮಾಣಕ್ಕೆ ದೇಣಿಗೆ ಕೊಟ್ಟ ಮದುಮಕ್ಕಳು

ಜೈಪುರ್: ಮದುವೆಯಲ್ಲಿ ವರದಕ್ಷಿಣೆ ನೀಡಿದ್ದ 75 ಲಕ್ಷ ರೂ.ಗಳಷ್ಟು ಹಣದಲ್ಲಿ ನೂತನ ಮದುಮಕ್ಕಳು ಬಾಲಕಿಯರ ವಿದ್ಯಾರ್ಥಿನಿಲಯ (ಹಾಸ್ಟೆಲ್) ನಿರ್ಮಾಣ ಮಾಡಲು ಮುಂದಾಗಿರುವುದಕ್ಕೆ ಸಾರ್ವಜನಿಕವಾಗಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಉದ್ಯಮಿ ಕಿಶೋರ್ ಸಿಂಗ್ ಕನೋದ್ ಇದೇ 21ರಂದು ತಮ್ಮ ಮಗಳಾದ ಅಂಜಲಿ ಕನ್ವರ್ ಅವರ ವಿವಾಹ ನೆರವೇರಿಸಿದ್ದರು. ದೈನಿಕ್ ಭಾಸ್ಕರದಲ್ಲಿ ಪ್ರಕಟವಾದ ವರದಿಯ ಪ್ರಕಾರ,ಮದುವೆ ಸಂದರ್ಭದಲ್ಲಿ, ವರ … Continued