ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್ ಖಾನ್ ಬಂಧಿಸಿದ ಅಧಿಕಾರಿ ವಿರುದ್ಧ ಸಿಬಿಐನಿಂದ ಭ್ರಷ್ಟಾಚಾರ ಪ್ರಕರಣ ದಾಖಲು

ನವದೆಹಲಿ: ಎರಡು ವರ್ಷಗಳ ಹಿಂದೆ ಡ್ರಗ್ಸ್ ಆನ್ ಕ್ರೂಸ್ ಪ್ರಕರಣದಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್‌ ಬಂಧಿಸಿದ್ದ ಮಾದಕ ದ್ರವ್ಯ ನಿಗ್ರಹ (ಎನ್‌ಸಿಬಿ) ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಶುಕ್ರವಾರ ಭ್ರಷ್ಟಾಚಾರ ಪ್ರಕರಣ ದಾಖಲಿಸಿದೆ. ಸಮೀರ್‌ ವಾಂಖೆಡೆ ಮತ್ತು ಇತರರು ಆಪಾದಿತ ಮಾದಕವಸ್ತು ದಂಧೆಯಲ್ಲಿ ಆರ್ಯನ್ ಖಾನ್ ಅವರನ್ನು … Continued

ಬಿಯರಿನಿಂದ ಓಡುವ ಮೋಟಾರ್‌ ಸೈಕಲ್ ತಯಾರಿಸಿದ ವ್ಯಕ್ತಿ…! ಗಂಟೆಗೆ 240 ಕಿಮೀ ವೇಗದ ವರೆಗೆ ಹೋಗಬಹುದಂತೆ | ವೀಕ್ಷಿಸಿ

ರಾಕೆಟ್-ಚಾಲಿತ ಶೌಚಾಲಯ ಮತ್ತು ಜೆಟ್-ಚಾಲಿತ ಕಾಫಿ ಪಾಟ್‌ನಂತಹ ಅಸಾಮಾನ್ಯ ಆವಿಷ್ಕಾರಗಳನ್ನು ಮಾಡಿ ಪ್ರಸಿದ್ಧವಾದ ಅಮೆರಿಕದ ಕೇಯ್‌ ಮೈಕೆಲ್ಸನ್, ಈಗ ಮತ್ತೊಂದು ಆವಿಷ್ಕಾರ ಮಾಡಿದ್ದಾರೆ. ಅವರು  ಬಿಯರ್-ಚಾಲಿತ ಮೋಟಾರ್‌ ಸೈಕಲ್ ಮಾಡಿ ಯಶಸ್ವಿಯಾಗಿರುವುದಾಗಿ ಹೇಳಿಕೊಂಡಿದ್ದು, ಇದು ಗಂಟೆಗೆ ಗರಿಷ್ಠ 240 ಕಿ.ಮೀ ವೇಗದಲ್ಲಿ ಓಡುತ್ತದೆ ಎಂದು ಹೇಳಿಕೊಂಡಿದ್ದಾರೆ. Fox9 ನೊಂದಿಗೆ ಮಾತನಾಡಿದ ಮೈಕೆಲ್ಸನ್ ಅವರು, ಮೋಟಾರ್‌ಸೈಕಲ್ಲಿಗೆ ತಾನು … Continued

ಕಾಕ್‌ಪಿಟ್‌ಗೆ ಬರಲು ಸ್ನೇಹಿತೆಗೆ ಅವಕಾಶ ನೀಡಿದ ಏರ್ ಇಂಡಿಯಾ ಪೈಲಟ್ ಅಮಾನತು : ಏರ್‌ಲೈನ್ಸ್‌ ಸಂಸ್ಥೆಗೆ 30 ಲಕ್ಷ ರೂ. ದಂಡ

ನವದೆಹಲಿ: ಫೆಬ್ರವರಿಯಲ್ಲಿ ದುಬೈನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ವಿಮಾನದ ವೇಳೆ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಮಹಿಳಾ ಸ್ನೇಹಿತೆಗೆ ಕಾಕ್‌ಪಿಟ್‌ಗೆ ಪ್ರವೇಶಿಸಲು ಮತ್ತು ಅಲ್ಲೇ ಇರಲು ಅವಕಾಶ ಮಾಡಿಕೊಟ್ಟ ಏರ್ ಇಂಡಿಯಾ ಪೈಲಟ್‌ ಒಬ್ಬರಿಗೆ ಮೂರು ತಿಂಗಳ ಕಾಲ ಅಮಾನತುಗೊಳಿಸಲಾಗಿದೆ ಮತ್ತು ವಿಮಾನಯಾನ ಸಂಸ್ಥೆಗೆ ₹ 30 ಲಕ್ಷ ದಂಡ ವಿಧಿಸಲಾಗಿದೆ ಎಂದು ವಿಮಾನಯಾನ ನಿಯಂತ್ರಕ ತಿಳಿಸಿದೆ. “ವಿಮಾನದ … Continued

ʼಕೇರಳ ಸ್ಟೋರಿʼ ಸಿನೆಮಾ ಬೇರೆಡೆ ಬಿಡುಗಡೆಯಾಗಿದೆ; ಪಶ್ಚಿಮ ಬಂಗಾಳ ಭಿನ್ನವಾಗಿಲ್ಲ: ಸಿನಿಮಾ ನಿಷೇಧದ ಬಗ್ಗೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ತರಾಟೆ

ನವದೆಹಲಿ: ರಾಜ್ಯದಲ್ಲಿ ‘ದಿ ಕೇರಳ ಸ್ಟೋರಿ’ಯನ್ನು ನಿಷೇಧಿಸುವ ನಿರ್ಧಾರದ ಬಗ್ಗೆ ಪಶ್ಚಿಮ ಬಂಗಾಳ ಸರ್ಕಾರವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ. “ದಿ ಕೇರಳ ಸ್ಟೋರಿಯನ್ನು ಬಂಗಾಳದಲ್ಲಿ ಏಕೆ ಬಿಡುಗಡೆ ಮಾಡಬಾರದು? ಚಿತ್ರವು ದೇಶದ ಉಳಿದ ಭಾಗಗಳಲ್ಲಿ ಓಡುತ್ತಿದೆ” ಎಂದು ನ್ಯಾಯಾಲಯವು ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸರ್ಕಾರದ ವಿರುದ್ಧ ಮೌಖಿಕವಾಗಿ ಟೀಕಿಸಿತು. “ಪಶ್ಚಿಮ … Continued

ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ತನಿಖೆಗೆ ಎಸ್‌ಐಟಿ ರಚನೆ

ನವದೆಹಲಿ : ದೇಶದ ಖ್ಯಾತ ಮಹಿಳಾ ಕುಸ್ತಿಪಟುಗಳಿಗೆ ಲೈಗಿಂಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಕುಸ್ತಿಪಟುಗಳ ಒಕ್ಕೂಟದ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಸಿಂಗ್‌ ವಿರುದ್ಧ ತನಿಖೆ ನಡೆಸಲು ಎಸ್‌ಐಟಿ ತಂಡ ರಚಿಸಲಾಗಿದೆ. ದೆಹಲಿಯಲ್ಲಿ ಕುಸ್ತಿಪಟುಗಳ ಪ್ರತಿಭಟನೆ ನಡೆಯುತ್ತಿರುವ ಬೆನ್ನಲ್ಲೇ ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳ … Continued

ಬಿಡುಗಡೆಗೆ ಮುನ್ನವೇ ‘ಆದಿಪುರುಷ’ ಸಿನೆಮಾ ವಿವಾದ : ಸಿಬಿಎಫ್‌ಸಿ ಮಂಡಳಿಯಲ್ಲಿ ದೂರು ದಾಖಲು

ಮುಂಬೈ: ಪ್ರಭಾಸ ಮತ್ತು ಕೃತಿ ಸನೂನ್‌ ಅಭಿನಯದ ಬಹುನಿರೀಕ್ಷಿತ ಚಿತ್ರ ʼಆದಿಪುರುಷʼ ಚಿತ್ರ ಜೂನ್‌ 16 ರಂದು ತೆರೆಕಾಣುತ್ತಿದೆ. ಆದರೆ ಚಿತ್ರ ಬಿಡುಗಡೆಗೆ ಮುನ್ನವೇ ಸಿನೆಮಾಕ್ಕೆ ಸಂಕಷ್ಟ ಎದುರಾಗಿದೆ. ಕೆಲದಿನಗಳ ಹಿಂದೆ ಆದಿಪುರುಷ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿತ್ತು. ಇದರ ಬೆನ್ನಲ್ಲೇ ಸಂಜಯ ದೀನಾನಾಥ ತಿವಾರಿ ಎಂಬುವವರು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಮಂಡಳಿಯಲ್ಲಿ … Continued

ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ, ತಿರುವನಂತಪುರ ಫಸ್ಟ್, ಬೆಂಗಳೂರಿಗೆ 2 ನೇ ಸ್ಥಾನ

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಸಿಬಿಎಸ್‌ಇ 12ನೇ ಬೋರ್ಡ್ ಫಲಿತಾಂಶ 2023 ಅನ್ನು ಪ್ರಕಟಿಸಿದೆ. 12ನೇ ತರಗತಿ ಫಲಿತಾಂಶ ಬೆಳಗ್ಗೆ 10:45ಕ್ಕೆ ಪ್ರಕಟವಾಗಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಸಿಬಿಎಸ್‌ಇ-cbse.gov.in ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು. ಫಲಿತಾಂಶದಲ್ಲಿ ತಿರುವನಂತಪುರ 99.91% ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿ ಮೊದಲ ಸ್ಥಾನ ಪಡೆದುಕೊಂಡಿದೆ. ಬೆಂಗಳೂರು … Continued

ಮಧ್ಯರಾತ್ರಿಯ ವೇಳೆಗೆ ಪ್ರಬಲ ಚಂಡಮಾರುತವಾಗಿ ರೂಪುಗೊಳ್ಳುವ ಮೋಚಾ ಚಂಡಮಾರುತ : ಮಳೆಯ ಮುನ್ನೆಚ್ಚರಿಕೆ

ನವದೆಹಲಿ: ಭಾರತೀಯ ಹವಾಮಾನ ಇಲಾಖೆ (IMD) ಗುರುವಾರ ಹಲವಾರು ಈಶಾನ್ಯ ರಾಜ್ಯಗಳು ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ‘ಮೋಚಾ’ ಚಂಡಮಾರುತದ ಹಿನ್ನೆಲೆಯಲ್ಲಿ ಮಳೆಯ ಎಚ್ಚರಿಕೆಯನ್ನು ನೀಡಿದೆ. ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಚಲನೆಯಿಂದಾಗಿ ಈ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಪ್ರಸ್ತುತವಾಗಿರುವ ಮೋಚಾ ಚಂಡಮಾರುತವು ಉತ್ತರದ ಕಡೆಗೆ ಚಲಿಸುವ ಸಾಧ್ಯತೆಯಿದೆ. ಮಧ್ಯ … Continued

ವಿಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದ ನವೀನ ಪಟ್ನಾಯಕ್

ನವದೆಹಲಿ : ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಇಂದು, ಗುರುವಾರ 2024 ರ ರಾಷ್ಟ್ರೀಯ ಚುನಾವಣೆಗೆ ಪ್ರತಿಪಕ್ಷಗಳೊಂದಿಗೆ ಕೆಲಸ ಮಾಡುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. ಬಿಜು ಜನತಾ ದಳ (ಬಿಜೆಡಿ) ಪಕ್ಷವು ಏಕಾಂಗಿಯಾಗಿ ಚುನಾವಣೆಗೆ ಹೋಗಲಿದೆ ಮತ್ತು ಇದು “ಯಾವಾಗಲೂ ಪಕ್ಷದ ಯೋಜನೆಯಾಗಿದೆ” ಎಂದು ಪ್ರಕಟಿಸಿದ್ದಾರೆ. ಗುರುವಾರ ಸಂಜೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ … Continued

ಸುಪ್ರೀಂ ಕೋರ್ಟ್ ತೀರ್ಪಿನ ಕೆಲವೇ ಗಂಟೆಗಳ ನಂತರ ಸೇವಾ ಕಾರ್ಯದರ್ಶಿಯನ್ನು ತೆಗೆದುಹಾಕಿದ ದೆಹಲಿ ಕೇಜ್ರಿವಾಲ್ ಸರ್ಕಾರ

ನವದೆಹಲಿ : ಅಧಿಕಾರಶಾಹಿಗಳ ನಿಯಂತ್ರಣ ಮತ್ತು ನಿಯೋಜನೆ ಕುರಿತು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದ ನಂತರ ದೆಹಲಿಯ ಅರವಿಂದ ಕೇಜ್ರಿವಾಲ್‌ ಸರ್ಕಾರ, ದೆಹಲಿ ಸರ್ಕಾರದ ಸೇವಾ ಇಲಾಖೆಯ ಕಾರ್ಯದರ್ಶಿ ಆಶಿಶ್‌ ಮೋರೆ ಅವರನ್ನು ಎತ್ತಂಗಡಿ ಮಾಡಿದೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರಮುಖ ಆಡಳಿತಾತ್ಮಕ ಪುನರ್ರಚನೆಯ ಎಚ್ಚರಿಕೆಯೊಂದಿಗೆ ಹಲವು ವರ್ಗಾವಣೆಗಳಲ್ಲಿ ಮೊದಲನೆಯ ಕ್ರಮ ಕೈಗೊಂಡಿದ್ದಾರೆ. ಸುಪ್ರೀಂ … Continued